ಕೋಲ್ಕತ್ತಾ(ಮಾ. 05) ಸರ್ಕಾರಿ ವ್ಯವಸ್ಥೆಯಲ್ಲಿ ಎಂತೆಂತಹ ಎಡವಟ್ಟುಗಳು ನಡೆದು ಹೋಗುತ್ತವೆ.   ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನ ರಾಮನಗರ ಗ್ರಾಮದಲ್ಲಿನ ಘಟನೆ ನಗೆಪಾಟೀಲಿಗೆ ಗುರಿಯಾಗಿದೆ.

ಮತದಾರರ ಗುರುತಿನ ಚೀಟಿಯಲ್ಲಿ ಮನುಷ್ಯನ ಭಾವಚಿತ್ರದ ಬದಲು ನಾಯಿ ಫೋಟೋ ಹಾಕಿಕೊಡಲಾಗಿದೆ. ಸುನೀಲ್ ಕರ್ಮಕರ್ ಎಂಬ ವ್ಯಕ್ತಿಯ ಗುರುತಿನ ಚೀಟಿಯಲ್ಲಿ ನಾಯಿ ಫೋಟೋ ಹಾಕಲಾಗಿದ್ದು, ಬದಲಿ ಐಡಿ ಕಾರ್ಡ್‌ಗಾಗಿ ಮನವಿ ಸಲ್ಲಿಸಿ ಮತ್ತೆ ಹೊಸ ಗುರುತಿನ ಚೀಟಿ ಪಡೆದುಕೊಂಡಿದ್ದಾರೆ.

ಮುನಿರತ್ನ ವಿರುದ್ಧದ ನಕಲಿ ವೋಟರ್ ಐಡಿ ಕೇಸ್ ಏನಾಯ್ತು?

'ಶಾಲೆಗೆ ನನ್ನನ್ನು ಕರೆಸಿ ಈ ವೋಟರ್ ಐಡಿ ಕಾರ್ಡ್ ಕೊಟ್ಟರು. ನಾನು ಫೋಟೋ ನೋಡಿದೆ, ನನ್ನ ಫೋಟೋ ಬದಲು ನಾಯಿ ಫೋಟೋ ಇತ್ತು. ಆಫೀಸರ್ ಸಿಗ್ನಿಚರ್ ಮಾಡಿದ್ದರು. ಒಂದರ್ಥದಲ್ಲಿ ಇದು ನನ್ನನ್ನು ಅವಹೇಳನ ಮಾಡಿದಂತೆ ಆಗಿದೆ ಎಂದು ನೊಂದು ನುಡಿದಿದ್ದಾರೆ.

ಆನ್ ಲೈನ್ ನಲ್ಲಿ ಮಾಹಿತಿ ಸಲ್ಲಿಕೆ ಮಾಡುವಾಗ ಆದ ಪ್ರಮಾದವೇ ಇಂಥ ಘಟನೆಗೆ ಕಾರಣವಾಗಿದೆ. ಎಲ್ಲವನ್ನು ಸರಿಪಡಿಸಲಾಗಿದ್ದು ವ್ಯಕ್ತಿಹೆ ಹೊಸ ಕಾರ್ಡ್ ನೀಡಲಾಗಿದೆ ಎಂದು ಅಧಿಕಾರಿ ರಾಜಶ್ರೀ ಚಕ್ರವರ್ತಿ ತಿಳಿಸಿದ್ದಾರೆ.