ಮಣಿಪುರ ಮುಖ್ಯಮಂತ್ರಿ ಬಿರೆನ್ ಸಿಂಗ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ರಾಜ್ಯಪಾಲ ಅಜಯ್ ಕುಮಾರ್ ಭಲ್ಲಾ ಭೇಟಿಯಾಗಿ ರಾಜೀನಾಮೆ ಪತ್ರ ರವಾನಿಸಿದ್ದಾರೆ. ಇದೇ ವೇಳೆ ಭದ್ರತಾ ಪಡೆಗಳು ಹೈ ಅಲರ್ಟ್ ಘೋಷಿಸಿದೆ.
Live: ದೆಹಲಿಯಲ್ಲಿ ಅಧಿಕಾರ ಹಿಡಿದ ಬಿಜೆಪಿಗೆ ಮಣಿಪುರದಲ್ಲಿ ಶಾಕ್, ಸಿಎಂ ರಾಜೀನಾಮೆ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬರೋಬ್ಬರಿ 27 ವರ್ಷಗಳ ಬಳಿಕ ಕಮಲ ಮ್ಯಾಜಿಕ್ ಮಾಡಿದ್ದು, ಎರಡು ಸಲ ಅಧಿಕಾರದ ಗದ್ದುಗೆ ಹಿಡಿದಿದ್ದ ಆಪ್‌ಗೆ ಸೋಲಿನ ರುಚಿ ಕಾಣಿಸಿದೆ. ದೆಹಲಿಯಲ್ಲಿ ಅಧಿಕಾರಕ್ಕೆ ಏರುವಲ್ಲಿ ಬಿಜೆಪಿ ಯಶಸ್ವಿಯಾದ ಬೆನ್ನಲ್ಲೇ ಮುಂದಿನ ಸಿಎಂ ಯಾರು ಎಂಬ ಚರ್ಚೆ ಆರಂಭವಾಗಿದೆ. ಚುನಾವಣಾ ಪ್ರಚಾರದ ವೇಳೆ ಸಿಎಂ ಅಭ್ಯರ್ಥಿಯನ್ನೇ ಘೋಷಿಸಿರದ ಪಕ್ಷದಿಂದ ಮುಖ್ಯಮಂತ್ರಿ ಯಾರಾಗುತ್ತಾರೆ ಎಂಬ ಕುತೂಹಲ ಮೂಡಿದೆ. ಈಗಾಗಲೇ ಕೆಲವು ಹೆಸರುಗಳು ಚಾಲ್ತಿಯಲ್ಲಿದ್ದು, ಅಂತಿಮವಾಗಿ ಬಿಜೆಪಿ ಹೈಕಮಾಂಡ್ ಯಾರ ಹೆಸರನ್ನು ಘೋಷಣೆ ಮಾಡುತ್ತೆ ಅಂತ ಕಾದುನೋಡಬೇಕು. ಇತ್ತ ದೆಹಲಿಯಲ್ಲಿ ಅಧಿಕಾರ ಹಿಡಿದ ಬಿಜೆಪಿಗೆ ಮಣಿಪುರದಲ್ಲಿ ಆಘಾತ ಎದುರಾಗಿದೆ.ಕ್ಷಿಪ್ರ ರಾಜಕೀಯ ಬೆಳವಣಿಗೆಯಿಂದ ಮಣಿಪುರ ಮುಖ್ಯಮಂತ್ರಿ ಬಿರೇನ್ ಸಿಂಗ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇತ್ತ ಬೆಂಗಳೂರಿನಲ್ಲಿ ಏರ್ ಶೋ ತಯಾರಿ ಭರ್ಜರಿಯಾಗಿ ನಡೆಯುತ್ತಿದೆ. ನಾಳೆಯಿಂದ ಏರ್ ಶೋ ಆರಂಭಗೊಳ್ಳುತ್ತಿದೆ. ಇದರ ನಡುವೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮಹಾಕುಂಭ ಮೇಳದಲ್ಲಿ ಪುಣ್ಯಸ್ನಾನ ಮಾಡಿದ್ದಾರೆ. ಇಂದಿನ ಇಡೀ ದಿನದ ಪ್ರಮುಖ ಬೆಳವಣಿಗೆಗಳ ಸಂಕ್ಷಿಪ್ತ ವಿವರಣೆ ಇಲ್ಲಿದೆ.
