ವಯನಾಡಲ್ಲಿ ಸುನಾಮಿ ಎಬ್ಬಿಸಿದ ಪ್ರಿಯಾಂಕಾ ಗಾಂಧಿ, 2 ಲಕ್ಷಕ್ಕೂ ಹೆಚ್ಚು ಅಂತರದಿಂದ ಮುನ್ನಡೆ!

ಕೇರಳದ ವಯನಾಡಿನಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಭಾರೀ ಮುನ್ನಡೆ ಸಾಧಿಸಿದ್ದಾರೆ. ಇದು ಅವರ ಚೊಚ್ಚಲ ಚುನಾವಣೆಯಾಗಿದ್ದು, ಅವರು ತಮ್ಮ ಸಹೋದರ ರಾಹುಲ್ ಗಾಂಧಿಯವರ ಬದಲಿಗೆ ಈ ಸ್ಥಾನದಿಂದ ಸ್ಪರ್ಧಿಸುತ್ತಿದ್ದಾರೆ. 

Wayanad Byelection Result 2024 live update Rahul Gandhi's sister Priyanka Gandhi is leading rav

ವಯನಾಡ್ ಉಪಚುನಾವಣೆ 2024: ಕೇರಳದ ವಯನಾಡಿನಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಭಾರೀ ಮುನ್ನಡೆ ಸಾಧಿಸಿದ್ದಾರೆ. ಇದು ಅವರ ಚೊಚ್ಚಲ ಚುನಾವಣೆಯಾಗಿದ್ದು, ಅವರು ತಮ್ಮ ಸಹೋದರ ರಾಹುಲ್ ಗಾಂಧಿಯವರ ಬದಲಿಗೆ ಈ ಸ್ಥಾನದಿಂದ ಸ್ಪರ್ಧಿಸುತ್ತಿದ್ದಾರೆ. 

ವಯನಾಡಿನಲ್ಲಿ ನಡೆದ ಉಪಚುನಾವಣೆಯಲ್ಲಿ, ಪ್ರಿಯಾಂಕಾ ಗಾಂಧಿ ಇದುವರೆಗೆ 1.2 ಲಕ್ಷಕ್ಕೂ ಹೆಚ್ಚು ಮತಗಳನ್ನು ಗಳಿಸಿದ್ದಾರೆ ಮತ್ತು ತಮ್ಮ ಸಮೀಪದ ಪ್ರತಿಸ್ಪರ್ಧಿಗಿಂತ 85,000 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ.

ಪ್ರಿಯಾಂಕಾ ಗಾಂಧಿ ನಂತರ ಎರಡನೇ ಸ್ಥಾನದಲ್ಲಿ ಸಿಪಿಐನ ಹಿರಿಯ ನಾಯಕ ಸತ್ಯನ್ ಮೊಕೇರಿ ಅವರು ಸುಮಾರು 36,000 ಮತಗಳೊಂದಿಗೆ ಹಿಂದುಳಿದಿದ್ದಾರೆ. ಬಿಜೆಪಿ ಅಭ್ಯರ್ಥಿ ನವ್ಯಾ ಹರಿದಾಸ್ 21,000 ಮತಗಳನ್ನು ಪಡೆದು ಮೂರನೇ ಸ್ಥಾನದಲ್ಲಿದ್ದಾರೆ. ಒಟ್ಟಾರೆ, ವಯನಾಡ್ ಕ್ಷೇತ್ರಕ್ಕೆ ಒಟ್ಟು 16 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ.

ವಯನಾಡ್ ಉಪಚುನಾವಣೆ ಫಲಿತಾಂಶ: ಇಂದಿರಾ ಮೊಮ್ಮಗಳು ಪ್ರಿಯಾಂಕಾ ಗಾಂಧಿ ಭಾರೀ ಮುನ್ನಡೆ!

