ಭಾರತ ಪಾಲುದಾರರನ್ನು ಬಯಸುತ್ತದೆ, ಪ್ರಚಾರಕರನ್ನಲ್ಲ ಎಂದು ಜೈಶಂಕರ್ ಹೇಳಿದರು. ಯುರೋಪ್ ಭಾರತದೊಂದಿಗೆ ಸೂಕ್ಷ್ಮವಾಗಿ ವರ್ತಿಸಬೇಕು, ಪರಸ್ಪರ ಹಿತಾಸಕ್ತಿಗಳನ್ನು ಗುರುತಿಸಬೇಕು. ಭಾರತ-ರಷ್ಯಾ ಸಂಬಂಧ ಸಂಪನ್ಮೂಲ ಪೂರೈಕೆ ಮತ್ತು ಬಳಕೆಯ ಮೇಲೆ ಆಧಾರಿತವಾಗಿದೆ. ರಷ್ಯಾದ ವಾಸ್ತವಿಕತೆಯನ್ನು ಒಪ್ಪಿಕೊಳ್ಳುವುದರ ಜೊತೆಗೆ ಅಮೆರಿಕದ ವಾಸ್ತವಿಕತೆಯನ್ನೂ ಒಪ್ಪಿಕೊಳ್ಳಬೇಕು ಎಂದರು.

ನವದೆಹಲಿ (ಮೇ.5): ಭಾರತದೊಂದಿಗಿನ ಸಂಬಂಧವನ್ನು ಬಲಪಡಿಸಲು ಯುರೋಪ್ ಸೂಕ್ಷ್ಮತೆ ಮತ್ತು ಪರಸ್ಪರ ಆಸಕ್ತಿಯನ್ನು ತೋರಿಸಬೇಕು ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಭಾನುವಾರ ಹೇಳಿದ್ದರೆ. ನವದೆಹಲಿ "ಪ್ರಚಾರಕರ"ನ್ನಲ್ಲ, ಪಾಲುದಾರರನ್ನು ಹುಡುಕುತ್ತದೆ ಎಂದು ಹೇಳಿದರು.

ಆರ್ಕ್ಟಿಕ್ ಸರ್ಕಲ್ ಇಂಡಿಯಾ ಫೋರಂನಲ್ಲಿ ಮಾತನಾಡಿದ ಜೈಶಂಕರ್, ಭಾರತವು "ರಷ್ಯಾದ ವಾಸ್ತವಿಕತೆ"ಯ ಸ್ಥಿರವಾದ ಪ್ರತಿಪಾದನೆ ಮತ್ತು ಸಂಪನ್ಮೂಲ ಪೂರೈಕೆದಾರ ಮತ್ತು ಗ್ರಾಹಕರಾಗಿ ಭಾರತ ಮತ್ತು ರಷ್ಯಾ ನಡುವಿನ "ಪ್ರಮುಖ ಹೊಂದಾಣಿಕೆ" ಮತ್ತು "ಪೂರಕತೆ"ಯನ್ನು ಎತ್ತಿ ತೋರಿಸುತ್ತದೆ ಎಂದು ಹೇಳಿದರು.

ರಷ್ಯಾ-ಉಕ್ರೇನ್ ಸಂಘರ್ಷವನ್ನು ರಷ್ಯಾವನ್ನು ಒಳಗೊಳ್ಳದೆ ಪರಿಹರಿಸಲು ಹಿಂದಿನ ಪಾಶ್ಚಿಮಾತ್ಯ ರಾಷ್ಟ್ರಗಳ ಪ್ರಯತ್ನಗಳನ್ನು ಅವರು ಟೀಕಿಸಿದರು, ಇದು "ವಾಸ್ತವಿಕತೆಯ ಮೂಲಭೂತ ಅಂಶಗಳನ್ನು ಪ್ರಶ್ನಿಸುತ್ತದೆ" ಎಂದು ವಾದಿಸಿದರು. "ನಾನು ರಷ್ಯಾದ ವಾಸ್ತವಿಕತೆಯ ಪ್ರತಿಪಾದಕನಂತೆ, ನಾನು ಅಮೇರಿಕನ್ ವಾಸ್ತವಿಕತೆಯ ಪ್ರತಿಪಾದಕನೂ ಆಗಿದ್ದೇನೆ" ಎಂದು ಅವರು ಹೇಳಿದರು.

