ವಲಸಿಗ ಕಾರ್ಮಿಕರ ವಿರುದ್ಧ ಸದಾ ಕಿಡಿಕಾರುವ ಮಹಾರಾಷ್ಟ್ರ ನವನಿರ್ಮಾಣ ಸೇನೆ ನಾಯಕ ರಾಜ್‌ ಠಾಕ್ರೆ| 'ಕೊರೋನಾ ಸ್ಫೋಟಕ್ಕೆ ವಲಸೆ ಕಾರ್ಮಿಕರೇ ಕಾರಣ'

ಮುಂಬೈ(ಏ.07): ವಲಸಿಗ ಕಾರ್ಮಿಕರ ವಿರುದ್ಧ ಸದಾ ಕಿಡಿಕಾರುವ ಮಹಾರಾಷ್ಟ್ರ ನವನಿರ್ಮಾಣ ಸೇನೆ ನಾಯಕ ರಾಜ್‌ ಠಾಕ್ರೆ, ಇದೀಗ ಮಹಾರಾಷ್ಟ್ರದಲ್ಲಿ ಸೋಂಕು ಸ್ಫೋಟಕ್ಕೂ ವಲಸಿಗ ಕಾರ್ಮಿಕರೇ ಕಾರಣ ಎಂದು ದೂರಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮಹಾರಾಷ್ಟ್ರ ಪ್ರಮುಖ ಕೈಗಾರಿಕೆಗಳನ್ನು ಹೊಂದಿರುವ ರಾಜ್ಯವಾಗಿರುವುದರಿಂದ ದೊಡ್ಡ ಪ್ರಮಾಣದಲ್ಲಿ ಬೇರೆ ರಾಜ್ಯಗಳ ವಲಸೆ ಕಾರ್ಮಿರನ್ನು ಆಕರ್ಷಿಸುತ್ತದೆ. ಆದರೆ ಈ ಕಾರ್ಮಿಕರು ಬರುವ ರಾಜ್ಯಗಳಲ್ಲಿ ಸರಿಯಾಗಿ ಕೊರೋನಾ ಪರೀಕ್ಷೆ ನಡೆಸುತ್ತಿಲ್ಲ.

ಕಳೆದ ವರ್ಷ ಲಾಕ್ಡೌನ್‌ನಲ್ಲಿ ತವರು ರಾಜ್ಯಗಳಿಗೆ ಹೊರಟ ವಲಸೆ ಕಾರ್ಮಿಕರ ಕೊರೋನಾ ಟೆಸ್ಟ್‌ ಮಾಡಬೇಕೆಂದು ಸಲಹೆ ನೀಡಿದ್ದೆ. ಆದರೆ ಅದು ನಡೆಯಲಿಲ್ಲ’ ಎಂದು ಹೇಳಿದ್ದಾರೆ