ಟ್ರಕ್ ಹರಿಸಿ ಅಮೆರಿಕದ ಅಧ್ಯಕ್ಷ ಜೋ ಬಿಡೆನ್ ಅವರ ಹತ್ಯೆ ಮಾಡುವ ಸಂಚು ರೂಪಿಸಿದ್ದ ಭಾರತೀಯ ಮೂಲದ ವ್ಯಕ್ತಿಯನ್ನು ಯುಎಸ್ ಪಾರ್ಕ್ ಪೊಲೀಸರು ಬಂಧಿಸಿದ್ದಾರೆ. ಬಂಧಿತ ವ್ಯಕ್ತಿಯನ್ನು ಸಾಯಿ ವರ್ಷಿತ್ ಕಂದುಲಾ ಎಂದು ಗುರುತಿಸಲಾಗಿದೆ.
ನವದೆಹಲಿ (ಮೇ.24): ಅಮೆರಿಕದ ಅಧ್ಯಕ್ಷ ಜೋ ಬಿಡೆನ್ ಅವರ ಮೇಲೆ ಟ್ರಿಕ್ ಹರಿಸಿ ಹತ್ಯೆ ಮಾಡಲು ಕೆಲವು ತಿಂಗಳುಗಳಿಂದ ಪ್ಲ್ಯಾನ್ ಮಾಡಿ ಅದನ್ನು ಕಾರ್ಯರೂಪಕ್ಕೆ ತರುವ ಪ್ರಯತ್ನವನ್ನೂ ಮಾಡಿದ್ದ ಭಾರತೀಯ ಮೂಲದ ವ್ಯಕ್ತಿಯನ್ನು ಯುಎಸ್ ಪಾರ್ಕ್ ಪೊಲೀಸರು ಸೋಮವಾರ ಸಂಜೆ ಬಂಧಿಸಿದ್ದಾರೆ. ಬಂಧಿತ ವ್ಯಕ್ತಿಯನ್ನು 19 ವರ್ಷದ ಸಾಯಿ ವರ್ಷಿತ್ ಕಂದುಲಾ ಎಂದು ಗುರುತಿಸಲಾಗಿದೆ. 'ಉದ್ದೇಶಪೂರ್ವಕ' ಅಪಘಾತದ ನಂತರ ರಹಸ್ಯ ಸೇವೆಯಿಂದ ಬಂಧನಕ್ಕೊಳಗಾದ ಆರೋಪಿಯು, ಅಧ್ಯಕ್ಷ ಜೋ ಬಿಡನ್‌ಗೆ ಜೀವ ಬೆದರಿಕೆ ಹಾಕಿದ ಆರೋಪ ಹೊರಿಸಲಾಗಿದೆ. ಹೇಳಿಕೆಯೊಂದರಲ್ಲಿ, ಯುಎಸ್ ಪಾರ್ಕ್ ಪೋಲೀಸ್ ಕಂದುಲಾ ಅವರು ಅಧ್ಯಕ್ಷರು, ಉಪಾಧ್ಯಕ್ಷರು ಅಥವಾ ಕುಟುಂಬದ ಸದಸ್ಯರನ್ನು ಕೊಲ್ಲುವ, ಅಪಹರಿಸುವ ಅಥವಾ ಹಾನಿ ಮಾಡುವ ಬೆದರಿಕೆ ಸೇರಿದಂತೆ ಸಾಲು ಸಾಲು ಆರೋಪಗಳನ್ನು ಅವರ ಮೇಲೆ ಹಾಕಲಾಗಿದೆ ಎಂದು ಹೇಳಿದ್ದಾರೆ.
ಟ್ರಕ್‌ನಲ್ಲಿ ಯಾವುದೇ ಶಸ್ತ್ರಾಸ್ತ್ರಗಳು ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಆದಾಗ್ಯೂ, ತನಿಖಾಧಿಕಾರಿಗಳು ಟ್ರಕ್‌ನ ಒಳಗಿನಿಂದ ನಾಜಿ ಧ್ವಜವನ್ನು ಹೊರತೆಗೆದಿದ್ದಾರೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ. ಟ್ರಕ್ ಅಪಘಾತದಿಂದ ಯಾವುದೇ ಗಾಯಗಳಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ನಡುವೆ ರಾತ್ರಿ 10 ಗಂಟೆಯ ಮುನ್ನ ಅಪಘಾತದ ಸಮಯದಲ್ಲಿ ಅಧ್ಯಕ್ಷ ಜೋ ಬಿಡೆನ್ ಅವರು ನಿಖರವಾಗಿ ಯಾವ ಸ್ಥಳದಲ್ಲಿದ್ದರು ಎನ್ನುವ ಮಾಹಿತಿ ಪತ್ತೆಯಾಗಿಲ್ಲ. ಅವರು ಸೋಮವಾರ ಸಂಜೆ ಶ್ವೇತಭವನದಲ್ಲಿ ಯುಎಸ್ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನ ಸ್ಪೀಕರ್ ಕೆವಿನ್ ಮೆಕಾರ್ಥಿ ಅವರನ್ನು ಭೇಟಿಯಾಗಿದ್ದರು.
