ಮೂರು ದಿನದಳ ಯೂರೋಪ್ ಪ್ರವಾಸದಲ್ಲಿ ಪ್ರಧಾನಿ ಮೋದಿ ಡೆನ್ಮಾರ್ಕ್ ಪ್ರಧಾನಿ ಭೇಟಿಯಾಗಿ ಮಹತ್ವದ ದ್ವಿಪಕ್ಷೀಯ ಮಾತುಕತೆ ಭಾರತದಲ್ಲಿ ಹೂಡಿಕೆ ಕುರಿತು ಮೋದಿ ಮಾತು, FOMO ಸಂಚಲನ
ಡೆನ್ಮಾರ್ಕ್(ಮೇ.03): ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಜನರಲ್ಲಿ ಕಳೆದು ಹೋಗುವ ಭಯ(FOMO)ಭಾರಿ ಚರ್ಚೆಯಾಗುತ್ತಿದೆ. ಎಲ್ಲರ ಗಮನಸೆಳೆಯುತ್ತಿದೆ. ಭಾರತದಲ್ಲಿ ಸುಧಾರಣೆ ಹಾಗೂ ಹೂಡಿಕೆ ಅವಕಶಗಳು ವಿಪುಲವಾಗಿದೆ. ಪೂರಕ ವಾತಾವರಣ ನಿರ್ಮಿಸಲಾಗಿದೆ. ನಮ್ಮ ದೇಶದಲ್ಲಿ ಹೂಡಿಕೆ ಮಾಡವರು ಈ ಅವಕಾಶಗಳನ್ನು ಖಂಡಿತವವಾಗಿಯೂ ತಪ್ಪಿಸಿಕೊಳ್ಳುತ್ತಾರೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಮೂರು ದಿನಗಳ ಯುರೋಪ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಇಂದು ಡೆನ್ಮಾರ್ಕ್ ಪ್ರಧಾನಿ ಫ್ರೆಡ್ರೆಕ್ಸನ್ ಅವರನ್ನು ಕೋಪನ್‌ಹ್ಯಾಗನ್‌ನಲ್ಲಿ ಭೇಟಿಯಾಗಿ ಮಹತ್ವದ ಮಾತುಕತೆ ನಡೆಸಿದ್ದಾರೆ. ಡೆನ್ಮಾರ್ಕ್ ಪ್ರಧಾನಿ ನಿವಾಸದಲ್ಲೇ ಮಾತುಕತೆ ನಡೆಸಿರುವು ಮತ್ತೊಂದು ವಿಶೇಷವಾಗಿದೆ. ಈ ವೇಳೆ ಪ್ರಧಾನಿ FOMO ಮಾತು ಭಾರಿ ಸಂಚಲನ ಸೃಷ್ಟಿಸಿದೆ.
ಮತ್ತೆ ಪ್ರಧಾನಿಯಾಗಿ ಮೋದಿ ಬಯಸಿದ ಜರ್ಮನಿಯ ಭಾರತೀಯರು!
ಭಾರತ ಹಾಗೂ ಡೆನ್ಮಾರ್ಕ್ ದ್ವಿಪಕ್ಷೀಯ ಸಹಕಾರ, ವ್ಯವಾಹರ ಒಪ್ಪಂದ ಸೇರಿದಂತೆ ಹಲವು ಮಹತ್ವದ ಚರ್ಚೆಗಳು ನಡೆಸಲಾಗಿದೆ. ಮುಕ್ತ ಮತ್ತು ಅಂತರ್ಗತ ಇಂಡೋ ಪೆಸಿಫಿಕ್ ವ್ಯವಹಾರಕ್ಕೆ ಪ್ರಧಾನಿ ಮೋದಿ ಒತ್ತು ನೀಡಿದ್ದಾರೆ. ಇದೇ ವೇಳೆ ಉಭಯ ದೇಶಗಳು ಗ್ರೀನ್ ಸ್ಟಾರ್ಟಜಿಕ್(ಹಸಿರು ಕಾರ್ಯತಂತ್ರ) ಪಾಲುದಾರಿಕೆಯ ಪ್ರಗತಿಯನ್ನು ಬೆಂಬಲಿಸಿದೆ. ನವೀಕರಿಸಬಹುದಾದ ಇಂಧನ, P2P ಸಂಬಂಧಗಳ ಕ್ಷೇತ್ರಗಳಲ್ಲಿ ಸಹಕಾರ, ಕೌಶಲ್ಯ ಅಭಿವೃದ್ಧಿ ಸೇರಿದಂತೆ ಹಲವು ಕ್ಷೇತ್ರಗಳ ಸಹಕಾರದ ಕುರಿತು ಮೋದಿ ಚರ್ಚಿಸಿದರು.
ಹಸಿರು ಕೈಗಾರಿಕೆಗಳು ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಡ್ಯಾನಿಶ್ ಕಂಪನಿಗಳಿಗೆ ಭಾರತದಲ್ಲಿ ವಿಪುಲ ಅವಕಾಶಗಳಿವೆ ಎಂದು ಮೋದಿ ಹೇಳಿದ್ದಾರೆ. ಭಾರತದಲ್ಲಿ ಸುಮಾರು 200ಕ್ಕೂ ಹೆಚ್ಚು ಡೆನ್ಮಾರ್ಕ್ ಕಂಪನಿಗಳು ಕಾರ್ಯನಿರ್ವಹಿಸುತ್ತಿದೆ. ಹಡಗು, ಆಹಾರ ಸಂಸ್ಕರಣೆ, ಇಂಜಿನಿಯರಿಂಗ್ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಅತ್ಯುತ್ತಮ ಪ್ರಗತಿ ಸಾಧಿಸಿದೆ. ಇದರ ಜೊತೆಗೆ ಭಾರತದ ಸುಲಭ, ಆರ್ಥಿಕ ಸುಧಾರಣೆಗಳ ಪ್ರಯೋಜನಗಳು ಪಡೆಯುತ್ತಿದೆ ಎಂದು ಮೋದಿ ಹೇಳಿದ್ದಾರೆ.
