ಪೋಕ್ಸೋ ಕಾಯ್ದೆಗೂ, ದೇಶದಲ್ಲಿ ಸದ್ದು ಮಾಡುತ್ತಿರುವ ಅತ್ಯಾಚಾರ ವಿರೋಧಿ ಕಾನೂನಿಗಿರುವ ವ್ಯತ್ಯಾಸಗಳೇನು?
ಪಶ್ಚಿಮ ಬಂಗಾಳ ಸರ್ಕಾರವು ಹೊಸ ಅತ್ಯಾಚಾರ ವಿರೋಧಿ ಮಸೂದೆಯನ್ನು ಅಂಗೀಕರಿಸಿದ್ದು, ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆಯನ್ನು ನೀಡುವ ಗುರಿ ಹೊಂದಿದೆ. ಈ ಕಾಯ್ದೆ ಪೋಕ್ಸೊ ಕಾಯ್ದೆಗಿಂತ ಹೇಗೆ ಬಿನ್ನವಾಗಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ..
ಪಶ್ಚಿಮ ಬಂಗಾಳದಲ್ಲಿ ವೈದ್ಯೆಯ ಮೇಲೆ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಂತರ ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆಯನ್ನು ನೀಡುವ ಉದ್ದೇಶದಿಂದ ಸರ್ಕಾರದಿಂದ ಹೊಸ ಅತ್ಯಾಚಾರ ವಿರೋಧಿ ಮಸೂದೆಯನ್ನು ಅಂಗೀಕರಿಸಿದೆ. ಈ ಕಾನೂನು ಈಗಾಗಲೇ ಅಸ್ತಿತ್ವದಲ್ಲಿರುವ ಪೋಕ್ಸೊ ಕಾಯ್ದೆಗಿಂತ ಹೇಗೆ ಭಿನ್ನವಾಗಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ..
ಕೋಲ್ಕತ್ತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜಿನ ವೈದ್ಯೆಯ ಮೇಲೆ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಂತರ ಮಮತಾ ಸರ್ಕಾರ ರಾಷ್ಟ್ರಮಟ್ಟದಲ್ಲಿ ಟೀಕೆಗೆ ಗುರಿಯಾಗಿದೆ. ವೈದ್ಯರು ಮುಖ್ಯಮಂತ್ರಿಗಳ ರಾಜೀನಾಮೆಗೆ ಆಗ್ರಹಿಸುತ್ತಿದ್ದಾರೆ. ಮಮತಾ ಬ್ಯಾನರ್ಜಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರ ಇಂದು ವಿಧಾನಸಭೆಯಲ್ಲಿ ಅತ್ಯಾಚಾರ ವಿರೋಧಿ ಮಸೂದೆಯನ್ನು ಸರ್ವಾನುಮತದಿಂದ ಅಂಗೀಕರಿಸಿದೆ. ಈ ಕಾನೂನು ಜಾರಿಗೆ ಬಂದ ನಂತರ ರಾಜ್ಯದಲ್ಲಿ ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ಅಥವಾ ಸಂತ್ರಸ್ತರು ಸಾವನ್ನಪ್ಪಿದರೆ ಮರಣದಂಡನೆ ವಿಧಿಸಬಹುದು. ಅತ್ಯಾಚಾರ ವಿರೋಧಿ ಕಾನೂನಿಗೂ ಮುನ್ನವೇ ಪೋಕ್ಸೊ ಕಾಯ್ದೆ ಈಗಾಗಲೇ ದೇಶದಲ್ಲಿ ಜಾರಿಯಲ್ಲಿದೆ. ಹಾಗಾದರೆ, ಅತ್ಯಾಚಾರ ವಿರೋಧಿ ಕಾನೂನು ಮತ್ತು ಪೋಕ್ಸೊ ಕಾಯ್ದೆ ನಡುವಿನ ವ್ಯತ್ಯಾಸವೇನು? ಇಲ್ಲಿದೆ ಮಾಹಿತಿ..
ದಕ್ಷಿಣ ಅಮೇರಿಕಾ ನಿಜಕ್ಕೂ ಪಾತಾಳ ಲೋಕನಾ? ಸಾಕ್ಷ್ಯ ಸಮೇತ ಬಹಿರಂಗ.!
ಪೋಕ್ಸೊ ಕಾಯ್ದೆ ಎಂದರೇನು?
ಪೋಕ್ಸೊ ಕಾಯ್ದೆಯು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳಿಗೆ ಅನ್ವಯಿಸುತ್ತದೆ. ಇದು ಮುಖ್ಯವಾಗಿ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (POCSO) ಮಾಡುವ ಕಾಯ್ದೆಯಾಗಿದೆ. ಈ ಕಾನೂನು 2012ರಲ್ಲಿ ಜಾರಿಗೆ ಬಂದಿತು. ಈ ಕಾನೂನನ್ನು ಜಾರಿಗೆ ತಂದಿದ್ದರ ಹಿಂದಿನ ಉದ್ದೇಶವೇನೆಂದರೆ, ಅಪ್ರಾಪ್ತ ವಯಸ್ಸಿನ ಬಾಲಕಿಯರಿಗೆ ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ರಕ್ಷಣೆ ನೀಡುವುದು.
ಮಮತಾ ಸರ್ಕಾರದ ಅತ್ಯಾಚಾರ ವಿರೋಧಿ ಮಸೂದೆ ಎಂದರೇನು?
