ಮಳೆಗಾಲ ಮದುವೆ ಸುಧಾರಿಸುವುದು ಬಲು ಕಷ್ಟದ ಕೆಲಸ ಹೀಗಾಗಿ ಬಹುತೇಕರು ಬೇಸಿಗೆಯಲ್ಲೇ ಮದುವೆ ಮುಂತಾದ ಶುಭಕಾರ್ಯಗಳನ್ನು ಮುಗಿಸಿ ಬಿಡುತ್ತಾರೆ. ಆದಾಗ್ಯೂ ಮಳೆಯ ಮದುವೆ ದಿಬ್ಬಣ ಸಾಗುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ಮನೆಯಲ್ಲಿ ಅಥವಾ ಕುಟುಂಬದಲ್ಲಿ ಮದುವೆಗಳಿದ್ದರೆ ಬೇಸಿಗೆಯಲ್ಲೇ ಮಾಡಲು ನಿರ್ಧರಿಸುವುದು ಸಾಮಾನ್ಯ. ಇದಕ್ಕೆ ಕಾರಣ ಮುಂದೆ ಮಳೆಗಾಲವಿರುವುದು ಹಾಗೂ ಮಳೆಗಾಲ ಮದುವೆ ಸುಧಾರಿಸುವುದು ಬಲು ಕಷ್ಟದ ಕೆಲಸ ಹೀಗಾಗಿ ಬಹುತೇಕರು ಬೇಸಿಗೆಯಲ್ಲೇ ಮದುವೆ ಮುಂತಾದ ಶುಭಕಾರ್ಯಗಳನ್ನು ಮುಗಿಸಿ ಬಿಡುತ್ತಾರೆ. ಆದಾಗ್ಯೂ ಮಳೆಯ ಮದುವೆ ದಿಬ್ಬಣ ಸಾಗುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ಹೇಳಿ ಕೇಳಿ ಮದುವೆ ಎಂಬುದು ಬಂಧುಗಳು ಸ್ನೇಹಿತರು ಕುಟುಂಬಸ್ಥರು ನೆಂಟರು ಎಲ್ಲರೂ ಸೇರಿ ಸಂಭ್ರಮಿಸಲು ಇರುವ ಒಂದು ಅಪೂರ್ವ ಅವಕಾಶ. ಆ ಕ್ಷಣ ನಡೆಯುವ ತಮಾಷೆ ಹಾಗೂ ಸ್ವಾರಸ್ಯಗಳಿಗೆ ಲೆಕ್ಕವಿರುವುದಿಲ್ಲ. ಆದಾಗ್ಯೂ ಮಳೆ ಎಲ್ಲಾ ಸಂಭ್ರಮದ ನಡುವೆ ಮಳೆ ಬಂದರೆ ಎಲ್ಲವೂ ನೀರ ಮೇಲಿನ ಹೋಮದಂತಾಗುತ್ತದೆ. ನೆನೆದಂತೆ ಸಂಭ್ರಮಿಸಲಾಗುವುದಿಲ್ಲ. ಅದರೂ ಇಲ್ಲೊಂದು ಮದುವೆಯಲ್ಲಿ (wedding) ಸೇರಿದ ಜನ ಮಳೆಯನ್ನು ಲೆಕ್ಕಿಸದೇ ಬಿಂದಾಸ್ ಆಗಿ ಡಾನ್ಸ್ (Dance) ಮಾಡುತ್ತಾ ಮದುವೆ ದಿಬ್ಬಣವನ್ನು ಎಂಜಾಯ್ ಮಾಡುತ್ತಿದ್ದಾರೆ.
ಇದರ ವಿಡಿಯೋವನ್ನು ಭಾರತೀಯ ಆಡಳಿತ ಸೇವೆ ಅಧಿಕಾರಿ ದೀಪಾಂಶು ಕಬ್ರಾ (Deepanshu Kabra) ಅವರು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋ ಹೇಗಿದೆ ಎಂದರೆ ಎಂತಹದ್ದೇ ಸಂದರ್ಭ ಬಂದರೂ ಅಂದುಕೊಂಡ ಕಾರ್ಯ ಮಾತ್ರ ಯಾವುದೇ ಅಡ್ಡಿ ಬಂದರೂ ನಿಲ್ಲಬಾರದು ಎಂದು ಹೇಳುವಂತಿದೆ. ಮದುವೆ ದಿಬ್ಬಣ ರಸ್ತೆಯಲ್ಲಿ ಹೋಗುತ್ತಿರಬೇಕಾದರೆ ಜೋರಾಗಿ ಮಳೆ ಸುರಿಯಲು ಆರಂಭಿಸುತ್ತದೆ. ಆದರೆ ಇದಕ್ಕೆ ತಲೆಕೆಡಿಸಿಕೊಳ್ಳದ ಮದುವೆಗೆ ಬಂದವರು ದೊಡ್ಡದಾದ ಟರ್ಪಲ್ ಅನ್ನು ತಮ್ಮ ತಲೆ ಮೇಲೆ ಹಿಡಿದುಕೊಂಡು ದಿಬ್ಬಣದೊಂದಿಗೆ ಹೆಜ್ಜೆ ಹಾಕುತ್ತಿದ್ದಾರೆ. ಮುಂದೆ ವಧು ಅಥವಾ ವರ ಇದ್ದ ಅಲಂಕಾರಿತ ವಾಹನ ಮುಂದೆ ನಿಧಾನವಾಗಿ ಸಾಗುತ್ತಿದ್ದರೆ ಹಿಂದೆ ಮೆರವಣಿಗೆ ಸಾಗುವವರು ತಲೆ ಮೇಲೆ ಪ್ಲಾಸ್ಟಿಕ್ ಟರ್ಪಲ್‌ನೊಂದಿಗೆ ಸಾಗುತ್ತಿದ್ದಾರೆ.
