ಕೋಲ್ಕತಾ(ಏ.17): ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ರಾಜಕೀಯ ಕೇವಲ ಹೋರಾಟಕ್ಕೆ ಸೀಮಿತವಾಗಿಲ್ಲ, ಅದು ಭಯಾನಕ ಗಡಿ ದಾಟಿ ಮುಂದೆ ಸಾಗಿದೆ. ಇದು ಅಪಾಯಕಾರಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಅಸನ್ಸೋಲ್‌ನಲ್ಲಿ ಆಯೋಜಿಸಿದ ಚುನಾವಣಾ ಪ್ರಚಾರದಲ್ಲಿ ಮೋದಿ ಮಮತಾಗೆ ತಿರುಗೇಟು ನೀಡಿದ್ದಾರೆ.

ಆ್ಯಂಬುಲೆನ್ಸ್‌ಗಾಗಿ ದಾರಿ ಬಿಟ್ಟ ಪ್ರಧಾನಿ ಮೋದಿ ಹಾಗೂ ಬೆಂಗಾವಲು ಪಡೆ

ಮಮತಾ ಬ್ಯಾನರ್ಜಿಯ ಹಿಂಸಾಚಾರದ ರಾಜಕೀಯಕ್ಕೆ ಜನ ಬೇಸತ್ತಿದ್ದಾರೆ. ಹೀಗಾಗಿ ಅಭಿವೃದ್ಧಿಯ ಬಿಜೆಪಿಯತ್ತ ಬಂಗಾಳ ಜನ ಒಲವು ತೋರಿದ್ದಾರೆ. ಮೇ.02ರಂದು ಜನರು ಮಮತಾ ಬ್ಯಾನರ್ಜಿಗೆ ಮಾಜಿ ಮುಖ್ಯಮಂತ್ರಿ ಎಂಬ ಪಟ್ಟ ನೀಡಲಿದ್ದಾರೆ ಎಂದು ಮೋದಿ ಹೇಳಿದ್ದಾರೆ.

ಪುಟಾಣಿಗಳಲ್ಲಿ ಬಾಯಲ್ಲಿ ದೀದಿ..ಓ..ದೀದಿ ಟ್ರೆಂಡ್: ಬಂಗಾಳ ಚುನಾವಣೆ ಟೆನ್ಶನ್ ನಡುವೆ ಫನ್ನಿ ವಿಡಿಯೋ!

ಮಮತಾ ಬ್ಯಾನರ್ಜಿ ರಾಜಕಾರಣ, ಆಡಳಿತ ಅಭಿವೃದ್ಧಿ ಕಡೆ ಇಲ್ಲ ಅನ್ನೋದು ಈಗಾಗಲೇ ಸಾಬೀತಾಗಿದೆ. ಕಳೆದ 2 ಕೊರೋನಾ ಸಭೆಗೆ ಮಮತಾ ಬ್ಯಾನರ್ಜಿ ಗೈರಾಗಿದ್ದಾರೆ. ಎಲ್ಲಾ ಮುಖ್ಯಮಂತ್ರಿಗಳು ಈ ಸಭೆಯಲ್ಲಿ ಪಾಲ್ಗೊಂಡಿದ್ದರು. ಆದರೆ ಮಮತಾ ಬ್ಯಾನರ್ಜಿ ಗೈರಾಗಿದ್ದಾರೆ. ಇನ್ನು ನೀತಿ ಆಯೋಗದ ಸಭೆಯಿಂದಲೂ ಮಮತಾ ದೂರ ಉಳಿದಿದ್ದರು. ಇಷ್ಟೇ ಕ್ಲೀನ್ ಗಂಗಾ ಮಿಶನ್ ಸಭೆಯಿಂದಲೂ ಮಮತಾ ಬ್ಯಾನರ್ಜಿ ದೂರ ಉಳಿದಿದ್ದಾರೆ. ಈ ಮೂಲಕ ಅಸಡ್ಡೆ ಧೋರಣೆ ಹಾಗೂ ತಮ್ಮದೆ ಹಿಂಸಾಚಾರದ ರಾಜಕೀಯದಲ್ಲಿ ಮಾತ್ರ ಮಮತಾ ವಿಶ್ವಾಸವಿಟ್ಟಿದ್ದಾರೆ ಎಂದು ಮೋದಿ ಹೇಳಿದ್ದಾರೆ.

ಕೂಚ್‌ಬೆಹಾರ್ ಹಿಂಸಾಚಾರದ ಕುರಿತು ಮಮತಾ ಬ್ಯಾನರ್ಜಿ ಆಡಿಯೋ ಕ್ಲಿಪ್ ಎಲ್ಲರೂ ಕೇಳಿಸಿಕೊಂಡಿದ್ದೀರಿ. ಐವರ ಸಾವಿನಲ್ಲಿ ಮಮತಾ ಬ್ಯಾನರ್ಜಿ ಯಾವ ರೀತಿ ರಾಜಕೀಯ ಮಾಡುತ್ತಾರೆ ಅನ್ನೋ ಬಟಾ ಬಯಲಾಗಿದೆ. ಮಮತಾ ಆಡಳಿತಕ್ಕೆ ಬಂಗಾಳ ಜನತೆ ರೋಸಿ ಹೋಗಿದ್ದಾರೆ ಎಂದು ಮೋದಿ ಹೇಳಿದ್ದಾರೆ.