ಮಮತಾ ಸರ್ಕಾರ ಅಂಗೀಕರಿಸಿರುವ ಅತ್ಯಾಚಾರ ವಿರೋಧಿ ಮಸೂದೆಯಲ್ಲಿ ಜೀವಾವಧಿ ಶಿಕ್ಷೆಯೊಂದಿಗೆ ಗಲ್ಲು ಶಿಕ್ಷೆ ವಿಧಿಸುವ ನಿಬಂಧನೆಯಿದೆ. ಈ ಕಾನೂನಿನಡಿಯಲ್ಲಿ ಅಪರಾಧಿಗಳಿಗೆ 10 ದಿನಗಳಲ್ಲಿ ಗಲ್ಲು ಶಿಕ್ಷೆ ವಿಧಿಸುವ ಕಠಿಣ ನಿಯಮವನ್ನು ರೂಪಿಸಲಾಗಿದೆ.
ರೇಪ್ ಕೇಸ್‌ಗಳ ತನಿಖೆಗೆ ಲೇಡಿಸ್ ಟೀಂ ಬೇಕು: ನಟಿ ಮಾಳವಿಕಾ ಅವಿನಾಶ್
ಪೋಕ್ಸೊ ಕಾಯ್ದೆಯ ಶಿಕ್ಷೆಯ ಅಂಶಗಳು
ಪೋಕ್ಸೊ ಕಾಯ್ದೆ ಹುಡುಗ ಮತ್ತು ಹುಡುಗಿ ಇಬ್ಬರಿಗೂ ಅನ್ವಯಿಸುತ್ತದೆ.
ಪೋಕ್ಸೊ ಕಾಯ್ದೆಯನ್ನು ಮುಖ್ಯವಾಗಿ ಅಪ್ರಾಪ್ತರ ರಕ್ಷಣೆ ಮತ್ತು ನ್ಯಾಯ ಒದಗಿಸಲು ರೂಪಿಸಲಾಗಿದೆ.
ಪೋಕ್ಸೊ ಕಾಯ್ದೆಯಲ್ಲಿ ಯಾವುದೇ ಹುಡುಗಿಯನ್ನು ಅಶ್ಲೀಲತೆಗೆ ಸಿಲುಕಿಸಿದರೆ 5 ವರ್ಷ ಜೈಲು ಶಿಕ್ಷೆ ಮತ್ತು ಮತ್ತೆ ಅಂತಹ ಪ್ರಕರಣದಲ್ಲಿ ಸಿಕ್ಕಿಬಿದ್ದರೆ 7 ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತದೆ.
ಪೋಕ್ಸೊ ಕಾಯ್ದೆಯಲ್ಲಿ ಬಾಲಕಿಯರ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ 20 ವರ್ಷ ಜೈಲು ಶಿಕ್ಷೆ ಅಥವಾ ಜೀವಾವಧಿ ಶಿಕ್ಷೆ ವಿಧಿಸಲಾಗುತ್ತದೆ.
ಪೋಕ್ಸೊ ಕಾಯ್ದೆಯಲ್ಲಿ ಸುಳ್ಳು ದೂರು ನೀಡಿದರೆ 6 ತಿಂಗಳು ಜೈಲು ಶಿಕ್ಷೆ ಮತ್ತು ದಂಡ ವಿಧಿಸಲಾಗುತ್ತದೆ.
ಅತ್ಯಾಚಾರ ವಿರೋಧಿ ಕಾನೂನಿನ ಶಿಕ್ಷೆಯ ಅಂಶಗಳು:
- ಅತ್ಯಾಚಾರ ವಿರೋಧಿ ಕಾನೂನು ಹುಡುಗಿಯರಿಗೆ ಮಾತ್ರ ಅನ್ವಯವಾಗುತ್ತದೆ.
- ಅತ್ಯಾಚಾರ ವಿರೋಧಿ ಕಾನೂನು ಪ್ರೌಢ ಹುಡುಗಿಯರ ಮೇಲಿನ ಅತ್ಯಾಚಾರ ಪ್ರಕರಣಗಳಲ್ಲಿ ಶಿಕ್ಷೆ ವಿಧಿಸಲು ರೂಪಿಸಲಾಗಿದೆ.
- ಅತ್ಯಾಚಾರ ವಿರೋಧಿ ಕಾನೂನಿನಲ್ಲಿ ಅತ್ಯಾಚಾರ ಸಂತ್ರಸ್ತೆ ಗಂಭೀರ ಸ್ಥಿತಿಯಲ್ಲಿದ್ದರೆ ಅಥವಾ ಅವರು ಸಾವನ್ನಪ್ಪಿದರೆ ಅದನ್ನು ವಿರಳ ಪ್ರಕರಣವೆಂದು ಪರಿಗಣಿಸಿ ಅಪರಾಧಿಗೆ ಮರಣದಂಡನೆ ವಿಧಿಸಲಾಗುತ್ತದೆ.
- ಯಾರಾದರೂ 2ನೇ ಬಾರಿಗೆ ಅತ್ಯಾಚಾರ ಪ್ರಕರಣದಲ್ಲಿ ತಪ್ಪಿತಸ್ಥರೆಂದು ಕಂಡುಬಂದರೆ ಅವರಿಗೆ ಗಲ್ಲು ಶಿಕ್ಷೆ ವಿಧಿಸಲಾಗುತ್ತದೆ.
- ಲೈಂಗಿಕ ದೌರ್ಜನ್ಯ ಮತ್ತು ಕಿರುಕುಳವು ಅತ್ಯಾಚಾರ ವಿರೋಧಿ ಕಾನೂನಿನ ಅಡಿಯಲ್ಲಿ ಬರುತ್ತದೆ.
- ಆಸಿಡ್ ದಾಳಿಯು ಅತ್ಯಾಚಾರ ವಿರೋಧಿ ಕಾನೂನಿನ ಅಡಿಯಲ್ಲಿ ಬರುತ್ತದೆ ಮತ್ತು 10 ವರ್ಷಗಳ ಜೈಲು ಶಿಕ್ಷೆಗೆ ನಿಬಂಧನೆಯಿದೆ.