ಏನಾಗಿತ್ತು ವೈಟ್‌ಹೌಸ್ ಬಳಿ: ಮಿಸೌರಿ ಮೂಲದ ವ್ಯಕ್ತಿ, ವಾಷಿಂಗ್ಟನ್‌ಗೆ ಬಂದಿದ್ದಲ್ಲದೆ, ಯು-ಹಾಲ್ ಟ್ರಕ್ ಅನ್ನು ಬಾಡಿಗೆಗೆ ತೆಗೆದುಕೊಂಡು ನೇರವಾಗಿ ಶ್ವೇತಭವನ ಇರುವ ಸ್ಥಳವಾದ ಕ್ಯಾಪಿಟಲ್ ಹಿಲ್ ಬಳಿ ಓಡಿಸಿದ್ದರು. ಅಲ್ಲಿ ಭದ್ರತಾ ತಡೆಗೋಡೆಗೆ ಟ್ರಕ್‌ಅನ್ನು ಅಪ್ಪಳಿಸಿದ್ದಲ್ಲದೆ, ನಾಜಿ ಧ್ವಜವನ್ನು ಬೀಸಲು ಆರಂಭಿಸಿದ್ದರು. ಚಾರ್ಜಿಂಗ್ ದಾಖಲೆಗಳ ಪ್ರಕಾರ, ಲಫಯೆಟ್ಟೆ ಚೌಕದ ಉತ್ತರ ಭಾಗದ ಬಳಿಯ ತಡೆಗೋಡೆಗೆ ಬಾಕ್ಸ್ ಟ್ರಕ್ ಅನ್ನು ಒಡೆದು ಹಾಕಿದ ಸ್ವಲ್ಪ ಸಮಯದ ನಂತರ ಸಾಯಿ ವರ್ಷಿತ್ ಕಂದುಲಾ ಅವರು ಬ್ಯಾಕ್‌ಪ್ಯಾಕ್‌ನಿಂದ ಧ್ವಜವನ್ನು ತೆಗೆದುಹಾಕಿದರು. ಧ್ವಜವನ್ನು ಹೊರತೆಗೆಯುವುದನ್ನು ನೋಡಿದ ಅಧಿಕಾರಿಯೊಬ್ಬರು ಅವರನ್ನು ಶೀಘ್ರವಾಗಿ ಬಂಧಿಸಿದರು ಎನ್ನಲಾಗಿದೆ.
92ರ ಅಜ್ಜ ರುಪರ್ಟ್ ಮುರ್ಡೋಕ್ ಬ್ರೇಕ್‌ಅಪ್, ಆನ್ ಲೆಸ್ಲಿ ಮದುವೆಯಾಗಲ್ಲ ಎಂದ ಮಾಧ್ಯಮ ದೊರೆ!
ಬಂಧನದ ಬಳಕ ಸೀಕ್ರೆಸ್ ಸರ್ವೀಸ್ ಏಜೆಂಟರಿಗೆ ತಿಳಿಸಿದ ಕಂದುಲಾ, ಒಂದು ತಿಂಗಳ ಯೋಜನೆಯ ಬಳಿಕ ಸೋಮವಾರವೇ ತಾನು ಒನ್ ವೇ ಟಿಕೆಟ್ ಮೂಲಕ ಸೇಂಟ್ ಲೂಯಿಸ್‌ನಿಂದ ಇಲ್ಲಿಗೆ ಪ್ರಯಾಣಿಸಿದ್ದೆ ಎಂದಿದ್ದಾರೆ. ಶ್ವೇತಭವನಕ್ಕೆ ನುಗ್ಗಿ ಅಧಿಕಾರ ಹಿಡಿದುಕೊಳ್ಳುವುದು ನನ್ನ ಕನಸಾಗಿತ್ತು. ಆ ಮೂಲಕ ದೇಶದ ಉಸ್ತುವಾರಿ ವಹಿಸಲು ಬಯಸಿದ್ದೆ ಎಂದು ಹೇಳಿರುವ ಕಂದುಲಾ, ಹಾಗೇನಾದರೂ ಅಗತ್ಯಬಿದ್ದರೆ ಅಧ್ಯಕ್ಷರನ್ನು ಕೊಲ್ಲುತ್ತಿದೆ ಎಂದೂ ತಿಳಿಸಿದ್ದಾರೆ. ಮಿಸೌರಿಯ ಚೆಸ್ಟರ್‌ಫೀಲ್ಡ್‌ನ ಸೇಂಟ್ ಲೂಯಿಸ್ ಉಪನಗರ ಮೂಲದವರಾದ ಕಂದುಲಾ, ನಾಜಿ ಪರವಾಗಿ ಒಲವು ಹೊಂದಿರುವ ವ್ಯಕ್ತಿಯಾಗಿದ್ದು ಆನ್‌ಲೈನ್‌ನಿಂದ ನಾಜಿ ಧ್ವಜ ಖರೀದಿಸಿದ್ದರು ಎನ್ನಲಾಗಿದೆ.
'ಇದೇ ಲಾಸ್ಟು..' ಅಂದ್ಕೊಂಡು 92ನೇ ವರ್ಷದಲ್ಲಿ ಐದನೇ ಬಾರಿ ಮದುವೆಯಾದ ರುಪರ್ಟ್ ಮುರ್ಡೋಕ್!
