Asianet Suvarna News Asianet Suvarna News

ದಕ್ಷಿಣ ಅಮೇರಿಕಾ ನಿಜಕ್ಕೂ ಪಾತಾಳ ಲೋಕನಾ? ಸಾಕ್ಷ್ಯ ಸಮೇತ ಬಹಿರಂಗ.!

ಹಿಂದೂ ಪುರಾಣಗಳಲ್ಲಿ ಉಲ್ಲೇಖವಾಗಿರುವ ಪಾತಾಳ ಲೋಕವು ದಕ್ಷಿಣ ಅಮೇರಿಕಾ ಎಂಬುದಕ್ಕೆ ಸಾಕ್ಷ್ಯಗಳನ್ನು ಈ ಲೇಖನದಲ್ಲಿ ನೀಡಲಾಗಿದೆ. ಮಾಯನ್ನರ ಆಚರಣೆಗಳು, ಭಾಷೆ, ಮತ್ತು ಶಿಲ್ಪಕಲೆಯಲ್ಲಿ ಭಾರತೀಯ ಸಂಸ್ಕೃತಿಯ ಹೆಚ್ಚಿನ ಹೋಲಿಕೆಗಳನ್ನು ವಿವರಿಸಲಾಗಿದೆ.

South America is patala loka of Hinduism they are all Hindus sat
Author
First Published Sep 4, 2024, 6:57 PM IST | Last Updated Sep 4, 2024, 7:11 PM IST

ಬೆಂಗಳೂರು (ಸೆ.04): ಹಿಂದೂ ಪುರಾಣಗಳಲ್ಲಿ ಉಲ್ಲೇಖವಾಗಿರುವ ಪಾತಾಳ ಲೋಕವು ದಕ್ಷಿಣ ಅಮೇರಿಕಾ ಎಂಬುದಕ್ಕೆ ಸಾಕ್ಷ್ಯಗಳನ್ನು ಈ ಲೇಖನದಲ್ಲಿ ನೀಡಲಾಗಿದೆ. ಮಾಯನ್ನರ ಆಚರಣೆಗಳು, ಭಾಷೆ, ಮತ್ತು ಶಿಲ್ಪಕಲೆಯಲ್ಲಿ ಭಾರತೀಯ ಸಂಸ್ಕೃತಿಯ ಹೆಚ್ಚಿನ ಹೋಲಿಕೆಗಳನ್ನು ವಿವರಿಸಲಾಗಿದೆ.

ಹಿಂದೂ ಭಾಗವತ ಪುರಾಣ ಮತ್ತು ಪದ್ಮ ಪುರಾಣದಲ್ಲಿ ಸಪ್ತ ಲೋಕಗಳ ಬಗ್ಗೆ ಉಲ್ಲೇಖ ಮಾಡಲಾಗಿದೆ. ಅತಳ, ವಿಟಲ, ಸುತಲ, ತಾಳತಲ, ಮಹಾತಳ, ರಸತಾಳ ಮತ್ತು ಪಾತಾಳ ಲೋಕ ಎಂದು ಕರೆಯಲಾಗಿದೆ. ಅದರಲ್ಲಿ ಮಾನವನ ಗುಣಗಳಿಗೆ ಅನುಗುಣವಾಗಿ ಸೇರುವ ಸ್ವರ್ಗಲೋಕ, ಭೂಲೋಕ ಹಾಗೂ ಪಾತಾಳ ಲೋಕ ಎಂಬ ಬಗ್ಗೆ ಉಲ್ಲಖಿಸಲಾಗಿದೆ. ಆದರೆ, ಈ ಪಾತಾಳ ಲೋಕ ಬೇರೆಲ್ಲೂ ಇಲ್ಲ, ಈಗಿನ ದಕ್ಷಿಣ ಅಮೇರಿಕಾ ರಾಷ್ಟ್ರವಾಗಿದೆ ಎಂಬುದಕ್ಕೆ ಇಲ್ಲಿ ಹಲವು ಸಾಕ್ಷಿಗಳನ್ನು ನೀಡಲಾಗಿದೆ. ಇನ್ನು ದಕ್ಷಿಣ ಅಮೇರಿಕನ್ನರೆಲ್ಲರೂ ಹಿಂದೂ ಧರ್ಮದವರಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಹೀಗಾಗಿಯೇ, ದಕ್ಷಿಣ ಅಮೇರಿಕಾ ಕಂಡುಹಿಡಿದ ನಿಕೋಲಸ್ ಕೊಲಂಬಸ್ ಕೂಡ ಅಲ್ಲಿನ ಜನರು ಭಾರತೀಯರನ್ನು ಹೋಲುತ್ತಿದ್ದ ಹಿನ್ನೆಲೆಯಲ್ಲಿ ರೆಡ್ ಇಂಡಿಯನ್ ಎಂದು ಕರೆದಿದ್ದಾನೆ. ಈ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ವಿವರಣೆ..

ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಸನಾತನ ಕನ್ನಡ (@sanatan_kannada) ಎಂಬ ಖಾತೆಯಿಂದ ಈ ಬಗ್ಗೆ ವಿವರವಾದ ಟಿಪ್ಪಣಿಯೊಂದನ್ನು ಬರೆದುಕೊಂಡು ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ದಕ್ಷಿಣ ಅಮೇರಿಕಾವನ್ನು ಪಾತಾಳ ಲೋಕ ಎಂದು ಹೇಳುವುದಕ್ಕೆ ಹಲವು ಸಾಕ್ಷಿಗಳನ್ನು ನೀಡಿದ್ದಾರೆ. ಇಲ್ಲಿದೆ ನೋಡಿ ಪೂರ್ಣ ಟಿಪ್ಪಣಿ...

'ಪಾತಾಳ: ದಕ್ಷಿಣ ಅಮೇರಿಕ ಭಾರತಕ್ಕೆ ಸಂಪೂರ್ಣ ಕೆಳಭಾಗದಲ್ಲಿ ಬರುತ್ತದೆ. ಅದನ್ನೇ ಪೂರ್ವಜರು ಪಾತಾಳ ಎಂದು ಕರೆದರು. ವಿಶೇಷವಾಗಿ  ಭಾರತದ ಮಹಾಕಾಳೇಶ್ವರನ ಉಜ್ಜಯಿನಿ ತಾಣವು ಪಾತಾಳ ಕರಾರುವಕ್ಕಾಗಿ ಒಂದೇ ಲಂಬದಲ್ಲಿ ಬರುತ್ತದೆ. ವಿಶ್ವದ ಸಂಶೋಧಕರಿಗೆ ಭಾರತದ ಸಂಸ್ಕೃತಿ ಅರ್ಥವಾಗಲಾರದೇ, ತಮ್ಮ ಮನಸ್ಸಿಗೆ ಬಂದದ್ದು ಬರೆದು ಅದನ್ನೇ ಇತಿಹಾಸ ಎಂದರು. ಅಮೇರಿಕ ಮುಖ್ಯವಾಗಿ ವಲಸಿಗರ ದೇಶ, ಅಲ್ಲಿಯ ಪೂರ್ವಿಕರನ್ನ ಕೊಲಂಬಸ್  " ರೆಡ್ ಇಂಡಿಯನ್ " ಎಂದು ಕರೆದ. ಅಲ್ಲಿಯ ಜನಾಂಗ ನಿಜವಾಗಿಯೂ ಭಾರತೀಯರಾಗಿದ್ದರಾ..! ಹೌದು ಎಂದು ಹೇಳುತ್ತೆ ಅಲ್ಲಿಯ ಮಾಯನ್ನರ  (MAYANS )  ಆಸ್ಟಿಕರ  ( AZTECS ) ಮತ್ತು ನಹು ರ ( NAHU ) ನಾಗರೀಕತೆಗಳ ಆಚರಣೆಗಳು, ಭಾಷೆ, ಶಿಲ್ಪಕಲಾ, ಜೋತಿಶಾಸ್ತ್ರ, ಅದಕ್ಕೆ ಮಾಯಾನ ಕ್ಯಾಲೆಂಡರ ಭವಿಷ್ಯ ಮುಂತಾದವುಗಳೇ ಕಾರಣ.

