Asianet Suvarna News Asianet Suvarna News

Asaduddin Owaisi: ರಾಹುಲ್ ಗಾಂಧಿ ಎಂದರೆ ಯಾರು? ನನಗೆ ಗೊತ್ತಿಲ್ಲ ಹುಡುಕಿ ಕೊಡಿ ಎಂದ ಓವೈಸಿ

  • ರಾಹುಲ್ ಗಾಂಧಿ ಯಾರು ಎಂದು ಪ್ರಶ್ನಿಸಿದ ಓವೈಸಿ
  • ಕಾಂಗ್ರೆಸ್ ಪಕ್ಷ  ಒಡೆದು ಹೋಗುತ್ತದೆ ಎಂದು ಭವಿಷ್ಯ 
  • ನನಗೆ ರಾಹುಲ್ ಗಾಂಧಿ ಪರಿಚಯ ಮಾಡಿಕೊಡಿ ಎಂದ ಓವೈಸಿ
     
Who is Rahul Gandhi questioned by Asaduddin Owaisi gow
Author
Bengaluru, First Published Dec 3, 2021, 7:02 PM IST

ನವದೆಹಲಿ ಡಿ.3: ರಾಹುಲ್ ಗಾಂಧಿ (Rahul gandhi) ಯಾರು? ನನಗೆ ಆತನ ಪರಿಚಯವಿಲ್ಲ ಎಂದು ಎಐಎಂಐಎಂ(AIMIM) ನಾಯಕ ಅಸಾದುದ್ದೀನ್ ಓವೈಸಿ (Asaduddin Owaisi) ಶುಕ್ರವಾರ ವಾಗ್ದಾಳಿ ನಡೆಸಿದ್ದಾರೆ. 

ಖಾಸಗಿ ಮಾಧ್ಯಮವೊಂದರ ಚರ್ಚೆಯಲ್ಲಿ ಭಾಗವಹಿಸಿದ ಓವೈಸಿ, ಬರುವ ದಿನಗಳಲ್ಲಿ ಕಾಂಗ್ರೆಸ್ ಪಕ್ಷ (Congress) ಒಡೆದು ಹೋಗುತ್ತದೆ ಎಂದು ಭವಿಷ್ಯ ನುಡಿಸಿದ್ದಾರೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್ (TMC) ಅನ್ನು ಹಲವಾರು ರಾಜ್ಯಗಳಲ್ಲಿ ಏಕಕಾಲದಲ್ಲಿ ವಿಸ್ತರಿಸುವ ಪ್ರಯತ್ನವನ್ನು ಉಲ್ಲೇಖಿಸಿದ ಓವೈಸಿ, ಅವರು ಇತರ ರಾಜ್ಯಗಳಲ್ಲಿ ಹೋರಾಟವನ್ನು ಮುಂದುವರಿಸಬೇಕು, ಮತ್ತು ನಾನು ಹೇಳುತ್ತಿದ್ದೇನೆ ಕಾಂಗ್ರೆಸ್‌ ಎರಡು ಮೂರು ವರ್ಷದಲ್ಲಿ ಒಡೆದು ಚೂರಾಗುತ್ತದೆ ಎಂದರು.

ಓವೈಸಿಗೆ ರಾಹುಲ್ ಗಾಂಧಿ ನಾಯಕತ್ವದಲ್ಲಿ ನಂಬಿಕೆ ಇಲ್ಲವೇ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ರಾಹುಲ್ ಗಾಂಧಿ ಯಾರು? ನನಗೆ ಆತನ ಪರಿಚಯವಿಲ್ಲ. ಅವರು ಯಾರೆಂದು ನಿಮಗೆ ತಿಳಿದಿದ್ದರೆ ದಯವಿಟ್ಟು ನನಗೆ ತಿಳಿಸಿ ಎಂದರು.

Congress VS TMC: 10 ವರ್ಷದಲ್ಲಿ ಶೇ. 90ರಷ್ಟು ಚುನಾವಣೆಯಲ್ಲಿ ಸೋಲು: ಕಾಂಗ್ರೆಸ್‌ಗೆ ಪ್ರಶಾಂತ್ ಕಿಶೋರ್ ಕ್ಲಾಸ್!

