ಜುಲೈ 21 ರಂದು ಬಿಜೆಪಿ ವಿರುದ್ಧ ಜಿಹಾದ್ ದಿನ ಎಂದು ಘೋಷಣೆ ಮಮತಾ ಬ್ಯಾನರ್ಜಿ ಹೇಳಿಕೆಗೆ ವ್ಯಾಪಕ ಖಂಡನೆ ಹೇಳಿಕೆ ವಾಪಸ್ ಪಡೆಯುಂತೆ ಬಂಗಾಳ ರಾಜ್ಯಪಾಲರ ಎಚ್ಚರಿಕೆ
ಕೋಲ್ಕತಾ(ಜೂ.30): ಮುಂಬೈ ರಾಜಕೀಯ ಬಿಕ್ಕಟ್ಟು ತಾರ್ಕಿಕ ಅಂತ್ಯಪಡೆದ ಬೆನ್ನಲ್ಲೇ ಇದೀಗ ಪಶ್ಚಿಮ ಬಂಗಾಳದಲ್ಲಿ ಮತ್ತೊಂದು ರಾಜಕೀಯ ಹೋರಾಟ ಆರಂಭಗೊಂಡಿದೆ. ಪ್ರತಿ ವರ್ಷ ಜುಲೈ 21 ರಂದು ಟಿಎಂಸಿ ಆಚರಿಸುವ ಹುತಾತ್ಮರ ದಿನವನ್ನು ಈ ಬಾರಿ ಬಿಜೆಪಿ ವಿರುದ್ಧ ಜಿಹಾದ್ ದಿನ ಎಂದು ಆಚರಿಸಲು ಘೋಷಿಸಿದ್ದಾರೆ. ಇದು ರಾಜಕೀಯ ಹೋರಾಟಕ್ಕೆ ವೇದಿಕೆಯಾಗಿದೆ. ಇದರ ಬೆನ್ನಲ್ಲೇ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಬಿಜೆಪಿ ವಿರುದ್ಧ ಜಿಹಾದಿ ದಿನ ಘೋಷಣೆಯನ್ನು ಹಿಂಪೆಡೆಯುವಂತೆ ಪಶ್ಚಿಮ ಬಂಗಳಾ ರಾಜ್ಯಪಾಲ ಜಗದೀಪ್ ಧನ್ಕರ್ ಎಚ್ಚರಿಕೆ ನೀಡಿದ್ದಾರೆ. ಮಮಮತಾ ಬ್ಯಾನರ್ಜಿ ಪ್ರಜಾಪ್ರಭುತ್ವ ವಿರೋಧಿ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಯಿಂದ ಮಮತಾ ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಹೀಗಾಗಿ ತಕ್ಷಣವೇ ಹೇಳಿಕೆ ಹಿಂಪಡೆಯಲು ಧನ್ಕರ್ ಸೂಚಿಸಿ ಪತ್ರ ಬರೆದಿದ್ದಾರೆ.
ಅಗ್ನಿಪಥ ಹೆಸರಲ್ಲಿ ಶಸ್ತ್ರಸಜ್ಜಿತ ಪಡೆ ಸೃಷ್ಟಿಗೆ ಬಿಜೆಪಿ ಯತ್ನ: ಮಮತಾ ಗಂಭೀರ ಆರೋಪ
ಅಸನ್ಸೋಲ್‌ನಲ್ಲಿನ ಕಾರ್ಯಕ್ರಮದಲ್ಲಿ ಮಮತಾ ಬ್ಯಾನರ್ಜಿ ಈ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆ ವಿರುದ್ಧ ಬಿಜೆಪಿಯ ಸುವೇಂಧು ಅಧಿಕಾರಿ ನೇತೃತ್ವದ ನಿಯೋಗ ರಾಜ್ಯಪಾಲರನ್ನು ಭೇಟಿಯಾಗಿ ಮಧ್ಯಸ್ಥಿಕೆ ವಹಿಸಿ ಪ್ರಜಾಪ್ರಭುತ್ವ ವಿರೋಧಿ ಹೇಳಿಕೆ ವಾಪಸ್ ಪಡೆಯಲು ಆಗ್ರಹಿಸಿತ್ತು.
ಜುಲೈ 21ಕ್ಕೆ ಕೆಲ ದಶಕಗಳ ಇತಿಹಾಸ ಇದೆ. 1993ರಲ್ಲಿ ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ ಹಾಗೂ ಸಿಪಿಐ(ಎಂ) ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿತ್ತು. ಅಂದು ರಾಜ್ಯ ಕಾಂಗ್ರೆಸ್ ಯೂಥ್ ಅಧ್ಯಕ್ಷರಾಗಿದ್ದ ಮಮತಾ ಬ್ಯಾನರ್ಜಿ ಮಾರ್ಚ್ ಟುವರ್ಡ್ಸ್ ರೈಟರ್ಸ್ ಬಿಲ್ಡಿಂಗ್ ಮೆರವಣಿಗೆ ಆಯೋಜಿಸಿದ್ದರು. ಈ ಮೆರವಣಿಗೆಯಲ್ಲಿ ಯೂಥ್ ಕಾಂಗ್ರೆಸ್ ಕಾರ್ಯಕರ್ತರು ಭಾರಿ ಹಿಂಸಾಚಾರ ನಡೆಸಿದ್ದರು. ಹೀಗಾಗಿ ಗೋಲಿಬಾರ್ ನಡೆದಿತ್ತು. ಈ ಗೋಲಿಬಾರ್‌ನಲ್ಲಿ 13ಯೂಥ್ ಕಾಂಗ್ರೆಸ್ ಕಾರ್ಯಕರ್ತರು ಸಾವನ್ನಪ್ಪಿದ್ದರು.
