Asianet Suvarna News Asianet Suvarna News

ಲೋಕಸಭೆಯಲ್ಲಿ ಶ್ವೇತಪತ್ರ ಮಂಡಿಸಿದ ಮೋದಿ ಸರ್ಕಾರ, ಯುಪಿಎ ಕಾಲದ ಅರ್ಥಿಕ ಅವ್ಯವಸ್ಥೆ ಮಾಹಿತಿ ನೀಡಿದ ನಿರ್ಮಲಾ


ಲೋಕಸಭೆಯಲ್ಲಿ ಶ್ವೇತಪತ್ರವನ್ನು ಮೋದಿ ಸರ್ಕಾರ ಮಂಡಿಸಿದೆ. ಎನ್‌ಡಿಎ ಸರ್ಕಾರದ ಪರವಾಗಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಶ್ವೇತಪತ್ರ ಮಂಡಿಸಿದರು. ಯುಪಿಎ ಸರ್ಕಾರದ ಅವಧಿಯಲ್ಲಿ ನಡೆದ ಆರ್ಥಿಕ ದುರುಪಯೋಗದ ವಿರುದ್ಧ ಸರ್ಕಾರ ಈ ಶ್ವೇತಪತ್ರ ತಂದಿದೆ.
 

White paper presented in Lok Sabha Modi government will discuss UPA economic mismanagement san
Author
First Published Feb 8, 2024, 5:29 PM IST

ನವದೆಹಲಿ (ಫೆ.8): ಲೋಕಸಭೆಯಲ್ಲಿ ಶ್ವೇತಪತ್ರವನ್ನು ಮೋದಿ ಸರ್ಕಾರ ಮಂಡಿಸಿದೆ. ಎನ್‌ಡಿಎ ಸರ್ಕಾರದ ಪರವಾಗಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಶ್ವೇತಪತ್ರ ಮಂಡಿಸಿದರು. ಯುಪಿಎ ಸರ್ಕಾರದ ಅವಧಿಯಲ್ಲಿ ನಡೆದ ಆರ್ಥಿಕ ದುರುಪಯೋಗದ ವಿರುದ್ಧ ಸರ್ಕಾರ ಈ ಶ್ವೇತಪತ್ರ ತಂದಿದೆ. ಇದನ್ನು ವಿರೋಧಿಸಿ 'ಕಪ್ಪು ಕಾಗದ' ತರಲು ಕಾಂಗ್ರೆಸ್ ನಿರ್ಧರಿಸಿದೆ. 2014ರ ಮೊದಲು (ಮೋದಿ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ) ದೇಶವು ಯಾವ ರೀತಿಯ ಆಡಳಿತ, ಆರ್ಥಿಕ ಮತ್ತು ಹಣಕಾಸಿನ ಬಿಕ್ಕಟ್ಟುಗಳನ್ನು ಎದುರಿಸುತ್ತಿದೆ ಎಂಬುದನ್ನು ಸಂಸದರಿಗೆ ಹಾಗೂ ದೇಶದ ಜನತೆಗೆ ತಿಳಿಸುವ ನಿಟ್ಟನಲ್ಲಿ ಶ್ವೇತಪತ್ರ ತರಲಾಗಿದೆ. ಇದಲ್ಲದೇ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಮೋದಿ ಸರಕಾರ ಕೈಗೊಂಡಿರುವ ಕ್ರಮಗಳೇನು ಎಂಬುದನ್ನು ಜನರಿಗೆ ತಿಳಿಸಲು ಈ ಕ್ರಮ ಕೈಗೊಳ್ಳಲಾಗಿದೆ.

