ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತೆಲೆಗೆ ಗಂಭೀರ ಗಾಯವಾಗಿದೆ. ಹಣೆಯ ಭಾಗಗಕ್ಕೆ ಗಾಯವಾಗಿದ್ದು, ತಕ್ಷಣವೆ ಎಸ್‌ಎಸ್‌ಕೆಎಂ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕೋಲ್ಕತಾ(ಮಾ.14) ಲೋಕಸಭಾ ಚುನಾವಣೆಗೆ ಭರ್ಜರಿ ತಯಾರಿ ನಡೆಸುತ್ತಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ದಾಖಲಾಗಿದ್ದಾರೆ. ಮನೆಯ ಆವರಣದಲ್ಲಿ ನಡೆದಾಡುತ್ತಿರುವ ವೇಳೆ ಆಯ ತಪ್ಪಿ ಬಿದ್ದು ಗಾಯವಾಗಿದೆ ಎಂದು ಹೇಳಲಾಗುತ್ತಿದೆ. ಬಿದ್ದ ರಭಸಕ್ಕೆ ಮಮತಾ ಹಣೆಗೆ ಗಂಭೀರವಾದ ಗಾಯವಾಗಿದೆ.ಗಾಯದ ಪ್ರಮಾಣ ಹೆಚ್ಚಾಗಿರುವ ಕಾರಣ ಹಣೆಗೆ ಸ್ಟಿಚ್ ಮಾಡಲಾಗಿದೆ ಎಂದು ಆಸ್ಪತ್ರೆ ಮೂಲಗಳು ಹೇಳಿವೆ.
ಕಾಲಿಘಾಟ್ ನಿವಾಸದಲ್ಲಿ ನಡೆದಾಡುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ. ನಡೆದಾಡುತ್ತಿದ್ದ ವೇಳೆ ಆಯತಪ್ಪಿ ಬಿದ್ದ ಮಮತಾ ಬ್ಯಾನರ್ಜಿ ಕಲ್ಲಿಗೆ ತಲೆ ಬಡಿದಿದೆ. ಹೀಗಾಗಿ ಹಣೆಯಲ್ಲಿ ತೀವ್ರ ಗಾಯವಾಗಿದೆ. ತಕ್ಷಣವೇ ಮಮತಾ ಬ್ಯಾನರ್ಜಿಯನ್ನು ಎಸ್ಎಸ್‌ಕೆಎಂ ಆಸ್ಪತ್ರೆಗೆ ದಾಖಲಿಸಿದ್ದಾರೆ. ರಕ್ತ ಸ್ರಾವವಾಗಿರುವ ಕಾರಣ ಮಮತಾ ಬ್ಯಾನರ್ಜಿ ಆಸ್ವಸ್ಥಗೊಂಡಿದ್ದಾರೆ. ಆದರೆ ಯಾರೂ ಆತಂಕ ಪಡುವು ಅಗತ್ಯವಿಲ್ಲ ಎಂದು ಆಸ್ಪತ್ರೆ ಮೂಲಗಳು ಹೇಳಿವೆ.
ಚುನಾವಣೆಗೆ 42 ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ ಟಿಎಂಸಿ, ಸಿಎಂ ಮಮತಾ ನಿರ್ಧಾರಕ್ಕೆ ಕಾಂಗ್ರೆಸ್ ಕೆಂಡ!
ಲೋಕಸಭಾ ಚುನಾವಣಾ ಹಿನ್ನಲೆಯಲ್ಲಿ ಸತತ ಕಾರ್ಯಕ್ರಮದಲ್ಲಿ ಪಾಲ್ಗೊಂಡು ದಕ್ಷಿಣ ಕೋಲ್ಕತಾದಲ್ಲಿರುವ ಕಾಲಿಘಾಟ್ ಬಳಿಯ ನಿವಾಸಕ್ಕೆ ಆಮಿಸಿದ ಮಮತಾ ಕೆಲ ಹೊತ್ತು ವಿಶ್ರಾಂತಿ ಪಡೆದಿದ್ದಾರೆ. ಬಳಿಕ ನಡೆದಾಡುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ ಎಂದು ಅವರ ಆಪ್ತ ಮೂಲಗಳು ಹೇಳಿವೆ. ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ ಸುಕಾಂತಾ ಮಜುಮ್ದಾರ್ ಶೀಘ್ರ ಚೇತರಿಕಿಗೆ ಪಾರ್ಥಿಸಿದ್ದಾರೆ.
ಈ ಕರಿತು ಟ್ವೀಟ್ ಮಾಡಿರುವ ಮುಜುಮ್ದಾರ್, ನಮ್ಮ ಪ್ರಾರ್ಥನೆ ನಿಮ್ಮೊಂದಿಗಿದೆ. ಶೀಘ್ರ ಚೇತರಿಸಿಕೊಳ್ಳಲು ಪ್ರಾರ್ಥಿಸುತ್ತೇನೆ, ಮತ್ತಷ್ಟು ಉತ್ತಮ ಆರೋಗ್ಯದೊಂದಿಗೆ ಆದಷ್ಟು ಬೇಗ ಮಮತಾ ಬ್ಯಾನರ್ಜಿ ತಮ್ಮ ಕೆಲಸ ಕಾರ್ಯಗಳಿಗೆ ಮರಳಲಿ ಎಂದು ಸುಕಾಂತ ಹೇಳಿದ್ದಾರೆ.
ಘಟನೆ ಕುರಿತು ಟ್ವೀಟ್ ಮಾಡಿರುವ ತಮಿಳುನಾಡು ಮುಖ್ಯಮಂತ್ರಿ ಎಂ ಸ್ಟಾಲಿನ್, ರಸ್ತೆ ಅಪಘಾತದ ಎಂದು ಉಲ್ಲೇಖಿಸಿದ್ದಾರೆ. ರಸ್ತೆ ಅಪಘಾತದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗಾಯಗೊಂಡಿರುವ ಮಾಹಿತಿ ತಿಳಿದು ಆತಂಕವಾಗಿದೆ. ಮಮತಾ ಬ್ಯಾನರ್ಜಿ ಶೀಘ್ರ ಚೇತರಿಸಿಕೊಳ್ಳಲು ಪ್ರಾರ್ಥಿಸುತ್ತೇನೆ ಎಂದು ಸ್ಟಾಲಿನ್ ಹೇಳಿದ್ದಾರೆ.
ಕೊನೆಗೂ ಸಂದೇಶ್‌ಖಾಲಿ ಆರೋಪಿ ಶೇಖ್ ಸಿಬಿಐ ವಶಕ್ಕೆ: ರೇಪ್ ಸಂತ್ರಸ್ತರಿಗೆ ಮೋದಿ ಸಂತೈಕೆ
