Revanna speak with Prajwal: ಅರೆಸ್ಟ್‌ಗೂ ಮುನ್ನ ನಡೆದಿದ್ದೇನು ? ಪ್ರಜ್ವಲ್‌ಗೆ ಶರಣಾಗಲು ಸೂಚನೆ ಕೊಟ್ಟರಾ ರೇವಣ್ಣ?

ಹೆಚ್‌ಡಿ ರೇವಣ್ಣ ಬಂಧನಕ್ಕೂ ಮುನ್ನ ಪ್ರಜ್ವಲ್ ಸಂಪರ್ಕ
ಜಾಮೀನು ವಜಾಗೊಂಡ ಬಳಿಕ ಪ್ರಜ್ವಲ್ ಜತೆ ಸಂಪರ್ಕ
ಎಸ್‌ಐಟಿ ಎಲ್ಲಾ ಬೆಳವಣಿಗೆ ಗಮನಿಸುತ್ತಿರುವ ಪ್ರಜ್ವಲ್‌ 

First Published May 5, 2024, 11:18 AM IST | Last Updated May 5, 2024, 11:19 AM IST

ಸಂಸದ ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಪ್ರಕರಣಕ್ಕೆ(Prajwal Revanna pen drive case) ಸಂಬಂಧಿಸಿದಂತೆ ಮಾಜಿ ಸಚಿವ ಹೆಚ್‌.ಡಿ. ರೇವಣ್ಣ(HD Revanna) ಅರೆಸ್ಟ್‌ ಆಗುವ ಮೊದಲು ಪ್ರಜ್ವಲ್‌ ರೇವಣ್ಣ ಜೊತೆ ಮಾತನಾಡಿದ್ದಾರೆ ಎನ್ನಲಾಗ್ತಿದೆ. ಜಾಮೀನು ವಜಾಗೊಂಡ ಬಳಿಕ ಪ್ರಜ್ವಲ್ ಜತೆ ಸಂಪರ್ಕ ಮಾಡಿದ್ದಾರೆ ಎನ್ನಲಾಗ್ತಿದೆ. ಎಸ್‌ಐಟಿಯ(SIT) ಎಲ್ಲಾ ಬೆಳವಣಿಗೆಯನ್ನು ಪ್ರಜ್ವಲ್‌ ರೇವಣ್ಣ ಗಮನಿಸ್ತಿದ್ದಾರೆ ಎಂದು ತಿಳಿದುಬಂದಿದೆ. ಬಂಧನಕ್ಕೂ (Arrest) ಮುನ್ನ ಮಗನಿಗೆ ರೇವಣ್ಣ ಬುದ್ಧಿವಾದ ಹೇಳಿದ್ದಾರೆ ಎನ್ನಲಾಗ್ತಿದೆ. SIT ವಶಕ್ಕೆ ಹೋಗ್ತಿರೋದಾಗಿ ರೇವಣ್ಣ ಮಾಹಿತಿ ರವಾನೆ ಮಾಡಿದ್ದು, ಪ್ರಜ್ವಲ್ ಶರಣಾಗಲು(Surrender) ಹೆಚ್‌ ಡಿ ರೇವಣ್ಣ ಸೂಚನೆ ಕೊಟ್ಟಿದ್ದಾರೆ ಎನ್ನಲಾಗ್ತಿದೆ. ಎಸ್ ಐ ಟಿ ಅಧಿಕಾರಿಗಳನ್ನ ಈ ಕಾರಣಕ್ಕಾಗಿಯೇ ಕಾಯಿಸಿದ್ದಾರೆ ಎಂದು ಏಷ್ಯಾನೆಟ್‌ ಸುವರ್ಣ ನ್ಯೂಸ್‌ಗೆ ಎಸ್ಐಟಿ ಮೂಲಗಳಿಂದ ಮಾಹಿತಿ ದೊರೆತಿದೆ.

ಇದನ್ನೂ ವೀಕ್ಷಿಸಿ:  ಕಿಡ್ನ್ಯಾಪ್‌ ಕೇಸ್‌ನಲ್ಲಿ ರೇವಣ್ಣ ಅರೆಸ್ಟ್‌: ಯಾವ ರೀತಿ ಇರುತ್ತೆ ಕಾನೂನು ಹೋರಾಟ? ಮುಂದಿನ ನಡೆಯೇನು?