ಬಿಜೆಪಿ ನಾಯಕನ ಹೆಂಡತಿಯ ಕಿಡ್ನ್ಯಾಪ್, ಗ್ಯಾಂಗ್‌ರೇಪ್: ಟಿಎಂಸಿ ವಿರುದ್ಧ ಗಂಭೀರ ಆರೋಪ!
* ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆ ವೇಳೆ ನಡೆದಿದ್ದ ಹಿಂಸಾಚಾರ
* ಹಿಂಸಾಚಾರದ ಬೆನ್ನಲ್ಲೇ ಟಿಎಂಸಿ ಕಾರ್ಯಕರ್ತರ ವಿರುದ್ಧ ಗಂಭೀರ ಆರೋಪ
* ಬಿಜೆಪಿ ನಾಯಕನ ಹೆಂಡತಿಯ ಕಿಡ್ನ್ಯಾಪ್, ಗ್ಯಾಂಗ್‌ರೇಪ್?
ಕೋಲ್ಕತ್ತಾ(ಆ.09): ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ನಡೆದ ಹಿಂಸಾಚಾರ ಪ್ರಕರಣದ ಕಾವು ತಣ್ಣಗಾಗುವ ಮೊದಲೇ ಸದ್ಯ ಬಿಜೆಪಿ ನಾಯಕನೊಬ್ಬ, ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ತನ್ನ ಪತ್ನಿಯ ಮೇಲೆ ಸಾಮೂಹಿಕ ಅತ್ಯಾಚಾರದ ನಡೆಸಿದ್ದಾರೆಂಬ ಗಂಭೀರ ಆರೋಪ ಮಾಡಿದ್ದಾರೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗಾಯಗೊಂಡ ಟಿಎಂಸಿ ಕಾರ್ಯಕರ್ತರನ್ನು ಭೇಟಿ ಮಾಡಲು ಕೋಲ್ಕತ್ತಾದ ಎಸ್‌ಎಸ್‌ಕೆಎಂ ಆಸ್ಪತ್ರೆಗೆ ತಲುಪಿದ ಸಂದರ್ಭದಲ್ಲಿ ಇಂತಹುದ್ದೊಂದು ಆರೋಪ ಕೇಳಿ ಬಂದಿದೆ. ಅಭಿಷೇಕ್ ಬ್ಯಾನರ್ಜಿ ಭಾನುವಾರ ತಡರಾತ್ರಿ ಈ ಗಾಯಗೊಂಡ ಕಾರ್ಮಿಕರನ್ನು ಕೋಲ್ಕತ್ತಾಗೆ ಕರೆತಂದಿದ್ದರು. ಅಭಿಷೇಕ್ ಬ್ಯಾನರ್ಜಿ ತ್ರಿಪುರಾದಲ್ಲಿ ರಾಜಕೀಯ ಕಾರ್ಯಕ್ರಮ ನಿಮಿತ್ತ ಆಗಮಿಸಿದ್ದ ವೇಳೆ ಅವರು ಗಾಯಗೊಂಡಿದ್ದರೆಂಬುವುದು ಉಲ್ಲೇಖನೀಯ.
