Asianet Suvarna News Asianet Suvarna News

ಬಡ ಅಜ್ಜಿಯನ್ನು ರಾತ್ರೋ ರಾತ್ರಿ ಲಕ್ಷಾಧಿಪತಿಯಾಗಿಸಿದ ಸತ್ತ ಮೀನು!

ಬಡ ವೃದ್ಧೆಯೊಬ್ಬಳು ಹಿಡಿದ ಸತ್ತ ದೈತ್ಯ ಮೀನೊಂದ ಆಕೆಯ ಅದೃಷ್ಟವನ್ನೇ ಬದಲಾಯಿಸಿದೆ| ಬಡತನದಿಂದ ನಲುಗುತ್ತಿದ್ದ ಮಹಿಳೆ ಈಗ ಲಕ್ಷಾಧಿಪತಿ| 

West Bengal woman turns rich overnight after pulling out 52 kg fish from river pod
Author
Bangalore, First Published Oct 1, 2020, 10:44 AM IST
  • Facebook
  • Twitter
  • Whatsapp

ಕೋಲ್ಕತ್ತಾ(ಅ.01): ಬಡ ವೃದ್ಧೆಯೊಬ್ಬಳು ಹಿಡಿದ ಸತ್ತ ದೈತ್ಯ ಮೀನೊಂದ ಆಕೆಯ ಅದೃಷ್ಟವನ್ನೇ ಬದಲಾಯಿಸಿದೆ. ರಾತ್ರೋ ರಾತ್ರಿ ಆ ಮಹಿಳೆ ಲಕ್ಷಾಧಿಪತಿಯಾಗಿದ್ದಾಳೆ. ಅದು ಹೇಗೆ ಸಾಧ್ಯ? ಸತ್ತ ಮೀನು ಆಕೆಯ ಅದೃಷ್ಟ ಬದಲಾಯಿಸಿದ್ದು ಹೇಗೆ ಅಂತೀರಾ? ಇಲ್ಲಿದೆ ನೋಡಿ ವಿವರ

ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ ಸುಂದರ್‌ಬನ್ಸ್ ಪ್ರದೇಶದ ಸಾಗರ್ ದ್ವೀಪದ ಗ್ರಾಮದ ನಿವಾಸಿ ಪುಷ್ಪಾ ಕಾರ್ ಹೆಸರಿನ ಈ ಮಹಿಳೆಯೇ ಆ ಅದೃಷ್ಟವಂತೆ.  ನದಿಯಲ್ಲಿ ಬರೋಬ್ಬರಿ 52 ಕೆಜಿ ತೂಕದ ಸತ್ತ ಮೀನು ಹಿಡಿದ ನಂತರ ಈ ಅಜ್ಜಿ ಶ್ರೀಮಂತೆಯಾಗಿದ್ದಾಳೆ. ಆ ಮೀನನ್ನು ಅವರು 3 ಲಕ್ಷಕ್ಕಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡಿದ್ದಾರೆ. ಮೀನು ಸ್ಥಳೀಯ ಮಾರುಕಟ್ಟೆಯಲ್ಲಿ ಪ್ರತಿ ಕೆಜಿಗೆ 6,200 ರೂಪಾಯಿಯಂತೆ ಮಾರಾಟವಾಗಿದೆ. ಹೀಗೆ ಒಂದೇ ಮೀನು ಸುಮಾರು 3 ಲಕ್ಷಕ್ಕೂ ಅಧಿಕ ಬೆಲೆಗೆ ಮಾರಾಟ ಮಾರಾಟವಾಗಿದೆ ಎಂಬುವುದು ಸ್ಥಳೀಯರ ಮಾತಾಗಿದೆ.

