ಭಾಷಣದಲ್ಲಿ ಬರೀ ವೋಳು... ಮತ್ತೆ ನಗೆಪಾಟಲೀಗೀಡಾದ ಮಮತಾ ಬ್ಯಾನರ್ಜಿ
ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ಚಂದ್ರನ ಮೇಲೆ ಹೋಗಿದ್ದರು ಎಂದು ಹೇಳುವ ಮೂಲಕ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತೊಮ್ಮೆ ಎಡವಟ್ಟು ಮಾಡಿದ್ದಾರೆ.

ಕೋಲ್ಕತಾ: ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ಚಂದ್ರನ ಮೇಲೆ ಹೋಗಿದ್ದರು ಎಂದು ಹೇಳುವ ಮೂಲಕ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತೊಮ್ಮೆ ಎಡವಟ್ಟು ಮಾಡಿದ್ದಾರೆ. ಸೋಮವಾರ ಟಿಎಂಸಿ ವಿದ್ಯಾರ್ಥಿ ಸಂಘಟನೆ ಸಭೆಯಲ್ಲಿ ಮಾತನಾಡಿದ ಅವರು, ಇಂದಿರಾ ಗಾಂಧಿ ಚಂದ್ರನ ಮೇಲೆ ಹೋಗಿದ್ದಾಗ, ರಾಕೇಶ್ ಶರ್ಮಾ ಅವರಿಗೆ ಭಾರತ ಹೇಗೆ ಕಾಣುತ್ತದೆ ಎಂದು ಕೇಳಿದ್ದರು ಎಂದು ಹೇಳುವ ಮೂಲಕ ನಗೆಪಾಟಲಿಗೀಡಾಗಿದ್ದಾರೆ.
ಕಳೆದ ವಾರ ದೇಶದ ಮೊದಲ ಗಗನಯಾತ್ರಿ ರಾಕೇಶ್ ಶರ್ಮಾ ಅವರ ಬಗ್ಗೆ ಹೇಳುವಾಗ ಅವರ ಹೆಸರನ್ನು ರಾಕೇಶ್ ರೋಷನ್ (ಚಿತ್ರ ನಿರ್ದೇಶಕ) ಎಂದು ಹೇಳಿದ್ದರು. ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಚಂದ್ರಯಾನ3 ಯಶಸ್ಸಿಗೆ ಇಸ್ರೋವನ್ನು ಅಭಿನಂದಿಸುವ ಭರದಲ್ಲಿ, ಚಂದ್ರನ ಅಂಗಳಕ್ಕೆ ಮೊದಲಿಗೆ ಗಗನಯಾನಿ ರಾಕೇಶ್ ಶರ್ಮ (Rakesh Sharma) ಹೋಗಿದ್ದರು ಎನ್ನುವ ಬದಲಿಗ ರಾಕೇಶ್ ರೋಷನ್ ಎಂದಿದ್ದರು. ರಾಕೇಶ್ ರೋಷನ್ ಅವರು ನಟ ಹೃತಿಕ್ ರೋಷನ್ (Hrithik Roshan) ಅವರ ತಂದೆ. ಮತ್ತೊಂದೆಡೆ, ಬಿಹಾರದ ಮಾಜಿ ಸಚಿವ ಶಕ್ತಿ ಸಿಂಗ್ ಯಾದವ್ (Shakti Singh Yadav), ‘ಚಂದ್ರಯಾನದ ಯಶಸ್ವಿಗೆ ನಾನು ನಾಸಾವನ್ನು ಅಭಿನಂದಿಸುತ್ತೇನೆ ಎಂದು ಹೇಳಿದ್ದಾರೆ.
