Asianet Suvarna News Asianet Suvarna News

'ಸಖೆಯಲ್ಲಿ ಹಾಕೋಕೆ ಆಗಲ್ಲ, ಮಳೆಗಾಲದಲ್ಲಿ ಒಣಗಲ್ಲ..' ಒಳಉಡುಪು ಖರೀದಿ ಇಳಿಕೆ ಸುದ್ದಿಗೆ ಭಾರೀ ಕಾಮೆಂಟ್ಸ್‌!

ಬ್ರ್ಯಾಂಡೆಡ್‌ ಒಳಉಡುಪು ಕಂಪನಿಗಳಾದ ಜಾಕಿ, ರೂಪಾ ಫ್ರಂಟ್‌ಲೈನ್‌ ಹಾಗೂ ಡಾಲರ್‌ನ ಮಾರಾಟ ತೀವ್ರ ಮಟ್ಟದಲ್ಲಿ ಕುಸಿದಿದೆ. ಈ ಸುದ್ದಿ ಪ್ರಕಟವಾದ ಬೆನ್ನಲ್ಲಿಯೇ ಜನರು ಒಳಉಡುಪಿನ ವಿಚಾರದಲ್ಲಿ ತಮ್ಮ ಪ್ರಾಮಾಣಿಕ ಉತ್ತರಗಳನ್ನು ಹೇಳಿದ್ದಾರೆ.

Why people of India are not buying underwear People Reaction on News san
Author
First Published Sep 16, 2023, 4:39 PM IST

ಬೆಂಗಳೂರು (ಸೆ.16): ದೇಶದಲ್ಲಿ ಹಬ್ಬದ ಸೀಸನ್‌ ಶುರುವಾಗಿದೆ. ಜನರು ಮತ್ತೆ ಬಟ್ಟೆ ಖರೀದಿಗೆ ಮುಂದಾಗಿದ್ದಾರೆ. ಇದರ ನಡುವೆ ಆಘಾತಕಾರಿ ವಿಚಾರವೊಂದು ಬಹಿರಂಗವಾಗಿದೆ. ಜನರು ಪಾರ್ಟಿವೇರ್‌ನಿಂದ ಹಿಡಿದು, ನಾರ್ಮಲ್‌, ಆಫೀಸ್‌ವೇರ್‌ವರೆಗೆ ಎಲ್ಲಾ ರೀತಿಯ ಬಟ್ಟೆಗಳೊಂದಿಗೆ ವಿವಿಧ ಬ್ರ್ಯಾಂಡ್‌ನ ಶೂ ಹಾಗೂ ಬ್ಯೂಟಿ ಉತ್ಪನ್ನಗಳ ಖರೀದಿ ಮಾಡುತ್ತಿದ್ದಾರೆ. ಆದರೆ, ಒಳಉಡುಪುಗಳ ವಿಚಾರದಲ್ಲಿ ಮಾತ್ರ ನಿರಾಸಕ್ತಿ ಹೊಂದಿದ್ದಾರೆ ಎನ್ನುವುದು ತಿಳಿದುಬಂದಿದೆ. ದೇಶದ ಪ್ರಮುಖ ಇನ್ನರ್‌ವೇರ್ಸ್‌ ಅಂದರೆ ಒಳಉಡುಪು ಉತ್ಪಾದಕ ಕಂಪನಿಗಳಾದ ಜಾಕಿ, ಡಾಲರ್‌ ಹಾಗೂ ರೂಪಾ ಫ್ರಂಟ್‌ಲೈನ್‌ ಸೇರಿದಂತೆ ಪ್ರಮುಖ ಕಂಪನಿಗಳ ಒಳಉಡುಪುಗಳ ಮಾರಾಟ ದೊಡ್ಡ ಮಟ್ಟದಲ್ಲಿ ಕುಸಿತ ಕಂಡಿದೆ. ಹಬ್ಬ ಹರಿದಿನಗಳಲ್ಲಿ ಶಾಪಿಂಗ್‌ ಮಾಡುವ ಜನರಿಂದ ಫ್ಯಾಶನ್‌ ಬಟ್ಟೆಗಳ ಮಾರಾಟ ಹೆಚ್ಚಾಗಿದೆಯೇ ಹೊರತು ಒಳಉಡುಪು ಮಾರಾಟದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಅದರ ಬದಲು ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದೆ. ಆಗ ಅದು ಯಾವ ವಿಭಾಗಕ್ಕೆ ಸೇರಿರಲಿ, ಮಕ್ಕಳು, ಮಹಿಳೆಯರು, ಪುರುಷರು ಹೀಗೆ ಎಲ್ಲ ವಿಭಾಗಗಳಲ್ಲೂ ಒಳಉಡುಪುಗಳ ಮಾರಾಟ ಭಾರೀ ಪ್ರಮಾಣದಲ್ಲಿ ಕುಸಿತ ಕಂಡಿದೆ. ಇನ್ನು ಈ ಕುರಿತಾಗಿ ಪ್ರಕಟವಾಗಿರುವ ಸುದ್ದಿಗೆ ಜನರು ಪ್ರತಿಕ್ರಿಯೆ ನೀಡಿದ್ದು, ತಮ್ಮ ಪ್ರಾಮಾಣಿಕ ಅನಿಸಿಕೆಗಳನ್ನು ಅವರು ಬರೆದುಕೊಂಡಿದ್ದಾರೆ.