ಹೌದು ಮೀನುಗಾರಿಕೆ ವೃತ್ತಿಯನ್ನೇ ಮಾಡುತ್ತಿದ್ದ ಪುಷ್ಪಾ ಪ್ರತಿದಿನದಂತೆ ತನ್ನ ಕೆಲಸಕ್ಕೆ ಹೋಗುತ್ತಿದ್ದಾಗ ನದಿಯಲ್ಲಿ ದೊಡ್ಡ ಮೀನು ತೇಲಿ ಬರುತ್ತಿರುವುದನ್ನು ನೋಡಿದ್ದಾರೆ.  ಕೂಡಲೇ ಪುಷ್ಪಾ ನದಿಗೆ ಹಾರಿದ್ದು, ಮೀನನ್ನು ನದಿಯ ತೀರಕ್ಕೆ ಎಳೆದು ತಂದಿದ್ದಾರೆ. ಆ ಮೀನು ಭೋಲಾ ಮೀನು ಎಂದು ಗುರುತಿಸಿದ ಆಕೆ ಸ್ಥಳೀಯರ ಸಹಾಯದಿಂದ ಅದನ್ನು ಮಾರುಕಟ್ಟೆಗೆ ಕೊಂಡೊಯ್ದಿದ್ದಾರೆ.

ಇನ್ನು ಆ ಮೀನು ಹಾದುಹೋಗುವ ಹಡಗಿಗೆ ಡಿಕ್ಕಿ ಹೊಡೆದು ಸತ್ತು ಹೋಗಿರಬಹುದು, ಒಂದು ವೇಳೆ ಮೀನು ಕೊಳೆಯಲು ಪ್ರಾರಂಭಿಸದಿದ್ದರೆ ಇನ್ನೂ ಹೆಚ್ಚಿನ ಹಣ ಪಡೆಯಬಹುದಿತ್ತು ಎಂದು ಸ್ಥಳೀಯ ಮೀನು ವ್ಯಾಪಾರಿಗಳು ಅಭಿಪ್ರಾಯವಾಗಿತ್ತು. ಮೀನಿನಿಂದ ಶ್ರೀಮಮತೆಯಾದ ಅಜ್ಜಿ ಈ ಬಗ್ಗೆ ಸಂತಸ ವ್ಯಕ್ತಪಡಿಸುತ್ತಾ “ಮೀನು ನನಗೆ ಅದೃಷ್ಟವನ್ನೇ ಬದಲಾಯಿಸಿದೆ. ಮಾರುಕಟ್ಟೆಯಲ್ಲಿ ಪ್ರತಿ ಕೆಜಿಗೆ 6,200 ರೂ.ಗೆ ಮಾರಾಟ ಮಾಡುವ ಮೂಲಕ ನಾನು 3 ಲಕ್ಷಕ್ಕಿಂತ ಹೆಚ್ಚಿನ ಹಣ ಗಳಿಸಿದ್ದೇನೆ. ನನ್ನ ಜೀವನದಲ್ಲಿ ಇಂತಹ ದೈತ್ಯ ಮೀನನ್ನು ನಾನು ನೋಡಿಲ್ಲ. ಇದನ್ನು ಬಂಗಾಳಿ ಭಾಷೆಯಲ್ಲಿ ‘ಭೋಲಾ’ ಮೀನು ಎಂದು ಕರೆಯಲಾಗುತ್ತದೆ” ಎಂದು ಹೇಳಿದ್ದಾರೆ.

ಮೀನು ಕೊಳೆಯಲು ಪ್ರಾರಂಭಿಸಿದ್ದರಿಂದ ತಿನ್ನಲೂ ಸಾಧ್ಯವಿಲ್ಲ. ಜೊತೆಗೆ ಈ ಗಾತ್ರದ ಮೀನುಗಳ ಮಾಂಸವು ರಬ್ಬರ್ ಆಗಿರುವುದರಿಂದ ಇತರೆ ಉದ್ದೇಶಗಳಿಗೆ ಬಳಸಿಕೊಳ್ಳಬಹುದು. ಬ್ಲಬ್ಬರ್ ಎಂದು ಕರೆಯಲ್ಪಡುವ ಮೀನಿನ ಕೊಬ್ಬನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತದೆ. ಆಗ್ನೇಯ ಏಷ್ಯಾದ ದೇಶಗಳಿಗೆ ಬ್ಲಬ್ಬರ್ ನಂತಹ ಮೀನಿನ ಅಂಗಗಳನ್ನು ರಫ್ತು ಮಾಡಲಾಗುತ್ತದೆ. ಅಲ್ಲದೇ ಈ ಮೀನುಗಳನ್ನು ಔಷಧೀಯ ಉದ್ದೇಶಗಳಿಗಾಗಿ ಸಹ ಬಳಸಿಕೊಳ್ಳಲಾಗುತ್ತದೆ.

Follow Us:
Download App:
  • android
  • ios