ಶ್ವೇತಪತ್ರದಲ್ಲಿರುವ ಪ್ರಮುಖ ಅಂಶಗಳೇನು:  ಯುಪಿಎ ಸರ್ಕಾರ ದೇಶದ ಆರ್ಥಿಕ ತಳಹದಿಯನ್ನು ದುರ್ಬಲಗೊಳಿಸಿದೆ ಎಂದು ಶ್ವೇತಪತ್ರದಲ್ಲಿ ತಿಳಿಸಲಾಗಿದೆ. ಯುಪಿಎ ಅವಧಿಯಲ್ಲಿ ರೂಪಾಯಿಯಲ್ಲಿ ಭಾರಿ ಕುಸಿತವಾಗಿತ್ತು, ಬ್ಯಾಂಕಿಂಗ್ ವಲಯ ದೊಡ್ಡ ಮಟ್ಟದ ಬಿಕ್ಕಟ್ಟಿನಲ್ಲಿತ್ತು, ವಿದೇಶಿ ವಿನಿಮಯ ಸಂಗ್ರಹದಲ್ಲಿ ಕುಸಿತವಾಗಿತ್ತು. ಭಾರಿ ಪ್ರಮಾಣದ ಸಾಲವನ್ನು ಸರ್ಕಾರ  ತೆಗೆದುಕೊಂಡಿತ್ತು. ಆದಾಯವನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದೆ.

ಯುಪಿಎ ಕಾಲದಲ್ಲಿ ಇದ್ದ ಹಣದುಬ್ಬರದ ದರ

White paper presented in Lok Sabha Modi government will discuss UPA economic mismanagement san

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ಮಧ್ಯಂತರ ಬಜೆಟ್ ಭಾಷಣದಲ್ಲಿ ಶ್ವೇತಪತ್ರ ಹೊರಡಿಸುವ ಬಗ್ಗೆ ಘೋಷಣೆ ಮಾಡಿದ್ದರು. ಯುಪಿಎ ದಶಕ ಮತ್ತು ಎನ್‌ಡಿಎ ದಶಕವನ್ನು ಒಳಗೊಂಡ ಶ್ವೇತಪತ್ರವನ್ನು ಸರ್ಕಾರ ಮಂಡಿಸಲಿದೆ ಎಂದು ತಿಳಿಸಿದ್ದರು. ಯುಪಿಎ ಆಡಳಿತದ ಆರ್ಥಿಕ ದುರುಪಯೋಗ ಮತ್ತು ಎನ್‌ಡಿಎ ಆಡಳಿತದ ಆರ್ಥಿಕ ವಿವೇಕವನ್ನು ತೋರಿಸಲು ತುಲನಾತ್ಮಕ ವಿಶ್ಲೇಷಣೆ ಇದರಲ್ಲಿ ಇರುತ್ತದೆ ಎಂದಿದ್ದರು.

ಯುಪಿಎ ಅಧಿಕಾರದ 10 ವರ್ಷಗಳಲ್ಲಿ ಬ್ಯಾಂಕ್‌ಗಳಲ್ಲಿನ ಎನ್‌ಪಿಎ ಏರಿಕೆ

White paper presented in Lok Sabha Modi government will discuss UPA economic mismanagement san

2014ಕ್ಕೂ ಮುನ್ನ ದೇಶದ ಆರ್ಥಿಕತೆ ದುರುಪಯೋಗ, ಶ್ವೇತಪತ್ರ ಹೊರಡಿಸಲು ಮುಂದಾದ ಕೇಂದ್ರ ಸರ್ಕಾರ!