'ಸಖೆಗಾಲಕ್ಕೆ ಚಡ್ಡಿ ಹಾಕೋಕಾಗಲ್ಲ, ಮಳೆಗಾಲದಲ್ಲಿ ಚಡ್ಡಿ ಒಣಗೊಲ್ಲ,, ಮತ್ಯಾಕೆ ಅಲ್ವಾ.?' ಎಂದು ಸುಧೀರ್‌ ಹೆಬ್ರಿ ಎನ್ನುವವರು ಈ ಸುದ್ದಿಗೆ ಕಾಮೆಂಟ್‌ ಮಾಡಿದ್ದಾರೆ. 'ಒಂದು ಪೋಮೆಕ್ಸ್‌ ಅಂಡರ್‌ವೇರ್‌ ಬೆಲೆ 230 ರೂಪಾಯಿ ಆಗಿದೆ. ಒಂದು ಸೊಳ್ಳೆ ಪರದೆ ಬೆಲೆ 150 ಇದೆ ನಾವು ಸೊಳ್ಳೆ ಪರೆದೆಯನ್ನೇ ಉಪಯೋಗಿಸುತ್ತೇನೆ' ಎಂದು ಮಾಧು ಎನ್ನುವವರು ಕಾಮೆಂಟ್‌ ಮಾಡಿದ್ದಾರೆ. 'ಬಹುಶಃ ಹೆಚ್ಚಿನವರು ಬ್ರ್ಯಾಂಡೆಡ್‌ ಅಲ್ಲದ ಒಳಉಡುಪುಗಳನ್ನು ಉಪಯೋಗಿಸುತ್ತಿರಬಹುದು' ಎಂದು ನರಸಿಂಹ ಹೆಗಡೆ ಅವರು ಬರೆದಿದ್ದಾರೆ. 'ಇರೋದು ಮೂರೇ ಕಂಪನಿನಾ? ರೇಟ್ ಕ್ವಾಲಿಟಿ ಬಾಳಿಕೆ ನೋಡಿ ಜಾಕಿ, ರೂಪಾ, ಡಾಲರ್ ಬದಲಿಸಿರ್ತಾರೆ.. ನಿಮ್ಮ ಪ್ರಕಾರ ಜನ ಮೂರು ಕಂಪನಿ ಸೇಲ್ ಕಡಿಮೆ ಆದ್ರೆ ಮಾತ್ರ ಹಾಕೋದಾ? ಇಲ್ಲ ಜನ ಒಳ ಉಡುಪು ಹಾಕ್ತಿಲ್ಲವೆಂದು ಅರ್ಥನಾ?' ಎಂದು ಕಾಮೆಂಟ್‌ ಮಾಡುವ ಮೂಲಕ ಬೇರೆ ಕಡಿಮೆ ಬೆಲೆಯ ಬೇರೆ ಒಳಉಡುಪು ಕಂಪನಿಗಳ ಮಾರಾಟ ಹೆಚ್ಚಾಗಿರಬಹದು ಎಂದು ಅಂದಾಜಿಸಿದ್ದಾರೆ. 'ಹಾಕಿಕೂಂಡ ಎರಡ ದಿನಕ್ಕೆ ಹರಿತಾವ ಹಂಗಾಗಿ ಜನರ ಹಾಕಿಕೂಳ್ಳುದ ಬಿಟ್ಟಿರಬೇಕ..' ಎಂದು ಮಹಾಬಲೇಶ್‌ ಎನ್ನುವವರು ಪೋಸ್ಟ್‌ ಮಾಡಿದ್ದಾರೆ. 'ಪೂಮರ್ ,ಪೂಮೆಕ್ಸ್, ರಾಮರಾಜ್ ಕಡೆ ವಾಲಿರಬೇಕು..' ಎಂದು ಲಕ್ಮೀಕಾಂತ್‌ ಎನ್ನುವವರು ಬರೆದಿದ್ದಾರೆ.

