Asianet Suvarna News Asianet Suvarna News

ಟ್ವಟರ್‌ಗೆ ಮತ್ತೊಂದು ಸಂಕಟ ತಂದ ಹಾಸ್ಯನಟ, ನ್ಯಾಯಾಂಗ ನಿಂದಿಸಿ ಧಿಮಾಕು!

ಲಡಾಕ್ ನಕಾಶೆಯನ್ನು ತಪ್ಪಾಗಿ ಹಾಕಿದ್ದ ಟ್ವಿಟರ್ ಗೆ ಮತ್ತೊಂದು ಸಂಕಟ/ ನ್ಯಾಯಾಂಗ ನಿಂದನೆ ರೀತಿ ಟ್ವೀಟ್ ಮಾಡಿದ್ದರೂ ಕಾಮಿಡಿ ಕಲಾವಿದನ ಮೇಲೆ ಯಾಕೆ ಕ್ರಮ ತೆಗೆದುಕೊಂಡಿಲ್ಲ/ ಅವರ ಟ್ವೀಟ್ ನ್ನು ಯಾಕೆ ತೆಗೆದು ಹಾಕಲಾಗಿಲ್ಲ/ ಸಂಸದೀಯ ಮಂಡಳಿ ಪ್ರಶ್ನೆ

Why no action on Kunal Kamra s tweets Parliament panel asks Twitter mah
Author
Bengaluru, First Published Nov 19, 2020, 8:39 PM IST

ನವದೆಹಲಿ(ನ. 19) ಭಾರತದ ಮುಖ್ಯ ನ್ಯಾಯಮೂರ್ತಿ ಅವಹೇಳನಕಾರಿ ಟ್ವಿಟ್ ಮಾಡಿದ್ದ ಹಾಸ್ಯನಟ ಕುನಾಲ್ ಕಮ್ರಾ  ಮೇಲೆ ಯಾವುದೆ ಕ್ರಮ ಯಾಕೆ ತೆಗೆದುಕೊಂಡಿಲ್ಲ ಎಂದು ಡೇಟಾ ಸಂರಕ್ಷಣೆಗಾಗಿ ಸಂಸತ್ತಿನ ಜಂಟಿ ಸಮಿತಿ ಪ್ರಶ್ನೆ ಮಾಡಿದೆ.  ಬಿಜೆಪಿ ಸಂಸದ ಮೀನಾಕ್ಷಿ ಲೇಖಿ ಮತ್ತು ಕಾಂಗ್ರೆಸ್ ಸಂಸದ ವಿವೇಕ್ ಟಂಖಾ ಈಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ.

ಹಾಸ್ಯನಟ ಕುನಾಲ್ ಕಮ್ರಾ  ವಿಚಾರಣೆ ನಡೆಸಿ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ. ಕ್ಷಮೆ ಕೇಳುವುದಿಲ್ಲ ಎಂದಿದ್ದ ನಟ ಮತ್ತೆ ಹಳೆ ರಾಗವನ್ನೇ ತೆಗೆದಿದ್ದಾರೆ. ಅಭಿವ್ಯಕ್ತಿ ಸ್ವಾತಂತ್ರ್ಯವೂ ಕಾರ್ಪೋರೇಟ್ ಪ್ರೆಚಾರವೇ ಎಂದು ಮರು ಪ್ರಶ್ನೆ ಮಾಡಿದ್ದಾರೆ. 

ನ್ಯಾಯಾಲಯವು ಆದೇಶಗಳನ್ನು ನೀಡದ ಹೊರತು ಪೋಸ್ಟ್ ಅನ್ನು ತೆಗೆದುಹಾಕಲು ಸಾಧ್ಯವಿಲ್ಲ ಎಂದು ಟ್ವಿಟರ್ ಹೇಳಿದೆ ಎಂಬುದನ್ನು ಮೀನಾಕ್ಷಿ ಲೇಖಿ ತಿಳಿಸಿದ್ದಾರೆ.

ಅಷ್ಟಕ್ಕೂ ಅರ್ನಾಬ್ ಅರೆಸ್ಟ ಆಗಿದ್ದು ಯಾವ ಪ್ರಕರಣದಲ್ಲಿ?

ನಾವು 7 ದಿನಗಳಲ್ಲಿ ಉತ್ತರ ಕೇಳಿದ್ದೇವೆ. ಇವುಗಳಿಗೆ ಸಂಬಂಧಿಸಿದಂತೆ ಭಾರತದಲ್ಲಿ ಯಾವುದೇ ಕಾನೂನುಗಳಿಲ್ಲದ ಕಾರಣ,  ಉನ್ನತ ಅಧಿಕಾರಿಗಳೊಂದಿಗೆ ಮಾತನಾಡಬೇಕಾಗಿದೆ ಎಂದು ಮೀನಾಕ್ಷಿ ಲೇಖಿ ಹೇಳಿದ್ದಾರೆ.

ನವೆಂಬರ್ 12 ರಂದು, ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ಅವರು ತಮ್ಮ  ಸ್ಟ್ಯಾಂಡ್-ಅಪ್ ಕಾಮಿಡಿ ಕಲಾವಿದ ಕುನಾಲ್ ಕಮ್ರಾ ವಿರುದ್ಧ ವಿಚಾರಣೆ ನಡೆಸಬಹುದು ಎಂದು ಹೇಳಿದ್ದರು.  ಅವರು ಮಾಡಿರುವ ಟ್ವೀಟ್ ಗಳಲ್ಲಿ ಹಾಸ್ಯಕ್ಕಿಂತ ಕೆಟ್ಟ ಅಭಿರುಚಿ ಕಾಣುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದರು.

ಇದಾಗಿ ಒಂದು ದಿನದ ನಂತರ ಅಂದರೆ ನವೆಂಬರ್ 13 ರಂದು, ಕಮ್ರಾ ವಿರುದ್ಧ ವಿಚಾರಣೆ ಮಾಡಲು ಒಪ್ಪಿಗೆ ಸಿಕ್ಕಿತ್ತು.

ಪತ್ರಕರ್ತ ಅರ್ನಾಬ್ ಗೋಸ್ವಾಮಿ ಸಲ್ಲಿಸಿದ್ದ ಮೇಲ್ಮನವಿಯನ್ನು ಉನ್ನತ ನ್ಯಾಯಾಲಯ ವಿಚಾರಣೆ ನಡೆಸುತ್ತಿದ್ದಾಗ ನವೆಂಬರ್ 11 ರಂದು ಕಮ್ರಾ ಟ್ವೀಟ್  ಮಾಡಲು ಆರಂಭಿಸಿದ್ದರು. ಇದು  ನ್ಯಾಯಾಂಗ ನಿಂದನೆ ರೀತಿ ಇತ್ತು ಎಂದು   ಕಾನೂನು ವಿದ್ಯಾರ್ಥಿ ಶ್ರೀರಂಗ್ ಕಾಟ್ನೇಶ್ವರ್ಕರ್ ಸೇರಿದಂತೆ ಐದು ಜನ ಅರ್ಜಿ ಸಲ್ಲಿಸಿದ್ದರು.

Follow Us:
Download App:
  • android
  • ios