ಡಿ.31ರ ರಾತ್ರಿ ಹೆಚ್ಚು ಆರ್ಡರ್ ಮಾಡಿದ್ದು ಊಟ, ತಿಂಡಿಯಲ್ಲ! ಈ ವಸ್ತು

ಭಾರತೀಯರು ಹಬ್ಬವಿರಲಿ, ವರ್ಷಾಂತ್ಯವಿರಲಿ ಅದನ್ನು ಅದ್ಧೂರಿಯಾಗಿ ಆಚರಿಸುತ್ತಾರೆ. ಸಂಭ್ರಮಾಚರಣೆ ಲಕ್ಷಾಂತರ ರೂಪಾಯಿ ಖರ್ಚು ಮಾಡುವವರ ಸಂಖ್ಯೆ ಸಾಕಷ್ಟಿದೆ. ಈ ಬಾರಿ ಯಾವೆಲ್ಲ ವಸ್ತುವಿಗೆ ಆನ್ಲೈನ್ ನಲ್ಲಿ ಬೇಡಿಕೆ ಇತ್ತು ಎಂಬ ವಿವರ ಇಲ್ಲಿದೆ. 
 

What Indians ordered most for new year roo

ಇಡೀ ವಿಶ್ವ (world)ವೇ 2025ನ್ನು ಅದ್ಧೂರಿಯಾಗಿ ಸ್ವಾಗತಿಸಿದೆ. ಡಿಸೆಂಬರ್ 31, 2024ರ ಮಧ್ಯರಾತ್ರಿ (midnight)ಯಲ್ಲಿ ಪಾರ್ಟಿಗಳು ಜೋರಾಗಿದ್ವು. ಭಾರತೀಯರು ಮನೆ ಇರಲಿ, ಹೊಟೇಲ್ ಇರಲಿ ಪಾರ್ಟಿ ಮಾಡೋದ್ರಲ್ಲಿ ಮುಂದಿದ್ದಾರೆ. ಇದಕ್ಕೆ ನಿನ್ನೆ ನಡೆದ ನ್ಯೂ ಇಯರ್ ಪಾರ್ಟಿ, ಆರ್ಡರ್ ಮಾಡಿದ ಆಹಾರವೇ ಸಾಕ್ಷ್ಯವಾಗಿದೆ. ಆನ್ಲೈನ್ ವೆಬ್ಸೈಟ್ ಗಳ ಮೂಲಕ ಜನರು ಸಿಕ್ಕಾಪಟ್ಟೆ ಆರ್ಡರ್ ಮಾಡಿ, ನ್ಯೂ ಇಯರ್ ಎಂಜಾಯ್ ಮಾಡಿದ್ದಾರೆ. ಹೊಸ ವರ್ಷದ ಪಾರ್ಟಿಯಲ್ಲಿ ಭಾರತೀಯರ ಶೈಲಿಯನ್ನು ತಿಳಿಯಲು, ಬ್ಲಿಂಕಿಟ್ (Blinkit) ಮತ್ತು ಸ್ವಿಗ್ಗಿ ಇನ್ಸ್ಟಾಮಾರ್ಟ್ (Swiggy Instamart) ನಂತಹ ವೇದಿಕೆಗಳು ಆಸಕ್ತಿದಾಯಕ ಡೇಟಾವನ್ನು ಹಂಚಿಕೊಂಡಿವೆ. ವರ್ಷದ ಕೊನೆ ದಿನ ರಾತ್ರಿ, ಪಾರ್ಟಿ ಮೂಡ್ ನಲ್ಲಿದ್ದ ಜನರು ಏನೆಲ್ಲ ಆಹಾರ ಆರ್ಡರ್ ಮಾಡಿದ್ದಾರೆ ಎಂಬುದನ್ನು ಈ ಎರಡು ಫ್ಲಾಟ್ಫಾರ್ಮ್ ಹಂಚಿಕೊಂಡಿದೆ.

