* 'ಉದ್ಧವ್‌ ಠಾಕ್ರೆ ಕಪಾಳಕ್ಕೆ ಹೊಡೆಯುತ್ತಿದ್ದೆ’ ಎಂದು ಹೇಳಿದ ಕೇಂದ್ರ ಸಚಿವ ನಾರಾಯಣ ರಾಣೆ* ಯೋಗಿಗೆ ಚಪ್ಪಲಿಯಲ್ಲಿ ಹೊಡೀಬೇಕು ಎಂದಿ​ದ್ದ ಠಾಕ್ರೆ ಹಳೇ ವಿಡಿಯೋ ಈಗ ವೈರ​ಲ್‌

ಮುಂಬೈ(ಆ.26): ‘ಉದ್ಧವ್‌ ಠಾಕ್ರೆ ಕಪಾಳಕ್ಕೆ ಹೊಡೆಯುತ್ತಿದ್ದೆ’ ಎಂದು ಹೇಳಿದ ಕೇಂದ್ರ ಸಚಿವ ನಾರಾಯಣ ರಾಣೆ ಬಂಧನದ ಬೆನ್ನಲ್ಲೇ, ಉತ್ತರ ಪ್ರದೇ​ಶದ ಮುಖ್ಯ​ಮಂತ್ರಿ ಯೋಗಿ ಆದಿತ್ಯನಾಥ್‌ಗೆ ಚಪ್ಪಲಿಯಲ್ಲಿ ಹೊಡೆಯಬೇಕು ಎಂದು ಉದ್ಧವ್‌ ಠಾಕ್ರೆ ಹೇಳಿ​ದ್ದ ಹಳೇ ವಿಡಿಯೋ ವೈರಲ್‌ ಆಗಿದೆ.

2018ರಲ್ಲಿ ಯೋಗಿ ಮಹಾರಾಷ್ಟ್ರಕ್ಕೆ ಬಂದಿದ್ದಾಗ ಚಪ್ಪಲಿ ಹಾಕಿಕೊಂಡೇ ಶಿವಾಜಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದ್ದರು. ಆ ಸಮಯದಲ್ಲಿ ಶಿವಸೇನೆ ಮುಖ್ಯಸ್ಥ ಉದ್ಧವ್‌ ಠಾಕ್ರೆ, ‘ಶಿವಾಜಿ ಮಹಾರಾಜರಿಗೆ ಯೋಗಿ ಅವಮಾನ ಮಾಡಿದ್ದಾರೆ ಅವರಿಗೆ ಅದೇ ಚಪ್ಪಲಿಯಲ್ಲಿ ಹೊಡೆಯಬೇಕು’ ಎಂದು ಹೇಳಿದ್ದರು. ರಾಣೆ ಬಂಧನದ ನಂತರ ಈ ಹಳೇ ವಿಡಿಯೋ ವೈರಲ್‌ ಆಗಿದೆ.

Scroll to load tweet…

ಉದ್ಧವ್‌ ಠಾಕ್ರೆ ಕಪಾಳಕ್ಕೆ ಹೊಡೆಯುವುದಾಗಿ ಹೇಳಿದ್ದಕ್ಕೆ ರಾಣೆಯನ್ನು ಮಹಾರಾಷ್ಟ್ರ ಪೊಲೀಸರು ಬಂಧಿಸಿದ್ದರು. ಬಂಧನದ 7 ಗಂಟೆಗಳ ನಂತರ ಅವರಿಗೆ ಜಾಮೀನು ದೊರಕಿ​ತ್ತು.