ಸೋತ ರಾಹುಲ್ ಗಾಂಧಿಯನ್ನ ಕೈ ಹಿಡಿದಿದ್ದ ವಯನಾಡು:

ರಾಹುಲ್ ಗಾಂಧಿ ಅವರು 2019 ರಲ್ಲಿ ಅಮೇಠಿಯಿಂದ ಸೋತರೂ ವಯನಾಡ್‌ನಿಂದ ಚುನಾವಣೆಯಲ್ಲಿ ಗೆಲ್ಲುವ ಮೂಲಕ ತಮ್ಮ ಲೋಕಸಭಾ ಸದಸ್ಯತ್ವವನ್ನು ಉಳಿಸಿಕೊಂಡಿದ್ದರು. ಈ ಬಾರಿ 2024 ರಲ್ಲಿ, ರಾಹುಲ್ ಗಾಂಧಿ ವಯನಾಡ್ ಮತ್ತು ರಾಯ್ ಬರೇಲಿ ಎರಡೂ ಕ್ಷೇತ್ರಗಳಿಂದ ಚುನಾವಣೆಗೆ ಸ್ಪರ್ಧಿಸಿದ್ದರು ಅಷ್ಟೇ ಅಲ್ಲ ಈ ಬಾರಿ ಎರಡೂ ಸ್ಥಾನಗಳನ್ನು ಗೆದ್ದಿದ್ದರು. ಇದರ ನಂತರ ಅವರು ರಾಯ್ ಬರೇಲಿಯನ್ನು ತಮ್ಮ ಕ್ಷೇತ್ರವನ್ನಾಗಿ ಸ್ಥಾನವಾಗಿ ಆಯ್ಕೆ ಮಾಡಿಕೊಂಡರು. ಅದರಿಂದ ತೆರವಾದ ಕ್ಷೇತ್ರವನ್ನು ಇದೀಗ ರಾಹುಲ್ ಗಾಂಧಿ ಸಹೋದರಿ ಪ್ರಿಯಾಂಕಾ ಗಾಂಧಿ ಲೋಕಸಭಾ ಉಪಚುನಾವಣೆಯಲ್ಲಿ ಸ್ಪರ್ಧಿಸಿ ಮುನ್ನಡೆ ಸಾಧಿಸುವ ಮೂಲಕ ಅಣ್ಣನ ಕ್ಷೇತ್ರವನ್ನು ಉಳಿಸಿಕೊಳ್ಳಲಿದ್ದಾರೆ.

ಮಹಾರಾಷ್ಟ್ರ ಚುನಾವಣೆ ಫಲಿತಾಂಶ: ಗೆಲುವು ಯಾರಿಗೆ ಮಹಾಯುತಿಗೋ ಅಘಾಡಿಗೋ ?

ಪ್ರಿಯಾಂಕಾಗೆ ರಾಹುಲ್ ಮತ್ತು ಸೋನಿಯಾ ಗಾಂಧಿ ಬೆಂಬಲ:

ಈ ಬಾರಿ ಪ್ರಿಯಾಂಕಾ ಗಾಂಧಿ ಅವರ ಚುನಾವಣಾ ಪ್ರಚಾರದಲ್ಲಿ ಅವರ ಸಹೋದರ ರಾಹುಲ್ ಗಾಂಧಿ ಮತ್ತು ತಾಯಿ ಸೋನಿಯಾ ಗಾಂಧಿ ಸಕ್ರಿಯವಾಗಿ ಭಾಗವಹಿಸಿದ್ದರು. ದೇಶದಲ್ಲಿ ವಯನಾಡು ಕ್ಷೇತ್ರ ಗಮನ ಸೆಳೆದಿದೆ. ವಯನಾಡನ್ನು ಉತ್ತಮ ಪ್ರವಾಸಿ ತಾಣವನ್ನಾಗಿ ಮಾಡಿ, ಅಲ್ಲಿನ ಆರ್ಥಿಕತೆ ವೃದ್ಧಿಯಾಗಬೇಕು, ವಯನಾಡಿನ ಸೌಂದರ್ಯ ಜಗತ್ತಿನೆಲ್ಲೆಡೆ ಗುರುತಿಸಲ್ಪಡಲಿ ಎಂದು ರಾಹುಲ್ ಗಾಂಧಿ ಪ್ರಿಯಾಂಕಾಗೆ ಟಾರ್ಗೆಟ್ ನೀಡಿದ್ದರು. ಅದ್ಯಾಗೂ ಸಹೋದರಿ ಹೊರತಾಗಿಯೂ ವಯನಾಡು ಜನತೆಗೆ ಸದಾ ಲಭ್ಯವಿರುತ್ತೇನೆ ಎಂದು ರಾಹುಲ್ ಗಾಂಧಿ ಭರವಸೆ ನೀಡಿದ್ದಾರೆ.


