ಐದು ವರ್ಷದೊಳಗಿನ ಮಕ್ಕಳಿಗೆ ನೀಲಿ ಆಧಾರ್ ಕಾರ್ಡ್ (ಬಾಲ್ ಆಧಾರ್) ಲಭ್ಯ. ಬಯೋಮೆಟ್ರಿಕ್ ಅಗತ್ಯವಿಲ್ಲ, ಪೋಷಕರ ಆಧಾರ್ ಮತ್ತು ಮಗುವಿನ ಫೋಟೋ ಸಾಕು. ಆನ್‌ಲೈನ್/ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಐದು ವರ್ಷದ ನಂತರ ಬಯೋಮೆಟ್ರಿಕ್‌ನೊಂದಿಗೆ ನವೀಕರಿಸಬೇಕು. ಮತ್ತೆ 15ನೇ ವಯಸ್ಸಿನಲ್ಲಿ ನವೀಕರಣ ಅಗತ್ಯ.

 ಇದೀಗ ಸಾಮಾನ್ಯವಾಗಿ ಎಲ್ಲರ ಭಾರತೀಯರ ಬಳಿಯೂ ಆಧಾರ್​ ಕಾರ್ಡ್​ ಇದ್ದೇ ಇದೆ. ಆಧಾರ್​ ಕಾರ್ಡ್​ ಇಲ್ಲದಿದ್ದರೆ ಹಲವಾರು ಸೌಲಭ್ಯಗಳು ಸಿಗದೇ ಇರುವ ಹಿನ್ನೆಲೆಯಲ್ಲಿ ಇದನ್ನು ಮಾಡಿಸಿಕೊಳ್ಳುವುದು ಅನಿವಾರ್ಯವಾಗಿದೆ. 12 ಅಂಕೆಗಳ ವಿಶಿಷ್ಟ ಗುರುತಿನ ಚೀಟಿಯಾಗಿರುವ ಆಧಾರ್​ ಕಾರ್ಡ್​ ಇದ್ದರೆ ಈಗ ಹಲವಾರು ಕೆಲಸಗಳು ಸುಲಭ ಜೊತೆಗೆ ಸರ್ಕಾರಿ ಸೌಲಭ್ಯಗಳಿಗೆ ಇವು ಕಡ್ಡಾಯವಾಗಿ ಬೇಕು ಎನ್ನುವುದು ಎಲ್ಲರಿಗೂ ತಿಳಿದದ್ದೇ. ಆದರೆ ನಿಮಗೆ ನೀಲಿ ಆಧಾರ್​ ಕಾರ್ಡ್​ ಬಗ್ಗೆ ತಿಳಿದಿದ್ಯಾ? ಏನಿದು ನೀಲಿ ಆಧಾರ್​ ಕಾರ್ಡ್​ (Blue Adhar Card)? ಏನಿದರ ಪ್ರಯೋಜನ? ಯಾರು ಮಾಡಿಸಬೇಕು? ಹೇಗೆ ಮಾಡಿಸುವುದು, ಆನ್​ಲೈನ್​ನಲ್ಲಿ ಸಲ್ಲಿಕೆ ಹೇಗೆ ಇತ್ಯಾದಿಗಳ ವಿವರಗಳನ್ನು ಇಲ್ಲಿ ನೀಡಲಾಗಿದೆ.