ನಮ್ಮನ್ನು ಪ್ರತಿ ಪಕ್ಷದ ಬಿ-ಟೀಮ್ ಎಂದು ಪರಿಗಣಿಸಲಾಗಿದೆ. ನೀವು ರಾಹುಲ್ ಗಾಂಧಿಯನ್ನು ಇಲ್ಲಿಗೆ ಕರೆ ತಂದರೆ, ಅವರು ಬಿಜೆಪಿಯವರು ಮಾತನಾಡುವ ರೀಓತಿಯಲ್ಲೇ ಮಾತನಾಡುತ್ತಾರೆ ಮತ್ತು ಅಖಿಲೇಶ್ ಯಾದವ್ ಕೂಡ ಅದೇ ರೀತಿ ಮಾತನಾಡುತ್ತಾರೆ ಎಂದು ಓವೈಸಿ ಹೇಳಿದರು.

Rahul Gandhi Tweet: ದ್ವೇಷ ಗೆಲ್ಲಲ್ಲ, ಧೈರ್ಯ ಇರಲಿ: ರಾಹುಲ್‌ ಟ್ವೀಟ್‌ ಬಗ್ಗೆ ಭಾರೀ ಗೊಂದಲ!

ಈ ಚರ್ಚೆಯಲ್ಲಿ ಬಿಜೆಪಿಯ ಸುಧಾಂಶು ತ್ರಿವೇದಿ (Sudhanshu trivedi) ಅವರು ಕೂಡ ಭಾಗವಹಿಸಿದ್ದರು. ಓವೈಸಿಗೆ ಪ್ರಶ್ನೆಗೆ ಉತ್ತರಿಸಿದ ತ್ರಿವೇದಿ, ಎಐಎಂಐಎಂನಂತಹ ಪಕ್ಷಗಳು ಮತ್ತು ಓವೈಸಿಯಂತಹ ನಾಯಕರು ಕಾಂಗ್ರೆಸ್‌ನಿಂದ ಬೆಳೆದು ಬಂದಿದ್ದಾರೆ ಎಂದರು.

ಈಗ ಮಮತಾ ಬ್ಯಾನರ್ಜಿ(Mamata banerjee) ಅವರನ್ನು ಬಿ-ಟೀಮ್ ಎಂದು ಮಾಡಲಾಗಿದೆ. ನಾನು ಇದನ್ನು ವಿರೋಧಿಸುತ್ತೇನೆ. ಬಿ-ಟೀಮ್ ಎಂದು ಪರಿಗಣಿಸಿರುವುದು ನನ್ನ ಟ್ಯಾಗ್. ಈಗ ಅವರನ್ನು ಬಿಜೆಪಿಯ ಬಿ ಟೀಮ್ ಎಂದು ಕಾಂಗ್ರೆಸ್ ಹೇಳುತ್ತಿದೆ. ಗೋವಾದಲ್ಲಿ ಅವರು ಹೇಗೆ ಹೋರಾಡುತ್ತಾರೆ ಎಂಬುದನ್ನು ನೋಡಲು ಕಾತುರನಾಗಿದ್ದೇನೆ ಎಂದಿದ್ದಾರೆ.

Kapil Sibal: ಕಾಂಗ್ರೆಸ್‌ ಇಲ್ಲದ ಯುಪಿಎ ಆತ್ಮವೇ ಇಲ್ಲದ ದೇಹವಿದ್ದಂತೆ: ಮಮತಾ ವಿರುದ್ಧ ಸಂಘಟಿತ ದಾಳಿ!

ಇದಕ್ಕೆ ಪ್ರತಿಯಾಗಿ ಉತ್ತರಿಸಿದ ತ್ರಿವೇದಿ "ಎಐಎಂಐಎಂನಂತಹ ಪಕ್ಷಗಳು ಮತ್ತು ಓವೈಸಿಯಂತಹ ನಾಯಕರು ಕೇರಳದಲ್ಲಿರುವ ಕಾಂಗ್ರೆಸ್‌ನಿಂದ ಬೆಳೆದು ಬಂದವರು, ಅಲ್ಲಿ ಮುಸ್ಲಿಂ ಲೀಗ್‌ನೊಂದಿಗೆ ಮೈತ್ರಿ ಮಾಡಿಕೊಂಡವರು. ಬಂಗಾಳದವರು ಅಬ್ಬಾಸ್ ಪಿರ್ಜಾದ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡವರು ಮತ್ತು ಅಸ್ಸಾಂನಲ್ಲಿ ಕಾಂಗ್ರೆಸ್,  ಬದ್ರುದ್ದೀನ್ ಅಜ್ಮಲ್ ಅವರ ಎಐಯುಡಿಎಫ್‌ನೊಂದಿಗೆ ಮೈತ್ರಿ ಮಾಡಿಕೊಂಡಿತು." ಎಂದರು.