"ಇಂದಿನ ಅಮೆರಿಕವನ್ನು ಹೊಂದಿಕೊಳ್ಳು ಉತ್ತಮ ಮಾರ್ಗವೆಂದರೆ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳನ್ನು ಮುಂದಿಟ್ಟುಕೊಂಡು ನಂತರ ಒಟ್ಟಿಗೆ ಕೆಲಸ ಮಾಡುವ ಸಾಧ್ಯತೆಗಳನ್ನು ಮರೆಮಾಡಲು ಅವಕಾಶ ನೀಡುವ ಬದಲು ಪರಸ್ಪರ ಹಿತಾಸಕ್ತಿಗಳನ್ನು ಕಂಡುಕೊಳ್ಳುವುದು" ಎಂದು ಅವರು ಹೇಳಿದರು.

ಯುರೋಪ್‌ನಿಂದ ಭಾರತದ ನಿರೀಕ್ಷೆಗಳ ಕುರಿತು ಮಾತನಾಡಿದ ಜೈಶಂಕರ್, ಯುರೋಪ್ ಭಾಷಣ ಬಿಗಿಯುವುದನ್ನು ಮೀರಿ ಪರಸ್ಪರ ಆಸಕ್ತಿಯ ಚೌಕಟ್ಟಿನ ಮೇಲೆ ಕಾರ್ಯನಿರ್ವಹಿಸಲು ಪ್ರಾರಂಭಿಸಬೇಕು ಎಂದು ಹೇಳಿದರು. "ಭಾರತ ಜಗತ್ತನ್ನು ನೋಡುವಾಗ, ನಾವು ಪಾಲುದಾರರನ್ನು ಹುಡುಕುತ್ತೇವೆ; ನಾವು ಭಾಷಣ ಬಿಗಿಯುವವನ್ನು ಹುಡುಕುವುದಿಲ್ಲ, ವಿಶೇಷವಾಗಿ ತಮ್ಮಲ್ಲಿ ಆಚರಣೆಯಲ್ಲಿ ಇಲ್ಲದ ಮತ್ತು ವಿದೇಶಗಳ ವಿಚಾರವಾಗಿ ಮೂಗು ತೂರಿಸುವವರನ್ನು ನಾವು ಪರಿಗಣಿಸುವುದಿಲ್ಲ' ಎಂದಿದ್ದಾರೆ.

ಯುರೋಪಿನ ಕೆಲವು ಭಾಗಗಳು ಇನ್ನೂ ಈ ಸಮಸ್ಯೆಯೊಂದಿಗೆ ಹೋರಾಡುತ್ತಿವೆ ಎಂದು ಅವರು ಒಪ್ಪಿಕೊಂಡರು, ಆದರೂ "ಅದರಲ್ಲಿ ಕೆಲವು ಬದಲಾಗಿದೆ" ಎಂದು ಅವರು ಗಮನಿಸಿದರು. ಯುರೋಪ್ "ವಾಸ್ತವಿಕ ಪರಿಶೀಲನೆಯ ಒಂದು ನಿರ್ದಿಷ್ಟ ವಲಯವನ್ನು ಪ್ರವೇಶಿಸಿದೆ" ಎಂದು ಜೈಶಂಕರ್ ಹೇಳಿದ್ದಾರೆ. "ಈಗ ಅವರು ಅದನ್ನು ಸಾಧಿಸಲು ಸಮರ್ಥರಾಗುತ್ತಾರೋ ಇಲ್ಲವೋ, ನಾವು ನೋಡಬೇಕಿದೆ" ಎಂದು ಅವರು ಹೇಳಿದರು.

