Rahul Gandhi Tweet: ದ್ವೇಷ ಗೆಲ್ಲಲ್ಲ, ಧೈರ್ಯ ಇರಲಿ: ರಾಹುಲ್‌ ಟ್ವೀಟ್‌ ಬಗ್ಗೆ ಭಾರೀ ಗೊಂದಲ!

*ರಾಹುಲ್‌ ಗಾಂಧಿ ಟ್ವೀಟ್‌ ನೆಟ್ಟಿಗರಿಂದ ವಿಶ್ಲೇಷಣೆ
*ಹಾಸ್ಯಗಾರ ಫಾರೂಖಿ  ಪರ ರಾಹುಲ್‌  ಟ್ವೀಟ್‌?
*ಗೊಂದಲ ಸೃಷ್ಟಿಸಿದ ಕಾಂಗ್ರೆಸ್‌ ನಾಯಕನ ಹೇಳಿಕೆ!

Rahul Gandhi tweets keep faith hatred wont win Social media tries to interpret in many ways mnj

ನವದೆಹಲಿ(ನ.29): ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ (Rahul Gandhi) ಭಾನುವಾರ ಮಾಡಿದ ಟ್ವೀಟೊಂದು(Tweet), ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಯಾರನ್ನು? ಯಾವ ವಿಷಯವನ್ನು ಉದ್ದೇಶಿಸಿ ರಾಹುಲ್‌ ಟ್ವೀಟ್‌ ಮಾಡಿದ್ದಾರೆ ಎಂದು ಸ್ಪಷ್ಟವಾಗದೆ, ನೆಟ್ಟಿಗರು (netizens) ನಾನಾ ರೀತಿಯ ವಿಶ್ಲೇಷಣೆ ಮಾಡಿದ್ದಾರೆ. ‘ದ್ವೇಷ ಯಾವಾತ್ತೂ ಗೆಲ್ಲುವುದಿಲ್ಲ. ಧೈರ್ಯವಿರಲಿ, ಬಿಡಬೇಡಿ’ ಎಂದು ರಾಹುಲ್‌ ಭಾನುವಾರ ಟ್ವೀಟ್‌ ಮಾಡಿದ್ದಾರೆ. ಬೆಂಗಳೂರಿನಲ್ಲಿ ಕಾರ್ಯಕ್ರಮ ನಡೆಸದಂತೆ ತಡೆಹಿಡಿಯಲ್ಪಟ್ಟ ಹಾಸ್ಯಗಾರ ಫಾರೂಖಿ (Munawar Faruqui) ಪರ ರಾಹುಲ್‌ ಈ ಟ್ವೀಟ್‌ ಮಾಡಿರಬಹುದು ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

ಇನ್ನುಕೆಲವರು ಸೋಮವಾರದಿಂದ ಸಂಸತ್‌ ಅಧಿವೇಶನ (Parliament Session) ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಆಡಳಿತಾರೂಢ ಬಿಜೆಪಿ ಮತ್ತು ವಿಪಕ್ಷಗಳನ್ನು ಉದ್ದೇಶಿಸಿ ಈ ಮಾತುಗಳನ್ನು ಆಡಿದ್ದಾರೆ ಎಂಬ ವಿಶ್ಲೇಷಣೆಗಳು ಕೇಳಿಬಂದಿವೆ. ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ರಾಹುಲ್ ಗಾಂಧಿಯವರ ಟ್ವೀಟ್ ಅನ್ನು ದೇಶದ ರಾಜಕೀಯ ಬೆಳವಣಿಗೆಗಳೊಂದಿಗೆ ಹೋಲಿಸಲು ಪ್ರಯತ್ನಿಸಿದ್ದಾರೆ, ಇನ್ನೂ ಅನೇಕರು ಮುನಾವರ್ ಫರುಕಿ ಅವರನ್ನು ಟ್ಯಾಗ್ ಮಾಡಿದ್ದಾರೆ ಮತ್ತು ಸಂದೇಶವು ಅವರಿಗೆ ಉದ್ದೇಶಿಸಲಾಗಿತ್ತು ಎಂದು ಬರೆದಿದ್ದಾರೆ.

 

 

ಸಂಸತ್ತಿನ ಚಳಿಗಾಲದ ಅಧಿವೇಶನ ಪ್ರಾರಂಭ!

ಸಂಸತ್ತಿನ ಚಳಿಗಾಲದ ಅಧಿವೇಶನ (Parliament Winter Session) ಸೋಮವಾರ (ನ.29)ದಿಂದ ಆರಂಭವಾಗಲಿದ್ದು, ಕೃಷಿ ಕಾಯ್ದೆ, ಪಂಚರಾಜ್ಯ ಚುನಾವಣೆ (Five State Elections), ಬೆಲೆಯೇರಿಕೆ, ಪೆಗಾಸಸ್‌ ಬೇಹುಗಾರಿಕೆ ಮುಂತಾದ ವಿಷಯಗಳಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ನಡುವೆ ಭಾರಿ ವಾಕ್ಸಮರ, ಜಟಾಪಟಿ ನಡೆಯುವ ಸಾಧ್ಯತೆಯಿದೆ. ಡಿ.23ರವರೆಗೆ ನಡೆಯುವ ಅಧಿವೇಶನದಲ್ಲಿ ಬಿಜೆಪಿ (BJP) ವಿರುದ್ಧ ಮುಗಿಬೀಳಲು ಕಾಂಗ್ರೆಸ್‌ (Congress) ಹಾಗೂ ಇನ್ನಿತರ ವಿಪಕ್ಷಗಳು ಸಾಕಷ್ಟುವಿಷಯಗಳನ್ನು ಸಿದ್ಧಪಡಿಸಿಕೊಂಡಿವೆ. ಆದರೆ, ಅವುಗಳಿಗೆ ಸೂಕ್ತ ತಿರುಗೇಟು ನೀಡಲು ಬಿಜೆಪಿ ಕೂಡ ಸಜ್ಜಾಗಿದೆ. ಈ ಬೆನ್ನಲ್ಲೇ ರಾಹುಲ್‌ ಟ್ವೀಟ್‌ ಮಾಡಿರಬಹುದು ಎಂದು ಹಲವರು ಹೇಳಿದ್ದಾರೆ.

