ಪಂಚರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಭಾರೀ ಮುಖಭಂಗ| ಪಶ್ಚಿಮ ಬಂಗಾಳದಲ್ಲಿ ಕಳಪೆ ಪ್ರದರ್ಶನ| ಕಾಂಗ್ರೆಸ್‌ ಹೀನಾಯ ಸೋಲಿಗೆ ನಾಯಕರು ಗತರಂ| ಆತ್ಮಾವಲೋಕನ ಯಾವಾಗ ಎಂದು ಪ್ರಸ್ನಿಸಿದ ಕಾಂಗ್ರೆಸ್‌ ವಕ್ತಾರೆ

ನವದೆಹಲಿ(ಮೇ.03): ಪಶ್ಚಿಮ ಬಂಗಾಳ, ಅಸ್ಸಾಂ, ತಮಿಳುನಾಡು, ಪುದುಚೇರಿ ಹಾಗೂ ಕೇರಳ.... ಈ ಪಂಚರಾಜ್ಯ ಚುನಾವಣೆಯ ಫಲಿತಾಂಶ ಭಾನುವಾರ ಹೊರ ಬಿದ್ದಿದೆ. ತಮಿಳುನಾಡು ಹೊರತುಪಡಿಸಿ ಉಳಿದ ಯಾವ ಕಡೆಯೂ ಕಾಂಗ್ರೆಸ್‌ ಸಾಧನೆ ಏನೂ ಇರಲಿಲ್ಲ. ಸಾಲದೆಂಬಂತೆ ಬಂಗಾಳದಲ್ಲಿ 2016ರಲ್ಲಿ 44 ಸ್ಥಾನಗಳನ್ನು ಗೆದ್ದಿದ್ದ ಕಾಂಗ್ರೆಸ್‌ ಈ ಬಾರಿ ಖಾತೆ ತೆರೆಯಲೇ ಇಲ್ಲ. ಹೀಗಿದ್ದರೂ ಕಾಂಗ್ರೆಸ್ ನಾಯಕರು ಬಿಜೆಪಿ ಸೋಲಿನಲ್ಲಿ ತಮ್ಮ ಖುಷಿ ಕಂಡುಕೊಳ್ಳಲು ಯತ್ನಿಸಿದ್ದಾರೆ. ಹೀಗಿರುವಾಗ ಕೆಲ ನಾಯಕರು ತಮ್ಮ ಪಕ್ಷದ ನಾಯಕರ ಈ ನಡೆಯನ್ನು ಪ್ರಶ್ನಿಸಿದ್ದಾರೆ.

Scroll to load tweet…

ಕಾಂಗ್ರೆಸ್‌ ವಕ್ತಾರೆ ರಾಗಿಣಿ ನಾಯಕ್ ಟ್ವೀಟ್ ಮಾಡಿದ್ದು, ಒಂದು ವೇಳೆ ನಾವು ಕಾಂಗ್ರೆಸಿಗರು ಮೋದಿ ಸೋಲಿನಲ್ಲಿ, ಖುಷಿ ಹುಡುಕುತ್ತಾ ನಿಂತರೆ ನಮ್ಮ ಸೋಲಿನ ಬಗ್ಗೆ ಆತ್ಮಾವಕಲೋಕನ ಮಾಡುವುದು ಯಾವಾಗ ಎಂದು ಪ್ರಶ್ನಿಸಿದ್ದಾರೆ.

ಬಂಗಾಳದಲ್ಲಿ ಶರಣಾಗಿದ್ದು ಒಪ್ಪಿಕೊಳ್ಳುವಂತದ್ದಲ್ಲ

ಕಾಂಗ್ರೆಸ್‌ನಿಂದ ಅಮಾನತ್ತುಗೊಂಡಿರುವ ಸಂಜಯ್ ಝಾ ಕೂಡಾ ಬಂಗಾಳದಲ್ಲಿ ಸರಿಯಾಗಿ ಚುನಾವಣೆ ಎದುರಿಸದಿರುವುದಕ್ಕೆ ಪಕ್ಷದ ವಿರುದ್ಧ ಕಿಡಿ ಕಾರಿದ್ದಾರೆ. ಬಂಗಾಳದಲ್ಲಿ ಕಾಂಗ್ರೆಸ್‌ ಶರಣಾಗತಿಯಾಗಿರುವುದು ನನ್ನ ಪಾಲಿಗೆ ಬಹಳ ನಿರಾಸೆಯುಂಟು ಮಾಡಿರುವ ವಿಚಾರ. ಇದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಇದು ಉತ್ತರ ಪ್ರದೇಶ ಹಾಗೂ ತಮಿಳುನಾಡಿನ ಹಾಗಾಗಿದೆ. 2016 ರಲ್ಲಿ ಕಾಂಗ್ರೆಸ್‌ ಬಂಗಾಳದ ಪ್ರಮುಖ ವಿರೋಧ ಪಕ್ಷವಾಗಿತ್ತು. ಪಕ್ಷ 44 ಕ್ಷೇತ್ರಗಳಲ್ಲಿ ಗೆದ್ದಿತ್ತು ಹಾಗೂ ಶೇ. 12.25ರಷ್ಟು ಮತಗಳನ್ನು ಗಳಿಸಿತ್ತು. ಇದರೊಂದಿಗೆ ಜನತೆ ಬದಲಾವಣೆಯನ್ನೂ ಬಯಸಿದ್ದರು. 

Scroll to load tweet…

ರಾಹುಲ್ ಗಾಂಧಿ ವಿಚಾರಧಾರೆ ನಿರಾಕರಿಸಿದ ಕೇರಳ ಜನತೆ

ಇನ್ನು ಕಾರ್ಟೂನಿಸ್ಟ್ ಪಂಕಜ್ ಶಂಕರ್ ಈ ಬಗ್ಗೆ ಟ್ವೀಟ್ ಮಾಡುತ್ತಾ 'ಕೇರಳ ರಾಹುಲ್ ಗಾಂಧಿಯ ವಿಚಾರವಾದವನ್ನು ನಿರಾಕರಿಸಿದೆ. ಕೇರಳದಲ್ಲಿ ನೀವು ಎದುರಿಸುತ್ತಿರುವ ಪ್ರಮುಖ ವಿರೋಧಿ ಪಕ್ದಷದ ಜೊತೆ ಪಶ್ಚಿಮ ಬಂಗಾಳದಲ್ಲಿ ಮೈತ್ರಿ ಮಾಡಲು ಸಾಧ್ಯವಿಲ್ಲ. ರಾಹುಲ್ ಗಾಂಧಿ ವಿಫಲರಾಗಿದ್ದಾರೆ' ಎಂದಿದ್ದಾರೆ.