ದೇವರ ದರ್ಶನಕ್ಕೆ ತೆರಳುತ್ತಿದ್ದ ಕುಟುಂಬವಿದ್ದ ಕಾರೊಂದಕ್ಕೆ ಮತ್ತೊಂದು ವಾಹನ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಒಂದೇ ಕುಟುಂಬದ ಆರು ಜನ ದಾರುಣವಾಗಿ ಸಾವನ್ನಪ್ಪಿದ್ದ ಘಟನೆ ದೆಹಲಿ ಮುಂಬೈ ಎಕ್ಸ್‌ಪ್ರೆಸ್‌ ವೇಯಲ್ಲಿ ಬರುವ ಬನಸ್ ರಿವರ್‌ ಬ್ರಿಡ್ಜ್‌  ಮೇಲೆ ನಡೆದಿದೆ.

ಜೈಪುರ: ದೇವರ ದರ್ಶನಕ್ಕೆ ತೆರಳುತ್ತಿದ್ದ ಕುಟುಂಬವಿದ್ದ ಕಾರೊಂದಕ್ಕೆ ಮತ್ತೊಂದು ವಾಹನ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಒಂದೇ ಕುಟುಂಬದ ಆರು ಜನ ದಾರುಣವಾಗಿ ಸಾವನ್ನಪ್ಪಿದ್ದ ಘಟನೆ ದೆಹಲಿ ಮುಂಬೈ ಎಕ್ಸ್‌ಪ್ರೆಸ್‌ ವೇಯಲ್ಲಿ ಬರುವ ಬನಸ್ ರಿವರ್‌ ಬ್ರಿಡ್ಜ್‌ ಮೇಲೆ ನಡೆದಿದೆ. ರಾಜಸ್ಥಾನದ ಸವಾಯ್ ಮಧೋಪುರ್ ಜಿಲ್ಲೆಯಲ್ಲಿ ಬರುವ ಬನಸ್ ನದಿಯ ಸೇತುವೆ ಮೇಲೆ ಈ ದುರಂತ ನಡೆದಿದೆ. ಕಾರಿನಲ್ಲಿದ್ದವರೆಲ್ಲರೂ ಸವಾಯ್ ಮಧೋಪುರ್‌ನಲ್ಲಿರುವ ಗಣೇಶ ದೇಗುಲಕ್ಕೆ ದೇವರ ದರ್ಶನಕ್ಕಾಗಿ ಹೊರಟಿದ್ದರು. 

ಈ ವೇಳೆ ಇವರು ಪ್ರಯಾಣಿಸುತ್ತಿದ್ದ ಕಾರಿಗೆ ದೆಹಲಿ ಮುಂಬೈ ಎಕ್ಸ್‌ಪ್ರೆಸ್‌ ವೇಯಲ್ಲಿ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದು ಪರಾರಿಯಾಗಿದೆ ಎಂದು ಬೊನ್ಲಿ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಧರ್ಮಪಾಲ್ ಸಿಂಗ್ ಹೇಳಿದ್ದಾರೆ. ಈ ಅಪಘಾತದಲ್ಲಿ ಮೃತರಾದವರನ್ನು ಮನೀಷ್ ಶರ್ಮಾ, ಅವರ ಪತ್ನಿ ಅನಿತಾ, ಕೈಲಾಶ್ ಶರ್ಮಾ ಹಾಗೂ ಅವರ ಪತ್ನಿ ಸಂತೋಷ್ ಹಾಗೂ ಸತೀಶ್ ಶರ್ಮಾ ಹಾಗೂ ಅವರ ಪತ್ನಿ ಪೂನಂ ಎಂದು ಪೊಲೀಸರು ಹೇಳಿದ್ದಾರೆ. 

ಸಾವಿನ ಹೆದ್ದಾರಿಯಾಗ್ತಿದೆ ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್ ವೇ! ಭೀಕರ ಅಪಘಾತ ಸ್ಥಳದಲ್ಲೇ ಮೂವರ ದುರ್ಮರಣ!

ಘಟನೆಯಲ್ಲಿ ಶರ್ಮಾ ಅವರ ಮಕ್ಕಳಾದ ಮನನ್ ಹಾಗೂ ದೀಪಾಲಿ ಅವರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇವರ ಕಾರಿಗೆ ಡಿಕ್ಕಿಹೊಡೆದು ಪರಾರಿಯಾದ ವಾಹನ ಹಾಗೂ ಅದರ ಮಾಲೀಕನಿಗಾಗಿ ಶೋಧ ನಡೆಯುತ್ತಿದೆ. ಮೃತರ ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸಮೀಪದ ಆಸ್ಪತ್ರೆಗೆ ಕಳುಹಿಸಲಾಗಿದ್ದು, ಮೃತರ ಸಂಬಂಧಿಗಳು ಆಗಮಿಸಿದ ನಂತರ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತದೆ ಎಂದು ಪೊಲೀಸರು ಹೇಳಿದ್ದಾರೆ.

ಎಕ್ಸ್‌ಪ್ರೆಸ್ ವೇ ಆಯ್ತು, ಇದೀಗ ಬೆಂಗಳೂರು, ಮೈಸೂರು ನಡುವೆ 4 ಲೇನ್‌ ರೈಲ್ವೆ ಮಾರ್ಗಕ್ಕೆ ಸಮೀಕ್ಷೆ!