FOMO ಭಾರತದ ಬಗ್ಗೆ ಎಂದು ಅರ್ಥಮಾಡಿಕೊಂಡಿದ್ದೇನೆ, ಡೆನ್ಮಾರ್ಕ್ ಪ್ರಧಾನಿ
ಪ್ರಧಾನಿ ನರೇಂದ್ರ ಮೋದಿ FOMO ಹೇಳಿಕೆಗೆ ಡೆನ್ಮಾರ್ಕ್ ಪ್ರಧಾನಿ ಫ್ರೆಡ್ರೆಕ್ಸನ್ ಪ್ರತಿಕ್ರಿಯೆ ನೀಡಿದ್ದಾರೆ. FOMO ಪದವನ್ನು ಶುಕ್ರವಾರ ಅಥವಾ ಪಾರ್ಟಿಗಳಿಗೆ ಹೇಳುತ್ತಾರೆ ಎಂದು ಭಾವಿಸಿದ್ದೆ. ಆದರೆ ಈಗ ಅರ್ಥವಾಗಿದೆ, ಭಾರತದಲ್ಲಿನ ಹೂಡಿಕೆ ಅವಕಾಶ ಮಿಸ್ ಮಾಡಿಕೊಂಡರೆ FOMO ಕಾಡಲಿದೆ ಎಂದು ಫ್ರೆಡ್ರೆಕ್ಸನ್ ಹೇಳಿದ್ದಾರೆ.
ವಿದೇಶದ ನೈಟ್ ಕ್ಲಬ್‌ನಲ್ಲಿ ರಾಹುಲ್ : ಮೋದಿ ಪ್ರವಾಸ ಟೀಕಿಸಿದ ಕಾಂಗ್ರೆಸ್‌ಗೆ ಮುಜುಗರ
ಪ್ರವಾಸದ ಉದ್ದೇಶವೇನು?
ಪ್ರಧಾನಿ ನರೇಂದ್ರ ಮೋದಿಯವರ ವಿದೇಶಿ ಪ್ರವಾಸದ ಪ್ರಮುಖ ಉದ್ದೇಶ ಇಂಧನ ಭದ್ರತೆಯಾಗಿದೆ. ಉಕ್ರೇನ್-ರಷ್ಯಾ ಯುದ್ಧದಿಂದಾಗಿ ಜಗತ್ತಿನಲ್ಲಿ ಶಕ್ತಿ ಸಂಪನ್ಮೂಲಗಳ ಕೊರತೆಯಿಂದಾಗಿ ಸಮಸ್ಯೆಯಾಗುತ್ತಿದ್ದು, ಇದನ್ನು ಬಗೆಹರಿಸಲು ಮೋದಿ ವಿದೇಶಿ ನಾಯಕರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಇದರೊಂದಿಗೆ ವಿದೇಶಗಳೊಂದಿಗಿನ ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಕೋವಿಡ್ ನಂತರ ಆರ್ಥಿಕ ಪುನಶ್ಚೇತನ, ಹವಾಮಾನ ಬದಲಾವಣೆ, ಅನ್ವೇಷಣೆ ಹಾಗೂ ತಂತ್ರಜ್ಞಾನ, ನವೀಕರಿಸಬಹುದಾದ ಶಕ್ತಿ ಬಳಕೆ ಹಾಗೂ ಜಾಗತಿಕ ಭದ್ರತೆ ಮೊದಲಾದ ಮಹತ್ವಪೂರ್ಣ ವಿಷಯಗಳ ಕುರಿತು ಮೋದಿ ಚರ್ಚೆ ನಡೆಸಲಿದ್ದಾರೆ.
ಮೇ. 3 ಹಾಗೂ 4 ರಂದು ಡೆನ್ಮಾರ್ಕ್ನ ಕೋಪನ್‌ಹೇಗನ್‌ಗೆ ಪ್ರಧಾನಿ ಭೇಟಿಕೊಡಲಿದ್ದು, ಡ್ಯಾನಿಶ್ ಪ್ರಧಾನಿ ಮಾಟ್ ಫ್ರೆಡ್ರಿಕ್‌ಸನ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಅಲ್ಲದೇ 2ನೇ ಭಾರತ-ನಾರ್ಡಿಕ್ ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದಾರೆ. ಡೆನ್ಮಾರ್ಕ್ನಲ್ಲಿ ಭಾರತೀಯ ಮೂಲದ ಉದ್ಯಮಿಗಳೊಂದಿಗೆ ಮಾತುಕತೆ ನಡೆಸಲಿದ್ದಾರೆ. ಭಾರತಕ್ಕೆ ಮರಳುವಾಗ ಮಾರ್ಗ ಮಧ್ಯದಲ್ಲಿ ಮೋದಿ ಪ್ಯಾರಿಸ್‌ಗೆ ಭೇಟಿ ನೀಡಿ, ಮರು ಆಯ್ಕೆಯಾದ ಫ್ರಾನ್ಸಿನ ರಾಷ್ಟಾ್ರಧ್ಯಕ್ಷ ಇಮ್ಯಾನುಯೆಲ್ ಮಾಕ್ರೋನ್ ಅವರಿಗೆ ಅಭಿನಂದನೆ ಸಲ್ಲಿಸಲಿದ್ದಾರೆ.
