ಮುಂಬೈ( ನ. 11)  2018ರಲ್ಲಿ ಇಂಟೀರಿಯರ್ ಡಿಸೈನರ್ ಒಬ್ಬರ ಆತ್ಮಹತ್ಯೆ ಕೇಸಿಗೆ ಸಂಬಂಧಿಸಿ ಬಂಧನಕ್ಕೆ ಒಳಗಾಗಿದ್ದ ರಿಪಬ್ಲಿಕ್ ಟಿವಿ ಸಂಪಾದಕ ಪತ್ರಕರ್ತ ಅರ್ನಬ್ ಗೋಸ್ವಾಮಿ ಅವರಿಗೆ ಮಧ್ಯಂತರ ಜಾಮೀನು ಸಿಕ್ಕಿದ್ದು ಮುಂಬೈ ಜೈಲಿನಿಂದ ಬಿಡುಗಡೆಯಾಗಿದ್ದಾರೆ.

ಸುಪ್ರೀಂ ಕೋರ್ಟ್ ಆದೇಶದಂತೆ ಮುಂಬೈ ಪೊಲೀಸರು ಅರ್ನಾಬ್ ಬಿಡುಗಡೆಮಾಡಿದ್ದು ಜೈಲಿನ ಹೊರಗೆ ಭವ್ಯ ಸ್ವಾಗತ ಕೋರಿ ಅರ್ನಾಬ್ ಬರಮಾಡಿಕೊಳ್ಳಲಾಗಿದೆ.

ಸುಪ್ರೀಂ ನಲ್ಲಿ ಅರ್ನಾಬ್ ಗೆ ಜಯ ಸಿಕ್ಕಿದ್ದು ಹೇಗೆ?

ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್ ಮತ್ತು ಇಂದಿರಾ ಬ್ಯಾನರ್ಜಿ ಅವರನ್ನೊಳಗೊಂಡ ಪೀಠ ವಿಡಿಯೊ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಿ ಅರ್ನಾಬ್ ಗೆ ಜಾಮೀನು ನೀಡಿತ್ತು.

ಅರ್ನಾಬ್ ಬಿಡುಗಡೆಯಾಗುತ್ತಿರುವ ಸುದ್ದಿ ಕೇಳಿ ಅಪಾರ ಅಭಿಮಾನಿಗಳು ಜಮಾಯಿಸಿದ್ದರು. ತೆರೆದ ಕಾರಿನಲ್ಲಿ ಅಭಿಮಾನಿಗಳತ್ತ ಕೈಬೀಸಿದ ಅರ್ನಬ್ ಘೋಷಣೆ ಕೂಗುತ್ತ ತೆರಳಿದ್ದು ಇನ್ನು ಮುಂದೆ ಮಾಧ್ಯಮದ  ಮೂಲಕ ಮತ್ತೆ ಯಾವ ಸಂಚಲನ ಮಾಡಲಿದ್ದಾರೆ ಕಾದುನೋಡಬೇಕಿದೆ.