ನೀರಿನ ಬಾಟಲಿಯಲ್ಲಿ ಮೂತ್ರ ವಿಸರ್ಜನೆ ಮಾಡುತ್ತಾರೆ: ಡ್ವೇನ್ ಜಾನ್ಸನ್ ಮೇಲೆ ಗಂಭೀರ ಆರೋಪ
ನೀರಿನ ಬಾಟಲಿಯಲ್ಲಿ ಮೂತ್ರ ವಿಸರ್ಜನೆ ಮಾಡಿ, ತಮ್ಮ ಸಹಾಯಕರ ಕೈಗೆ ಡ್ವೇನ್ ಜಾನ್ಸನ್ ಕೊಡುತ್ತಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ದಿ ರಾಕ್ ಅಲಿಯಾಸ್ ಡ್ವೇನ್ ಜಾನ್ಸನ್ ಯಾರಿಗೆ ಗೊತ್ತಿಲ್ಲ ಹೇಳಿ. ಈತ ಹಾಲಿವುಡ್ನ (Hollywood) ಹಲವು ಸಿನಿಮಾಗಳಲ್ಲಿ ನಟಿಸಿ ಫೇಮಸ್ ಆಗಿದ್ದಾರೆ. ಕೋಟ್ಯಂತರ ಮಂದಿಗೆ ದಿ ರಾಕ್ (The Rock) ಎಂದರೆ ಅಚ್ಚುಮೆಚ್ಚು. ಈತನಿಗೆ ವಿಶ್ವಾದ್ಯಂತ ಅಭಿಮಾನಿಗಳು ಇದ್ದಾರೆ. ಆದರೆ ಈಗ ಅವರ ಮೇಲೆ ಕೆಲವು ಗಂಭೀರ ಆರೋಪಗಳು ಕೇಳಿಬಂದಿವೆ. ‘ದಿ ರಾಕ್ ಅವರು ನೀರಿನ ಬಾಟಲಿಯಲ್ಲಿ ಮೂತ್ರ ವಿಸರ್ಜನೆ ಮಾಡುತ್ತಾರೆ’ ಎಂದು ಕೆಲವರು ಆರೋಪಿಸಿದ್ದಾರೆ. ಅಮೆರಿಕದ ಮಾಧ್ಯಮಗಳಲ್ಲಿ ಈ ಸುದ್ದಿ ಪ್ರಕಟ ಆಗಿದೆ. ಡ್ವೇನ್ ಜಾನ್ಸನ್ (Dwayne Johnson) ಮೇಲಿನ ಈ ಆರೋಪಗಳನ್ನು ಕೇಳಿ ಎಲ್ಲರಿಗೂ ಶಾಕ್ ಆಗಿದೆ.
ಇದನ್ನೂ ವೀಕ್ಷಿಸಿ: 'ಕಾಂತಾರ'ದ ದಟ್ಟ ಕಾಡಿಗೆ ಎಂಟ್ರಿ ಕೊಟ್ಟ ರಾಮ್-ಲಕ್ಷ್ಮಣ್! ನಟ ರಿಷಬ್ ಶೆಟ್ಟಿಗೆ ಕಾಲಿವುಡ್ ಅಣ್ತಮ್ಮ ಆ್ಯಕ್ಷನ್ ಕಟ್ !