* ಹಿಮ ನೋಡಬೇಕೆಂಬ ಮಹದಾಸೆಯಿಂದ ಕಾಶ್ಮೀರಕ್ಕೆ ಭೇಟಿ ನೀಡಿದ್ದ ಬಾಲಕಿ* ಹಿಮ ಕಾಣದಾಗ ಭಾರೀ ನಿರಾಸೆ* ವಿಡಿಯೋದಲ್ಲೂ ಅಸಮಾಧಾನ ವ್ಯಕ್ತಪಡಿಸಿದ ಮುಗ್ಧೆ
ಶ್ರೀನಗರ(ಏ.20): ಈ ಹುಡುಗಿಯ ಮಾತುಗಳು ಇಂಟರ್ನೆಟ್‌ನಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರ ಮನಗೆದ್ದಿದೆ. ಈ ಪುಟ್ಟ ಹುಡುಗಿ ಇಂಗ್ಲಿಷ್ ಮಾತನಾಡುವ ಶೈಲಿಯೂ ನೋಡುಗರಿಗೆ ಬಹಳ ತುಂಬಾ ಮುದ್ದಾಗಿ ಕಾಣಿಸಿದೆ! ವಾಸ್ತವವಾಗಿ, ಈ ಹುಡುಗಿ ಕುಟುಂಬದೊಂದಿಗೆ ಕಾಶ್ಮೀರಕ್ಕೆ ಭೇಟಿ ನೀಡಲು ಬಂದಿದ್ದಳು. ಆಕೆ ಹಿಮವನ್ನು ಮುಟ್ಟಿ ನೋಡಬೇಕೆನ್ನುವ ಮಹದಾಸೆ ಹೊತ್ತು ಬಂದಿದ್ದಳು. ಆದರೆ ಅಲ್ಲ ಆಕೆಗೆ ಹಿಮ ಕಾಣಿಸಿಲ್ಲ!ಹೀಗಿರುವಾಗ, ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಅಧಿಕಾರಿ ಇಮ್ತಿಯಾಜ್ ಹುಸೇನ್ , ಹುಡುಗಿಯ ಮುದ್ದಾದ ವೀಡಿಯೊವನ್ನು ಹಂಚಿಕೊಂಡಿದ್ದು, ಹೇ ಕ್ಯೂಟಿ! ಚಳಿಗಾಲದಲ್ಲಿ ಹಿಂತಿರುಗಿ ಬಾ. ಆಗ ಹಿಮ ಇರುತ್ತದೆ ಎಂಬ ಭರವಸೆ ನಾನು ನಿನಗೆ ನೀಡುತ್ತೇನೆ ಎಂದು ಬರೆದಿದ್ದಾರೆ.
ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಸುದ್ದಿ ಬರೆಯುವವರೆಗೂ ಕ್ಲಿಪ್ 5 ಲಕ್ಷ 39 ಸಾವಿರ ವೀಕ್ಷಣೆ ಮತ್ತು 25 ಸಾವಿರಕ್ಕೂ ಹೆಚ್ಚು ಲೈಕ್‌ಗಳನ್ನು ಪಡೆದುಕೊಂಡಿದೆ. ಅಲ್ಲದೆ, ಸಾರ್ವಜನಿಕರು ಅನುಭವಗಳನ್ನೂ ಹಂಚಿಕೊಳ್ಳುತ್ತಿದ್ದಾರೆ.
ವೈರಲ್ ಕ್ಲಿಪ್‌ನಲ್ಲಿ, ಹುಡುಗಿ ಕಾಶ್ಮೀರದ ಬಯಲು ಪ್ರದೇಶ, ಹಸಿರು ಮತ್ತು ನದಿಯನ್ನು ನೋಡಲು ತುಂಬಾ ಸಂತೋಷವಾಗಿದೆ ಎಂದು ಇಂಗ್ಲಿಷ್‌ನಲ್ಲಿ ಹೇಳಿದ್ದಾಳೆ. ಆದರೆ, ನಾನು ಹಿಮವನ್ನು ಮುಟ್ಟಲು ಬಯಸಿದ್ದೆ, ಅದೇ ಉದ್ದೇಶದಿಂದ ಉತ್ಸಾಹದಿಂದ ಇಲ್ಲಿಗೆ ಬಂದಿದ್ದೆ. ಆದರೆ ಅದು ಆಗಲಿಲ್ಲ ಎಂದು ಹೇಳುವ ಮೂಲಕ ತನ್ನ ನಿರಾಶೆಯನ್ನು ವ್ಯಕ್ತಪಡಿಸಿದ್ದಾಳೆ.
ಇನ್ನು ತನ್ನ ಬಗ್ಗೆ ಹೇಳಿಕೊಂಡಿರುವ ಈ ಬಾಲಕಿ ನನ್ನ ಹೆಸರು ಕೌಶಿಕ. ನಾನು ನಿನ್ನೆ ಇಲ್ಲಿಗೆ ಬಂದಿದ್ದೆ. ನಾನು ಮೊದಲ ಬಾರಿಗೆ ಕಾಶ್ಮೀರಕ್ಕೆ ಬಂದಿದ್ದೇನೆ. ಕಾಶ್ಮೀರವು ಬಹಳ ಸುಂದರವಾದ ಸ್ಥಳವಾಗಿದೆ ಮತ್ತು ಇಲ್ಲಿನ ಭಾಷೆ ಕೂಡ ತುಂಬಾ ಚೆನ್ನಾಗಿದೆ. ನಾನು ಹಿಮವನ್ನು ಮುಟ್ಟಿ ನೋಡಬೇಕೆಂದುಕೊಂಡೆ, ಆದರೆ ಹಿಮ ಕಾಣಲಿಲ್ಲ. ಆದರೆ ನಾನು ನದಿ, ಬೆಟ್ಟ, ಗುಡ್ಡ ಇತ್ಯಾದಿಗಳನ್ನು ನೋಡಿದೆ. ಇದು ತುಂಬಾ ಖುಷಿಯಾಯಿತು ಎಂದಿದ್ದಾರೆ. ಈ ವಿಡಿಯೋಗೆ ಪ್ರಶಂಸೆ ವ್ಯಕ್ತಪಡಿಸಿರುವ ನೆಟ್ಟಿಗರು ಹೆಣ್ಣುಮಗುವಿನ ಆತ್ಮವಿಶ್ವಾಸಕ್ಕೆ ಭೇಷ್ ಎಂದಿದ್ದಾರೆ/.