ಆಹಾರ, ತಂಪು ಪಾನೀಯ ಮತ್ತು ಪಾರ್ಟಿಗೆ ಅಗತ್ಯವಿರುವ ವಸ್ತುಗಳಿಗೆ ಬೇಡಿಕೆ ದಾಖಲೆ ಮುರಿದಿದೆ. ಬ್ಲಿಂಕಿಟ್ ಮತ್ತು ಸ್ವಿಗ್ಗಿ ಇನ್‌ಸ್ಟಾಮಾರ್ಟ್‌ನಂತಹ ಪ್ಲಾಟ್‌ಫಾರ್ಮ್‌ಗಳಲ್ಲಿ ಆಲೂ ಭುಜಿಯಾದಿಂದ ಐಸ್‌ಕ್ರೀಂವರೆಗೆ ಎಲ್ಲ ವಸ್ತುಗಳಿಗೆ ಬೇಡಿಕೆ ಹೆಚ್ಚಾಗಿತ್ತು. ಬ್ಲಿಂಕಿಟ್ ಸಿಇಒ ಅಲ್ಬಿಂದರ್ ದಿಂಡ್ಸಾ ಸೋಶಿಯಲ್ ಮೀಡಿಯಾ  ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ ಪೋಸ್ಟ್ ಅನ್ನು ಹಂಚಿಕೊಳ್ಳುವ ಮೂಲಕ ಏನೆಲ್ಲ ವಸ್ತುಗಳ ಆರ್ಡರ್ ಬಂದಿತ್ತು ಎಂಬ ಮಾಹಿತಿ ನೀಡಿದ್ದಾರೆ. ಅಲ್ಬಿಂದರ್ ದಿಂಡಾ, ಬರೀ ರಾತ್ರಿ 8 ಗಂಟೆಯವರೆಗೆ ಎಷ್ಟು ಆರ್ಡರ್ ಬಂದಿದೆ ಎಂಬ ಮಾಹಿತಿಯನ್ನು ಮಾತ್ರ ನೀಡಿದ್ದಾರೆ. ಅವರು ನೀಡಿದ ಆರ್ಡರ್ ಪಟ್ಟಿ ತಲೆತಿರುಗುವಂತಿದೆ. 

ವರ್ಷಾಂತ್ಯದ ಸಂದರ್ಭದಲ್ಲಿ ಆಲೂ ಭುಜಿಯಾಗೆ ಅತೀ ಹೆಚ್ಚು ಬೇಡಿಕೆ ಇರೋದನ್ನು ನಾವು ಕಾಣ್ಬಹುದು. ರಾತ್ರಿ 8 ಗಂಟೆಯೊಳಗೆ ಬ್ಲಿಂಕಿಟ್ ನಲ್ಲಿ 2.3 ಲಕ್ಷ ಆಲೂ ಭುಜಿಯಾ ಪ್ಯಾಕೆಟ್ ಆರ್ಡರ್ ಬಂದಿದೆ. 45 ಸಾವಿರಕ್ಕಿಂತ ಹೆಚ್ಚು ಟಾನಿಕ್ ವಾಟರ್, 6,834 ಐಸ್ ಕ್ಯೂಬ್, 1003 ಲಿಪ್ಸ್ಟಿಕ್ ಹಾಗೂ 762 ಲೈಟರ್ ಆರ್ಡರ್ ಬ್ಲಿಂಕಿಟ್ ಗೆ ಬಂದಿದೆ ಎಂದು ಸಿಇಒ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.