ಮಣಿಪುರ ಮುಖ್ಯಮಂತ್ರಿ ಬಿರೇನ್ ಸಿಂಗ್ ರಾಜೀನಾಮೆ, ಭದ್ರತಾ ಪಡೆಗಳಿಂದ ಹೈ ಅಲರ್ಟ್
ನಾಳೆ ಮಹಾಕುಂಭ ಮೇಳಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿ ನೀಡಿ ಪುಣ್ಯಸ್ನಾನ
ರಾಷ್ಟ್ರಪದಿ ದ್ರೌಪದಿ ಮುರ್ಮು ನಾಳೆ(ಫೆ.10) ಮಹಾಕುಂಭ ಮೇಳಕ್ಕೆ ಭೇಟಿ ನೀಡುತ್ತಿದ್ದಾರೆ. ಪುಣ್ಯಸ್ನಾನ ಮಾಡಲಿರುವ ಮುರ್ಮು, ಬಳಿಕ ಗಂಗಾ ಪೂಜೆ, ಬಡೇ ಹನುಮಾನ ದರ್ಶನ, ಡಿಜಿಟಲ್ ಕಂಭಕ್ಕೆ ಭೇಟಿ ನೀಡಲಿದ್ದಾರೆ.
ಖಾಸಗಿ ಕಾರ್ಯಕ್ರಮ ನಿಮಿತ್ತ ರಾಣೆಬೆನ್ನೂರಿಗೆ ಆಗಮಿಸಿದ ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ
ಹಾವೇರಿ: ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಅವರು ಇಂದು ಖಾಸಗಿ ಕಾರ್ಯಕ್ರಮ ನಿಮಿತ್ತ ಹಾವೇರಿ ಜಿಲ್ಲೆಯ ರಾಣೆಬೆನ್ನೂರಿಗೆ ಆಗಮಿಸಿದರು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಮೈಕ್ರೋ ಫೈನಾನ್ಸ್ ವಿಚಾರದಲ್ಲಿ ಸರ್ಕಾರ ಸರಿಯಾದ ರೀತಿಯಲ್ಲಿ ಕಾನೂನು ಕ್ರಮ ಜರುಗಿಸಬೇಕಿತ್ತು.
ಅನ್ ಅಫಿಷಿಯಲ್ ಆಗಿ ಸಾಲ ಕೊಡ್ತಿದ್ದಾರೆ , ಹಾಗೆಲ್ಲ ಕೊಡುವುದು ಕಾನೂನು ಬಾಹೀರವಾಗಿದೆ. ರಿಸರ್ವ್ ಬ್ಯಾಂಕ್ ನಿಂದ ಅನುಮತಿ ಪಡೆದು ಮಾಡೋರು ಒಂದು ಕಡೆ ಆದರೆ ಹೆಚ್ಚಿನ ಭಾಗ ಖಾಸಗಿ ಮೈಕ್ರೋ ಫೈನಾನ್ಸ್ ನವರೇ ಇದ್ದಾರೆ ಬಹುತೇಕ ಫೈನಾನ್ಸ್ ನವರು ರಿಸರ್ವ್ ಬ್ಯಾಂಕ್ ನಿಂದ ಯಾವುದೇ ಪರ್ಮಿಷನ್ ತಗೊಂಡಿರಲ್ಲ. ಕಾನೂನು ಸಚಿವರು,ಅಥವಾ ಮುಖ್ಯಮಂತ್ರಿಗಳು ರಾಜ್ಯಪಾಲರನ್ನು ಭೇಟಿಮಾಡಿ ಈ ವಿಚಾರದ ಬಗ್ಗೆ ವಿವರಿಸಬೇಕಿತ್ತು. ಯಾಕೆ ಈ ಕಾನೂನು ತರ್ತಾ ಇದ್ದೇವೆ ಎಂದು ರಾಜ್ಯಪಾಲರಿಗೆ ತಿಳಿಸಬೇಕಿತ್ತು. ರಾಜ್ಯ ಸರ್ಕಾರದ ನಡೆ ವಿರುದ್ಧ ಕಿಡಿಕಾರಿದರು.