ಫೇಸ್‌ಬುಕ್‌ನಲ್ಲಿರುವ ಈ ಸುದ್ದಿಗೆ ಬಹಳ ತಮಾಷೆಯ ಕಾಮೆಂಟ್‌ಗಳೂ ಬಂದಿವೆ. 'ವೀಡಿಯೋ ಕಾಲಿಂಗ್ ಮತ್ತು ರೀಲ್ಸ್ ಬಂದ ಮೇಲೆ ಒಳ ಉಡುಪುಗಳು ಮಹತ್ವ ಕಳೆದುಕೊಂಡಿವೆ' ಎಂದು ಹರೀಶ್‌ ಕುಮಾರ್‌ ಎನ್ನುವವರು ಬರೆದಿದ್ದರೆ,  'ಮೀಡಿಯಾಗಳು ಸೋನುಗೌಡ, ಒಳಉಡುಪು ಇದೆ ಸುದ್ದಿ ಕೊಡಿ, ಕೊನೆಗೆ ಜನರೆ ಮೀಡಿಯಾಗಳನ್ನು ತಿರಸ್ಕಾರ ಮಾಡುತ್ತಾರೆ' ಎಂದು ಇದಕ್ಕೂ ಮಾಧ್ಯಮಗಳೇ ಕಾರಣ ಎಂದು ಮಂಗಳೂರಿನ ಸೋಮೇಶ್‌ ಎನ್ನುವವರು ಕಾಮೆಂಟ್‌ ಮಾಡಿದ್ದಾರೆ.

ಭಾರತದಲ್ಲಿ ಬಟ್ಟೆ ಕೊಳ್ಳೋರ ಸಂಖ್ಯೆ ಹೆಚ್ಚಾಗಿದೆ, ಒಳ ಉಡುಪು ಮಾತ್ರ ಕೊಳ್ಳೋಲ್ವಂತೆ!

ಇನ್ನು ಆನಂದ್‌ ಎನ್ನುವವರು ನಾನು ಒಳಉಡುಪು ಧರಿಸೋದೇ ಇಲ್ಲ ಎಂದು ಬರೆದುಕೊಂಡಿದ್ದಾರೆ. ;ಅಯ್ಯಯ್ಯೋ ದೇವರೇ ಇದಕ್ಕೂ ಮೋದಿ ಕಾರಣ ಅಂತಾರಲ್ಲ ಈ ಜನ. ಇವರಿಗೆ ಎಲ್ಲಾ ಕಡೆ ಮೋದಿ ಕಾಣಿಸ್ತಾರ?' ಎಂದು ಈ ವಿಚಾರಕ್ಕೆ ರಾಜಕೀಯ ಟಚ್‌ ನೀಡಿದ್ದಾರೆ. ಬಹುಶಃ ಜನರು ಲೋಕಲ್‌ ಚಡ್ಡು ಬಳಸುತ್ತಿರಬೇಕು, ಇದಕ್ಕೆ ಈಗಿನ ಸಿನಿಮಾ ನಟಿಯರೇ ಕಾರಣ ಎನ್ನುವ ಕಾಮೆಂಟ್‌ಗಳೂ ಬಂದಿದೆ. 'ಮೋದೀಜಿ ಒಬ್ಬೊಬ್ಬರ ಅಕೌಂಟ್ ಗೆ 15 ಲಕ್ಷ ಅಕೋವರ್ಗು ನನಗಂಡ ಚಡ್ಡಿ ಹಾಕಲ್ವಂತೆ' ಎಂದು ಪಾರ್ವತಿ ಎನ್ನುವ ಮಹಿಳೆಯೊಬ್ಬರು ಕಾಮೆಂಟ್‌ ಮಾಡಿದ್ದಾರೆ.

EXPLAINER: ಸೂರ್ಯನಷ್ಟೇ ದೊಡ್ಡದಾಗಿ ಭೂಮಿ ಇದ್ದಿದ್ದರೆ ಏನಾಗುತ್ತಿತ್ತು?

'ಭಕ್ತರು ಬೆಲೆ ಏರಿಕೆಯ ಬಿಸಿಯನ್ನ ತಡೆಯಲಾಗದೇ ಲಂಗೋಟಿಗೆ ಮೊರೆ ಹೋಗಿದ್ದೇ ಕಾರಣ..' ಎಂದು ಇನ್ನೊಬ್ಬರು ಬರೆದಿದ್ದರೆ, 'ಎಲ್ಲಾ ವ್ಯವಹಾರಗಳು ಪಾರದರ್ಶಕವಾಗಿ ಇರಬೇಕು ಹಾಗಾಗಿ.. ಇರಬಹುದೇನೋ..' ಎಂದು ಒಳಉಡುಪು ಖರೀದಿ ಇಳಿಕೆಯಾಗಿರುವ ಸುದ್ದಿಗೆ ಪ್ರತಿಕ್ರಿಯಿಸಿದ್ದಾರೆ. ;ಯಾರೂ ನೋಡಲ್ಲ ಎಂದು ಒಳಗಡೆ ತೂತು ಚೆಡ್ಡಿ ಧರಿಸಿದರೇ ನಡಿತೈತಿ, ಸೋ ಅವುಗಳು ಹರಿದು ಚಿಂದಿಯಾಗುವವರೆಗೂ ಯಾರೂಕೊಳ್ಳುವುದಿಲ್ಲ..' ಎಂದು ಇನ್ನೊಬ್ಬರು ಬರೆದುಕೊಂಡಿದ್ದಾರೆ.

Follow Us:
Download App:
  • android
  • ios