ಅಂದಹಾಗೆ, ನೀಲಿ ಆಧಾರ್​ ಕಾರ್ಡ್​ ಹೊಸತೇನಲ್ಲ. ಇದು ಬಂದು ಹಲವು ವರ್ಷಗಳೇ ಆಗಿವೆ. ಈ ಆಧಾರ್​ ಕಾರ್ಡ್​ ಮಾಡಿಸುವುದು ಐದು ವರ್ಷದ ಒಳಗಿನ ಮಕ್ಕಳಿಗೆ. ಇದು ನಿರ್ದಿಷ್ಟವಾಗಿ 5 ವರ್ಷದೊಳಗಿನ ಮಕ್ಕಳಿಗಾಗಿ ವಿನ್ಯಾಸಗೊಳಿಸಲಾಗಿದೆ. ಸಾಮಾನ್ಯ ಆಧಾರ್​ ಕಾರ್ಡ್​ ಕೂಡ ಮಕ್ಕಳಿಗಾಗಿ ಮಾಡಿಸಬಹುದು. ಆದರೆ ನೀಲಿ ಆಧಾರ್​ ಕಾರ್ಡ್​ನ ವಿಶೇಷತೆ ಎದರೆ, 5 ವರ್ಷದೊಳಗಿನ ಮಕ್ಕಳು ಬಯೋಮೆಟ್ರಿಕ್ ಡೇಟಾವನ್ನು ಒದಗಿಸುವ ಅಗತ್ಯವಿಲ್ಲ. ಬದಲಾಗಿ, ಅವರ ವಿಶಿಷ್ಟ ಗುರುತನ್ನು ಜನಸಂಖ್ಯಾ ಡೇಟಾ ಮತ್ತು ಅವರ ಪೋಷಕರ UID ಗೆ ಸಂಪರ್ಕಿಸಲಾದ ಮುಖದ ಚಿತ್ರವನ್ನು ಬಳಸಿಕೊಂಡು ಪ್ರಕ್ರಿಯೆಗೊಳಿಸಲಾಗುತ್ತದೆ. ಸರ್ಕಾರದ ವಿವಿಧ ಕಾರ್ಯಕ್ರಮಗಳಲ್ಲಿ ಚಿಕ್ಕ ಮಕ್ಕಳನ್ನು ಸೇರಿಸುವುದನ್ನು ಸರಳಗೊಳಿಸುವಲ್ಲಿ ನೀಲಿ ಆಧಾರ್ ಕಾರ್ಡ್ ಮಹತ್ವವನ್ನು ಹೊಂದಿದೆ.

ಗೃಹ, ವಾಹನ ಸಾಲ ಬಯಸಿದವರಿಗೆ ಬಂಪರ್​: FD ಇಡುವವರಿಗೆ ಬ್ಯಾಡ್​ ನ್ಯೂಸ್​: ಇಲ್ಲಿದೆ ಡಿಟೇಲ್ಸ್​...

ಇದನ್ನು ಬಾಲ್​ ಆಧಾರ್​ (Bal Adhar) ಎಂದೂ ಕರೆಯಲಾಗುತ್ತದೆ. ಆನ್​ಲೈನ್​ನಲ್ಲಿಯೂ ನೀವು ಅರ್ಜಿ ಸಲ್ಲಿಸಬಹುದಾಗಿದೆ. ಅದರ ಸ್ಟೆಪ್​ ಬೈ ಸ್ಟೆಪ್​ ಮಾಹಿತಿ ಇಲ್ಲಿ ನೀಡಲಾಗಿದೆ. ಇದರಿಂದ ನೀವು ಆಧಾರ್​ ಕೇಂದ್ರಗಳಿಗೆ ಹೋಗಿ ಕ್ಯೂ ನಿಂತು ಅರ್ಜಿ ಸಲ್ಲಿಸುವುದು ಬೇಕಿರುವುದಿಲ್ಲ. ಒಮ್ಮೆಗೆ ಅರ್ಜಿ ಪ್ರಕ್ರಿಯೆ ಮುಂದುವರಿದ ಬಳಿಕ ನೀವು ಯುಐಡಿಎಐ ಅಧಿಕೃತ ವೆಬ್ ಸೈಟ್ ನಿಂದ ನಿಮ್ಮ ಮಗುವಿನ ಆಧಾರ್ ಕಾರ್ಡ್ ಡಿಜಿಟಲ್ ಪ್ರತಿಯನ್ನು ಡೌನ್ ಲೋಡ್ ಮಾಡಬಹುದು. 
- ಕೇಂದ್ರ ಸರ್ಕಾರದ ಅಧಿಕೃತ ವೆಬ್‌ಸೈಟ್‌ಗೆ ಹೋಗಿ- ಇಲ್ಲಿ ಕ್ಲಿಕ್​ ಮಾಡಿ https:// uidai.gov.in
- ಪುಟ ತೆರೆದುಕೊಂಡ ತಕ್ಷಣ ದಾಖಲಾತಿ ನಮೂನೆಯಲ್ಲಿ ವಿವರಗಳನ್ನು ಭರ್ತಿ ಮಾಡಿ.
- ನೋಂದಣಿಗಾಗಿ ಅಪಾಯಿಂಟ್‌ಮೆಂಟ್ ಆಯ್ಕೆಯನ್ನು ಆಯ್ಕೆ ಮಾಡಿ.
- ಹತ್ತಿರದ ದಾಖಲಾತಿ ಕೇಂದ್ರವನ್ನು ಹುಡುಕಿ ಮತ್ತು ಅಲ್ಲಿ ಅಪಾಯಿಂಟ್‌ಮೆಂಟ್ ಮಾಡಿ.
- ನಿಮ್ಮ (ಪೋಷಕರ) ಆಧಾರ್, ಮಗುವಿನ ಜನನ ಪ್ರಮಾಣಪತ್ರ, ಉಲ್ಲೇಖ ಸಂಖ್ಯೆ ಇತ್ಯಾದಿಗಳನ್ನು ಆಧಾರ್ ಕೇಂದ್ರಕ್ಕೆ ತನ್ನಿ.
- ಎಲ್ಲಾ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ನಂತರ, ಅಪ್‌ಡೇಟ್‌ ಟ್ರ್ಯಾಕ್ ಮಾಡಲು ಸ್ವೀಕೃತಿ ಸಂಖ್ಯೆಯನ್ನು ಪಡೆಯಿರಿ.