"ಆದರೆ ನಮ್ಮ ದೃಷ್ಟಿಕೋನದಿಂದ, ನಾವು ಪಾಲುದಾರಿಕೆಯನ್ನು ಬೆಳೆಸಿಕೊಳ್ಳಬೇಕಾದರೆ, ತಿಳುವಳಿಕೆ, ಸೂಕ್ಷ್ಮತೆ, ಪರಸ್ಪರ ಆಸಕ್ತಿ ಮತ್ತು ಜಗತ್ತು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ಅರಿವು ಇರಬೇಕು" ಎಂದು ಅವರು ಹೇಳಿದರು. ಈ ಅಂಶಗಳು ಯುರೋಪಿನ ವಿವಿಧ ಭಾಗಗಳಲ್ಲಿ ಇನ್ನೂ ಪ್ರಗತಿಯಲ್ಲಿವೆ ಎಂದು ಜೈಶಂಕರ್ ಗಮನಸೆಳೆದರು. "ಕೆಲವು ಮುಂದೆ ಸಾಗಿವೆ, ಕೆಲವು ಸ್ವಲ್ಪ ಕಡಿಮೆ" ಎಂದು ಅವರು ಹೇಳಿದರು.

ಭಾರತ-ರಷ್ಯಾ ಸಂಬಂಧಗಳ ಕುರಿತು, ಅವರು "ಸಂಪನ್ಮೂಲ ಪೂರೈಕೆದಾರ ಮತ್ತು ಸಂಪನ್ಮೂಲ ಗ್ರಾಹಕ" ವಾಗಿ ಎರಡೂ ದೇಶಗಳ ನಡುವಿನ "ಪ್ರಮುಖ ಹೊಂದಾಣಿಕೆ ಮತ್ತು ಪೂರಕತೆ"ಯನ್ನು ಪುನರುಚ್ಚರಿಸಿದರು.

"ರಷ್ಯಾದ ವಿಷಯಕ್ಕೆ ಬಂದರೆ, ನಾವು ಯಾವಾಗಲೂ ಪ್ರತಿಪಾದಿಸುವ ರಷ್ಯಾದ ವಾಸ್ತವಿಕತೆಯನ್ನು ಕಾಪಾಡಿಕೊಂಡು ಬಂದಿದ್ದೇವೆ" ಎಂದು ಅವರು ಹೇಳಿದರು. ರಷ್ಯಾ-ಉಕ್ರೇನ್ ಸಂಘರ್ಷದ ಉದ್ದಕ್ಕೂ, ಪಶ್ಚಿಮದಲ್ಲಿ ಹೆಚ್ಚುತ್ತಿರುವ ಅಶಾಂತಿಯ ಹೊರತಾಗಿಯೂ, ನವದೆಹಲಿಯು ಮಾಸ್ಕೋ ಜೊತೆ ತೊಡಗಿಸಿಕೊಳ್ಳುವುದನ್ನು ಮುಂದುವರೆಸಿತು ಮತ್ತು ರಷ್ಯಾದ ಕಚ್ಚಾ ತೈಲದ ಖರೀದಿಯನ್ನು ಹೆಚ್ಚಿಸಿತು.

ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಕಾರಣರಾದವರನ್ನು ನ್ಯಾಯದ ಕಟಕಟೆಗೆ ತರಬೇಕು ಎಂದು ಜೈಶಂಕರ್ ಅವರು ರಷ್ಯಾದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್ ಅವರೊಂದಿಗಿನ ಇತ್ತೀಚಿನ ಸಂಭಾಷಣೆಯ ನಂತರ ಈ ಹೇಳಿಕೆ ಬಂದಿದೆ.

Scroll to load tweet…