ಇದನ್ನೂ ಓದಿ: ಲಿಂಗಾಯತ ಮತ್ತು ಇಸ್ಲಾಂ ಧರ್ಮಗಳಲ್ಲಿ ಸಾಮ್ಯತೆ ಇದೆ: ಪಂಡಿತಾರಾದ್ಯ ಸ್ವಾಮೀಜಿ

ಇವರೆಲ್ಲಾ ವಿಶ್ವಕರ್ಮ ವಂಶಸ್ಥ ರೇ...?!
ಭಗವಾನ ವಿಶ್ವಕರ್ಮನಿಗೆ ಪಂಚಮುಖಗಳು ಅವುಗಳು ಸದ್ಯೋಜಾತ, ವಾಮದೇವ, ಅಘೋರ, ತತ್ಪುರುಷ, ಈಶಾನ.. ಈ ಮುಖಗಳಿಂದ ಪಂಚ ಋಷಿಗಳು ಅಹಿರ್ಭವಿಸುತ್ತಾರೆ ಅವರೇ, ಮನು, ಮಯ, ತ್ವಷ್ಟ್ರ, ಶಿಲ್ಪಿ, ಮತ್ತು ವಿಶ್ವಜ್ಞ. ಇವುಗಳಲ್ಲಿ ಮಯ ವಂಶಸ್ಥರ ಬಗ್ಗೆ ವೇದ ಪುರಾಣ ಗಳಲ್ಲಿ ಕಂಡು ಬರುತ್ತದೆ. ತಕ್ಷಕ ಎಂದರೆ ಬಡಿಗ, ವಿಶ್ವಕರ್ಮ, ಪ್ರಜಾಪತಿ, ಎಂಬೆಲ್ಲಾ ಅರ್ಥಗಳು ಬರುತ್ತವೆ. ಈ ತಕ್ಷಕರು ವಿಶೇಷವಾಗಿ ನಾಗಾರಾಧಕರು.ಇವರ ನಾಗಸರ್ಪ ಪರೀಕ್ಷಿತ ರಾಜನನ್ನು ಕಚ್ಚಿ ಸಾಯುಸುತ್ತದೆ. ಪರೀಕ್ಷಿತನ ಮಗ ಜನಮೇಜೇಯ ಸರ್ಪಕುಲ ಸಂಹಾರಕ್ಕಾಗಿ ಹೋಮವನ್ನು ಆಚರಿಸುತ್ತಾನೆ. ಎಲ್ಲಾ ಸರ್ಪಗಳು ಆ ಮಂತ್ರಶಕ್ತಿಯಿಂದ ಪ್ರಭಾವಿತವಾಗಿ ಆ ಹೋಮಕುಂಡಕ್ಕೆ ಬಂದು ಬಿದ್ದು ಸಾಯುತ್ತವೆ. ಆದರೆ ಆ ತಕ್ಷಕನ ಸರ್ಪ ದೇವೇಂದ್ರನ ಮಂಚವನ್ನ ಸುತ್ತಿಕೊಂಡು ಬಿಡುತ್ತದೆ. 