ಹಾಸ್ಯಗಾರ ಮುನಾವರ್ ಫಾರೂಕಿ ಕಾರ್ಯಕ್ರಮ ರದ್ದು!

ನವೆಂಬರ್ 28) ಗುಡ್ ಶೆಫರ್ಡ್ ಸಭಾಂಗಣದಲ್ಲಿ (Good Shepherd auditorium) ನಡೆಯಬೇಕಿದ್ದ ಹಾಸ್ಯಗಾರ ಮುನಾವರ್ ಫಾರೂಕಿ (Munawar Faruqui) ಅವರ ಕಾರ್ಯಕ್ರಮವನ್ನು ರದ್ದುಗೊಳಿಸಬೇಕೆಂದು ಬೆಂಗಳೂರು ಪೊಲೀಸರು (Bengaluru Police) ಸೂಚನೆ ನೀಡಿದ್ದರು. ಸಂಘಟಕರಿಗೆ ಬರೆದ ಪತ್ರದಲ್ಲಿ, "ಹಲವಾರು ಸಂಘಟನೆಗಳು ಈ ಸ್ಟ್ಯಾಂಡ್-ಅಪ್ ಕಾಮಿಡಿ ಶೋ (Stand up comedy) ಅನ್ನು ವಿರೋಧಿಸುತ್ತಿವೆ. ಇದು ಅವ್ಯವಸ್ಥೆಯನ್ನು ಸೃಷ್ಟಿಸುತ್ತದೆ ಮತ್ತು ಸಾರ್ವಜನಿಕ ಶಾಂತಿ ಮತ್ತು ಸೌಹಾರ್ದತೆಗೆ ಭಂಗ ತರಬಹುದು. ಇದು ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು  ಮಾಹಿತಿ ಇದೆ" ಎಂದು ತಿಳಿಸಲಾಗಿದೆ. ಬಜರಂಗದಳದ ಬೆದರಿಕೆಯಿಂದಾಗಿ ಕಳೆದ ತಿಂಗಳು ಮುಂಬೈನಲ್ಲಿ (Mumbai) ಫಾರೂಕಿ ಇದೇ ರೀತಿಯ ಕಾರ್ಯಕ್ರಮ ರದ್ದುಗೊಂಡಿತ್ತು. ಈ ಬಗ್ಗೆ ಹಾಸ್ಯಗಾರ ಫಾರೂಕಿ ಟ್ವೀಟ್‌ ಮಾಡಿ ಅಸಮಾಧಾನ ವ್ಯಕ್ತಪಡಿಸಿದ್ದರು. ರಾಹುಲ್‌ ಗಾಂಧಿ ಹಾಸ್ಯಗಾರ ಫಾರೂಕಿ ಬೆಂಬಲಿಸಿ ಟ್ವೀಟ್‌ ಮಾಡಿರಬಹುದು ಎಂದು ಹಲವರು ವಿಶ್ಲೇಷಿಸಿದ್ದಾರೆ.

 

 

Farm law Withdrawn : ಅನ್ನದಾತರ ಮುಂದೆ ಅಹಂಕಾರ ತಲೆ ತಗ್ಗಿಸಿದೆ, ರಾಹುಲ್ ಗಾಂಧಿ

ಕಳೆದ ತಿಂಗಳು ನಡೆದ ಟಿ20 ವಿಶ್ವಕಪ್ ಪಂದ್ಯದಲ್ಲಿ ಭಾರತವು ಪಾಕಿಸ್ತಾನ(India Vs Pakistan) ವಿರುದ್ಧ ಸೋತ ನಂತರ ಕ್ರಿಕೆಟಿಗ ಮೊಹಮ್ಮದ್ ಶಮಿಯನ್ನು ನಿಂದಿನೆಗೊಳಗಾಗಿದ್ದರು. ರಾಹುಲ್ ಗಾಂಧಿ ಕ್ರಿಕೆಟಿಗನಿಗೆ ಬೆಂಬಲ ನೀಡಿ, "ಮೊಹಮ್ಮದ್ ಶಮಿ, ನಾವೆಲ್ಲರೂ ನಿಮ್ಮೊಂದಿಗಿದ್ದೇವೆ. ಯಾರೂ ನೀಡದ ಕಾರಣ ಈ ಜನರು ದ್ವೇಷದಿಂದ ತುಂಬಿದ್ದಾರೆ. ಅವರಿಗೆ ಯಾವುದೇ ಪ್ರೀತಿ, ಅವರನ್ನು ಕ್ಷಮಿಸಿ." ಎಂದು ಹೇಳಿದ್ದರು.

Latest Videos
Follow Us:
Download App:
  • android
  • ios