Maharashtra Politics: ಶಿವಸೇನೆ- ಬಿಜೆಪಿ ಹಿಂದುತ್ವ ಜಟಾಪಟಿ

ಶಿವಸೇನೆ-ಬಿಜೆಪಿ ನಡುವೆ ವಾಕ್ಸಮರ ತೀವ್ರಗೊಂಡಿದೆ. ರಾಜಕೀಯ ಲಾಭಕ್ಕೆ ಬಿಜೆಪಿ ಹಿಂದುತ್ವ ಬಳಕೆ ಮಾಡಿಕೊಂಡಿದೆ ಎಂಬ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಆರೋಪಕ್ಕೆ ತಿರುಗೇಟು ನೀಡಿರುವ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌, ನಾವು ರಾಮ ಜನ್ಮಭೂಮಿಗಾಗಿ ಗುಂಡೇಟು ತಿಂದೆವು.     

We Took The Bullets where were you Devendra Fadnavis responds to Uddhav Thackerays Hindutva remarks gvd

ಮುಂಬೈ (ಜ.25): ಶಿವಸೇನೆ-ಬಿಜೆಪಿ (Shivsena-BJP) ನಡುವೆ ವಾಕ್ಸಮರ ತೀವ್ರಗೊಂಡಿದೆ. ರಾಜಕೀಯ ಲಾಭಕ್ಕೆ ಬಿಜೆಪಿ ಹಿಂದುತ್ವ ಬಳಕೆ ಮಾಡಿಕೊಂಡಿದೆ ಎಂಬ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ (Uddhav Thackeray) ಆರೋಪಕ್ಕೆ ತಿರುಗೇಟು ನೀಡಿರುವ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ (Devendra Fadnavis), ‘ನಾವು ರಾಮ ಜನ್ಮಭೂಮಿಗಾಗಿ ಗುಂಡೇಟು ತಿಂದೆವು. ಆಗ ನೀವೆಲ್ಲಿದ್ದಿರಿ?’ ಎಂದು ಪ್ರಶ್ನಿಸಿದ್ದಾರೆ.

ಭಾನುವಾರ ಸಮಾರಂಭವೊಂದರಲ್ಲಿ ಮಾತನಾಡಿದ್ದ ಶಿವಸೇನೆ, ‘ಮಹಾರಾಷ್ಟ್ರ ನಮಗೆ. ರಾಷ್ಟ್ರ ರಾಜಕಾರಣ ನಿಮಗೆ ಎಂದು ಬಿಜೆಪಿ ಜತೆ ನಾವು ಒಪ್ಪಂದ ಮಾಡಿಕೊಂಡಿದ್ದೆವು. ಆದರೆ ಮಹಾರಾಷ್ಟ್ರದಲ್ಲಿ ನಮಗೆ ಬಿಜೆಪಿ ಅಧಿಕಾರ ಬಿಟ್ಟುಕೊಡಲಿಲ್ಲ. ಕೇವಲ ಅಧಿಕಾರಕ್ಕಾಗಿ ಬಿಜೆಪಿ ಹಿಂದುತ್ವ ಬಳಕೆ ಮಾಡಿಕೊಂಡಿದೆ. ಬಿಜೆಪಿ ಜತೆ ನಾವು 25 ವರ್ಷ ಇದ್ದಿದ್ದು ವ್ಯರ್ಥ’ ಎಂದಿದ್ದರು.

ಇದಕ್ಕೆ ಸೋಮವಾರ ಕಿಡಿಕಾರಿದ ಫಡ್ನವೀಸ್‌, ‘ಬಿಜೆಪಿ ಹುಟ್ಟಿದಾಗ ಶಿವಸೇನೆ ಹುಟ್ಟೇ ಇರಲಿಲ್ಲ. ಶಿವಸೇನೆಗೆ ನೆನಪು ತುಂಬಾ ಕಮ್ಮಿ. 1984ರಲ್ಲಿ ಮುಂಬೈ ಪಾಲಿಕೆ ಚುನಾವಣೆಯಲ್ಲಿ ಶಿವಸೇನೆ ಅಭ್ಯರ್ಥಿ ಬಿಜೆಪಿ ಗುರುತಿನಲ್ಲಿ ಸ್ಪರ್ಧಿಸಿದ್ದರು ಎಂಬುದನ್ನು ಠಾಕ್ರೆ ನೆನಪಿಸಿಕೊಳ್ಳಲಿ. ಇನ್ನು ರಾಮ ಜನ್ಮಭೂಮಿ ಹೋರಾಟದಲ್ಲಿ ನಾವು ಲಾಠಿ ಏಟು ಹಾಗೂ ಗುಂಡು ತಿಂದಾಗ ನೀವೆಲ್ಲಿದ್ದಿರಿ?’ ಎಂದು ಪ್ರಶ್ನಿಸಿದರು.

Rahul Gandhi : ಹಿಂದುತ್ವವಾದಿಗಳು ಹೇಡಿಗಳು, ಸೈಬರ್ ಜಗತ್ತಿನಲ್ಲಿ ದ್ವೇಷ ಹರಡುತ್ತಿದ್ದಾರೆ!