ಮಹಾಕುಂಭ ಮೇಳದಲ್ಲಿ ಡಿಕೆ ಶಿವಕುಮಾರ್ ಪುಣ್ಯಸ್ನಾನ
ಮಹಾಕುಂಭ ಮೇಳಕ್ಕೆ ಪತ್ನಿ ಸಮೇತ ತೆರಳಿರುವ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪುಣ್ಯಸ್ನಾನ ಮಾಡಿದ್ದಾರೆ.
ಮೋದಿ ಅಮೆರಿಕ ಪ್ರವಾಸ ಮುಗಿಸಿ ಬಂದ ಬೆನ್ನಲ್ಲೇ ದೆಹಲಿ ಪ್ರಮಾಣವಚನ ಸಮಾರಂಭ
ದೆಹಲಿ ಚುನಾವಣೆ ಗೆದ್ದಿರುವ ಬಿಜೆಪಿ ಇದೀಗ ಪ್ರಮಾಣವಚನ ಸಮಾರಂಭ, ಸಂಪುಟ ರಚನೆ, ಮುಖ್ಯಮಂತ್ರಿ ಚರ್ಚೆ ನಡೆಸುತ್ತಿದೆ. ಪ್ರಧಾನಿ ಮೋದಿ ಅಮೆರಿಕ ಪ್ರವಾಸ ಮುಗಿಸಿ ಬಂದ ಬೆನ್ನಲ್ಲೇ ದೆಹಲಿ ಸಂಪುಟದ ಪ್ರಮಾಣವ ವಚನ ಸಮಾರಂಭ ನೆಡೆಯಲಿದೆ. ಫೆಬ್ರವರಿ 12 ಹಾಗೂ 13ರಂದು ಅಮೆರಿಕ ಪ್ರವಾಸ ಮಾಡಲಿದ್ದಾರೆ.
ಅರವಿಂದ್ ಕೇಜ್ರಿವಾಲ್‌ಗೆ ಅದು ಅರ್ಥ ಆಗಲಿಲ್ಲ: ಅಣ್ಣಾ ಹಜಾರೆ
ಅರವಿಂದ್ ಕೇಜ್ರಿವಾಲ್‌ಗೆ ಅದು ಅರ್ಥ ಆಗಲಿಲ್ಲ: ಅಣ್ಣಾ ಹಜಾರೆ
ದೆಹಲಿ ಫಲಿತಾಂಶದ ಬಗ್ಗೆ ಕಿರಣ್ ಬೇಡಿ ಮಾತು
ಈಗ ಆರೋಪ-ಪ್ರತ್ಯಾರೋಪಗಳ ಯುಗ ಮುಗಿದಿದೆ. ಜನರು ಈಗಲೇ ಮುಂದುವರಿಯಲು ಬಯಸುತ್ತಿದ್ದಾರೆ. ನಾವು ದೆಹಲಿಯನ್ನು ಆರೋಗ್ಯಕರ, ಸುರಕ್ಷಿತ ಮತ್ತು ಸ್ವಚ್ಛವಾಗಿ ಮಾಡುತ್ತೇವೆ ಎಂದು ಕಿರಣ್ ಬೇಡಿ ಹೇಳಿದ್ದಾರೆ.
