ಹೆಂಡ್ತಿಗೆ ರೊಮ್ಯಾಂಟಿಕ್ ಆಗಿ ಹೂ ಮುಡಿಸುತ್ತಿದ್ದ ಗಂಡನನ್ನ ವಿಚಲಿತಗೊಳಿಸಿದ ಹಸು; ವಿಡಿಯೋ ವೈರಲ್
ರಸ್ತೆ ಬದಿಯಲ್ಲಿ ಪತ್ನಿಗೆ ಹೂ ಮುಡಿಸುತ್ತಿದ್ದ ವ್ಯಕ್ತಿಗೆ ಹಸುವೊಂದು ಅಡ್ಡ ಬಂದ ವಿಡಿಯೋ ವೈರಲ್ ಆಗಿದೆ. ಈ ದೃಶ್ಯವನ್ನು ನೋಡಿದ ನೆಟ್ಟಿಗರು ತಮಾಷೆಯಾಗಿ ಕಮೆಂಟ್‌ಗಳನ್ನು ಮಾಡಿದ್ದಾರೆ.
ರಸ್ತೆ ಬದಿಯಲ್ಲಿ ನಿಂತು ರೊಮ್ಯಾಂಟಿಕ್ ಆಗಿ ಪತ್ನಿಗೆ ಹೂ ಮುಡಿಸುತ್ತಿದ್ದ ವ್ಯಕ್ತಿಯನ್ನು ಹಸುವೊಂದು ವಿಚಲಿತಗೊಳಿಸಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಹಸುವಿಗೆ ನಿಮ್ಮನ್ನು ನೋಡಿ ಹೊಟ್ಟೆಕಿಚ್ಚು ಆಗಿರಬೇಕು ಎಂದು ನೆಟ್ಟಿಗರು ತಮಾಷೆಯಾಗಿ ಕಮೆಂಟ್ ಮಾಡಿದ್ದಾರೆ. ಬಹುತೇಕರು ನಗುವಿನ ಎಮೋಜಿಯನ್ನು ಕಮೆಂಟ್ ಬಾಕ್ಸ್‌ನಲ್ಲಿ ಹಾಕಿದ್ದಾರೆ. ಡಿಸೆಂಬರ್ 23, 2024ರಂದು ಈ ವಿಡಿಯೋವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾಗಿದ್ದು, ಇದುವರೆಗೂ 1,373,361 ಲೈಕ್ಸ್ ಬಂದಿವೆ.
ವೈರಲ್ ಆಗಿರುವ ವಿಡಿಯೋವನ್ನು nrv_emotions ಹೆಸರಿನ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಲಾಗಿದೆ. ಇಬ್ಬರ ಮಧ್ಯೆ ಬಂದಿರುವ ಹಸುವಿಗೆ, ಮೇಡಂ ಬರುತ್ತಿದ್ದಾರೆ, ಎಲ್ಲರೂ ದಾರಿ ಮಾಡಿಕೊಡಿ ಎಂದು ನೆಟ್ಟಿಗರು ಹೇಳುತ್ತಿದ್ದಾರೆ.
ವೈರಲ್ ವಿಡಿಯೋದಲ್ಲಿ ಏನಿದೆ?
ವ್ಯಕ್ತಿಯೋರ್ವ ರಸ್ತೆಬದಿಯಲ್ಲಿಯೇ ನಿಂತು ಮಲ್ಲಿಗೆ ಮಾಲೆಯನ್ನು ಮುಡಿಸುತ್ತಿರುತ್ತಾನೆ. ಈ ಸುಂದರ ದೃಶ್ಯವನ್ನು ವ್ಯಕ್ತಿಯೊಬ್ಬರು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿಯುತ್ತಿರುತ್ತಾರೆ. ಇನ್ನೇನು ಹೂ ಮುಡಿಸಬೇಕು ಅನ್ನೋವಷ್ಟರಲ್ಲಿ ಗಂಡ ಹೆಂಡತಿ ನಡುವೆ ಹಸುವಿನ ಎಂಟ್ರಿಯಾಗುತ್ತದೆ. ಇದರಿಂದ ಗಾಬರಿಗೊಂಡ ಮಹಿಳೆ ಮುಂದಕ್ಕೆ ಓಡಿ ಬರುತ್ತಾರೆ. ಪುರುಷ ಹಿಂದಕ್ಕೆ ಸರಿಯುತ್ತಾನೆ. ಅಲ್ಲಿಂದ ಹಸು ತನ್ನ ಪಾಡಿಗೆ ಮುಂದಕ್ಕೆ ಹೋಗುತ್ತದೆ.
ಈ ವಿಡಿಯೋಗೆ ಸೈಡ್ ಸರಿದುಕೊಳ್ಳಿ, ಮೇಡಮ್ ಗೆ ಬರಲು ದಾರಿ ಮಾಡಿಕೊಡಿ ಎಂಬ ಧ್ವನಿಯನ್ನು ಸೇರಿಸಿ ಶೇರ್ ಮಾಡಿಕೊಳ್ಳಲಾಗಿದೆ. ಆದ್ರೆ ಈ ವಿಡಿಯೋ ಎಲ್ಲಿಯದ್ದು ಎಂಬುದರ ಬಗ್ಗೆ ತಿಳಿದು ಬಂದಿಲ್ಲ.
ವ್ಯಕ್ತಿಯ ಮೇಲೆ ಗೂಳಿ ದಾಳಿ
ಬೆಳಗ್ಗೆ ವಾಕಿಂಗ್ ಹೋಗುತ್ತಿದ್ದ ವ್ಯಕ್ತಿಯ ಮೇಲೆ ಗೂಳಿಯೊಂದು ಮಾರಣಾಂತಿಕವಾಗಿ ದಾಳಿ ಮಾಡಿತ್ತು. ಕೊಂಬಿನಿಂದ ಎತ್ತಿ ಹಾಕಿ ಬಳಿಕ ವ್ಯಕ್ತಿಯನ್ನು ತಿವಿದಿತ್ತು. ಹೋರಿಯ ಈ ಆಕ್ರೋಶಕ್ಕೆ ಸ್ಥಳದಲ್ಲೇ ವೃದ್ಧ ಪ್ರಾಣ ಬಿಟ್ಟಿದ್ದರು. ಈ ಘಟನೆ ಉತ್ತರ ಪ್ರದೇಶದ ಬರೇಲಿಯ ಸಂಜಯ್ ನಗರದಲ್ಲಿ ನಡೆದಿತ್ತು. ಈ ಘಟನೆಯ ಎಲ್ಲಾ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.
#उत्तर_प्रदेश #बरेली के संजय नगर में सुबह मॉर्निंग वॉक पर निकले रिटायर्ड बैंक कर्मचारी को सांड ने जान से मार डाला !!#Bareilly #Bull @bareilly_nn @dmbareilly #viralvideo pic.twitter.com/Dyk5P1MeZg
— MANOJ SHARMA LUCKNOW UP🇮🇳🇮🇳🇮🇳 (@ManojSh28986262) January 24, 2024