ನನ್ನನ್ನು ಬಿಹಾರಿ ಗೂಂಡಾ ಎಂದ ಟಿಎಂಸಿ ಸಂಸದೆ: ಬಿಜೆಪಿ ಸಂಸದ ದುಬೆ
ಬಿಜೆಪಿ ಐಟಿ ಸೆಲ್ ಮುಖ್ಯಸ್ಥರ ಟ್ವೀಟ್
ಬಿಜೆಪಿಯ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಈ ಬಗ್ಗೆ ಟ್ವೀಟ್ ಮಾಡಿದ ಬಳಿಕ ಈ ವಿಚಾರ ಮತ್ತಷ್ಟು ಕಾವು ಪಡೆದಿದೆ. ಅಮಿತ್ ಮಾಳವೀಯ ತ್ಮ ಟಟ್ವೀಟ್‌ನಲ್ಲಿ ಬಂಗಾಳದ ಬಗ್ನಾನ್‌ನಲ್ಲಿ ಕುತುಬುದ್ದೀನ್ ಮಲಿಕ್ ಮತ್ತು ಇತರರ ನೇತೃತ್ವದ ಟಿಎಂಸಿ ಕಾರ್ಯಕರ್ತರು, ಬಿಜೆಪಿ ನಾಯಕನ 34 ವರ್ಷದ ಹೆಂಡತಿಯನ್ನು ಅತ್ಯಾಚಾರ ಮಾಡಿದ್ದಾರೆ. ಸ್ಥಳೀಯ ಪೊಲೀಸರು ಆರಂಭದಲ್ಲಿ ದೂರು ದಾಖಲಿಸಲು ನಿರಾಕರಿಸಿದ್ದಾರೆ. ಟಿಎಂಸಿ ತನ್ನ ವಿರೋಧಿಗಳ ಬಾಯಿ ಮುಚ್ಚಿಸಲು ಅತ್ಯಾಚಾರ ವಿಚಾರವನ್ನು ರಾಜಕೀಯ ಅಸ್ತ್ರವಾಗಿ ಬಳಸುತ್ತಿದೆ ಎಂದೂ ಬಿಜೆಪಿ ನಾಯಕ ಆರೋಪಿಸಿದ್ದಾರೆ.
ಬಂಗಾಳದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಬಿಜೆಪಿ ಆರೋಪ
ವಿಧಾನಸಭೆ ಚುನಾವಣೆಗೂ ಮುನ್ನವೇ, ಬಂಗಾಳದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವ ಬಗ್ಗೆ ಬಿಜೆಪಿ ಪ್ರಶ್ನೆಗಳನ್ನು ಎತ್ತುತ್ತಿತ್ತು ಎಂಬುವುದು ಉಲ್ಲೇಖನೀಯ. ಈ ವಿಷಯದ ಕುರಿತು ಬಿಜೆಪಿ ಒಂದು ವಾರದ 'ಪಶ್ಚಿಮಬಂಗ್ ಬಚಾವೋ'(ಪಶ್ಚಿಮ ಬಂಗಾಳ ಉಳಿಸಿ) ಎಂಬ ಅಭಿಯಾನವನ್ನು ಆರಂಭಿಸಿದೆ. ಅಂದರೆ, ಸೋಮವಾರದಿಂದ ಬಿಜೆಪಿ ಕಾರ್ಯಕರ್ತರು ತಮ್ಮ ತಮ್ಮ ಜಿಲ್ಲೆಗಳಲ್ಲಿ ಪಂಜಿನ ಮೆರವಣಿಗೆಗಳನ್ನು ಕೈಗೊಳ್ಳುತ್ತಾರೆ.
2024ರ ಮೇಲೆ ಕಣ್ಣು: ಜು.21ರ ದೀದಿ ಭಾಷಣ 7 ರಾಜ್ಯದಲ್ಲಿ ಪ್ರಸಾರ!
ತನಿಖಾ ತಂಡದ ಮೇಲೂ ದಾಳಿ
ಬಂಗಾಳ ಹಿಂಸಾಚಾರದ ತನಿಖೆಗಾಗಿ, ತನಿಖಾ ತಂಡವನ್ನು ರಚಿಸಲಾಗಿತ್ತು. ಆದರೆ ಜೂನ್ ತಿಂಗಳಲ್ಲಿ ಈ ತಂಡ ತನಿಖೆ ನಡೆಸುತ್ತಿದ್ದ ವೇಳೆ, ಅವರ ಮೇಲೂ ದಾಳಿ ನಡೆದಿತ್ತು. ಹೀಗಿದ್ದರೂ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಕೊಲ್ಕತ್ತಾ ಹೈಕೋರ್ಟ್‌ನ ಐವರು ನ್ಯಾಯಾಧೀಶರ ಪೀಠಕ್ಕೆ ತನ್ನ ವರದಿಯನ್ನು ಸಲ್ಲಿಸಿತ್ತು. ಇದರಲ್ಲಿ ತಮ್ಮ ಮೇಲಿನ ಹಲ್ಲೆ ಬಗ್ಗೆಯೂ ಉಲ್ಲೇಖಿಸಲಾಗಿತ್ತು.