ಎಎಪಿ ಇತಿಹಾಸದ ಪುಟ ಸೇರುತ್ತಿದ್ದು, ಆ ಪಕ್ಷಕ್ಕೆ ಯಾವುದೇ ಭವಿಷ್ಯವಿಲ್ಲ
ಎಎಪಿ ಇತಿಹಾಸದ ಪುಟ ಸೇರುತ್ತಿದ್ದು, ಆ ಪಕ್ಷಕ್ಕೆ ಯಾವುದೇ ಭವಿಷ್ಯವಿಲ್ಲ
ಚುನಾವಣೆ ಸೋಲಿನ ಬಗ್ಗೆ ಚರ್ಚೆ
ಅರವಿಂದ್ ಕೇಜ್ರಿವಾಲ್ ನಿವಾಸಕ್ಕೆ ಎಎಪಿ ನಾಯಕರ ಭೇಟಿ
AAPಯನ್ನ ಲೇವಡಿ ಮಾಡಿದ ಕಾಂಗ್ರೆಸ್ ನಾಯಕ
ದೆಹಲಿಯಲ್ಲಿ AAP ಸ್ಥಿತಿ ಇನ್ನೂ ಉತ್ತಮವಾಗಿದೆ. ಆದರೆ ಪಂಜಾಬ್‌ನಲ್ಲಿ ಹೀನಾಯವಾಗಿ ಸೋಲಲಿದ್ದಾರೆ. 2027ರ ಚುನಾವಣೆಯಲ್ಲಿ ಒಂದಾದ್ರು ಸೀಟ್ ಸಿಕ್ಕರೆ ಅದು ಆಪ್‌ಗೆ ಒಳ್ಳೆಯ ನಂಬರ್ ಎಂದು ಪಂಜಾಬ್ ರಾಜ್ಯದ ಕಾಂಗ್ರೆಸ್ ಘಟಕದ ಅಧ್ಯಕ್ಷ ಅಮರಿಂದರ್ ಸಿಂಗ್ ರಾಜಾ ವಾರಿಂಗ್ ಲೇವಡಿ ಮಾಡಿದರು.
ಸಿಎಂ ಕುರ್ಚಿಗಾಗಿ ತೆರೆಮರೆಯಲ್ಲಿ ಶುರುವಾಯ್ತು ಕಸರತ್ತು
ಸಿಎಂ ಕುರ್ಚಿಗಾಗಿ ತೆರೆಮರೆಯಲ್ಲಿ ಶುರುವಾಯ್ತು ಕಸರತ್ತು
ಕೇಜ್ರಿವಾಲ್ ವಿರುದ್ಧ ಸೈನಿ ವಾಗ್ದಾಳಿ
ಅರವಿಂದ್ ಕೇಜ್ರಿವಾಲ್ ತಮ್ಮ ಆಡಳಿತಾವಧಿಯಲ್ಲಿ ಬೇರೆಯವರ ಮೇಲೆ ಕೇವಲ ಆರೋಪ ಮಾಡಿದ್ರೆ ಹೊರತು ಯಾವುದೇ ಕೆಲಸಗಳನ್ನು ಮಾಡಿಲ್ಲ ಎಂದು ಹರಿಯಾಣ ಸಿಎಂ ನಯಾಬ್ ಸಿಂಗ್ ಸೈನಿ ವಾಗ್ದಾಳಿ ನಡೆಸಿದ್ದಾರೆ .
ಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಅತಿಶಿ
ದೆಹಲಿ ವಿಧಾನಸಭಾ ಚುನಾವಣೆ ಫಲಿತಾಂಶ: ಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಅತಿಶಿ
ಎಲ್ಲ ಅಪೂರ್ಣ ಕೆಲಸಗಳನ್ನು ಪೂರ್ಣಗೊಳಿಸುವೆ
ವಿರೋಧ ಪಕ್ಷವಾಗಿ ಕೆಲಸ ಮಾಡುತ್ತೇವೆ: AAP ವಕ್ತಾರೆ
ದೆಹಲಿ ಜನರು ನೀಡಿರುವ ತೀರ್ಪನ್ನು ವಿನಮ್ರತೆಯಿಂದ ಒಪ್ಪಿಕೊಳ್ಳುತ್ತವೆ. 10 ವರ್ಷ ಸೇವೆ ಸಲ್ಲಿಸಲು ನಮಗೆ ಅವಕಾಶ ನೀಡಿದ್ದಕ್ಕೆ ಧನ್ಯವಾದಗಳನ್ನು ತಿಳಿಸುತ್ತೇನೆ. ಮುಂದಿನ ದಿನಗಳಲ್ಲಿ ಬಿಜೆಪಿ ದೆಹಲಿಯ ಜನರಿಗೆ ಕೆಲಸ ಮಾಡುತ್ತದೆ ಎಂದು ನಂಬಿದ್ದೇವೆ. ನಾವು ದೆಹಲಿಯಲ್ಲಿ ವಿರೋಧ ಪಕ್ಷವಾಗಿ ಕೆಲಸ ಮಾಡುತ್ತೇವೆ ಎಂದು ಎಎಪಿ ವಕ್ತಾರೆ ಪ್ರಿಯಾಂಕಾ ಕಕ್ಕರ್ ಹೇಳಿದ್ದಾರೆ.
ಗೆಲುವಿನ ಬಗ್ಗೆ ಹರಿಯಾಣ ಸಿಎಂ ನಯಾಬ್ ಸಿಂಗ್ ಸೈನಿ ಹೇಳಿಕೆ
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ದೆಹಲಿಯ ಜನರು ನಮಗೆ ಐತಿಹಾಸಿಕ ಜಯವನ್ನು ನೀಡಿದ್ದಾರೆ. ಕಳೆದ ಹತ್ತು ವರ್ಷಗಳಿಂದ, ಯಾವಾಗಲೂ ಸುಳ್ಳು ಭರವಸೆಗಳನ್ನು ನೀಡುವ ಸರ್ಕಾರವಿತ್ತು ಎಂದು ಹರಿಯಾಣ ಸಿಎಂ ನಯಾಬ್ ಸಿಂಗ್ ಸೈನಿ ಹೇಳಿದ್ದಾರೆ.
ಮಾಜಿ ಸಿಎಂ ದಿವಂಗತ ಸಾಹಿಬ್ ಸಿಂಗ್ ವರ್ಮಾ ಸಮಾಧಿಗೆ ಪುಷ್ಪ ನಮನ
ನವದೆಹಲಿ ಕ್ಷೇತ್ರದ ಬಿಜೆಪಿ ವಿಜೇತ ಅಭ್ಯರ್ಥಿ ಪರ್ವೇಶ್ ವರ್ಮಾ ತಮ್ಮ ತಂದೆ, ದೆಹಲಿಯ ಮಾಜಿ ಸಿಎಂ ದಿವಂಗತ ಸಾಹಿಬ್ ಸಿಂಗ್ ವರ್ಮಾ ಅವರ ಸಮಾಧಿಗೆ ತೆರಳಿ ಪುಷ್ಪ ನಮನ ಸಲ್ಲಿಸಿದರು.
NOTAಗಿಂತಲೂ ಕಡಿಮೆ ಮತ ಪಡೆದ ರಾಷ್ಟ್ರೀಯ ಪಕ್ಷಗಳು
ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಸಿಪಿಐ) ಮತ್ತು ಜನತಾ ದಳ (ಯುನೈಟೆಡ್) ಕ್ರಮವಾಗಿ ಶೇ.0.01 ಮತ್ತು ಶೇ.0.53 ಮತಗಳನ್ನು ಪಡೆದಿವೆ. ಈ ಮತಗಳು ನೋಟಾಗಿಂತಲೂ ಕಡಿಮೆಯಾಗಿವೆ.