* ತೃಣಮೂಲ ಕಾಂಗ್ರೆಸ್‌ನ ಸಂಸದೆ ಮಹುವಾ ಮೊಯಿತ್ರಾ ವಿರುದ್ಧ ಆರೋಪ* ‘ನನ್ನನ್ನು ಬಿಹಾರಿ ಗೂಂಡ’ ಎಂದು ಬುಧವಾರ ನಡೆದ ಐಟಿ ಸಭೆಯಲ್ಲಿ ಕೆರದಿದ್ದಾರೆ ಇದಕ್ಕೆ ಅವರು ಕ್ಷಮೆ ಯಾಚಿಸಬೇಕು ಎಂದು ಬಿಜೆಪಿ ಸಂಸದ * ಲೋಕಸಭೆಯಲ್ಲಿ ಶಿಕಾಂತ್‌ ದುಬೆ ಆರೋಪ

ನವದೆಹಲಿ(ಜು.30): ತೃಣಮೂಲ ಕಾಂಗ್ರೆಸ್‌ನ ಸಂಸದೆ ಮಹುವಾ ಮೊಯಿತ್ರಾ, ‘ನನ್ನನ್ನು ಬಿಹಾರಿ ಗೂಂಡ’ ಎಂದು ಬುಧವಾರ ನಡೆದ ಐಟಿ ಸಭೆಯಲ್ಲಿ ಕೆರದಿದ್ದಾರೆ ಇದಕ್ಕೆ ಅವರು ಕ್ಷಮೆ ಯಾಚಿಸಬೇಕು ಎಂದು ಬಿಜೆಪಿ ಸಂಸದ ನಿಶಿಕಾಂತ್‌ ದುಬೆ ಗುರುವಾರ ಲೋಕಸಭೆಯಲ್ಲಿ ಹೇಳಿದರು.

‘ಇದು ಸಂಸದನಾಗಿ ನನಗೆ 13ನೇ ವರ್ಷ, ಟಿಎಂಸಿಯ ಹೆಣ್ಣುಮಗಳೊಬ್ಬಳು ನನ್ನನ್ನು ಬಿಹಾರಿ ಗೂಂಡಾ ಎಂದು ಕರೆದಿದ್ದಾಳೆ. ಇಂತಹವುಗಳನ್ನು ಈ ಹಿಂದೆ ನಾನು ನೋಡಿರಲಿಲ್ಲ. ದೇಶದ ಅಭಿವೃದ್ಧಿಗಾಗಿ ಕಷ್ಟಪಟ್ಟು ಕೆಲಸ ಕಾರ್ಮಿಕರಂತೆ ಕೆಲಸ ಮಾಡುವುದು ನಮ್ಮ ತಪ್ಪೇ? ಹಿಂದಿ ಮಾತಾಡುವವರನ್ನು ಕಂಡರೆ ಟಿಎಂಸಿ ಸಂಸದರಿಗೆ ಆಗುವುದಿಲ್ಲ. ಅವರು ನನ್ನನ್ನು ಬಿಹಾರಿ ಗೂಂಡಾ ಎಂದು ಕರೆದಿರುವುದು ಬಿಹಾರದ ಜನರಿಗೆ ಮಾಡಿರುವ ಅವಮಾನ’ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಮೊಯಿತ್ರಾ ‘ಬುಧವಾರ ಕೋರಂ ಇಲ್ಲದ ಕಾರಣ ಐಟಿ ಸಭೆ ನಡೆದಿಲ್ಲ. ಹಾಗಾಗಿ ಅವರನ್ನು ಗೂಂಡಾ ಎಂದು ಕರೆದಿರುವ ಸಾಧ್ಯತೆಯೇ ಇಲ್ಲ’ ಎಂದು ಹೇಳಿದ್ದಾರೆ.