ಇನ್ನು ಸ್ವಿಗ್ಗಿ ಇನ್ಸ್ಟಾ ಮಾರ್ಟ್ ನಲ್ಲಿ ರಾತ್ರಿ 7.30ರ ಸುಮಾರಿಗೆ 853 ಚಿಪ್ಸ್ ಪ್ಯಾಕೆಟ್ ಖರ್ಚಾಗಿದೆ. ಸ್ವಿಗ್ಗಿ ಇನ್ಸ್ಟಾಮಾರ್ಟ್ ನಲ್ಲಿ ಮಾರಾಟವಾದ ಟಾಪ್ 5 ವಸ್ತುಗಳಲ್ಲಿ ಹಾಲು, ಚಾಕೋಲೇಟ್, ದ್ರಾಕ್ಷಿ ಚೀಸ್ ಮತ್ತು ಚಿಪ್ಸ್ ಸೇರಿದೆ. ಸ್ವಿಗ್ಗಿ ಇನ್‌ಸ್ಟಾಮಾರ್ಟ್‌ನ ಸಹ ಸಂಸ್ಥಾಪಕ ಫಣಿ ಕಿಶನ್ ಕೂಡ ಈ ಕುರಿತು ಪೋಸ್ಟ್ ಮಾಡಿದ್ದಾರೆ. ಸಂಜೆ 7.41ಕ್ಕೆ ಪ್ರತಿ ನಿಮಿಷಕ್ಕೆ 119 ಕೆಜಿ ಐಸ್ ವಿತರಿಸಲಾಗುತ್ತಿದೆ ಎಂದು ಅವರು ಎಕ್ಸ್ ಖಾತೆಯಲ್ಲಿ ಬರೆದಿದ್ದಾರೆ. 

ಬಿಗ್ ಬಾಸ್ಕೆಟ್ ಕೂಡ ಈ ಬಗ್ಗೆ ಮಾಹಿತಿ ಹಂಚಿಕೊಂಡಿದೆ. ಬಿಗ್ ಬಾಸ್ಕೆಟ್ ನಲ್ಲಿ ಐಸ್ ಆರ್ಡರ್‌ಗಳಲ್ಲಿ ಶೇಕಡಾ 1290ರಷ್ಟು ಹೆಚ್ಚಳ ಕಂಡುಬಂದಿದೆ. ಪಾರ್ಟಿಗೆ ಸಂಬಂಧಿಸಿದ ವಸ್ತು ಹಾಗೂ ಆಲ್ಕೋಹಾಲ್ ರಹಿತ ಪಾನೀಯಗಳ ಮಾರಾಟದಲ್ಲಿ ಶೇಕಡಾ 552ರಷ್ಟು ಏರಿಕೆ ಕಂಡು ಬಂದಿರುವ ವರದಿಯಾಗಿದೆ. 

ಸ್ವಿಗ್ಗಿ ಇನ್ಸ್ಟಾಮಾರ್ಟ್ ನಲ್ಲಿ ಡಿಸೆಂಬರ್ 31ರ ಮಧ್ಯಾಹ್ನದ ವೇಳೆಗೆ 4,779 ಕಾಂಡೋಮ್ ಮಾರಾಟವಾಗಿದೆ. ಬ್ಲಿಂಕಿಟ್ ನಲ್ಲಿ ರಾತ್ರಿಯಾಗ್ತಿದ್ದಂತೆ 1.2 ಲಕ್ಷ ಕಾಂಡೋಮ್ ಮಾರಾಟವಾಗಿದೆ. ಅದ್ರಲ್ಲಿ ಚಾಕೋಲೇಟ್ ಪ್ಲೇವರ್ ಹೆಚ್ಚು ಮಾರಾಟವಾಗಿದೆ. ಸ್ಟ್ರಾಬೆರಿ ಮತ್ತು ಬಬಲ್ಗಮ್ ಎರಡು ಮತ್ತು ಮೂರನೇ ಸ್ಥಾನದಲ್ಲಿದೆ. ಸ್ವಿಗ್ಗಿ ಇನ್ಸ್ಟಾಮಾರ್ಟ್ ನಲ್ಲಿ ವ್ಯಕ್ತಿಯೊಬ್ಬ ಕಣ್ಣಿಗೆ ಕಟ್ಟುವ ಕಪ್ಪು ಪಟ್ಟಿ ಮತ್ತು ಕೈಕೋಳವನ್ನು ಆರ್ಡರ್ ಮಾಡಿದ್ದ. ಅಷ್ಟೇ ಅಲ್ಲ ಪುರುಷರ ಒಳ ಉಡುಪಿಗೆ ಬೇಡಿಕೆ ಹೆಚ್ಚಿತ್ತು ಎಂದು ಬ್ಲಿಂಕಿಟ್ ಹೇಳಿದೆ. 

Latest Videos
Follow Us:
Download App:
  • android
  • ios