ಕೋಲ್ಕತಾ(ಎ.03):  ಜೈ ಶ್ರೀ ರಾಮ್ ಘೋಷಣೆ ಕೇಳಿದರೆ ಮಮತಾ ಬ್ಯಾನರ್ಜಿ ಉರಿದು ಬೀಳುತ್ತಾರೆ. ಆದರೆ ವಾರಣಾಸಿಯಲ್ಲಿ ಹೆಜ್ಜೆ ಹೆಜ್ಜೆಗೂ ತಿಲಕವಿಟ್ಟ, ಜೈ ಶ್ರೀರಾಮ್ ಘೋಷಣೆ ಹೇಳುವ ಸಾಕಷ್ಟು ಜನ ಸಿಗುತ್ತಾರೆ. ಹಾಗಂತ ಮಮತಾ ಬ್ಯಾನರ್ಜಿ ವಾರಣಾಸಿ ಜನತೆಯ ಮೇಲೆ ಸಿಟ್ಟಾದರೆ, ಅವರು ನಿಮ್ಮನ್ನು ದೆಹಲಿಗೆ ಕಳುಹಿಸುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ರ‍್ಯಾಲಿಯಲ್ಲಿ ಕುಸಿದ ಕಾರ್ಯಕರ್ತನ ನೆರವಿಗೆ ತಮ್ಮ ವೈದ್ಯರ ತಂಡ ಕಳುಹಿಸಿದ ಮೋದಿ!

ವಾರಣಾಸಿಯಲ್ಲಿ ಮೋದಿಗೆ ಸೋಲು ಖಚಿತ ಎಂದಿದ್ದ ಮಮತಾಗೆ ಮೋದಿ ಇದೀಗ ಬಂಗಾಳದ ಉತ್ತರ 24 ಪರಗಣದಲ್ಲಿ ಆಯೋಜಿಸಿದ ರ್ಯಾಲಿಯಲ್ಲಿ ತಿರುಗೇಟು ನೀಡಿದ್ದಾರೆ. ಪಶ್ಚಿಮ ಬಂಗಾಳದಲ್ಲಿ  ಭಾರಿ ಬದಲಾವಣೆ ತರುವ ವಿಶ್ವಾಸದಲ್ಲಿರುವ ಬಿಜೆಪಿ ಒಂದರ ಮೇಲೊಂದರಂತೆ ಚುನಾವಣಾ ರ್ಯಾಲಿ ಆಯೋಜಿಸುತ್ತಿದೆ. ಇತ್ತ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಕೂಡ ಹಿಂದೆ ಬಿದ್ದಿಲ್ಲ. ಬಿಜೆಪಿ, ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಸೇರಿದಂತೆ ಕೇಂದ್ರ ಹಾಗೂ ರಾಜ್ಯ ನಾಯಕರ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಇದೀಗ ಮಮತಾ ಬ್ಯಾನರ್ಜಿ ಟೀಕೆಗೆ, ಮೋದಿ ತಿರುಗೇಟು ನೀಡಿದ್ದಾರೆ.

2ನೇ ಹಂತದ ಚುನಾವಣೆ: ಬಂಗಾಳದಲ್ಲಿ ಶೇ.80, ಅಸ್ಸಾಂನಲ್ಲಿ ಶೇ.75ರಷ್ಟು ಮತದಾನ!

ಹೊರಗಿನಿಂದ ಬಂದ ಬಿಜೆಪಿಗರು ಬಂಗಾಳದ ಸಂಸ್ಕೃತಿ, ಭಾಷೆ ನಾಶಮಾಡುತ್ತಾರೆ ಎಂದು ಮಮತಾ ಬ್ಯಾನರ್ಜಿ ರ್ಯಾಲಿಯಲ್ಲಿ ಆರೋಪಿಸಿದ್ದರು.  ಇದೀಗ ಮಮತಾ ಆರೋಪ, ಟೀಕೆಗೆ ಮೋದಿ ಉತ್ತರಿಸಿದ್ದಾರೆ. ಹೊರಗಿನವರು ಎಂದು ಹೇಳುತ್ತಲೇ ಮಮತಾ ಬ್ಯಾನರ್ಜಿ ಒಂದು ಕಾಲು ಹೊರಗಿಟ್ಟು ವಾರಣಾಸಿಯಲ್ಲಿ ಸ್ಪರ್ಧೆ ಕುರಿತು ಕನಸು ಕಾಣುತ್ತಿದ್ದಾರೆ ಎಂದು ಮೋದಿ ಹೇಳಿದರು.

ದೀದಿ ಈಗಲೇ ವಾರಣಾಸಿಯಲ್ಲಿ ಸ್ಪರ್ಧೆ ಕುರಿತು ಮಮತಾ ಮಾತನಾಡುತ್ತಿದ್ದಾರೆ. ಹಾಗಾದರೆ ನಂದಿಗ್ರಾಮದಲ್ಲಿ ಸೋಲು ಖಚಿತ ಎಂದಾಯ್ತು. ಹೀಗಾಗಿ ಲೋಕಸಭೆಯಲ್ಲಾದರೂ ಸ್ಥಾನ ಉಳಿಸಿಕೊಳ್ಳುವ ಯತ್ನದಲ್ಲಿದ್ದಾರೆ ಎಂದು ಮೋದಿ ಹೇಳಿದ್ದಾರೆ.