ಇದನ್ನು ಓದಿ:ಬ್ಯೂಟಿಪಾರ್ಲರ್ ಮಹಿಮೆ: 30ರ ತರುಣಿ ಎಂದು 54ರ ಅಂಟಿಯ ಮದುವೆಯಾಗಿ ಮೋಸ ಹೋದ ವರ
ನಾನು ಈ ರೀತಿಯ ಮದುವೆ ದಿಬ್ಬಣವನ್ನು ಹಿಂದೆಂದೂ ನೋಡಿಲ್ಲ ಎಂದು ಐಎಎಸ್ ಅಧಿಕಾರಿ ದೀಪಾಂಶು ಕಬ್ರಾ ಬರೆದುಕೊಂಡಿದ್ದಾರೆ. ಬರೀ ಸಾಗುತ್ತಿರುವುದು ಮಾತ್ರವಲ್ಲ. ಮಳೆಯಲ್ಲಿ ದಿಬ್ಬಣ ಹೊರಟವರು ಸಖತ್ ಡಾನ್ಸ್ ಕೂಡ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಈ ವಿಡಿಯೋ ಯಾವಾಗಿನದ್ದು ಎಂಬ ಉಲ್ಲೇಖವಿಲ್ಲ ಆದರೆ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿದ್ದಂತೂ ನಿಜ. ಇದು ಕೆಲವರಿಗೆ ಇದು ಮೀರಾ ನಾಯರ್ ಅವರ ಪ್ರಸಿದ್ಧ ಚಲನಚಿತ್ರ ಮಾನ್ಸೂನ್ ವೆಡ್ಡಿಂಗ್ ಅನ್ನು ನೆನಪಿಸುತ್ತಿದೆ. ಇತರರು ಮದುವೆಯ ಸುತ್ತಲಿನ ಉತ್ಸಾಹ ದೇಸಿ ಜನರು ಮಾತ್ರ ಅರ್ಥಮಾಡಿಕೊಳ್ಳಬಹುದು ಎಂದು ಕಾಮೆಂಟ್ ಮಾಡಿದ್ದಾರೆ.
ಇದನ್ನು ಓದಿ: ಮಳೆಗಾಗಿ ಗೊಂಬೆಗಳ ಮದುವೆ ಮಾಡುವ ಸಂದರ್ಭದಲ್ಲಿ ಬಂದ ಮೇಘರಾಜ
ಕರಾವಳಿ ಜಿಲ್ಲೆಗಳಲ್ಲಿ ಮಳೆ ಅಬ್ಬರ ಜೋರಾಗಿದ್ದು, ಅಲ್ಲಿ ಜನಜೀವನ ಅಸ್ತವ್ಯಸ್ಥವಾಗಿದೆ. ಆದ್ರೆ, ಕಲ್ಯಾಣ ಕರ್ನಾಟಕದಲ್ಲಿ ಮಳೆ ನಿರೀಕ್ಷಿಸಿದಷ್ಟು ಮಳೆಯಾಗಿಲ್ಲ. ಇದರಿಂದ ಬಿತ್ತಿದ ಸೂರ್ಯಕಾಂತಿ, ಜೋಳ ಒಣಗುತ್ತಿವೆ. ಅದರಲ್ಲೂ ಗಡಿ ಜಿಲ್ಲೆ ಬೀದರ್‌ನಲ್ಲಿ ಮಳೆಯೇ ಇಲ್ಲ. ಹೀಗಾಗಿ ವರುಣ ಕೃಪೆಗಾಗಿ ಗಂಡು-ಹೆಣ್ಣು ಗೊಂಬೆ ಜೋಡಿಗೆ ಜನ ಮದುವೆ ಮಾಡಿದ್ದಾರೆ. ಬೀದರ್ ಜಿಲ್ಲೆಯ ಚಿಟ್ಟಗುಪ್ಪಾ ತಾಲೂಕಿನ ಮೀನಕೇರಾ ಗ್ರಾಮದಲ್ಲಿ ಉತ್ತಮ ಮಳೆಯಾಗಲೆಂದು ಗ್ರಾಮದ ಜನರು ಸೇರಿ ವಿಜೃಂಭಣೆಯಿಂದ ಗೊಂಬೆಗಳ ಮದುವೆ ಮಾಡಿದ್ದಾರೆ. ಈ ಗ್ರಾಮದಲ್ಲಿ ಮಳೆಗಾಗಿ ಮದುವೆಯ ಸಡಗರವಿತ್ತು, ಮದುವೆಯ ಸಂದರ್ಭದಲ್ಲಿ ಮಾಡಬೇಕಾದ ಎಲ್ಲ ಕೈಂಕರ್ಯಗಳು ನಡೆಸಲಾಯಿತು. ಗ್ರಾಮದ ಎಲ್ಲರೂ ಸಂಭ್ರಮದಿಂದ ಮದುವೆಯಲ್ಲಿ ಪಾಲ್ಗೊಂಡಿದ್ದರು.