ಕೊಲ್ಲಿ ಯುದ್ಧದಿಂದ ಎಲ್‌ಪಿಜಿ ಪೂರೈಕೆಯಲ್ಲಿ ವ್ಯತ್ಯಯವಾದ ಕಾರಣ, ಕೇಂದ್ರ ಸರ್ಕಾರವು ಇಂಡಕ್ಷನ್ ಸ್ಟವ್ ಅದಕ್ಕೆ ಬೇಕಾದ ಪಾತ್ರೆಗಳ ಉತ್ಪಾದನೆಗೆ ಪ್ರೋತ್ಸಾಹ ನೀಡಲು ನಿರ್ಧರ ದೇಶದಲ್ಲಿ ವಿದ್ಯುತ್ ಆಧಾರಿತ ಅಡುಗೆ ಉಪಕರಣಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಉತ್ಪಾದನೆ ಹೆಚ್ಚಿಸುವ ಕುರಿತು ಚರ್ಚೆ ನಡೆದಿದೆ.
- ಗ್ಯಾಸ್‌ಟ್ರಬಲ್ ಹಿನ್ನೆಲೆ, ಕೇಂದ್ರದಿಂದ ಈ ನಿರ್ಧಾರ
ನವದೆಹಲಿ (ಏ.4): ಕೊಲ್ಲಿ ಯುದ್ಧದಿಂದಾಗಿ ಎಲ್‌ಪಿಜಿ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಇಂಡಕ್ಷನ್ ಸ್ಟವ್, ಅದಕ್ಕೆ ಪೂರಕವಾದ ಪಾತ್ರೆಗಳ ಉತ್ಪಾದನೆ ಹೆಚ್ಚಳಕ್ಕೆ ಪ್ರೋತ್ಸಾಹ ನೀಡಲು ಮುಂದಾಗಿದೆ. ಗ್ಯಾಸ್ ಟ್ರಬಲ್ ಹಿನ್ನೆಲೆಯಲ್ಲಿ ದೇಶಾದ್ಯಂತ ಈ ರೀತಿಯ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆ ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ.
ಇರಾನ್ ಯುದ್ಧದಿಂದಾಗಿ ಎಲ್‌ಪಿಜಿ ಪೂರೈಕೆಯಲ್ಲಿ ಸಮಸ್ಯೆಯಾಗಿತ್ತು. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ವಿದ್ಯುತ್ ಆಧಾರಿತ ಇಂಡಕ್ಷನ್ ಸ್ಟವ್, ಅದಕ್ಕೆ ಪೂರಕವಾದ ಪಾತ್ರೆಗಳತ್ತ ಮುಖ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕಳೆದ ಕೆಲ ದಿನಗಳಿಂದ ದೇಶದಲ್ಲಿ ಇಂಡಕ್ಷನ್ ಕುಕ್ಕರ್‌ಗಳು,ಕಿಟೆಲ್‌ಗಳು, ಪಾತ್ರೆಗಳ ಮಾರಾಟ ಹೆಚ್ಚಾಗಿದೆ.
ಇದರ ನಡುವೆಯೇ ವಿದ್ಯುತ್ ಇಲಾಖೆ ಕಾರ್ಯದರ್ಶಿ ಪಂಕಜ್ ಅಗರ್ವಾಲ್ ಸೇರಿ ಹಿರಿಯ ಅಧಿಕಾರಿಗಳ ಜತೆಗೆ ಸಭೆ ನಡೆಸಿದ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಅವರು ಈ ವಿಚಾರವಾಗಿ ಚರ್ಚೆ ನಡೆಸಿದರು. ಇಂಡಕ್ಷನ್ ಕುಕ್ಕರ್‌ಗಳು ಹಾಗೂ ಅದಕ್ಕೆ ಪೂರಕವಾದ ಪಾತ್ರೆಗಳ ಉತ್ಪಾದನೆಯನ್ನು ಯಾವ ರೀತಿ ಹೆಚ್ಚಳ ಮಾಡಬಹುದು ಎಂಬ ಕುರಿತು ಸಮಾಲೋಚನೆ ನಡೆಸಿದರು.


