Asianet Suvarna News Asianet Suvarna News

ಇನ್ಮುಂದೆ PMMVY ಯೋಜನೆಗೆ ಪತಿಯ ಆಧಾರ್ ಕಾರ್ಡ್ ಕಡ್ಡಾಯವಲ್ಲ!

ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆ
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಘೋಷಣೆ
ಕೆಲ ನಿಯಮಗಳನ್ನು ಬದಲಿಸಿದ ಕೇಂದ್ರ ಸಚಿವಾಲಯ

Written consent and Aadhaar of husband not to be mandatory in Pradhan Mantri Matru Vandana Yojana san
Author
Bengaluru, First Published Feb 2, 2022, 7:36 PM IST

ನವದೆಹಲಿ (ಫೆ. 2): ಅಪೌಷ್ಟಿಕತೆ, ರಕ್ತಹೀನತೆ, ಶಿಶುಮರಣ, ಬಾಣಂತಿಯರ ಮರಣವನ್ನು ತಡೆಯುವ ನಿಟ್ಟಿನಲ್ಲಿ ಭಾರತ ಸರ್ಕಾರ ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆಯನ್ನು (PMMVY) ಈಗಾಗಲೇ ಜಾರಿಗೆ ತಂದಿದೆ. ಆದರೆ, ಇದರಲ್ಲಿನ ಕೆಲ ಲೋಪದೋಷಗಳನ್ನು ಪತ್ತೆ ಹಚ್ಚಿರುವ ಕೇಂದ್ರ ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಇಲಾಖೆ, ಪತಿಯ ಲಿಖಿತ ಒಪ್ಪಿಗೆ ಹಾಗೂ ಆತನ ಆಧಾರ್ ಕಾರ್ಡ್ ಪಿಎಂಎಂವಿವೈ ಯೋಜನೆಗೆ ಕಡ್ಡಾಯವಲ್ಲ ಎಂದು ಘೋಷಣೆ ಮಾಡಿದೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ಕೇಂದ್ರ ಪ್ರಾಯೋಜಿತ ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆ (PMMVY) ಅನ್ನು ಅನುಷ್ಠಾನಗೊಳಿಸುತ್ತಿದೆ, ಇದರ ಅಡಿಯಲ್ಲಿ ಗರ್ಭಿಣಿ ಮಹಿಳೆಯರು ಮತ್ತು ಹಾಲುಣಿಸುವ ತಾಯಂದಿರಿಗೆ (PW&LM) (Pregnant Women & Lactating Mothers ) ಮೊದಲ ಮಗುವಿಗೆ ಮೂರು ಕಂತುಗಳಲ್ಲಿ 5 ಸಾವಿರ ರೂಪಾಯಿಯ ಮಾತೃತ್ವ ಪ್ರಯೋಜನಗಳನ್ನು ನೀಡಲಾಗುತ್ತದೆ ಹಾಗೂ ಇದಕ್ಕೆ ಕೆಲವು ಷರತ್ತುಗಳನ್ನೂ ವಿಧಿಸಲಾಗಿತ್ತು. ಪಿಎಂಎಂವಿವೈ ಅಡಿಯಲ್ಲಿ ಹೆರಿಗೆ ಪ್ರಯೋಜನವನ್ನು ಪಡೆಯಲು, ಫಲಾನುಭವಿಯು ಡೇಟಾಬೇಸ್‌ನಲ್ಲಿ ತನ್ನ ಹಾಗೂ ತನ್ನ ಪತಿಯ ಆಧಾರ್ ಕಾರ್ಡ್ ವಿವರಗಳನ್ನು ನೀಡಬೇಕಿದ್ದವು.