Mamata In Mumbai: ರಾಷ್ಟ್ರಗೀತೆಗೆ ಅವಮಾನ, ಕುರ್ಚಿಯಿಂದ ಏಳದ ದೀದೀ ವಿರುದ್ಧ ದೂರು ದಾಖಲು!

ವಿರೋಧ ಪಕ್ಷಗಳಲ್ಲಿ ಎದ್ದು ಕಾಣುತ್ತಿದೆ ಒಡಕು:
ದೇಶದಲ್ಲಿ ಸದ್ಯ ಬಿಜೆಪಿ ವಿರುದ್ಧ ಒಗ್ಗೂಡಲಾರಂಭಿಸಿರುವ ವಿರೋಧ ಪಕ್ಷಗಳಲ್ಲಿ ಒಡಕು ಮುಡುತ್ತಿರುವುದು ಕಂಡುಬರುತ್ತಿದೆ.  ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್ ಕಳೆದ 10 ವರ್ಷಗಳಲ್ಲಿ ಕಾಂಗ್ರೆಸ್ ಶೇ. 90 ರಷ್ಟು ಚುನಾವಣೆಗಳಲ್ಲಿ ಸೋಲನುಭವಿಸಿದೆ. ಇಂತಹ ಪರಿಸ್ಥಿತಿಯಲ್ಲಿ ವಿರೋಧ ಪಕ್ಷದ ನಾಯಕತ್ವ ಕಾಂಗ್ರೆಸ್‌ನ ದೈವಿಕ ಹಕ್ಕಾಗಲಾರದು ಎಂದಿದ್ದಾರೆ. ಅಲ್ಲದೇ ಕಾಂಗ್ರೆಸ್ ಪ್ರತಿನಿಧಿಸುವ ಕಲ್ಪನೆ ಪ್ರಬಲ ವಿರೋಧಕ್ಕೆ ಬಹಳ ಮುಖ್ಯವಾಗಿದೆ. ಹೀಗಂತ ಕಾಂಗ್ರೆಸ್ ನಾಯಕತ್ವ ಯಾರ ದೈವಿಕ ಹಕ್ಕಲ್ಲ ಎಂದಿದ್ದಾರೆ.

ಕಾಂಗ್ರೆಸ್ ಅನ್ನು ಬದಿಗಿರಿಸಿ ದೀದಿ:
ಬಿಜೆಪಿ ವಿರುದ್ಧ ತೃತೀಯ ರಂಗ ಹುಟ್ಟುಹಾಕುವ ಕಸರತ್ತಿನಲ್ಲಿ ತೊಡಗಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಕಾಂಗ್ರೆಸ್ ಅನ್ನು ಬದಿಗಿರಿಸಿ ಹೊಸ ರಾಜಕೀಯ ಚರ್ಚೆಗೆ ನಾಂದಿ ಹಾಡಿದ್ದಾರೆ. ಮೊದಲನೆಯದಾಗಿ ಮಮತಾ ಬ್ಯಾನರ್ಜಿ ಈ ಮೈತ್ರಿಯಿಂದ ಕಾಂಗ್ರೆಸ್ ಅನ್ನು ದೂರವಿಟ್ಟಿದ್ದಾರೆ, ಎರಡನೆಯದಾಗಿ ಕಾಂಗ್ರೆಸ್ ನೇತೃತ್ವದ ಯುಪಿಎ ಮೈತ್ರಿ ಕುರಿತು, ಇನ್ನು ಮುಂದೆ ಮೈತ್ರಿ ಇಲ್ಲ ಎಂದು ನೀಡಿರುವ ಹೇಳಿಕೆ. ದೀದೀಯ ಈ ಹೆಳಿಕೆ ಬಳಿಕ ಕಾಂಗ್ರೆಸ್ ಮತ್ತು ಇತರ ಪಕ್ಷಗಳ ನಾಯಕರ ವಿಭಿನ್ನ ಹೇಳಿಕೆಗಳು ಬರಲಾರಂಭಿಸಿವೆ.

Follow Us:
Download App:
  • android
  • ios