ದೆಹಲಿ(ಜೂ. 19): ಭಾರತ-ಚೀನಾ ನಡುವಿನ ಸಂಘರ್ಷ ಗಂಭೀರ ಸ್ವರೂಪ ಪಡೆದುಕೊಂಡಿದೆ. ಚೀನಾ ದಾಳಿಗೆ ಭಾರತೀಯ ಸೇನೆ ಕೂಡ ತಿರುಗೇಟು ನೀಡಿದೆ. ಆದರೆ 20 ಭಾರತೀಯ ಯೋಧರು ಹುತಾತ್ಮರಾಗಿರುವುದು ಅತೀವ ನೋವು ತಂದಿದೆ. ಇದರ ನಡುವೆ ರಾಜಕೀಯ ಗುದ್ದಾಟಗಳು ನಡೆಯುತ್ತಿದೆ. ಭಾರತ ಚೀನಾ ಸಂಘರ್ಷ ಕುರಿತು ಕೇಂದ್ರ ಸರ್ಕಾರ ಸರ್ವ ಪಕ್ಷ ಸಭೆ ಕರೆಯಲಾಗಿದ್ದು, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ಗೆ ಆಹ್ವಾನ ನೀಡಿಲ್ಲ.

ಭಾರತದ ಗಡಿಯಲ್ಲಿ ಚೀನಾ ಕಿತಾಪತಿಗೆ ಅಸಲಿ ಕಾರಣ ಬಿಚ್ಚಿಟ್ಟ ಅಮೆರಿಕ

ಚೀನಾ ಆಕ್ರಮಣದ ಕುರಿತು ಅರವಿಂದ್ ಕೇಜ್ರಿವಾಲ್ ದಿಟ್ಟ ಉತ್ತರ ನೀಡಿದ್ದಾರೆ. ಚೀನಾಗೆ ತಕ್ಕ ತಿರುಗೇಟು ನೀಡಬೇಕು. ದೇಶ ರಕ್ಷಣೆ ಮಾಡುವ ಭಾರತೀಯ ಸೇನೆ ಹಾಗೂ ಭಾರತದ ಜೊತೆ ಆಮ್ ಆದ್ಮಿ ಪಕ್ಷ ಬೆಂಬಲವಾಗಿ ನಿಲ್ಲಲಿದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.

'ಭಾರತದ ಸೇನೆಗೆ ಹೋರಾಡಲು ಅವಕಾಶವೇ ಸಿಗ್ಲಿಲ್ಲ, ಒಬ್ಬ ಚೀನಾ ಸೈನಿಕನೂ ಸತ್ತಿಲ್ಲ

ಜೂನ್ 16ರಂದು ಭಾರತೀಯ ಯೋಧರ ಹುತಾತ್ಮರಾದ ಬೆನ್ನಲ್ಲೇ ಅರವಿಂದ ಕೇಜ್ರಿವಾಲ್ ಟ್ವೀಟ್ ಮೂಲಕ ಕಂಬನಿ ಮಿಡಿದಿದ್ದರು. ಭಾರತೀಯ ಯೋಧರು ಮೇಲಿನ ದಾಳಿ ಸುದ್ದಿ ನೋವು ತರಿಸಿದೆ. ಹುತಾತ್ಮರಾದ ಯೋಧರ ಕುಟುಂಬಕ್ಕೆ ಭಗವಂತ ದುಃಖ ಭರಿಸುವ ಶಕ್ತಿ ನೀಡಲಿ. ಎಲ್ಲಾ ಭಾರತೀಯರು ಒಗ್ಗಟ್ಟಾಗಿ ನಿಂತು ಯೋಧರ ಬಲಿದಾನಕ್ಕೆ ಗೌರವ ಸೂಚಿಸುತ್ತೇವೆ ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದರು. ಸರ್ವ ಪಕ್ಷ ಸಭೆ ಕುರಿತು ಕೇಜ್ರಿವಾಲ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. 

ಸರ್ವ ಪಕ್ಷ ಸಭೆಗೆ ಆಹ್ವಾನಿತರ ಪಟ್ಟಿ:
ಕಾಂಗ್ರೆಸ್ ಅಧ್ಯಕ್ಷ ಸೋನಿಯಾ ಗಾಂಧಿ
ಡಿಎಂಕೆ ಮುಖ್ಯಸ್ಥ ಎಂ.ಕೆ. ಸ್ಟಾಲಿನ್
ಟಿಡಿಪಿ ಮುಖ್ಯಸ್ಥ ನ ಚಂದ್ರಬಾಬು ನಾಯ್ದು
ಆಂಧ್ರ ಪ್ರದೇಶ ಮುಖ್ಯಮಂತ್ರಿ ವೈಎಸ್ ಜಗನ್‌ಮೋಹನ್ ರೆಡ್ಡಿ
ಎನ್‌ಸಿಪಿ ಮುಖಂಡ ಶರದ್ ಪವಾರ್
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್
ಸಿಪಿಐ ಮುಖಂಡ ಡಿ ರಾಜ
ಸಿಪಿ(ಎಂ) ಮುಖ್ಯ ಕಾರ್ಯದರ್ಶಿ ಸಿತಾರಾಂ ಯಚೂರಿ
ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್
ತೆಲಂಗಾಣ ಸಿಎಂ ಚಂದ್ರಶೇಕರ್  ರಾವ್
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ
ಶಿರೋಮಣಿ ಅಕಾಲಿ ದಳ ಮುಖಂಡ ಸುಕ್ಬೀರ್ ಬಾದಲ್
ಎಲ್‌ಜೆಪಿ ಮುಖಂಡ ಚಾರ್ಜಿಂಗ್ ಪಾಸ್ವಾನ್
ಮಹಾರಾಷ್ಟ್ರ ಸಿಎಂ ಉದ್ದವ್ ಠಾಕ್ರೆ
ಸಮಾಜವಾದಿ ಪಾರ್ಚಿ ಮುಖಂಡ ಅಖಿಲೇಶ್ ಯಾದವ್
ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್
ಬಿಜೆಡಿ ಮುಖಂಡ ಪಿನಕಿ ಮಿಶ್ರ