Asianet Suvarna News Asianet Suvarna News

ಗೂಗಲ್‌ ಮೀಟ್‌ನಲ್ಲಿ ಅತಿಥಿ ಸತ್ಕಾರ, ಜೊಮೆಟೋದಿಂದ ಊಟ: ಕೋವಿಡ್‌ ಕಾಲದಲ್ಲೊಂದು ವಿಭಿನ್ನ ವಿವಾಹ

  • ಗೂಗಲ್‌ ಮೀಟ್‌ನಲ್ಲಿ ಅತಿಥಿ ಸತ್ಕಾರ
  • ಜೊಮೆಟೋದಿಂದ ಅತಿಥಿಗಳಿಗೆ ಊಟ
  • ಕೋವಿಡ್‌ ಕಾಲದಲ್ಲೊಂದು ವಿಭಿನ್ನ ವಿವಾಹ
West Bengal couple Invite Guests On Google Meet, Food Via Zomato for their wedding akb
Author
Bangalore, First Published Jan 18, 2022, 8:11 PM IST

ಕೋಲ್ಕತ್ತಾ(ಜ.18): ಕೋವಿಡ್‌ ಸಾಂಕ್ರಾಮಿಕದಿಂದಾಗಿ ಹಲವಾರು ಮದುವೆಗಳು ಮುಂದೂಡಲ್ಪಟ್ಟಿದ್ದು, ಕೆಲವು ನಂತರದಲ್ಲಿ ನಿಂತೇ ಹೋದಂತಹ ಘಟನೆಗಳೆಲ್ಲಾ ನಡೆದಿದ್ದವು. ಆದರೆ ಈ ಎಲ್ಲಾ ಸಮಸ್ಯೆ ಬರದೆ ಮದುವೆ ಸುಗಮವಾಗಿ ನಡೆಯಲು ಜೋಡಿಯೊಂದು ತಂತ್ರಜ್ಞಾನದ ಮೊರೆ ಹೋಗಿದೆ. ಗೂಗಲ್‌ ಮೀಟ್‌ನ್ನು ಮದುವೆಗೂ ಬಳಸಿಕೊಳ್ಳಲು ಮುಂದಾಗಿರುವ ಜೋಡಿಯೊಂದು ವಿಭಿನ್ನವಾಗಿ ಮದುವೆಯಾಗಲು ಹೊರಟ್ಟಿದ್ದು, ತಮ್ಮ ಮದುವೆಗೆ ಗೂಗಲ್‌ ಮೀಟ್‌ ಮೂಲಕ ಅತಿಥಿಗಳನ್ನು ಆಹ್ವಾನಿಸಲಿದೆ. ಇವರ ಮದುವೆಯನ್ನು ಅತಿಥಿಗಳು ಗೂಗಲ್‌ಮೀಟ್‌ನಲ್ಲಿ ನೋಡಬಹುದಾಗಿದೆ. 

ಪಶ್ಚಿಮ ಬಂಗಾಳದ ಜೋಡಿ ಸಂದೀಪನ್ ಸರ್ಕಾರ್ (Sandipan Sarkar) ಹಾಗೂ ಅದಿತಿ ದಾಸ್ (Aditi Das) ಜನವರಿ 24 ರಂದು ಮದುವೆಯಾಗಲಿದ್ದಾರೆ.  ಇವರ ವಿವಾಹದಲ್ಲಿ ಭಾಗವಹಿಸಲು ಅತಿಥಿಗಳು ಗೂಗಲ್‌ ಮೀಟ್‌ನ್ನು ಬಳಸಬೇಕಾಗುತ್ತದೆ.  ಇದಲ್ಲದೆ, Zomato ಮೂಲಕ ಎಲ್ಲಾ ಅತಿಥಿಗಳಿಗೆ ಆಹಾರವನ್ನು ತಲುಪಿಸಲಾಗುತ್ತದೆ. ಕೋವಿಡ್ ನಿಯಮಗಳನ್ನು ಉಲ್ಲಂಘಿಸದೆಯೇ ಈ ಜೋಡಿ ತಮ್ಮ ಮದುವೆಗೆ 450 ಅತಿಥಿಗಳನ್ನು ಆಹ್ವಾನಿಸಿದ್ದಾರೆ.