'ಇಂದ್ರಾಯ ತಕ್ಷಕಾಯ ಸ್ವಾಹಾ..' ಎನ್ನುತಿದ್ದಂತೆ ತಕ್ಷಕನ ಸರ್ಪ ಇಂದ್ರನ ಸಮೇತ ಹೋಮಕ್ಕೆ ಬಂದು ಬೀಳುತ್ತವೆ. ಇಂದ್ರನ ರಕ್ಷಣೆ ಗಾಗಿ ದೇವತೆಗಳು ವಾಸುಕಿಯ ಸಹೋದರಿ ಸಹನಾಳನ್ನು ವಿನಂತಿಸುತ್ತಾರೆ. ಅವರ ವಿನಂತಿಗೆ ಮೆಚ್ಚಿ ಸಹನಾಳು ತನ್ನ ಮಗ ಆಸ್ತಿಕ ಮುನಿಯನ್ನು ಈ ಹೋಮವನ್ನು ನಿಲ್ಲಿಸಿ ದೇವೇಂದ್ರ ನನ್ನು ಮತ್ತು ಸರ್ಪಕುಲ ವನ್ನು ರಕ್ಷಿಸುವಂತೆ ಆದೇಶಿಸುತ್ತಾಳೆ. ಆಸ್ತಿಕನು ಜನಮೇಜಯನನ್ನು ಓಲೈಸಿ ಹೋಮದ ಹೊಣೆಯನ್ನು ಹೊತ್ತು ಇಂದ್ರನನ್ನು ಮತ್ತು ಸರ್ಪಕುಲವನ್ನು ಉಳಿಸುತ್ತಾನೆ, ಅದೇ ಕಾರಣ ದಿಂದ ನಾಗರ ಪಂಚಮಿಯ ದಿನ ಹಾಲೆರೆಯುವ ಸಂಪ್ರದಾಯ ಜಾರಿಗೆ ಬಂತು. 

ಈ ವಿಷಯ ತಿಳಿದರೆ ಜನಮೇಜಯನು ತಮ್ಮ ಮೇಲೆ ದಾಳಿ ಮಾಡಬಹುದು ಎಂದು ತಿಳಿದ ಆಸ್ತಿಕ ಮುನಿ ತಮ್ಮೆಲ್ಲ ಜನಾಂಗವನ್ನ ಪಾತಾಳಕ್ಕೆ ಕರೆದೊಯ್ದು ರಕ್ಷಿಸಿದ. ಆ ತಾಣವೇ ದಕ್ಷಿಣ ಅಮೇರಿಕಾದ ಕಡಲತಡಿ. ಆದರೆ ಅವರ ಮೇಲೆ ದಾಳಿಗಳು ನಿರಂತರ ನಡೆದವು, ಕೊನೆಗೆ ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳುವ ಉದ್ದೇಶದಿಂದ ಅಲ್ಲಿಯ ಬುಡಕಟ್ಡು ಜನಾಂಗ ದೊಂದಿಗೆ ಸೇರಿಕೊಂಡು ಅವರ ಸಂಸ್ಕೃತಿ ಯನ್ನೇ ಮೈಗೂಡಿಸಿಕೊಂಡರು.

ಇದನ್ನೂ ಓದಿ: ದಲಿತ ಯುವತಿ ಮನೆ ಸೊಸೆಯಾದಳೆಂದು, ಹಂದಿಗೂಡಿನಲ್ಲಿಟ್ಟು ವಿಷವಿಕ್ಕಿ ಕೊಂದರಾ ಪಾಪಿಗಳು!

ಜಾಗತಿಕವಾಗಿ 15ನೇ ಶತಮಾನದಲ್ಲಿ ಸ್ಪೇನ ದೇಶದ ರಾಣಿ ಇಷಾವೆಲ್ಲಾಳ ಆಜ್ಞೆಯಂತೆ ಹರ್ನಾಡೋ ಕಾರ್ಟಸ್ ಎಂಬ ಸೇನಾನಿಯ ಆಕ್ರಮಣದಿಂದ ಆಸ್ತಿಕ (aztica) ಜನಾಂಗ ಸರ್ವನಾಶ ವಾಯಿತು. ಅಳಿದುಳಿದ ಜನಾಂಗ ಎಲ್ಲಾ ಕ್ರಿಶ್ಚಿಯನ ಧರ್ಮಕ್ಕೆ ಮತಾಂತರವಾದರು. ಆಸ್ತಿಕ ಅಥವಾ aztica ಜನಾಂಗದ ನಾಗರೀಕತೆಯ ಸಂಸ್ಕೃತಿ ಯ ಸಾಕ್ಷಿಯಂತೆ ಪಿರಮಿಡ್ಡುಗಳು, ಸೂರ್ಯೋಪಾಸನೆಯ ತಂತ್ರಗಳು, ಬೃಹತ್ಪ್ರಮಾಣದ ಶಿಲ್ಪಕಲೆಗಳು, ವಿಶೇಷವಾಗಿ ಮಾಯನ್ನರ ಕ್ಯಾಲೆಂಡರ್ ವಿಶ್ವವನ್ನು ಬೆರಗು ಗೊಳಿಸಿವೆ.. ಇವರ ಆಡು ಭಾಷೆಯಲ್ಲಿ ಅನೇಕ ಕನ್ನಡ ಪದಗಳನ್ನ ಅಲ್ಲಿಯ ಸಂಶೋದಕರು ಪತ್ತೆ ಹಚ್ಚಿದ್ದು ನಮ್ಮ ಕನ್ನಡಿಗರ ಹೆಮ್ಮೆಯೇ ಸರಿ.

