ಜೇನು ನೊಣಗಳ ಸಾಹಸ ನೋಡಿ ಹಂಗೂ ಹಿಂಗೂ ಶ್ರಮ ಹಾಕಿ ಬಾಟಕ್ ಕ್ಯಾಪ್ ತೆಗೆದ ನೊಣಗಳು ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ 

ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ವಿಡಿಯೋಗಳು ವೈರಲ್ ಆಗುತ್ತವೆ. ಯಾರೋ, ಎಲ್ಲಿಯೋ, ಯಾವಾಗಲೋ ಮಾಡಿದ ವಿಡಿಯೋ ಇನ್ಯಾವಾಗಲೋ ವೈರಲ್ ಆಗೋದು ಬಹಳ ಸಾಮಾನ್ಯ.

ಇತ್ತೀಚೆಗೆ ಇನ್‌ಸ್ಟಗ್ರಾಂನಲ್ಲಿ ಓಡಾಡ್ತಿರೋ ವಿಡಿಯೋದಲ್ಲಿ ಎರಡು ಪುಟ್ಟ ಜೇನು ನೊಣಗಳು ಜ್ಯೂಸ್ ಬಾಟಲ್‌ನ ಕ್ಯಾಪ್ ತೆಗೆಯೋದನ್ನು ಕಾಣಬಹುದು. ಬಾಟಲ್ ನೆಕ್‌ನಲ್ಲಿ ಕುಳಿತು ಕ್ಯಾಪ್ ಎತ್ತಿ ಉರುಳಿಸುತ್ತವೆ ನೊಣಗಳು.

ಆರೋಗ್ಯ ಸುಧಾರಣೆ ಸೂತ್ರ; ಗೋಮಾತೆ ತಬ್ಬಿಕೊಳ್ಳಲು ಗಂಟೆಗೆ 200 ಡಾಲರ್!

ಹಳದಿ ಬಣ್ಣದ ಜ್ಯೂಸ್ ಇರೋ ಮಿನಿ ಬಾಟಲ್ ಮೇಲೆ ಹಳದಿ ಬಣ್ಣದ ಕ್ಯಾಪ್ ಕಾಣಬಹುದು. ಫಾಂಟಾ ಎಂದು ಕ್ಯಾಪ್‌ ಮೇಲೆ ಬರೆದಿರೋದನ್ನು ಕಾಣಬಹುದು. ಆದರೂ ನೊಣಗಳ ಸಾಹಸದ ವಿಡಿಯೋ ಮಾತ್ರ ವೈರಲ್ ಆಗಿದೆ.

View post on Instagram

ಮೈಕಲ್ ಮೋರನ್ ಎಂಬ ವ್ಯಕ್ತಿ ವಿಡಿಯೋವನ್ನು ಟ್ವಿಟರ್ ಮೂಲಕ ಶೇರ್ ಮಾಡಿದ್ದು, ಈಗ ಇನ್‌ಸ್ಟಗ್ರಾಂ, ಫೇಸ್‌ಬುಕ್‌ನಲ್ಲಿ ಸಖತ್ ವೈರಲ್ ಆಗಿದೆ. ಸಿಹಿ ಹುಡುಕಿ ಹೋಗಳಿಗೆ ಅಲೆಯೋ ನೊಣಗಳು ಈಗ ಜ್ಯೂಸ್ ಬಾಟಲ್‌ ಕಡೆ ಬರ್ತಿವೆ.