Asianet Suvarna News Asianet Suvarna News

Loudspeaker Rules: ರಾತ್ರಿ 10 ಗಂಟೆ ಆಯ್ತೆಂದು ರ‍್ಯಾಲಿಯಲ್ಲಿ ಭಾಷಣ ಮಾಡದೆ ಜನರ ಕ್ಷಮೆ ಕೇಳಿದ ಪ್ರಧಾನಿ ಮೋದಿ

ರಾಜಸ್ಥಾನದ ಸಿರೋಹಿಯಲ್ಲಿ ರಾತ್ರಿ 10 ಗಂಟೆ ಬಳಿಕ ಲೌಡ್‌ಸ್ಪೀಕರ್‌, ಮೈಕ್ ಬಳಸಲು ನಿಷೇಧ ಇದೆ. ಈ ಹಿನ್ನೆಲೆ ನಿಯಮ ಪಾಲಿಸಲು ಪ್ರಧಾನಿ ಮೋದಿ ಭಾಷಣ ಮಾದೆ ಜನರ ಕ್ಷಮೆ ಕೇಳಿದರು. 

why modi didnt address a rally in rajasthan sirohi loud speaker micro phone apologises people ash
Author
First Published Oct 1, 2022, 9:01 AM IST

ಪ್ರಧಾನಮಂತ್ರಿ ನರೇಂದ್ರ ಮೋದಿ ಶುಕ್ರವಾರ ರಾಜಸ್ಥಾನದ ಸಿರೋಹಿಯ ಅಬು ರೋಡ್ ಪ್ರದೇಶದಲ್ಲಿ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಬೇಕಿತ್ತು. ಆದರೆ, ಅವರು ಭಾಷಣ ಮಾಡಲಿಲ್ಲ. ಭಾಷಣ ಮಾಡಲು ಸಾಧ್ಯವಾಗದಿದ್ದಕ್ಕಾಗಿ ಸಭೆಯ ಮೊದಲು ಕ್ಷಮೆಯಾಚಿಸಿದ ಪ್ರಧಾನಿ ಮೋದಿ ಮತ್ತೆ ಸಿರೋಹಿಗೆ ಬರುವುದಾಗಿ ಭರವಸೆ ನೀಡಿದರು. ಇದಕ್ಕೆ ಕಾರಣ ಅವರು ಸ್ಥಳಕ್ಕೆ ತಡವಾಗಿ ತಲುಪಿದರು. ಅಲ್ಲದೆ, ಅಲ್ಲಿನ ಧ್ವನಿವರ್ಧಕ ನಿಯಮಗಳನ್ನು ಪಾಲಿಸಲು ಭಾಷಣ ಮಾಡಲಿಲ್ಲ. 

ಈ ಬಗ್ಗೆ ಲೌಡ್‌ ಸ್ಪೀಕರ್ ಹಾಗೂ ಮೈಕ್ರೋಫೋನ್‌ ಬಳಸದೆ ಮಾತನಾಡಿದ ಪ್ರಧಾನಿ ಮೋದಿ, "ನಾನು ತಲುಪಲು ತಡವಾಯಿತು. ರಾತ್ರಿ 10 ಗಂಟೆಯಾಗಿದೆ. ನಾನು ನಿಯಮಗಳು ಮತ್ತು ನಿಬಂಧನೆಗಳನ್ನು ಅನುಸರಿಸಬೇಕು ಎಂದು ನನ್ನ ಆತ್ಮಸಾಕ್ಷಿಯು ಹೇಳುತ್ತದೆ. ಹಾಗಾಗಿ ನಿಮ್ಮ ಮುಂದೆ ನಾನು ಕ್ಷಮೆಯಾಚಿಸುತ್ತೇನೆ" ಎಂದು ಹೇಳಿದರು. ಪ್ರಧಾನಿ ಮೋದಿಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ಸಾಕಷ್ಟು ಮೆಚ್ಚುಗೆಗೂ ಪಾತ್ರವಾಗುತ್ತಿದೆ.

ಇದನ್ನು ಓದಿ: ಮಂಗಳೂರಿನಲ್ಲಿ ಬಿಜೆಪಿ ಶಕ್ತಿ ಪ್ರದರ್ಶನ, ಮೋದಿಯಿಂದ 'ಬೂಸ್ಟರ್‌ ಡೋಸ್'