1993ರ ಈ ಘಟನೆ ಬಳಿಕ 1994ರಿಂದ ಪ್ರತಿ ವರ್ಷ ಮಮತಾ ಬ್ಯಾನರ್ಜಿ ಜುಲೈ 21ನೇ ದಿನ ಹುತಾತ್ಮರ ದಿನ ಎಂದು ಆಚರಿಸಿ ಮೆರವಣಿ ತೆರಳುವ ಕಾರ್ಯಕ್ರಮ ಆಯೋಜಿಸುತ್ತದೆ. ಆದರೆ ಈ ಬಾರಿ ಜುಲೈ 21ರ ಈ ಕಾರ್ಯಕ್ರವನ್ನು ಬಿಜೆಪಿ ವಿರುದ್ಧ ಜಿಹಾದ್ ಎಂದು ಮಮತಾ ಬ್ಯಾನರ್ಜಿ ಘೋಷಿಸಿದ್ದರು. ಇದು ವಿವಾದಕ್ಕೆ ಕಾರಣವಾಗಿದೆ.
ವಿಧಾನಸಭಾ ಚುನಾವಣೆಯಲ್ಲಿ ಬಾಂಗ್ಲಾ ನಾಗರಿಕರಿಗೆ ಟಿಕೆಟ್ ನೀಡಿದ್ದ ಟಿಎಂಸಿ, ಈಗ ಭಾರೀ ಸಂಕಷ್ಟ!
ಸಿಎಂ ಮಮತಾ ಶಾರದೆ, ಮ.ಥೆರೇಸಾ ಅವತಾರ:ಟಿಎಂಸಿ ಶಾಸಕ ಬಣ್ಣನೆ
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಮಾತೆ ಶಾರದೆ (ಸಂತ ರಾಮಕೃಷ್ಣ ಪರಮಹಂಸರ ಪತ್ನಿ) ಹಾಗೂ ಮದರ್ ಥೆರೆಸಾ ಅವರ ಅವತಾರ ಎಂದು ಟಿಎಂಸಿ ಶಾಸಕ ಡಾ. ನಿರ್ಮಲ್ ಮಾಜಿ ಬಣ್ಣಿಸಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ನಿರ್ಮಲ್, ‘ಮಾತೆ ಶಾರದೆ ತಮ್ಮ ಸಾವಿನ ಹಲವು ಮರ್ಷಗಳ ಬಳಿಕ ಕಾಳಿ ದೇವಾಲಯದ ಸಮೀಪದ ಕಾಳೀಘಾಟ್‌ನಲ್ಲಿ ಮತ್ತೆ ಮಾನವ ರೂಪದಲ್ಲಿ ಜನ್ಮ ತಾಳುತ್ತೇನೆ. ಸಾಮಾಜಿಕ ಹಾಗೂ ರಾಜಕೀಯ ಚಟುವಟಿಕೆಗಳಲ್ಲಿ ಪಾಲ್ಗೊಂಡು ಸಮಾಜಕ್ಕಾಗಿ ತ್ಯಾಗ ಮಾಡುತ್ತೇನೆ’ ಎಂದು ಹೇಳಿದ್ದರು. ಅಲ್ಲಿಯೇ ಪ್ರಸ್ತುತ ಮಮತಾ ನೆಲೆಸಿದ್ದಾರೆ’ ಎಂದು ಹೇಳಿದರು. ‘ಸಂಖ್ಯಾಶಾಸ್ತ್ರದ ಪ್ರಕಾರವಾಗಿ ನೋಡಿದರು ಶಾರದಾ ದೇವಿ ನಿಧನರಾದ ವರ್ಷಕ್ಕೂ, ಮಮತಾ ಹುಟ್ಟಿದ ವರ್ಷಕ್ಕೂ ತಾಳೆಯಾಗುತ್ತದೆ. ಹೀಗಾಗಿ ಮಮತಾ ಅವರೇ ಮಾತೆ ಶಾರದೆ, ಅವರು ಮದರ್ ಥೆರೆಸಾ, ಅವರೇ ಸಿಸ್ಟರ್ ನಿವೇದಿತಾ, ಅವರೇ ದುರ್ಗಾ’ ಎಂದು ಹೊಗಳಿದ್ದಾರೆ.
