ನವದೆಹಲಿ(ಆ.14): ಕೊರೋನಾ ಸೋಂಕಿತರ ಸಂಪರ್ಕಗಳನ್ನು ಪತ್ತೆಹಚ್ಚಲು ಭಾರತ ಸರ್ಕಾರ ಅಭಿವೃದ್ಧಿಪಡಿಸಿರುವ ಆರೋಗ್ಯ ಸೇತು ಆ್ಯಪ್‌ಗೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಮೆಚ್ಚುಗೆ ವ್ಯಕ್ತಪಡಿಸಿದೆ.

ಲಕ್ಷಾಂತರ ಕುಟುಂಬಗಳು ಅತಂತ್ರ : ಸರ್ಕಾರದ ಜಾಣ ಕುರುಡು

‘ಕೊರೋನಾ ವೈರಸ್‌ ಹರಡದಂತೆ ತಡೆಯಲು ನಾವು ಈಗಾಗಲೇ ಪ್ರಯೋಜನಕಾರಿಯೆಂದು ಸಾಬೀತಾದ ಮಾರ್ಗಗಳನ್ನು ಅಳವಡಿಸಿಕೊಳ್ಳಬೇಕಿದೆ. ಮೊಬೈಲ್‌ ಆ್ಯಪ್‌ನಂತಹ ತಾಂತ್ರಿಕ ಟೂಲ್‌ಗಳು ಈ ವಿಷಯದಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡಬಹುದು. ಭಾರತದಲ್ಲಿ ಅಭಿವೃದ್ಧಿಪಡಿಸಿದ ಆರೋಗ್ಯ ಸೇತು ಆ್ಯಪ್‌ ಅನ್ನು 15 ಕೋಟಿ ಜನ ಡೌನ್‌ಲೋಡ್‌ ಮಾಡಿಕೊಂಡಿದ್ದಾರೆ. ಕೊರೋನಾ ಹರಡುವುದನ್ನು ತಡೆಯುವಲ್ಲಿ ಇದೂ ಒಂದು ಉತ್ತಮ ತಂತ್ರಜ್ಞಾನ’ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿ ಟೆಡ್ರೋಸ್‌ ಅಧನೋಮ್‌ ಗೆಬ್ರಿಯೇಸಸ್‌ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಗುತ್ತಿಗೆ ವೈದ್ಯರಿಗೆ ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್

ಆರೋಗ್ಯ ಸೇತು ಆ್ಯಪ್‌ನಿಂದ ಸರ್ಕಾರಿ ಸಂಸ್ಥೆಗಳಿಗೆ ಕೊರೋನಾ ಹರಡುವ ಕ್ಲಸ್ಟರ್‌ಗಳನ್ನು ಮೊದಲೇ ಗುರುತಿಸಲು ಸಾಧ್ಯವಾಗುತ್ತದೆ. ಅಲ್ಲಿ ಪರೀಕ್ಷೆಗಳನ್ನು ಹೆಚ್ಚಿಸಿ ಕೊರೋನಾ ನಿಯಂತ್ರಿಸಲು ಪ್ರಯತ್ನಿಸಲಾಗುತ್ತಿದೆ. ಭಾರತದಂತೆ ಜರ್ಮನಿಯಲ್ಲಿ ಕೊರೋನಾ ವಾರ್ನ್‌ ಆ್ಯಪ್‌, ಬ್ರಿಟನ್‌ನಲ್ಲಿ ಎನ್‌ಎಚ್‌ಎಸ್‌ ಕೋವಿಡ್‌-19 ಆ್ಯಪ್‌ ಮುಂತಾದ ತಾಂತ್ರಿಕ ಸಲರಣೆಗಳಿವೆ. ನಾವು ಈ ದೇಶಗಳ ಜೊತೆ ಸೇರಿ ಡಿಜಿಟಲ್‌ ಆ್ಯಪ್‌ಗಳ ಪ್ರಯೋಜನವನ್ನು ಅಳೆಯುವ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.

ಈ ಹಿಂದೆ ಮುಂಬೈನ ಧಾರಾವಿ ಕೊಳಚೆ ಪ್ರದೇಶದಲ್ಲಿ ಕೊರೋನಾ ಹರಡುವುದನ್ನು ತಡೆದಿದ್ದಕ್ಕೆ ವಿಶ್ವ ಆರೋಗ್ಯ ಸಂಸ್ಥೆ ವ್ಯಾಪಕ ಮೆಚ್ಚುಗೆ ವ್ಯಕ್ತಪಡಿಸಿತ್ತು.