ನವದೆಹಲಿ(ಮಾ.21): ಪಶ್ಚಿಮ ಬಂಗಾಳ ಚುನಾವಣೆಗೆ ಪ್ರಧಾನಿ ನರೇಂದ್ರ ಮೋದಿ ರ್ಯಾಲಿ ಮೂಲಕ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಇದರ ನಡುವೆ ಬಿಜೆಪಿ ಬಂಗಾಳ ಚುನಾವಣೆಗೆ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಕೇಂದ್ರ ಗೃಹ ಸಚಿವ, ಬಿಜೆಪಿ ನಾಯಕ ಅಮಿತ್ ಶಾ ಪ್ರಣಾಳಿಕೆ ಬಿಡುಗಡೆ ಮಾಡಿದ್ದಾರೆ. ಪ್ರಣಾಳಿಕೆಯನ್ನು ಬಿಜೆಪಿ ಸಂಕಲ್ಪ ಪತ್ರ ಎಂದು ಕರೆದಿದೆ.

ದೀದಿ ನನ್ನ ತಲೆಗೆ ಕಾಲಿಟ್ಟರೂ ಬಂಗಾಳಿಗರ ಕನಸಿಗೆ ಒದಿಯಲು ಅವಕಾಶ ನೀಡುವುದಿಲ್ಲ; ಮೋದಿ!

ಪಶ್ಚಿಮ ಬಂಗಾಳದ ಸಮಗ್ರ ಅಭಿವೃದ್ಧಿ ದೃಷ್ಟಿಯಲ್ಲಿಟ್ಟುಕೊಂಡು ಬಿಜೆಪಿ ತನ್ನ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಪ್ರಮುಖವಾಹಿ ಮಹಿಳೆಯರ ಸುರಕ್ಷತೆ ಹಾಗೂ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಎಲ್‌ಕೆಜೆ ಯಿಂದ ಉನ್ನತ ವ್ಯಾಸಾಂಗದ ವರೆಗೆ ಮಹಿಳೆಯರಿಗೆ ಉಚಿತ ಶಿಕ್ಷಣ ನೀಡಲು ಬಿಜೆಪಿ ನಿರ್ಧರಿಸಿದೆ ಎಂದು ಅಮಿತ್ ಶಾ ಹೇಳಿದ್ದಾರೆ.

 

ಬಿಜೆಪಿಯಿಂದ ಸ್ಪರ್ಧಿಸ್ತಿರೋ ಬೆಂಗಾಲಿ ನಟಿ ಇವರೇ: ಶ್ರಬಂತಿ ಚಟರ್ಜಿ

ಒಂದು ಸಮಯದಲ್ಲಿ ಶೇಕಡಾ 30 ರಷ್ಟು ಕೈಗಾರಿಕೆ ಉತ್ಪನ್ನಗಳು ಪಶ್ಚಿಮ ಬಂಗಾಳದಿಂದ ಬರುತ್ತಿತ್ತು. ಇದೀಗ ಶೇಕಡಾ 3.5ಕ್ಕೆ ಇಳಿದೆ. ಕಳೆದ 70 ವರ್ಷದಲ್ಲಿ ಬಂಗಾಳದಲ್ಲಿ ಆಡಳಿತ ನಡೆಸಿದ ಪರಿ ಇದು. ಇದಕ್ಕಾಗಿ ಕೈಗಾರಿಗಳ ಪುನರ್ ಸ್ಥಾಪನೆ, ಇತರ ಕೈಗಾರಿಗಳನ್ನು ಪಶ್ಚಿಮ ಬಂಗಾಳದಲ್ಲಿ ಸ್ಥಾಪಿಸಲು ಅವಕಾಶ ಕಲ್ಪಿಸುವುದಾಗಿ ಅಮಿತ್ ಶಾ ಹೇಳಿದ್ದಾರೆ.

ಆರೋಗ್ಯಕ್ಕೆ ಪ್ರಮುಖ ಆದ್ಯತೆ ನೀಡಲಾಗುವುದು. ನಿಂತು ಹೋಗಿರುವ ಬಂಗಾಳದ ಅಭಿವೃದ್ಧಿ ಕಾರ್ಯಗಳು, ನೆನೆಗುದಿಗೆ ಬಿದ್ದಿರುವ ಯೋಜನೆಗಳನ್ನು ಪೂರ್ಣಗೊಳಿಸುವುದಾಗಿ ಶಾ ಹೇಳಿದ್ದಾರೆ. ಇದೇ ವೇಳೆ ಬಂಗಾಳದಲ್ಲಿ ಮೀನುಗಾರರಿಗೆ ರೈತರಿಗೆ ನೀಡುತ್ತಿರುವಂತೆ ವಾರ್ಷಿಕ 6,000 ರೂಪಾಯಿ ನೀಡಲಾಗುವುದು ಎಂದಿದ್ದಾರೆ.

ಪಶ್ಚಿಮ ಬಂಗಾಳವನ್ನು ಮಾದರಿ ರಾಜ್ಯ ಮಾಡಲು ಎಲ್ಲಾ ಪ್ರಯತ್ನಗಳನ್ನು ಬಿಜೆಪಿ ಮಾಡಲಿದೆ. ಈ ಕುರಿತ ಸಮಗ್ರ ಅಭಿವೃದ್ಧಿ ದೃಷ್ಟಿಯಲ್ಲಿಟ್ಟುಕೊಂಡು ಪ್ರಣಾಳಿಕೆ ಬಿಡುಗಡೆ ಮಾಡಿದ್ದೇವೆ ಎಂದು ಅಮಿತ್ ಶಾ ಹೇಳಿದ್ದಾರೆ.