ಐದು ವರ್ಷದ ಬಳಿಕ ಏನಾಗುತ್ತದೆ? 
ಮಗುವಿಗೆ ಐದು ವರ್ಷ ಭರ್ತಿಯಾದ ಬಳಿಕ ಈ ಬಾಲ್​ ಅಥವಾ ನೀಲಿ ಆಧಾರ್ ಕಾರ್ಡ್ ಅಮಾನ್ಯವಾಗುತ್ತದೆ. ಆಗ ನೀವು ಅದನ್ನು ಅಪ್​ಡೇಟ್​ ಮಾಡಬೇಕಾಗುತ್ತದೆ. ಆಗ ಮಗುವಿನ ಬಯೋಮೆಟ್ರಿಕ್ಸ್ ತೆಗೆದುಕೊಳ್ಳಲಾಗುತ್ತದೆ. ಹೀಗಾಗಿ ಐದು ವರ್ಷದ ನಂತರ ಆಧಾರ್ ನವೀಕರಿಸಬೇಕಾಗುತ್ತದೆ. ಆಗ ಮಕ್ಕಳ ಹೆಬ್ಬೆಟ್ಟಿನ ಗುರುತು ಹಾಗೂ ಕಣ್ಣಿನ ರೆಪ್ಪೆ ಗುರುತನ್ನು ಪಡೆಯಲಾಗುತ್ತದೆ. ಆಗ ಸಮೀಪದ ಆಧಾರ್​ ಕೇಂದ್ರಕ್ಕೆ ಹೋಗಬಹುದು, ಇಲ್ಲವೇ ಅದನ್ನೂ ಆನ್​ಲೈನ್​ನಲ್ಲಿ ಮಾಡಿಸಿಕೊಳ್ಳಬಹುದು. ಸಾಮಾನ್ಯವಾಗಿ ಮಕ್ಕಳಿಗೆ 15 ವರ್ಷವಾಗ್ತಿದ್ದಂತೆ ಮತ್ತೆ ಆಧಾರ್ ಅಪ್​ಡೇಟ್​ಗೂ ಹೇಳಲಾಗುತ್ತದೆ. 

ಬಾಡಿಗೆದಾರರಿಗೆ ಆದಾಯತೆರಿಗೆ ಇಲಾಖೆ ಶಾಕ್​: ದಂಡ-ಶಿಕ್ಷೆ ಆಗ್ಬಾರ್ದು ಎಂದ್ರೆ ಕೂಡಲೇ ಈ ರೀತಿ ಮಾಡಿ...