ಬಹುತೇಕ ರಾಜ್ಯದಲ್ಲಿ ಅನ್‌ಲಾಕ್, ಬಂಗಾಳದಲ್ಲಿ ಜುಲೈ 1ರ ವರೆಗೆ ಲಾಕ್‌ಡೌನ್ ವಿಸ್ತರಣೆ ಕೆಲ ವಿನಾಯಿತಿಗಳೊಂದಿಗೆ ಲಾಕ್‌ಡೌನ್ ಮುಂದುವರಿಸಿದ ಸಿಎಂ ಸಂಚಾರಕ್ಕೆ ಇ ಪಾಸ್ ಸೇರಿದಂತೆ ಹೊಸ ಮಾರ್ಗಸೂಚಿ ಬಿಡುಗಡೆ

ಕೋಲ್ಕತಾ(ಜೂ.14): ಕೊರೋನಾ 2ನೇ ಅಲೆ ನಿಯಂತ್ರಣಕ್ಕೆ ಹೇರಿದ್ದ ಲಾಕ್‌ಡೌನ್ ಒಂದೊಂದೆ ರಾಜ್ಯಗಳು ಅನ್‌ಲಾಕ್ ಮಾಡುತ್ತಿದೆ. ಕರ್ನಾಟಕ ಸೇರದಂತೆ ಕೆಲ ರಾಜ್ಯಗಳು ಕೆಲ ವಿನಾಯಿತಿಗಳೊಂದಿಗೆ ಲಾಕ್‌ಡೌನ್ ಮುಂದುವರಿಸಿದೆ. ಇದೀಗ ಪಶ್ಚಿಮ ಬಂಗಾಳ ಜುಲೈ 1ರ ವರೆಗೆ ಲಾಕ್‌ಡೌನ್ ವಿಸ್ತರಿಸಿದೆ.

ಅನ್‌ಲಾಕ್ ಎಫೆಕ್ಟ್, ಬೆಂಗಳೂರಿಗೆ ಜನರ ವಲಸೆ, ರೈಲ್ವೇ ನಿಲ್ದಾಣದಲ್ಲಿ ಜನದಟ್ಟಣೆ.

ಲಾಕ್‍‌ಡೌನ್ ವಿಸ್ತರಣೆ ಜೊತೆಗೆ ಕೆಲ ವಿನಾಯಿತಿಗಳನ್ನು ಪಶ್ಚಿಮ ಬಂಗಾಳದಲ್ಲಿ ನೀಡಲಾಗಿದೆ. ಸರ್ಕಾರಿ ಕಚೇರಿಗಳಲ್ಲಿ ಶೇಕಡಾ 25 ರಷ್ಟು ಮಂದಿ ಕೆಲಸ ನಿರ್ವಹಿಸಲು ಅನುಮತಿ ನೀಡಲಾಗಿದೆ. ಸಂಚಾರಕ್ಕೆ ಇ ಪಾಸ್ ಜಾರಿಮಾಡಲಾಗಿದೆ. ಮಂಜಾನೆ ನಡಿಗೆ, ವ್ಯಾಯಾಮಕ್ಕಾಗಿ ಬೆಳಗ್ಗೆ 6 ರಿಂದ 9 ಗಂಟೆವರೆಗೆ ಪಾರ್ಕ್ ತೆರೆಯಲಾಗುತ್ತದೆ. ಆದರೆ ಲಸಿಕೆ ಪಡೆದವರಿಗೆ ಮಾತ್ರ ಪ್ರವೇಶ.

ಮಾರುಕಟ್ಟೆ, ಮಂಡಿ ಸೇರಿದಂತೆ ಎಲ್ಲಾ ವ್ಯಾಪಾರ ವಹಿವಾಟು ಬೆಳಗ್ಗೆ 7 ರಿಂದ 11 ಗಂಟೆ ವರೆಗೆ ಅನುಮತಿ ನೀಡಲಾಗಿದೆ. ಮಾರಾಟ ಮಳಿಗೆ, ಅಂಗಡಿ ಮುಂಗಟ್ಟು ಬೆಳಗ್ಗೆ 11 ಗಂಟೆಯಿಂದ ಸಂಜೆ 6ರ ವರೆಗೆ ತೆರೆಯಲು ಅವಕಾಶ ಮಾಡಿಕೊಡಲಾಗಿದೆ.

ಲಾಕ್‌ಡೌನ್‌ ಸಡಿಲಿಕೆ: ಇನ್ನೂ ಇದೆ ಕೊರೋನಾ ಎಚ್ಚರ..!

ರೆಸ್ಟೋರೆಂಟ್ ಹಾಗೂ ಬಾರ್ ಮಧ್ಯಾಹ್ನ 12 ರಿಂದ ರಾತ್ರಿ 8 ಗಂಟೆ ವರೆಗೆ ತೆರೆಯಲು ಅವಕಾಶ ನೀಡಲಾಗಿದೆ. ಆದರೆ ಕೇವಲ 50 ಶೇಕಡಾ ಮಂದಿಗೆ ಮಾತ್ರ ಪ್ರವೇಶ ನೀಡಲು ಸೂಚಿಸಲಾಗಿದೆ.

ಶಾಲಾ ಕಾಲೇಜುಗಳು ಹಿಂದಿನಂತೆ ಮುಚ್ಚಿರುತ್ತದೆ. ಜನರ ಓಡಾಟಕ್ಕೆ ಬೆಳಗ್ಗೆ 9 ರಿಂದ ಸಂಜೆ 5 ಗಂಟೆ ವರೆಗೆ ಅವಕಾಶ ನೀಡಲಾಗಿದೆ.