Asianet Suvarna News Asianet Suvarna News

ನಾವು ಇಲ್ಲಿಯವರೆಗೆ 5 ಮಂದಿಯನ್ನು ಕೊಂದಿದ್ದೇವೆ ಎಂದ ಬಿಜೆಪಿ ಮಾಜಿ ಶಾಸಕನ ವಿರುದ್ಧ ಎಫ್‌ಐಆರ್‌..!

ಗೋ ಕಳ್ಳಸಾಗಣೆ ಮಾಡುವ ಐವರ ವಿರುದ್ದ ನಮ್ಮ ಬೆಂಬಲಿಗರು ಹತ್ಯೆ ಮಾಡಿದ್ದಾರೆ ಎಂದು ರಾಜಸ್ಥಾನ ಬಿಜೆಪಿ ಮಾಜಿ ಶಾಸಕ ಹೇಳಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಈ ಸಂಬಂಧ ಅವರ ವಿರುದ್ಧ ಪ್ರಕರಣ ದಾಖಲಾಗಿದೆ.

we have killed 5 people so far rajasthan ex bjp mla booked for lynching ash
Author
Bangalore, First Published Aug 21, 2022, 2:43 PM IST

ರಾಜಸ್ಥಾನದ ಬಿಜೆಪಿ ಮಾಜಿ ಶಾಸಕ ಜ್ಞಾನ್ ದೇವ್ ಅಹುಜಾ ಅವರು ‘’ತಮ್ಮ ಬೆಂಬಲಿಗರು ಇಲ್ಲಿಯವರೆಗೆ "ಹಸು ಕಳ್ಳಸಾಗಣೆ" ಗಾಗಿ ಐದು ಜನರನ್ನು ಹತ್ಯೆ ಮಾಡಿದ್ದಾರೆ ಎಂದು ಹೇಳಿರುವುದನ್ನು ಕ್ಯಾಮರಾದಲ್ಲಿ ಸೆರೆಹಿಡಿಯಲಾಗಿದೆ. ಈ ಸಂಬಂಧ ದ್ವೇಷ ಮತ್ತು ಹಗೆತನವನ್ನು ಉತ್ತೇಜಿಸಿದ ಆರೋಪದಲ್ಲಿ ಬಿಜೆಪಿ ನಾಯಕನ ವಿರುದ್ಧ ಆಳ್ವಾರ್‌ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. 
 
"ನಾವು ಇದುವರೆಗೆ ಐದು ಜನರನ್ನು ಹತ್ಯೆ ಮಾಡಿದ್ದೇವೆ, ಅದು ಲಾವಂಡಿ ಅಥವಾ ಬೆಹ್ರೋರ್ ಆಗಿರಬಹುದು. ಈ ಪ್ರದೇಶದಲ್ಲಿ ಮೊದಲ ಬಾರಿಗೆ ಅವರು ಯಾರನ್ನಾದರೂ ಹತ್ಯೆ ಮಾಡಿದ್ದಾರೆ. ನಾನು ಕಾರ್ಯಕರ್ತರಿಗೆ ಕೊಲ್ಲಲು ಮುಕ್ತ ಅವಕಾಶ ನೀಡಿದ್ದೇನೆ. ನಾವು ಅವರನ್ನು ಖುಲಾಸೆಗೊಳಿಸುತ್ತೇವೆ ಮತ್ತು ಜಾಮೀನು ಪಡೆಯುತ್ತೇವೆ’’ ಎಂದು ಬಿಜೆಪಿ ಮಾಜಿ ಶಾಸಕರು ವಿಡಿಯೋದಲ್ಲಿ ಹೇಳುತ್ತಿರುವುದು ಕಂಡುಬರುತ್ತದೆ. ಈ ಹಿನ್ನೆಲೆ ದ್ವೇಷ ಮತ್ತು ಹಗೆತನವನ್ನು ಉತ್ತೇಜಿಸಿದ ಆರೋಪದಲ್ಲಿ ಬಿಜೆಪಿ ನಾಯಕನ ವಿರುದ್ಧ ಆಳ್ವಾರ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಈ ಸಂಬಂಧ ಮಾಹಿತಿ ನೀಡಿದ ಗೋವಿಂದಗಢ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ ಶಿವ ಶಂಕರ್, ಶಂಕಿತ ಮೇವ್ ಮುಸ್ಲಿಂ ಸಮುದಾಯದ ಸದಸ್ಯರಿಂದ ಹತ್ಯೆಗೀಡಾದ 45 ವರ್ಷದ ಚಿರಂಜಿಲಾಲ್ ಸೈನಿ ಅವರ ಕುಟುಂಬವನ್ನು ಅಹುಜಾ ಭೇಟಿ ಮಾಡಿದ ನಂತರ ಹೊರಬಂದ ವಿಡಿಯೋದ ಆಧಾರದ ಮೇಲೆ ಪೊಲೀಸರು ಪ್ರಕರಣವನ್ನು ದಾಖಲಿಸಿದ್ದಾರೆ. ಟ್ರಾಕ್ಟರ್ ಕಳ್ಳತನದ ಶಂಕೆ ಮೇರೆ ಶುಕ್ರವಾರ ಅವರನ್ನು ಹತ್ಯೆ ಮಾಡಲಾಗಿತ್ತು ಎಂದು ತಿಳಿದುಬಂದಿದೆ.