Instagram Love Story: ಇನ್‌ಸ್ಟಾಗ್ರಾಮ್‌ನಲ್ಲಿ ಲವ್, ಆನ್‌ಲೈನ್‌ನಲ್ಲೇ ರಿಸೆಪ್ಶನ್

ನಾವು ಕಳೆದ ವರ್ಷವೇ ಮದುವೆಯಾಗಲು ಯೋಜಿಸುತ್ತಿದ್ದೆವು. ಆದರೆ ಸಾಂಕ್ರಾಮಿಕ ರೋಗದಿಂದ ಸಮಸ್ಯೆಯಾಯಿತು ಎಂದು ವರ ಸಂದೀಪನ್‌ ಸರ್ಕಾರ್ ಹೇಳಿದರು. ತಮ್ಮ ಅತಿಥಿಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ರಾಜ್ಯ ಸರ್ಕಾರವು ನಿಗದಿಪಡಿಸಿದ ಮದುವೆಗಳಿಗೆ 200 ಜನರ ಮಿತಿಗೆ ಅನುಗುಣವಾಗಿ, ಬುರ್ದ್ವಾನ್‌ನ(Burdwan)ಈ ಜೋಡಿ  ತಮ್ಮ ಮದುವೆಯನ್ನು ಗೂಗಲ್ ಮೀಟ್‌ನಲ್ಲಿ ಆಯೋಜಿಸಲು ನಿರ್ಧರಿಸಿದ್ದಾರೆ. ಅತಿಥಿಗಳು ತಮ್ಮ ಮನೆಯಿಂದಲೇ ಮದುವೆಯ ನೇರ ಪ್ರಸಾರವನ್ನು ಗೂಗಲ್‌ ಮೀಟ್‌ ಮೂಲಕ ನೋಡಬಹುದು. ಜೊತೆಗೆ ಅವರಿಗೆ ಜೊಮೆಟೋ(Zomato) ಮೂಲಕ ಕಳುಹಿಸಿದ ಮದುವೆ ಊಟವನ್ನು ಮನೆಯಲ್ಲೇ ಕುಳಿತು ತಿನ್ನಬಹುದು.

Before Marriage: ಮದುವೆ ಮುನ್ನ ಮಾಡಬೇಕಾದ ಆ ಎಂಟು ಕೆಲಸಗಳು!

ಕೋವಿಡ್ -19 ಸೋಂಕಿನಿಂದಾಗಿ ನಾಲ್ಕು ದಿನ ಆಸ್ಪತ್ರೆಯಲ್ಲಿ ಇರುವಂತಾದಾಗ ಅವರಿಗೆ ಈ ಯೋಚನೆ ಹೊಳೆಯಿತು. ನನ್ನ ಕುಟುಂಬದ ಸುರಕ್ಷತೆ ಮತ್ತು ನನ್ನ ಅತಿಥಿಗಳ ಸುರಕ್ಷತೆಯ ಬಗ್ಗೆ ನಾನು ಚಿಂತಿತನಾಗಿದ್ದೆ ಜನವರಿ 2 ರಿಂದ ಜನವರಿ 4 ರವರೆಗೆ ಕೋವಿಡ್  ಕಾರಣದಿಂದ ಆಸ್ಪತ್ರೆಗೆ ದಾಖಲಾದ ನಂತರ  ದೊಡ್ಡ ಸಮಾರಂಭಗಳನ್ನು ತಪ್ಪಿಸಲು ನಾನು ಪರಿಹಾರವನ್ನು ಯೋಚಿಸಲು ನಿರ್ಧರಿಸಿದೆ ಎಂದು ವರ 28 ವರ್ಷದ ಸರ್ಕಾರ್‌ ಹೇಳಿದರು.

ಕೇವಲ 100 ರಿಂದ 120 ಅತಿಥಿಗಳು ದೈಹಿಕವಾಗಿ ಮದುವೆಗೆ ಹಾಜರಾಗುತ್ತಾರೆ. ಆದರೆ 300 ಕ್ಕೂ ಹೆಚ್ಚು ಜನರು ಮದುವೆಯ ನೇರ ಪ್ರಸಾರವನ್ನು ವೀಕ್ಷಿಸುತ್ತಾರೆ. ಎಲ್ಲಾ ಆಹ್ವಾನಿತರು ಸಮಾರಂಭದ ಒಂದು ದಿನಕ್ಕೂ ಮೊದಲು ಪಾಸ್‌ವರ್ಡ್‌ಗಳೊಂದಿಗೆ ಮದುವೆಯನ್ನು ವೀಕ್ಷಿಸಲು ಗೂಗಲ್ ಮೀಟ್‌ ಲಿಂಕ್ ಅನ್ನು ಸ್ವೀಕರಿಸಲಿದ್ದಾರೆ ಎಂದು ಅವರು ಹೇಳಿದರು. 

ಇನ್ನು ಈ ವಿಚಾರವಾಗಿ ಮಾಧ್ಯಮದೊಂದಿಗೆ ಮಾತನಾಡಿದ Zomato ಅಧಿಕಾರಿಯೊಬ್ಬರು, ಕಂಪನಿಯು ಈ ಕ್ರಮವನ್ನು ಶ್ಲಾಘಿಸಿದೆ ಎಂದು ಹೇಳಿದರು. ಇದು ನಮಗೆ ತುಂಬಾ ಹೊಸ ಆಲೋಚನೆಯಾಗಿದೆ. ನಾನು ಕಂಪನಿಯ ಹಿರಿಯರೊಂದಿಗೆ ಮಾತನಾಡಿದೆ. ಅವರು ಅದನ್ನು ಸ್ವಾಗತಿಸಿದರು. ಈ ಮದುವೆಯ ಭೋಜನ ವಿತರಣೆಯನ್ನು ಮೇಲ್ವಿಚಾರಣೆ ಮಾಡಲು ನಾವು ಈಗಾಗಲೇ ತಂಡವನ್ನು ಸಿದ್ಧಪಡಿಸಿದ್ದೇವೆ. ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಇಂತಹ ಕ್ರಮವನ್ನು ನಾವು ಶ್ಲಾಘಿಸುತ್ತೇವೆ. ನಾವು ಈ ಕಾರ್ಯಕ್ರಮವನ್ನು ಪ್ರಚಾರ ಮಾಡಲು ಯೋಜಿಸುತ್ತಿದ್ದೇವೆ ಎಂದು ಅವರು ಹೇಳಿದರು.

Follow Us:
Download App:
  • android
  • ios