100 ಜನ ಶತ್ರುಗಳಿಗಿಂತ ಇಂಥ 3 ಫ್ರೆಂಡ್ಸ್ ಇದ್ರೆ ಸಾಕು; ಸ್ನೇಹಿತರಿಂದ ಆಸ್ಪತ್ರೆ ಸೇರಿದ ಗೆಳೆಯನ ವಿಡಿಯೋ ನೋಡಿ

ಮೂವರು ಗೆಳೆಯರು ಥ್ರಿಲ್ಲಿಂಗ್ ಗೇಮ್ ಆಡಲು ತೆರಳಿದ್ದರು. ಇಬ್ಬರು ಗೆಳೆಯರು ಉಪಾಯವಾಗಿ ಗೇಮ್ ಆಡದೆ ತಪ್ಪಿಸಿಕೊಂಡರು. ಒಬ್ಬನೇ ಭಯಾನಕ ಗೇಮ್ ಆಡಿದ ಗೆಳೆಯ ಆಸ್ಪತ್ರೆ ಸೇರಿದ್ದಾನೆ.

Watch the video of a friend who was hospitalized after playing a thrilling game mrq

ಸೋಶಿಯಲ್ ಮೀಡಿಯಾದಲ್ಲಿ ಕೆಲವೊಂದು ವಿಡಿಯೋಗಳು ತುಂಬಾನೇ ಬೇಗ ವೈರಲ್ ಆಗುತ್ತವೆ. ವಿಡಿಯೋ ನೋಡಿದ ನೆಟ್ಟಿಗರು ಮೆಚ್ಚುಗೆ ಸೂಚಿಸಿ ಶೇರ್ ಮಾಡಿಕೊಳ್ಳುತ್ತಾರೆ. ಕೆಲವರು ವಿಡಿಯೋ ಶೇರ್ ಮಾಡಿಕೊಳ್ಳೋದರ ಜೊತೆ ಕಮೆಂಟ್ ಮೂಲಕ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ. ಈ ವಿಡಿಯೋವನ್ನು 100 ಜನ ಶತ್ರುಗಳಿಗಿಂತ ಇಂಥ 3 ಫ್ರೆಂಡ್ಸ್ ಸಾಕು ಎಂದು ಶೀರ್ಷಿಕೆಯಡಿಯಲ್ಲಿ ಹಂಚಿಕೊಳ್ಳಲಾಗಿದೆ. ಸ್ನೇಹಿತರನ್ನು ನಂಬಿ ಹೋಗಿದ್ದ ವ್ಯಕ್ತಿ ಆಸ್ಪತ್ರೆ ಸೇರುವಂತಾಗಿದೆ. ಹಾಗಾದ್ರೆ ಅಸಲಿಗಿ ಆಗಿದ್ದೇನು? ಆ ವ್ಯಕ್ತಿ ಆಸ್ಪತ್ರೆ ಸೇರಿದ್ಯಾಕೆ ಎಂಬುದನ್ನು ನೋಡೋಣ ಬನ್ನಿ.

ಸಾಮಾನ್ಯವಾಗಿ ಜಾತ್ರೆಗಳಲ್ಲಿ ಮೇಲಿನಿಂದ ಕೆಳಗೆ ಬರೋ ಚಕ್ರದ ರೀತಿಯ ಆಟಗಳಿರುತ್ತವೆ. ಜನರು ಭಯವಿದ್ರೂ ಇವುಗಳಲ್ಲಿ ಕುಳಿತುಕೊಂಡು ಎಂಜಾಯ್ ಮಾಡುತ್ತಾರೆ. ಬೆಂಗಳೂರಿನ ವಂಡಲ್ ಲಾದಲ್ಲಿ ಈ ರೀತಿಯ ಫನ್ ಗೇಮ್‌ಗಳು ಇರುತ್ತವೆ. ಕೆಲ ಗೇಮ್‌ಗಳಲ್ಲಿ ಆಡಲು ಎಂಟೆದೆಯ ಗುಂಡಿಗೆ ಇರಬೇಕಾಗುತ್ತದೆ. ಜಿಗ್ ಜಾಗ್ ರೈಲು (Recoil), ಸೀಟ್‌ನಲ್ಲಿ ಕುಳಿತಿರುವ ವ್ಯಕ್ತಿಯನ್ನು ಮೇಲೆ ಕರೆದುಕೊಂಡು ಹೋಗಿ ವೇಗದಲ್ಲಿ ಕೆಳಗೆ ಇಳಿಸುವ ಗೇಮ್‌ಗಳು (Drop Zone) ಭಯ ಹುಟ್ಟಿಸುತ್ತವೆ. ಇದೇ ರೀತಿಯ Equinox, Insanity, Hurricane ಮತ್ತು Y-Scream ಸೇರಿದಂತೆ ಥ್ರಿಲ್ಲಿಂಗ್ ಗೇಮ್‌ಗಳಿರುತ್ತವೆ. 