ಠಾಕ್ರೆ ಅನುಪಸ್ಥಿತಿಯಲ್ಲಿ ಮಹಾ ಮಂತ್ರಿಗಳ ಜೊತೆ ಸಭೆ: ಮಹಾರಾಷ್ಟ್ರದಲ್ಲಿ ಶಿವಸೇನೆ, ಎನ್‌ಸಿಪಿ ಹಾಗೂ ಕಾಂಗ್ರೆಸ್ ಮೈತ್ರಿಯ ಮಹಾ ವಿಕಾಸ್ ಅಘಾಡಿ (Maha Vikas Aghadi) ಸರ್ಕಾರ ಆಡಳಿತ ನಡೆಸುತ್ತಿದೆ. ಆದರೆ ಇಲ್ಲಿ ಹೆಸರಿಗೆ ಮಾತ್ರ ಉದ್ಧವ್ ಠಾಕ್ರೆ ಮುಖ್ಯಮಂತ್ರಿ, ಅಸಲಿ ಮುಖ್ಯಮಂತ್ರಿ ಎನ್‌ಸಿಪಿ ಪಕ್ಷದ ನಾಯಕ ಶರದ್ ಪವಾರ್ (Sharad Pawar) ಅನ್ನೋ ಮಾತನ್ನು ಬಿಜೆಪಿ ಸೇರಿದಂತೆ ಹಲವರು ಪದೇ ಪದೇ ಹೇಳಿ ಕುಟುಕಿದ್ದಾರೆ. ಇದೀಗ ಈ ಹೇಳಿಕೆಗೆ ಬಲವಾದ ಸಾಕ್ಷ್ಯ ಸಿಕ್ಕಿದೆ. ಸಿಎಂ ಉದ್ದವ್ ಠಾಕ್ರೆ ಅನುಪಸ್ಥಿತಿಯಲ್ಲಿ ಶರದ್ ಪವಾರ್ ಮಹಾರಾಷ್ಟ್ರ ಮಂತ್ರಿಗಳ ಸಭೆ ನಡೆಸಿದ್ದಾರೆ. ಇದನ್ನು ಬಿಜೆಪಿ ಸೇರಿದಂತೆ ಹಲವರು ಪ್ರಶ್ನಿಸಿದ್ದಾರೆ. 

ಮಹಾ ವಿಕಾಸ್ ಅಘಾಡಿ ಸರ್ಕಾರದಲ್ಲಿ ಶರದ್ ಪವಾರ್ ಯಾವುದೇ ಸಾಂವಿಧಾನಿಕ ಹುದ್ದೆ ಹೊಂದಿಲ್ಲ. ಪವಾರ್ ಮಹಾ ವಿಕಾಸ್ ಅಘಾಡಿ ಮೈತ್ರಿ ಪಕ್ಷಗಳಲ್ಲಿ ಒಂದಾಗಿರುವ NCP ಪಕ್ಷದ ಮುಖ್ಯಸ್ಥ. ಹೀಗಾಗಿ ಮಹಾರಾಷ್ಟ್ರ ಮಂತ್ರಿಗಳ ಜೊತೆ ಸಭೆ ಅಧ್ಯಕ್ಷತೆ ವಹಿಸಲು ಹೇಗೆ ಸಾಧ್ಯ? ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನಡೆಸಬೇಕಾದ ಸಭೆಯನ್ನು ಶರದ್ ಪವಾರ್ ಯಾವ ಅಧಿಕಾರದಲ್ಲಿ ನಡೆಸಿದ್ದಾರೆ?  ಈ ಪ್ರಶ್ನೆ ಇದೀಗ ಬಿಜೆಪಿ ಸೇರಿದಂತೆ ಹಲವರು ಎತ್ತಿದ್ದಾರೆ. ಈ ಕುರಿತು ಮಹಾರಾಷ್ಟ್ರ ಬಿಜೆಪಿ ವಕ್ತಾರ, ಘಾಟ್‌ಕೂಪರ್ ಕ್ಷೇತ್ರದ ಶಾಸಕ ರಾಮ್ ಕದಮ್ ಟ್ವಿಟರ್ ಮೂಲಕ ಪ್ರಶ್ನಿಸಿದ್ದಾರೆ.

India Gate: ಯೋಗಿಯನ್ನು ಭ್ರಷ್ಟ, ಪಕ್ಷಪಾತಿ ಎನ್ನಲು ವಿರೋಧ ಪಕ್ಷಗಳ ಬಳಿ ಸಾಕ್ಷಿಗಳೇ ಇಲ್ಲ

ಶರದ್ ಪವರ್ ಮಹಾರಾಷ್ಟ್ರ ಸರ್ಕಾರದ ಹಂಗಾಮಿ ಮುಖ್ಯಮಂತ್ರಿಯೇ? ಸಿಎಂ ಉದ್ದವ್ ಠಾಕ್ರೆ ಅನುಪಸ್ಥಿತಿಯಲ್ಲಿ ಪವಾರ್ ಮಹಾ ಅಘಾಡಿ ವಿಕಾಸ್ ಸರ್ಕಾದ ಮಂತ್ರಿಗಳ ಜೊತೆ ಸಭೆ ನಡೆಸಿದ್ದಾರೆ. ಯಾವ ಅಧಿಕಾರದ ಮೇಲೆ ಶರದ್ ಪವಾರ್ ಮಂತ್ರಿಗಳ ಸಭೆ ನಡೆಸಿದ್ದಾರೆ ಎಂದು ರಾಮ್ ಕದಮ್ ಪ್ರಶ್ನಿಸಿದ್ದಾರೆ. ಜೊತೆಗೆ ಸಭೆಯ ವಿಡಿಯೋ ಪೋಸ್ಟ್ ಮಾಡಿದ್ದು ಇದೀಗ ಪವಾರ್ ಹಾಗೂ ಮಹಾ ಅಘಾಡಿ ವಿಕಾಸ್ ಸರ್ಕಾರ ಸತತ ಟೀಕೆ, ಪ್ರಶ್ನೆ ಎದುರಿಸುವಂತಾಗಿದೆ.

Latest Videos
Follow Us:
Download App:
  • android
  • ios