Allen .J. Christerson ಎಂಬ ಪ್ರೊಫೆಸರ್ 17 ವರ್ಷಗಳ ಕಾಲ ಈ ಪ್ರದೇಶಗಳಲ್ಲಿ ಸುತ್ತಾಡಿ KICHE ENGLISH ಎಂಬ ಶಬ್ದಕೋಶ ಡಿಕ್ಷನರಿಯನ್ನು ಹೊರತಂದಿದ್ದಾರೆ. ಅದರಲ್ಲಿನ ಕನ್ನಡ ಪದಗಳಾದ 'karna-ಕರ್ಮ , kichhu-ಕಿಚ್ಚು, chuchhu-ಚುಚ್ಚು,  karnata-ಕರ್ನಾಟ, kachhu-ಕಚ್ಚು, ಕಹಿ, ಅಜ್ಜ, ತಾತ, ಮುಚ್ಚು, Patolli-ಪಗಡೆ ಆಟ, gopalli-ಪಾಪಸುಕಳ್ಳಿ, Koyte-ಕೋಟೆ, kallina-ಕಲ್ಲಿನ , petla-ಪೆಟ್ಟಿಗೆ, ಅಂಬು, ಮಣಿ, ಮಾಯಾ... ಉಲ್ಲೇಖವಿದೆ. ಈ ಜನಾಂಗ ಉಪಯೋಗಿಸುವ ಭಾಷೆ ಅತ್ಯಂತ ಪುರಾತನವಾಗಿದ್ದು, ಅದರಲ್ಲಿ ನಮ್ಮ ಹೆಮ್ನೆಯ ಕನ್ನಡ ಪದಗಳು ಅದು ಅಮೇರಿಕಾದ ಇತಿಹಾಸ ಪರಂಪರೆಯಲ್ಲಿವೆ...

ಕೃಪೆ...
1) ವೇದಗಳು ಪುರಾಣಗಳು ಸಂಗ್ರಹದ ಬರವಣಿಗೆ ಶ್ರೀ ಜೀವಣ್ಣ ಮಸಳಿ, ಶ್ರೀ ಶಂ.ಬ‌ ಜೋಷಿ, ಶ್ರೀ ಜ್ಞಾನಾನಂದ
2) ಅಮೇರಿಕಾ ನಿವಾಸಿ ಶ್ರೀ ರವಿ ಯವರ ಲೇಖನ..
ಈ ವಿಷಯ ಕುರಿತು ಆದಷ್ಟು  ಲೈಕ್ ಕೊಡುವ ಬದಲು ಚರ್ಚೆ/ ತರ್ಕ ನಡೆಯಲಿ. ತಮ್ಮಲ್ಲಿರುವ ಜ್ಞಾನವನ್ನು ಇತರರಿಗು ತಲುಪಿಸುವ ಪ್ರಯತ್ನಿಸಿ' ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡು ಪೋಸ್ಟ್ ಮಾಡಿಕೊಂಡಿದ್ದಾರೆ.

Latest Videos
Follow Us:
Download App:
  • android
  • ios