2016ರಲ್ಲಿ ಕೇಂದ್ರ ಸರ್ಕಾರ (central government) ಘೋಷಣೆ ಮಾಡಿದ್ದ ಈ ಯೋಜನೆಯಲ್ಲಿ ಪತಿಯ ಆಧಾರ್ ಕಾರ್ಡ್ (Aadhaar Card) ಜೋಡಣೆ ಮಾಡುವುದೇ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದ್ದವು. ಪತಿಯ ಆಧಾರ್ ಕಾರ್ಡ್ ಹೊಂದಿರುವ ಮಹಿಳೆಯರು  ಹಾಗೂ ಲಿಖಿತ ಒಪ್ಪಿಗೆಯನ್ನು ಪಡೆದ ಮಹಿಳೆಯರು ಮಾತ್ರವೇ ಈ ಯೋಜನೆಯ ಲಾಭವನ್ನು ಪಡೆದುಕೊಳ್ಳುತ್ತಿದ್ದರು. ಆದರೆ, ಗುರುವಾರ ರಾಜ್ಯಸಭೆಯಲ್ಲಿ ಈ ವಿಚಾರ ಬಗ್ಗೆ ಲಿಖಿತ ಉತ್ತರದಲ್ಲಿ ತಿಳಿಸಿದ ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಸ್ಮೃತಿ ಇರಾನಿ (Union Minister of Women and Child Development Smriti Irani), ಇನ್ನು ಮುಂದೆ ಈ ಯೋಜನೆಗಳ ಲಾಭ ಪಡೆಯಲು ಮಹಿಳೆಯರಿಗೆ ಪತಿಯ ಆಧಾರ್ ಕಾರ್ಡ್ ಹಾಗೂ ಲಿಖಿತ ಒಪ್ಪಿಗೆ ಪತ್ರ ಅಗತ್ಯವಿಲ್ಲ ಎಂದು ಹೇಳಿದ್ದಾರೆ.
 


ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ಜಾರಿಗೊಳಿಸುತ್ತಿರುವ ತಾಯಿ ಅಥವಾ ಗರ್ಭಿಣಿಯರಿಗೆ ಉದ್ದೇಶಿಸಿರುವ ಇತರ ಯೋಜನೆಗಳ ಅಡಿಯಲ್ಲಿ ಇಂಥ ಯಾವುದೇ ಷರತ್ತುಗಳು ಇದ್ದಿರಲಿಲ್ಲ. ಪಿಎಂಎಂವಿವೈ ಅನ್ನು ಒಡಿಶಾ ಮತ್ತು ತೆಲಂಗಾಣ ಹೊರತುಪಡಿಸಿ ಎಲ್ಲಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಅಳವಡಿಸಲಾಗಿದೆ. ವಲಸಿಗರು ಯೋಜನೆಯನ್ನು ಅನುಷ್ಠಾನಗೊಳಿಸುವ ಯಾವುದೇ ರಾಜ್ಯ/ಕೇಂದ್ರಾಡಳಿತ ಪ್ರದೇಶದಿಂದ ಯೋಜನೆಯ ಪ್ರಯೋಜನಗಳನ್ನು ಪಡೆಯಬಹುದು. ಇದಲ್ಲದೆ, ಯೋಜನೆಯಡಿಯಲ್ಲಿ ನೋಂದಣಿಗಾಗಿ, ಫಲಾನುಭವಿಯು ತನ್ನ ಮತ್ತು ಅವಳ ಪತಿಯ ಲಿಖಿತ ಸಮ್ಮತಿಯನ್ನು ಮಾತೃತ್ವ ಪ್ರಯೋಜನಗಳನ್ನು ಪಡೆಯಲು ಸಲ್ಲಿಸಬೇಕಾಗುತ್ತದೆ ಎಂದು ಈ ಹಿಂದೆ ಹೇಳಲಾಗಿತ್ತು.