ಕಾಶ್ಮೀರಿ ಪಂಡಿತರು, ಗೋ ಸಾಗಣೆಕಾರರ ಹತ್ಯೆ ಎರಡೂ ಒಂದೇ: ಚರ್ಚೆಗೆ ಕಾರಣವಾಯ್ತು ಸಾಯಿ ಪಲ್ಲವಿ ಹೇಳಿಕೆ
 
ಸೋಮವಾರ ಜೈಪುರದ ಸರ್ಕಾರಿ ಎಸ್‌ಎಂಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ವೇಳೆ ಚಿರಂಜಿಲಾಲ್ ಸೈನಿ ಮೃತಪಟ್ಟಿದ್ದಾರೆ. ಧರ್ಮದ ಆಧಾರದ ಮೇಲೆ ದ್ವೇಷವನ್ನು ಉತ್ತೇಜಿಸಿದ್ದಕ್ಕಾಗಿ ಐಪಿಸಿ ಸೆಕ್ಷನ್ 153-ಎ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಶಂಕರ್ ಹೇಳಿದರು. ಈ ವಿಡಿಯೋದಲ್ಲಿ, ಸೈನಿ ಹತ್ಯೆಯ ವಿರುದ್ಧ ಆಂದೋಲನವನ್ನು ಪ್ರಾರಂಭಿಸಲು ಜನರ ಗುಂಪನ್ನು ಒತ್ತಾಯಿಸುತ್ತಿದ್ದ ವ್ಯಕ್ತಿಗೆ ಅಡ್ಡಿಪಡಿಸುವ ಸಂದರ್ಭದಲ್ಲಿ ಬಿಜೆಪಿ ನಾಯಕ ಈ ಹೇಳಿಕೆ ನೀಡಿರುವುದು ಕಂಡುಬರುತ್ತದೆ. 
 
ಮಾಜಿ ಶಾಸಕರ ಅಭಿಪ್ರಾಯಗಳಿಂದ ದೂರವಿರಲು ಬಿಜೆಪಿ ಯತ್ನ
ಜ್ಞಾನ್ ದೇವ್ ಅಹುಜಾ ಅವರ ವಿಡಿಯೋ ಬಳಿಕ ವೈರಲ್ ಆಯಿತು ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಅಪಾರ ಆಕ್ರೋಶಕ್ಕೆ ಗುರಿಯಾಯಿತು. ಈ ಹಿನ್ನೆಲೆ ಈ ವಿವಾದದ ಬಗ್ಗೆ ಪ್ರತಿಕ್ರಿಯೆ ನೀಡಿದ ಬಿಜೆಪಿಯ ಆಳ್ವಾರ್‌ (ದಕ್ಷಿಣ) ಮುಖ್ಯಸ್ಥ ಸಂಜಯ್ ಸಿಂಗ್ ನರುಕಾ, ಪಕ್ಷಕ್ಕೆ "ಈ ಆಲೋಚನೆ ಇಲ್ಲ" ಎಂದು ಸ್ಪಷ್ಟಪಡಿಸಿದ್ದು, ಹಾಗೂ ಇದು ಅವರ ಸ್ವಂತ ಅಭಿಪ್ರಾಯಗಳು ಎಂದು ಅವರು ಮಾಹಿತಿ ನೀಡಿದ್ದಾರೆ.
 