ಪ್ರಿಯಾಂಕಾ ಗಾಂಧಿಗೆ ವಯನಾಡ್‌ ರಾಜಕೀಯ ಭವಿಷ್ಯ:

ಪ್ರಿಯಾಂಕಾ ಗಾಂಧಿ ವಯನಾಡ್ ಜನತೆಗೆ ತಮ್ಮ ಬದ್ಧತೆಯನ್ನು ತೋರಿಸಿದ್ದಾರೆ. ತಮ್ಮ ಪ್ರಚಾರದ ಸಮಯದಲ್ಲಿ ಅವರು ವಯನಾಡಿನ ಅಭಿವೃದ್ಧಿ ಮತ್ತು ಗುರುತಿಗೆ ಹೊಸ ರೂಪವನ್ನು ನೀಡುವುದಾಗಿ ಭರವಸೆ ನೀಡಿದರು. ವಯನಾಡ್ ಅನ್ನು ಪ್ರವಾಸಿಗರು ಮೊದಲು ಬರಲು ಬಯಸುವ ಸ್ಥಳವನ್ನಾಗಿ ಮಾಡಬೇಕು ಎಂದು ರಾಹುಲ್ ಗಾಂಧಿ ಸಲಹೆ ನೀಡಿದ್ದರು, ಇದು ವಯನಾಡಿನ ಸ್ಥಾನವನ್ನು ಬಲಪಡಿಸುವುದಲ್ಲದೆ ಅಲ್ಲಿನ ಸ್ಥಳೀಯ ಆರ್ಥಿಕತೆಗೆ ಪ್ರಯೋಜನವನ್ನು ನೀಡುತ್ತದೆ. ಅದ್ಯಾಗೂ ವಯನಾಡ್ ಉಪಚುನಾವಣೆ ಫಲಿತಾಂಶವು ಕಾಂಗ್ರೆಸ್‌ಗೆ ಮಹತ್ವದ ತಿರುವು ನೀಡಬಹುದು. ಮತ ಎಣಿಕೆ ನಡೆಯುತ್ತಿದ್ದು, ಪ್ರಿಯಾಂಕಾ ಗಾಂಧಿ ಅವರು ಸದ್ಯ ಮುನ್ನಡೆ ಸಾಧಿಸಿದ್ದಾರೆ. ಅವರ ಚುನಾವಣಾ ಗೆಲುವಿನ ಭರವಸೆಯಾಗಿ ಪರಿಣಮಿಸಿದೆ.ಇದರ ನಡುವೆ ಮಹಾರಾಷ್ಟ್ರ ಮತ್ತು ಜಾರ್ಖಂಡ್ ವಿಧಾನಸಭಾ ಚುನಾವಣೆಯ ಫಲಿತಾಂಶಗಳು ಸಹ ಇಂದು ಪ್ರಕಟವಾಗಲಿದ್ದು, ಇದು ಭಾರತೀಯ ರಾಜಕೀಯಕ್ಕೆ ಮತ್ತೊಂದು ಪ್ರಮುಖ ದಿನವಾಗಿದೆ.

Latest Videos
Follow Us:
Download App:
  • android
  • ios