ನವದೆಹಲಿ(ಸೆ.11) ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ಮುಂದುವರರಿಸಿದ್ದಾರೆ. ನಿರ್ಮಲಾ ಸೀತಾರಾಮ್ ಅವರ ದೈವಿಚ್ಛೆ ಹೇಳಿಕೆಯನ್ನೇ ಇಟ್ಟುಕೊಂಡು ವ್ಯಂಗ್ಯವಾಡಿದ್ದಾರೆ.

ಚೀನಾ ಅತಿಕ್ರಮಣ ಮಾಡಿರುವ  ನಮ್ಮ ಭೂಮಿ  ಹಿಂದಕ್ಕೆ ಪಡೆಯಲು ಯಾವುದೇ ಯೋಜನೆ ರೂಪಿಸುತ್ತಿದ್ದೀರಾ ಅಥವಾ ಅದನ್ನೂ 'ದೇವರ ಆಟ' ಎಂದು  ಸುಮ್ಮನೆ ಇರುತ್ತೀರಾ? ಎಂದು  ವ್ಯಂಗ್ಯಭರಿತ ಚಾಟಿ ಬೀಸಿದ್ದಾರೆ.

ಮೋದಿ ನಿರ್ಮಿತ ಆರು ವಿಪತ್ತುಗಳ ಪಟ್ಟಿ ಕೊಟ್ಟ ರಾಹುಲ್

ಟ್ವೀಟ್ ನಲ್ಲಿ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಗಾಂಧಿ, ಚೀನಾ ಆಕ್ರಮಿಸಿಕೊಂಡಿರುವ ಭೂಮಿ ಹಿಂದಕ್ಕೆ ಪಡೆಯಲು ಸರ್ಕಾರ ಯಾವ ತಯಾರಿ ಮಾಡಿಕೊಂಡಿದೆ ಎಂದು ಪ್ರಶ್ನಿಸಿದ್ದಾರೆ.

ಲಡಾಕ್, ಪ್ಯಾಂಗೊಂಗ್  ಬಳಿ ಚೀನಾ ಒಂದೆಲ್ಲ ಒಂದು ರೀತಿಯ ಉಪಟಳ ನೀಡಿಕೊಂಡೆ ಬರುತ್ತಿದೆ. ಕೇಂದ್ರ  ರಕ್ಷಣಾ ಇಲಾಖೆ ನಾವು ಯಾವುದಕ್ಕೂ ಬಗ್ಗುವುದಿಲ್ಲ ಎಂದು ಹೇಳಿದ್ದು ಒಂದು ಸುತ್ತಿನ ಸಭೆಯನ್ನು ನಡೆಸಿದೆ.

ಕೇಂದ್ರ ವಿದೇಶಾಂಗ ಸಚಿವ ಜೈಶಂಕರ್ ಚೀನಾದ ವಿದೇಶಾಂಗ ಸಚಿವ ವಾಂಗ್ ಯೀ ಅವರನ್ನು ಶಾಂಘೈ ಶೃಂಗಸಭೆಯಲ್ಲಿ ಭೇಟಿ ಮಾಡಿದ ನಂತರ ರಾಹುಲ್ ಟ್ವೀಟ್ ಸಮರ ಸಾರಿದ್ದಾರೆ. ಜಿಎಸ್‌ಟಿ ಮತ್ತು ಅರ್ಥವ್ಯವಸ್ಥೆ ನಿರ್ವಹಣೆಯಲ್ಲಿ ಮಾಡಿಕೊಂಡ ಎಡವಟ್ಟುಗಳು ಇಂದು ಪರಿಣಾಮ ತೋರಿಸುತ್ತಿದೆ. ಕೇಂದ್ರ ಸರ್ಕಾರ ಎಲ್ಲವನ್ನೂ ಕೊರೋನಾ ಮೇಲೆ ಹಾಕುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

"