Asianet Suvarna News Asianet Suvarna News

ಶೇ. 100ರಷ್ಟು ಲಸಿಕೆ ಪಡೆದ ದೇಶದ ಮೊದಲ ಹಳ್ಳಿ, ಕಣಿವೆ ನಾಡಿನ ವೆಯಾನ್!

* ಜಮ್ಮು-ಕಾಶ್ಮೀರದ ಬಂಡಿ​ಪೊರಾ ಜಿಲ್ಲೆಯ ಸಣ್ಣ ಕುಗ್ರಾ​ಮ​

* ಜಮ್ಮು-ಕಾಶ್ಮೀ​ರದ ವೆಯಾ​ನ್‌ ಕುಗ್ರಾ​ಮ ಶೇ.100 ಲಸಿಕೆ ಪಡೆದ ದೇಶ​ದ ಮೊದಲ ಹಳ್ಳಿ

* ಶೇ.100ರಷ್ಟುಲಸಿಕೆ ಪಡೆದ ದೇಶದ ಮೊದಲ ಗ್ರಾಮ ಎಂಬ ಖ್ಯಾತಿ

Weyan becomes first village in India to achieve 100 vaccination of adults pod
Author
Bangalore, First Published Jun 9, 2021, 7:48 AM IST

ಶ್ರೀನ​ಗ​ರ(ಜೂ.09):  ಜಮ್ಮು-ಕಾಶ್ಮೀರದ ಬಂಡಿ​ಪೊರಾ ಜಿಲ್ಲೆಯ ಸಣ್ಣ ಕುಗ್ರಾ​ಮ​ವೊಂದ​ರಲ್ಲಿ ವಯ​ಸ್ಕ​ರಾದ ಎಲ್ಲ​ರಿಗೂ ಕೋವಿಡ್‌ ಲಸಿಕೆ ನೀಡ​ಲಾ​ಗಿದೆ ಎಂದು ಅಧಿ​ಕಾ​ರಿ​ಗಳು ತಿಳಿ​ಸಿ​ದ್ದಾರೆ. ಇದ​ರೊಂದಿಗೆ 362 ಮಂದಿ ಇರುವ ವೆಯಾನ್‌ ಎಂಬ ಈ ಕುಗ್ರಾ​ಮವು ಶೇ.100ರಷ್ಟು ಲಸಿಕೆ ಪಡೆದ ದೇಶದ ಮೊದಲ ಗ್ರಾಮ ಎಂಬ ಖ್ಯಾತಿಗೆ ಭಾಜ​ನ​ವಾ​ಗಿದೆ.

ಬಂಡಿ​ಪೊ​ರಾ ಜಿಲ್ಲಾ ಕೇಂದ್ರದಿಂದ 28 ಕಿ.ಮೀ ದೂರ​ದ​ಲ್ಲಿ​ರುವ ಈ ಗ್ರಾಮ​ಸ್ಥ​ರು ನಗ​ರಕ್ಕೆ ತೆರ​ಳ​ಬೇ​ಕಾ​ದರೆ ವಾಹ​ನ​ಗಳ ಸೌಕ​ರ್ಯ​ವಿ​ಲ್ಲದ ಕಾರಣ ಕನಿಷ್ಠ 18 ಕಿ.ಮೀ ನಡೆದೇ ಹೋಗ​ಬೇಕು. ಜೊತೆಗೆ ಈ ಗ್ರಾಮ​ದಲ್ಲಿ ನೆಲೆ​ಸಿ​ರು​ವ​ವ​ರೆ​ಲ್ಲರೂ ಅಲೆ​ಮಾ​ರಿ​ಗ​ಳಾ​ದ ಕಾರಣ ತಮಗೆ ಅಗ​ತ್ಯ​ವಿ​ರುವ ವಸ್ತು​ಗಳನ್ನು ತರಲು ದೂರದ ಪ್ರದೇ​ಶ​ಗ​ಳಿಗೆ ನಡೆ​ದು​ಕೊಂಡೇ ಹೋಗಿ​ರು​ತ್ತಿ​ದ್ದರು. ಜೊತೆಗೆ ಗ್ರಾಮ​ದಲ್ಲಿ ಇಂಟ​ರ್ನೆಟ್‌ ಸೇವೆ ಇಲ್ಲದ ಕಾರಣ ಲಸಿ​ಕೆಗೆ ಸ್ಲಾಟ್‌ ಬುಕ್‌ ಮಾಡು​ವುದು ಸಹ ದುಸ್ತ​ರ​ವಾ​ಗಿತ್ತು.

ಈ ಹಿನ್ನೆ​ಲೆ​ಯಲ್ಲಿ ಈ ಗ್ರಾಮ​ಸ್ಥ​ರಿಗೆ ಲಸಿಕೆ ನೀಡು​ವುದು ಆರೋಗ್ಯ ಸಿಬ್ಬಂದಿಗೆ ಒಂದು ದೊಡ್ಡ ಸವಾ​ಲಾಗಿ ಪರಿ​ಣ​ಮಿ​ಸಿತ್ತು. ಆದಾಗ್ಯೂ, ಆರೋಗ್ಯ ಸಿಬ್ಬಂದಿಯ ಪರಿ​ಶ್ರ​ಮ​ದಿಂದಾಗಿ ಈ ಗ್ರಾಮ ಇದೀಗ ಶೇ.100 ಲಸಿಕೆ ಪಡೆದ ಗ್ರಾಮ​ವಾ​ಗಿದೆ ಎಂದು ಅಧಿ​ಕಾ​ರಿ​ಯೊ​ಬ್ಬರು ಹೇಳಿ​ದರು.

Follow Us:
Download App:
  • android
  • ios