ಕಾಂಗ್ರೆಸ್‌ನ ಕಪ್ಪುಪತ್ರಕ್ಕೆ ಮೋದಿ ಟೀಕೆ: ಶ್ವೇತಪತ್ರದ ವಿರುದ್ಧ ಕಪ್ಪು ಪತ್ರ ತರಲು ಕಾಂಗ್ರೆಸ್ ಮಾತನಾಡಿದೆ. ಮೋದಿ ರಾಜ್ಯಸಭೆಯಲ್ಲಿ  ಈ ಕುರಿತಾಗಿ ಟೀಕೆ ಮಾಡಿದ್ದರು. 'ಕಪ್ಪು ಬಟ್ಟೆಯಲ್ಲಿ ಫ್ಯಾಷನ್ ಶೋ ವೀಕ್ಷಿಸಲು ಸದನಕ್ಕೂ ಅವಕಾಶ ಸಿಕ್ಕಿತು. ಕೆಲವೊಮ್ಮೆ ಕೆಲವು ಕೆಲಸಗಳು ತುಂಬಾ ಒಳ್ಳೆಯದು, ಅದು ದೀರ್ಘಾವಧಿಯಲ್ಲಿ ಉಪಯುಕ್ತವಾಗಿರುತ್ತದೆ. ಯಾರಾದರೂ ಕಣ್ಣು ಬೀಳಬಹುದು ಎನ್ನುವ ಕಾರಣಕ್ಕೆ ಸಾಮಾನ್ಯವಾಗಿ ಕಪ್ಪು ಚುಕ್ಕೆ ಇಡುತ್ಥಾರೆ.  ಕಳೆದ 10 ವರ್ಷಗಳಲ್ಲಿ ಮಾಡಿದ ಕೆಲಸದ ಮೇಲೆ ಯಾರ ಕಣ್ಣೂ ಬೀಳದೇ ಇರಲಿ ಎಂದು ಇಂದು ಖರ್ಗೆ ಜೀ ಕಪ್ಪು ಚುಕ್ಕೆ ಹಾಕಿಕೊಂಡು ಬಂದಿದ್ದಾರೆ. ಇಂದು ನಿಮ್ಮಂತಹ ಹಿರಿಯ ಸಂಸದರು ನಮ್ಮ ನಡೆ ಗಮನಕ್ಕೆ ಬಾರದಂತೆ ಕಪ್ಪು ತಿಲಕ ಧರಿಸಿ ಬಂದಿರುವುದು ಸಂತಸ ತಂದಿದೆ ಎಂದು ಹೇಳಿದ್ದರು.

ಮೊದಲ ಬಾರಿಗೆ ಸಂಸತ್ತಿನಲ್ಲಿ ಶ್ವೇತಪತ್ರ ಹೊರಡಿಸಲಿದೆ ಕೇಂದ್ರ ಸರ್ಕಾರ, ಏನಿದು ವೈಟ್ ಪೇಪರ್?

