Asianet Suvarna News Asianet Suvarna News

2024ರ ಮೇಲೆ ಕಣ್ಣು: ಜು.21ರ ದೀದಿ ಭಾಷಣ 7 ರಾಜ್ಯದಲ್ಲಿ ಪ್ರಸಾರ!

* 2024ರ ಲೋಕಸಭೆ ಚುನಾವಣೆಗಾಗಿ ಟಿಎಂಸಿ ಭರ್ಜರಿ ಸಿದ್ಧತೆ

* 2024ರ ಮೇಲೆ ಕಣ್ಣು: ಜು.21ರ ದೀದಿ ಭಾಷಣ 7 ರಾಜ್ಯದಲ್ಲಿ ಪ್ರಸಾರ

 * ಬಿಜೆಪಿಯ ಅಬ್ಬರದ ನಡುವೆಯೂ ಬಂಗಾಳದಲ್ಲಿ ಅಧಿಕಾರ ಉಳಿಸಿಕೊಳ್ಳಲು ಯಶಸ್ವಿಯಾಗಿರುವ ಟಿಎಂಸಿ ಮುಖ್ಯಸ್ಥೆ ಮಮತಾ

July 21 speech Mamata Banerjee seeks to be heard beyond Bengal pod
Author
Bangalore, First Published Jul 19, 2021, 9:36 AM IST

 

ಕೋಲ್ಕತಾ(ಜು.19): ಬಿಜೆಪಿಯ ಅಬ್ಬರದ ನಡುವೆಯೂ ಬಂಗಾಳದಲ್ಲಿ ಅಧಿಕಾರ ಉಳಿಸಿಕೊಳ್ಳಲು ಯಶಸ್ವಿಯಾಗಿರುವ ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ, ಇದೀಗ ತಮ್ಮ ಚಿತ್ತವನ್ನು 2024ರ ಲೋಕಸಭೆ ಚುನಾವಣೆ ಮೇಲೆ ಹರಿಸಿದ್ದಾರೆ. ಇದರ ಸ್ಪಷ್ಟಸುಳಿವು ಎನ್ನುವಂತೆ, ಜು.21ರ ತಾವು ಮಾಡುವ ಹುತಾತ್ಮರ ದಿನದ ಭಾಷಣವನ್ನು 7 ರಾಜ್ಯಗಳಲ್ಲಿ ನೇರ ಪ್ರಸಾರ ಮಾಡಲು ದೀದಿ ಮುಂದಾಗಿದ್ದಾರೆ.

ಜು.21ರ ಭಾಷಣವನ್ನು ಬಂಗಾಳ, ತಮಿಳುನಾಡು, ದೆಹಲಿ, ಪಂಜಾಬ್‌, ತ್ರಿಪುರ ಮತ್ತು ಮುಂದಿನ ವರ್ಷ ವಿಧಾನಸಭೆ ಚುನಾವಣೆ ಎದುರಿಸಲಿರುವ ಗುಜರಾತ್‌ ಮತ್ತು ಉತ್ತರ ಪ್ರದೇಶಗಳಲ್ಲೂ ಆಯಾ ರಾಜ್ಯಗಳ ಭಾಷೆಗಳಿಗೆ ತರ್ಜುಮೆ ಮಾಡಿ ಪ್ರಸಾರ ಮಾಡಲು ಟಿಎಂಸಿ ಸಿದ್ಧತೆ ಆರಂಬಿಸಿದೆ. ತನ್ಮೂಲಕ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ತಮಗೆ ಭಾರೀ ದೊಡ್ಡ ಸವಾಲು ಒಡ್ಡಿದ್ದ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್‌ ಶಾ ಅವರಿಗೆ ತಮ್ಮ ತವರು ರಾಜ್ಯ ಗುಜರಾತ್‌ನಲ್ಲೇ ತಿರುಗೇಟು ನೀಡಲು ಟಿಎಂಸಿ ಯೋಜನೆ ರೂಪಿಸಿದೆ.

1993ರಲ್ಲಿ ಮತಪತ್ರಗಳನ್ನು ಹೊಂದಿದವರಿಗೆ ಮಾತ್ರವೇ ಮತದಾನ ಮಾಡಲು ಅವಕಾಶ ನೀಡಬೇಕು ಎಂದು ಕೋರಿ ನಡೆದ ಪ್ರತಿಭಟನೆ ವೇಳೆ ಪೊಲೀಸರು ನಡೆಸಿದ ಗುಂಡಿನ ದಾಳಿಯಲ್ಲಿ 13 ಮಂದಿ ಸಾವಿಗೀಡಾಗಿದ್ದರು. ಈ ಘಟನೆ ನಡೆದ ಜು.21 ಅನ್ನು ಟಿಎಂಸಿ ಹುತಾತ್ಮ ದಿನವನ್ನಾಗಿ ಆಚರಿಸುತ್ತದೆ.

Follow Us:
Download App:
  • android
  • ios