ಅಮ್ಮನ ಕೈಯಿಂದ ಬೀಳುವ ಏಟೇ ಸಾಕು ಯಾವ ಮನೋತಜ್ಞರು ಬೇಡ... Smriti Irani ಪೋಸ್ಟ್‌ ನೋಡಿ
ಸಿಂಗಲ್ ಪೇರೆಂಟ್ ಗಳಿಗೆ ಲಾಭ: 
ಸಿಂಗಲ್ ಪೇರೆಂಟ್ ಹಾಗೂ ಪತಿಯಿಂದ ದೂರವಾಗಿರುವ ಮಹಿಳೆಯರಿಗೂ ಈ ಸೇವೆಗಳು ಲಭ್ಯವಾಗಬೇಕು ಎನ್ನುವ ಮಿಷನ್ ಶಕ್ತಿ ಅಡಿಯಲ್ಲಿ ಪಿಎಂಎಂವಿವೈ  ನಿಯಮಗಳಲ್ಲಿ ಕೆಲ ಬದಲಾವಣೆಗಳನ್ನು ತರಲಾಗಿದೆ. ಅದರಂತೆ ಪತಿಯ ಲಿಖಿತ ಒಪ್ಪಿಗೆಯಾಗಲಿ, ಆತನ ಆಧಾರ್ ಕಾರ್ಡ್ ಆಗಲಿ ಇನ್ನುಮುಂದೆ ಕಡ್ಡಾಯ ಮಾನದಂಡವಾಗಿರುವುದಿಲ್ಲ. ಇದರಿಂದಾಗಿ ಸಿಂಗಲ್ ಪೇರೆಂಟ್ ಗಳು ಹಾಗೂ ಗಂಡನಿಂದ ದೂರವಾದ ಮಹಿಳೆಯರಿಗೆ ಇದು ದೊಡ್ಡ ಮಟ್ಟದ ಸಹಾಯವಾಗಲಿದೆ.  ನೀತಿ ಆಯೋಗದ ಅಭಿವೃದ್ಧಿ ಮತ್ತು ಮಾನಿಟರಿಂಗ್ ಮೌಲ್ಯಮಾಪನ ಕಚೇರಿಯು ಪಿಎಂಎಂವಿವೈ  ಸೇರಿದಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಕೇಂದ್ರ ಪ್ರಾಯೋಜಿತ ಯೋಜನೆಗಳನ್ನು ಮೌಲ್ಯಮಾಪನ ಮಾಡಿದ್ದು ಅದರ ಅನ್ವಯ ಸಚಿವಾಲಯದ ಶಿಫಾರಸುಗಳನ್ನು ಪರಿಗಣನೆ ಮಾಡಿದೆ.

UP Elections: ನಾನು ಸೋತರು ಅಮೇಠಿ ಜನರೊಂದಿಗಿದ್ದೆ, ಅವರು ಗೆದ್ದರೂ ಓಡಿಹೋದರು: ರಾಹುಲ್‌ಗೆ ಸ್ಮೃತಿ ಟಾಂಗ್!
ಪಿಎಂಎಂವಿವೈ ಅಡಿಯಲ್ಲಿ ಪ್ರಯೋಜನಗಳು:
ಅರ್ಹ ಗರ್ಭಿಣಿ ಮತ್ತು ಬಾಣಂತಿಯರಿಗೆ ಮೂರು ಕಂತುಗಳಲ್ಲಿ 5000 ರೂಪಾಯಿ ನಗದು ಸಹಾಯಧನ. ಫಲಾನುಭವಿಯ ಖಾತೆಗೆ ನೇರವಾಗಿ ಹಣ ವರ್ಗಾವಣೆಯಾಗುತ್ತದೆ. ಅಂಗನವಾಡಿ ಕೇಂದ್ರದಲ್ಲಿ (ಎಡಬ್ಲ್ಯೂಸಿ) ನೋಂದಣಿ ಮಾಡಿಸಿದ ಗರ್ಭಿಣಿಯರಿಗೆ 150 ದಿನದೊಳಗಾಗಿ ಮೊದಲನೇ ಕಂತಿನಲ್ಲಿ 1000 ರೂಪಾಯಿ ಪಾವತಿಸಲಾಗುತ್ತದೆ. ಎರಡನೇ ಕಂತಿನ 2000 ರೂಪಾಯಿ ಸಹಾಯಧನವನ್ನು ಗರ್ಭಧಾರಣೆಯ 6 ತಿಂಗಳ ನಂತರ ಕನಿಷ್ಠ ಒಂದು ಬಾರಿ ವೈದ್ಯಕೀಯ ತಪಾಸಣೆ ಮಾಡಿದ ನಂತರ ಪಾವತಿಸಲಾಗುತ್ತದೆ. ಮೂರನೇ ಕಂತಿನ 2000 ರೂಪಾಯಿಯನ್ನು ಮಗುವಿನ ಜನನ ಅಧಿಕೃತವಾಗಿ ನೋಂದಣಿಯ ನಂತರ ಮತ್ತು ಮಗುವಿಗೆ ಮೊದಲ ಸುತ್ತಿನ ಬಿಸಿಜಿ, ಒಪಿವಿ, ಡಿಪಿಟಿ ಮತ್ತು ಹೆಪಟೈಟಿಸ್ ಹಾಕಿಸಿದ ನಂತರ ಪಾವತಿಸಲಾಗುವುದು.

Follow Us:
Download App:
  • android
  • ios