'2014 ರಲ್ಲಿ ನಾವು ಸರ್ಕಾರವನ್ನು ರಚಿಸಿದಾಗ, ಆರ್ಥಿಕತೆಯು ದುರ್ಬಲ ಸ್ಥಿತಿಯಲ್ಲಿತ್ತು; ಸಾರ್ವಜನಿಕ ಹಣಕಾಸು ಕೆಟ್ಟ ಸ್ಥಿತಿಯಲ್ಲಿತ್ತು; ಆರ್ಥಿಕ ದುರುಪಯೋಗ ಮತ್ತು ಆರ್ಥಿಕ ಅಶಿಸ್ತು ಇತ್ತು ಮತ್ತು ವ್ಯಾಪಕ ಭ್ರಷ್ಟಾಚಾರ ಇತ್ತು. ಇದು ಬಿಕ್ಕಟ್ಟಿನ ಪರಿಸ್ಥಿತಿ ನಿರ್ಮಾಣವಾಗಿತ್ತು..' ಎಂದು ಸರ್ಕಾರ ತನ್ನ ಹೇಳಿಕೆಯಲ್ಲಿ ತಿಳಿಸಿದೆ.  "ಆರ್ಥಿಕತೆಯನ್ನು ಹಂತ ಹಂತವಾಗಿ ಸರಿಪಡಿಸುವ ಮತ್ತು ಆಡಳಿತ ವ್ಯವಸ್ಥೆಗಳನ್ನು ಕ್ರಮಬದ್ಧಗೊಳಿಸುವ ಜವಾಬ್ದಾರಿಯು ಆ ಹಂತದಲ್ಲಿ ಅಗಾಧವಾಗಿತ್ತು ಎಂದು ಹೇಳಿದೆ. 2014 ರಲ್ಲಿ ಪ್ರಸ್ತುತ ಸರ್ಕಾರವು ಅಧಿಕಾರ ವಹಿಸಿಕೊಂಡಾಗ ಆರ್ಥಿಕ ಸ್ಥಿತಿಯನ್ನು 'ನಷ್ಟದಲ್ಲಿ ಸಿಕ್ಕ ಉತ್ತರಾಧಿಕಾರ' ಎಂದು ವಿವರಿಸಿದ ಸರ್ಕಾರ, ಯುಪಿಎ ಸರ್ಕಾರವು 2004 ರಲ್ಲಿ ಆರೋಗ್ಯಕರ ಆರ್ಥಿಕತೆಯನ್ನು ಪಡೆದ ನಂತರ ಬೆಳವಣಿಗೆಯನ್ನು ಹೆಚ್ಚಿಸಲು ವಿಫಲವಾಗಿದೆ ಎಂದು ತನ್ನ ಶ್ವೇತಪತ್ರದಲ್ಲಿ ಹೇಳಿದೆ. ಯುಪಿಎ ಸರ್ಕಾರವು 2004 ರಲ್ಲಿ ತನ್ನ ಅವಧಿಯನ್ನು ಪ್ರಾರಂಭಿಸಿದಾಗ, ಆರ್ಥಿಕತೆಯು 8 ರಲ್ಲಿ ಬೆಳೆಯುತ್ತಿತ್ತು. ಆದರೆ, ಆ ಬಳಿಕ ಇದನ್ನು ಮುಂದುವರಿಸಲು ವಿಫಲವಾಗಿದೆ ಎಂದಿದೆ.

"ವಿಪರ್ಯಾಸವೆಂದರೆ, 1991 ರ ಸುಧಾರಣೆಗಳ ಕ್ರೆಡಿಟ್ ತೆಗೆದುಕೊಳ್ಳಲು ಅಪರೂಪವಾಗಿ ವಿಫಲವಾದ ಯುಪಿಎ ನಾಯಕತ್ವವು 2004 ರಲ್ಲಿ ಅಧಿಕಾರಕ್ಕೆ ಬಂದ ನಂತರ ಅವುಗಳನ್ನು ಕೈಬಿಟ್ಟಿತು" ಎಂದು ಶ್ವೇತಪತ್ರವು ಸೇರಿಸಿತು. "ಹಿಂದಿನ ಎನ್‌ಡಿಎ ಸರಕಾರ ಹಾಕಿದ ಭದ್ರ ಬುನಾದಿಯ ಮೇಲೆ ಯುಪಿಎ ಸರಕಾರ ಸ್ವಲ್ಪವೂ ಕೆಲಸ ಮಾಡಿಲ್ಲ" ಎಂದು ಶ್ವೇತಪತ್ರದಲ್ಲಿ ಸರಕಾರ ಹೇಳಿದೆ. ಹಿಂದಿನ ಯುಪಿಎ ಸರ್ಕಾರದ ಅವಧಿಯಲ್ಲಿ ಎರಡಂಕಿಯ ಹಣದುಬ್ಬರ, ಸಾರ್ವಜನಿಕ ಹಣಕಾಸಿನ ದುರುಪಯೋಗ ಮತ್ತು ವಿದೇಶಿ ವಿನಿಮಯ ಬಿಕ್ಕಟ್ಟು ಸೇರಿದಂತೆ ಹಲವಾರು ಇತರ ಆರ್ಥಿಕ ವೈಫಲ್ಯಗಳನ್ನು ಶ್ವೇತ ಪತ್ರ ಎತ್ತಿ ತೋರಿಸಿದೆ.
 

Follow Us:
Download App:
  • android
  • ios