"ಆದರೆ, ನಾನು ಮತ್ತೆ ಇಲ್ಲಿಗೆ ಬರುತ್ತೇನೆ ಮತ್ತು ನೀವು ನನಗೆ ನೀಡಿದ ಪ್ರೀತಿಯನ್ನು ಬಡ್ಡಿಯೊಂದಿಗೆ ಮರುಪಾವತಿಸುತ್ತೇನೆ ಎಂದು ನಾನು ನಿಮಗೆ ಭರವಸೆ ನೀಡಲು ಬಯಸುತ್ತೇನೆ" ಎಂದೂ ಹೇಳಿದರು. ನಂತರ ಪ್ರಧಾನಿ ಮೋದಿಯವರು "ಭಾರತ್ ಮಾತಾ ಕಿ ಜೈ" ಘೋಷಣೆಯನ್ನು ಕೂಗಿದರು. ನಂತರ, ರ‍್ಯಾಲಿಯಲ್ಲಿದ್ದ ಜನರು ಸಹ "ಭಾರತ್ ಮಾತಾ ಕಿ ಜೈ" ಘೋಷಣೆಯನ್ನು ಪುನರಾವರ್ತಿಸಿದರು.

ಇದಕ್ಕೂ ಮುನ್ನ ರಾಜಸ್ಥಾನದ ಸಿರೋಹಿಗೆ ಬಂದ ಪ್ರಧಾನಿ ಮೋದಿ ಅವರನ್ನು ರಾಜಸ್ಥಾನದ ಬಿಜೆಪಿ ಅಧ್ಯಕ್ಷ ಸತೀಶ್ ಪೂನಿಯಾ, ಮಾಜಿ ಸಿಎಂ ವಸುಂಧರಾ ರಾಜೆ, ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್, ರಾಜ್ಜಸ್ಥಾನ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಗುಲಾಬ್ ಚಂದ್ ಕಟಾರಿಯಾ ಮತ್ತು ಬಿಜೆಪಿ ನಾಯಕ ರಾಜೇಂದ್ರ ರಾಥೋಡ್ ಸ್ವಾಗತಿಸಿದರು. ಸಿರೋಹಿ, ಡುಂಗರ್‌ಪುರ, ಬನ್ಸ್ವಾರಾ, ಚಿತ್ತೋರ್‌ಗಢ, ಪ್ರತಾಪ್‌ಗಢ, ಬನ್ಸ್ವಾರಾ, ಪಾಲಿ, ಉದಯಪುರ ಮತ್ತು 40 ವಿಧಾನಸಭಾ ಕ್ಷೇತ್ರಗಳ ಸಮೀಪದ ಪ್ರದೇಶಗಳಿಂದ ಪಕ್ಷದ ಕಾರ್ಯಕರ್ತರನ್ನು ರ‍್ಯಾಲಿಗೆ ಸಜ್ಜುಗೊಳಿಸಲಾಗಿತ್ತು ಎಂದು ಕೇಸರಿ ಪಕ್ಷದ ಮೂಲಗಳು ತಿಳಿಸಿವೆ.

ಇದನ್ನೂ ಓದಿ: ತೆಲಂಗಾಣದಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರ ಖಚಿತ, ಬೃಹತ್ ರ್‍ಯಾಲಿಯಲ್ಲಿ ಮೋದಿ ಭಾಷಣ!

ದಕ್ಷಿಣ ರಾಜಸ್ಥಾನದಲ್ಲಿ ಪಕ್ಷದ ಕಾರ್ಯಕರ್ತರ ನೈತಿಕತೆಯನ್ನು ಹೆಚ್ಚಿಸಲು ಈ ರ‍್ಯಾಲಿ ನಡೆಸುವುದು ಬಿಜೆಪಿಯ ಉದ್ದೇಶವಾಗಿತ್ತು. ಸಿರೋಹಿ ಚುನಾವಣೆಗೆ ಒಳಪಟ್ಟಿರುವ ಗುಜರಾತ್‌ನೊಂದಿಗೆ ಗಡಿಯನ್ನು ಹಂಚಿಕೊಳ್ಳುತ್ತದೆ.

ಕಾಂಗ್ರೆಸ್ ಆಡಳಿತವಿರುವ ರಾಜಸ್ಥಾನದಲ್ಲಿ ಮುಂದಿನ ವರ್ಷದ ನಂತರ ವಿಧಾನಸಭೆ ಚುನಾವಣೆಯೂ ನಡೆಯಲಿದೆ. ಗುಜರಾತ್‌ನ ಬನಸ್ಕಾಂತ ಜಿಲ್ಲೆಯ ಅಂಬಾಜಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಅಬು ರಸ್ತೆಗೆ ಬಂದಿದ್ದರು. ಅದಕ್ಕೂ ಮುನ್ನ ಬನಸ್ಕಾಂತ ಜಿಲ್ಲೆಯ ಸಮಾವೇಶವನ್ನುದ್ದೇಶಿಸಿ ಪ್ರಧಾನಿ ಮೋದಿ ಭಾಷಣ ಮಾಡಿದ್ದರು. 

Follow Us:
Download App:
  • android
  • ios