ವೈರಲ್ ವಿಡಿಯೋ
ಇಂತಹ ಗೇಮ್‌ಗಳನ್ನು ನೋಡಲು ಮತ್ತು ಆಡಲು ಜನರು ಹೋಗುತ್ತಿರುತ್ತಾರೆ. ಇದೇ ರೀತಿ ಗೆಳೆಯನೊಂದಿಗೆ ಹೋದ ವ್ಯಕ್ತಿ ಆಸ್ಪತ್ರೆ ಸೇರಿದ್ದಾನೆ. ಈ ವಿಡಿಯೋದಲ್ಲಿ ಮೂವರು ಗೆಳೆಯರು ಥ್ರಿಲ್ಲಿಂಗ್ ಗೇಮ್ ಆಡಲು ತೆರಳುತ್ತಾರೆ. ಮೂವರಲ್ಲಿ ತುಂಬಾನೇ ಹೆದರುವ ಗೆಳೆಯನನ್ನು ಮೇಲಿನಿಂದ ಕೆಳಗೆ ವೇಗವಾಗಿ ಇಳಿಸುವ ಡ್ರಾಪ್ ಝೋನ್‌ ಗೇಮ್‌ಗೆ ಕರೆದುಕೊಂಡು ಬಂದಿದ್ದಾರೆ. ಆತ ಹಿಂದೇಟು ಹಾಕುತ್ತಿರೋದನ್ನು ವಿಡಿಯೋದಲ್ಲಿ ಗಮನಿಸಬಹುದು. 

ಇದನ್ನೂ ಓದಿ: ಹೆಂಡ್ತಿಗೆ ರೊಮ್ಯಾಂಟಿಕ್‌ ಆಗಿ ಹೂ ಮುಡಿಸುತ್ತಿದ್ದ ಗಂಡನನ್ನ ವಿಚಲಿತಗೊಳಿಸಿದ ಹಸು; ವಿಡಿಯೋ ವೈರಲ್ 

ಮಧ್ಯದಲ್ಲಿ ಆತನನ್ನು ಕೂರಿಸಿ, ಆತನ ಅಕ್ಕಪಕ್ಕದಲ್ಲಿಯೇ ಇಬ್ಬರು ಗೆಳೆಯರು ಕುಳಿತುಕೊಂಡಿರುತ್ತಾರೆ. ಗೇಮ್ ಸ್ಟಾರ್ಟ್ ಕೆಲ ಕ್ಷಣಗಳ ಮುಂಚೆ ಇಬ್ಬರು ಉಪಾಯವಾಗಿ ಅಲ್ಲಿಂದ ಬಂದಿದ್ದಾರೆ. ಪಾಪ, ಒಬ್ಬನೇ ಕುಳಿತು ಗೇಮ್ ಆಡಿದ್ದಾನೆ. ತುಂಬಾ ಎತ್ತರದಿಂದ ವೇಗವಾಗಿ ಕೆಳಗೆ ಇಳಿದ ಕಾರಣ ಭಯಗೊಂಡಿದ್ದ ಗೆಳೆಯನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. 

ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಕೆಲ ದಿನಗಳ ಹಿಂದೆ ವ್ಯಕ್ತಿಯೋರ್ವನಿಗೆ ಆತನ ಗೆಳೆಯರು ಏರ್‌ಪೋರ್ಟ್ ಬೋರ್ಡಿಂಗ್ ಪಾಸ್‌ನ್ನು ನ್ಯೂಸ್‌ ಪೇಪರ್ ಸೈಜ್ ಕಾಗದದಲ್ಲಿ ಪ್ರಿಂಟ್ ಹಾಕಿಸಿಕೊಂಡು ಬಂದಿದ್ದರು. ಈ ವಿಡಿಯೋ ಸಹ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಇದನ್ನೂ ಓದಿ: ಸರ್ಕಾರಿ ಬಸ್‌ನಲ್ಲಿ ಸೀಟ್‌ ಹಿಡಿಯೋ ಟೆಕ್ನಿಕ್ ಹೇಳಿಕೊಟ್ಟ ಶಿವಪುತ್ರ; ಇದು ಎಲ್ಲರಿಂದಲೂ ಸಾಧ್ಯವಿಲ್ಲವೆಂದ ನೆಟ್ಟಿಗರು

Latest Videos
Follow Us:
Download App:
  • android
  • ios