ಆದರೆ, ಗೋವು ಕಳ್ಳಸಾಗಣೆ ಮತ್ತು ಹತ್ಯೆಯಲ್ಲಿ ತೊಡಗಿರುವ ಯಾರನ್ನೂ ಬಿಡಲಾಗುವುದಿಲ್ಲ ಎಂದು ಅಹುಜಾ ತಮ್ಮ ನಿಲುವನ್ನು ಪುನರುಚ್ಚರಿಸಿದರು. ಸೈನಿ ಹತ್ಯೆಯನ್ನು ವಿರೋಧಿಸಿ ಆಂದೋಲನವನ್ನು ಪ್ರಾರಂಭಿಸಲು ಸೂಚಿಸಿದ ಸ್ಥಳೀಯ ರಾಷ್ಟ್ರೀಯ ಸ್ವಯಂಸೇವಕ ಸಂಘದ ನಾಯಕನೊಂದಿಗೆ ತಾನು ಕುಳಿತಿದ್ದೇನೆ ಎಂದು ಮಾಜಿ ಶಾಸಕ ಹೇಳಿದರು. "ಹಸುಗಳನ್ನು ಕಳ್ಳಸಾಗಣೆ ಮಾಡುತ್ತಿದ್ದ" ಐವರು ಮೇವ್ ಮುಸ್ಲಿಮರನ್ನು "ನಮ್ಮ ಕಾರ್ಯಕರ್ತರು ಥಳಿಸಿದ್ದಾರೆ" ಎಂದು ಅವರಿಗೆ ತಿಳಿಸಿರುವುದಾಗಿ ಅಹುಜಾ ಪಿಟಿಐಗೆ ಹೇಳಿಕೆ ನೀಡಿದ್ದಾರೆ. ಅಲ್ಲದೆ, "ಗೋವನ್ನು ಕಳ್ಳಸಾಗಣೆ ಮತ್ತು ಹತ್ಯೆ ಮಾಡುವವರು ಮೇವ್ ಜನರು ಮತ್ತು ಹಿಂದೂಗಳಿಗೆ ಗೋವಿನ ಬಗ್ಗೆ ಭಾವನೆಗಳಿವೆ. ಆದ್ದರಿಂದ ಅವರು ಅಂತಹ ಕಳ್ಳಸಾಗಾಣಿಕೆದಾರರನ್ನು ಗುರಿಯಾಗಿಸುತ್ತಾರೆ" ಎಂದು ಅವರು ಹೇಳಿದ್ದು, ತಮ್ಮ ಕಾರ್ಯಕರ್ತರನ್ನು ರಕ್ಷಿಸುವುದು ಅವರ ಕರ್ತವ್ಯವಾಗಿದೆ ಎಂದೂ ಜ್ಞಾನ್ ದೇವ್ ಅಹುಜಾ ಹೇಳಿದ್ದಾರೆ. 

2014ರ ಮೊದಲು 'Lynching' ಪದ ಕೇಳಲು ಸಿಗುತ್ತಿರಲಿಲ್ಲ ಎಂದ ರಾಗಾ, ಸಿಖ್ ದಂಗೆ ನೆನಪಿಸಿದ ನೆಟ್ಟಿಗರು!
 
ಇನ್ನು, ಈ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ರಾಜಸ್ಥಾನ ಕಾಂಗ್ರೆಸ್ ಮುಖ್ಯಸ್ಥ ಗೋವಿಂದ್ ಸಿಂಗ್ ದೋತಸ್ರಾ, ಇದು ಬಿಜೆಪಿಯ ನಿಜವಾದ ಮುಖವನ್ನು ಬಯಲು ಮಾಡಿದೆ. ಬಿಜೆಪಿಯ ಧಾರ್ಮಿಕ ಭಯೋತ್ಪಾದನೆ ಮತ್ತು ಮತಾಂಧತೆಗೆ ಇದಕ್ಕಿಂತ ಸಾಕ್ಷಿ ಏನು ಬೇಕು, ಬಿಜೆಪಿಯ ನಿಜವಾದ ಮುಖ ಬಯಲಾಗಿದೆ ಎಂದು ಹೇಳಿದರು.

Follow Us:
Download App:
  • android
  • ios