ಇಸ್ರೋ ಅಭಿನಂದಿಸಲು ಹೋಗಿ ನಗೆಪಾಟಲಿಗೀಡಾದ ಹಲವು ನಾಯಕರು: ನಾಸಾಗೆ ಅಭಿನಂದಿಸಿದ ಮಾಜಿ ಸಚಿವ
ಇತ್ತ ಉತ್ತರ ಪ್ರದೇಶದ ಎಸ್‌ಬಿಎಸ್‌ಪಿ ಪಕ್ಷದ ಮುಖಂಡ ಓಂಪ್ರಕಾಶ ರಾಜಭರ್ ಅಚರು (Omprakash Rajbhar Acharu) ಪತ್ರಕರ್ತರೊಂದಿಗಿನಿ ಮಾತಿನ ಅವಸರದಲ್ಲಿ ‘ಭೂಮಿಯ ಮೇಲೆ ಚಂದ್ರಯಾನ-3 ನೌಕೆಯ ಯಶಸ್ವಿ ಲ್ಯಾಂಡಿಂಗ್ ಅನ್ನು ಎಲ್ಲರೂ ಸ್ವಾಗತಿಸಬೇಕು’ ಎಂದಿದ್ದಾರೆ. ಇವರ ಈ ನುಡಿಗಳು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿವೆ.
ಮಮತಾ ಹೇಳಿಕೆ ಬೆಂಬಲಿಸಿದ ಸಿಎಂ ನಿತೀಶ್
ನಳಂದ: ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವು ಅವಧಿಪೂರ್ವ ಲೋಕಸಭೆ ಚುನಾವಣೆ ನಡೆಸಲು ತಯಾರಿ ನಡೆಸುತ್ತಿದೆ ಎಂಬ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿಕೆಯನ್ನು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಬೆಂಬಲಿಸಿದ್ದಾರೆ. ಸೋಮವಾರ ನಳಂದ ವಿವಿಯ ನೂತನ ಕ್ಯಾಂಪಸ್ ಉದ್ಘಾಟಿಸಿ ಮಾತನಾಡಿದ ಅವರು, ‘ವಿಪಕ್ಷಗಳ ಒಗ್ಗಟ್ಟಿಗೆ ಹೆದರಿ ಕೇಂದ್ರ ಎನ್‌ಡಿಎ ಸರ್ಕಾರವು ಅವಧಿಪೂರ್ವ ಚುನಾವಣೆ ನಡೆಸಬಹುದು ಎಂದು ನಾನು ಕಳೆದ ಏಳೆಂಟು ತಿಂಗಳಿನಿಂದ ಹೇಳುತ್ತಿದ್ದೇನೆ. ಆದ್ದರಿಂದ ಬಿಜೆಪಿಯನ್ನು ಸೋಲಿಸಲು ಎಲ್ಲ ಪಕ್ಷಗಳು ಒಗ್ಗೂಡಬೇಕು’ ಎಂದಿದ್ದಾರೆ. ‘ಬಿಜೆಪಿಯು ಅವಧಿಪೂರ್ವವಾಗಿ ಇದೇ ವರ್ಷದ ಡಿಸೆಂಬರ್ ಅಥವಾ ಜನವರಿಯಲ್ಲಿ ಚುನಾವಣೆಗೆ ಸಜ್ಜಾಗಿದ್ದು ಎಲ್ಲ ಕಾಪ್ಟರ್‌ಗಳನ್ನು ಬುಕ್ ಮಾಡಿದೆ. ನಮಗೆ ಕ್ಯಾಪ್ಟರ್ ಸಿಗುವುದಿಲ್ಲ’ ಎಂದು ಮಮತಾ ಹೇಳಿದ್ದರು.
ಮಣಿಪುರಕ್ಕೆ ಮರುಗಿದ ಮಮತಾಗೆ ಬಂಗಾಳದ ನಗ್ನ ಮೆರವಣಿಗೆ ಕಾಣಿಸ್ಲೇ ಇಲ್ಲ; ಕಹಿ ಘಟನೆ ಬಿಚ್ಚಿಟ್ಟ ಬಿಜೆಪಿ!