ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ ಸಮಿಕ್ ಭಟ್ಟಾಚಾರ್ಯ, ರಾಷ್ಟ್ರೀಯವಾದಿ ಮುಸ್ಲಿಮರು ಬಿಜೆಪಿಯೊಂದಿಗೆ ಕೈಜೋಡಿಸಬೇಕೆಂದು ಮನವಿ ಮಾಡಿದ್ದಾರೆ.
ಕೋಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಬಿಜೆಪಿ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಪಕ್ಷ ಸಂಘಟನೆಯಲ್ಲಿ ಬದಲಾವಣೆ ಮಾಡುತ್ತಿದೆ. ಚುನಾವಣೆಗೂ ಮುನ್ನವೇ ರಾಜ್ಯಸಭಾ ಸಂಸದ ಸಮಿಕ್ ಭಟ್ಟಾಚಾರ್ಯ ಅವರನ್ನು ರಾಜ್ಯ ಬಿಜೆಪಿ ಅಧ್ಯಕ್ಷರನ್ನಾಗಿ ನೇಮಕ ಮಾಡಿದೆ. ಪಕ್ಷದ ರಾಜ್ಯಾಧ್ಯಕ್ಷರಾಗಿ ನೇಮಕವಾಗುತ್ತಿದ್ದಂತೆ ಸಮಿಕ್ ಭಟ್ಟಾಚಾರ್ಯ ಅಚ್ಚರಿ ಹೇಳಿಕೆಯೊಂದನ್ನು ನೀಡಿದ್ದಾರೆ. ಸಮಿಕ್ ಭಟ್ಟಾಚಾರ್ಯ ಅವರ ನೇಮಕಾತಿಯನ್ನು ಪಶ್ವಿಮ ಬಂಗಾಳದ ಹಿರಿಯರು ಮತ್ತು ಹೊಸ ನಾಯಕರ ನಡುವಿನ ಸೇತುವೆ ಎಂದು ವಿಶ್ಲೇಷಣೆಯನ್ನು ಮಾಡಲಾಗುತ್ತಿದೆ. ಇದೀಗ ಸಮಿಕ್ ಭಟ್ಟಾಚಾರ್ಯ, ಮುಸ್ಲಿಮರ ಕುರಿತು ಮೃದುಧೋರಣೆ ಹೊಂದಿದ್ದಾರೆ ಎಂಬಂತೆ ಅಚ್ಚರಿ ಹೇಳಿಕೆಯೊಂದನ್ನು ನೀಡಿದ್ದಾರೆ.
ಬಿಜೆಪಿ ಬೆಂಬಲಿಸುವಂತೆ ಮನವಿ
ಬಿಜೆಪಿ ರಾಜ್ಯಾಧ್ಯಕ್ಷರಾಗಿ ನೇಮಕವಾದ ನಂತರದ ತಮ್ಮ ಮೊದಲ ಭಾಷಣದಲ್ಲಿ ಸಮಿಕ್ ಭಟ್ಟಾಚಾರ್ಯ ಹಲವು ವಿಷಯಗಳ ಬಗ್ಗೆ ಮಾತನಾಡಿದರು. ಪಶ್ಚಿಮ ಬಂಗಾಳದಲ್ಲಿ ಬಹುತ್ವವನ್ನು ಗುರುತಿಸಬೇಕು. ಹಿಂದೂ ಮತ್ತು ಮುಸ್ಲಿಮರ ನಡುವೆ ಸಾಮರಸ್ಯವನ್ನು ಉತ್ತೇಜಿಸುವುದು. ಹಿಂಸೆಯ ಬದಲಾಗಿ ಶಿಕ್ಷಣವನ್ನು ಪ್ರತಿಪಾದಿಸಬೇಕು. ಮೂಲಭೂತವಾದವನ್ನು ಎದುರಿಸಲು ರಾಷ್ಟ್ರೀಯವಾದಿ ಮುಸ್ಲಿಮರು ಬಿಜೆಪಿಯೊಂದಿಗೆ ಕೈ ಜೋಡಿಸಬೇಕು ಎಂದು ಸಮಿಕ್ ಭಟ್ಟಾಚಾರ್ಯ ಮನವಿ ಮಾಡಿಕೊಂಡರು.
ಪಕ್ಷ ಸಂಘಟನೆಯೇ ದೊಡ್ಡದು!
ಇಲ್ಲಿ ಎಲ್ಲರಿಗೂ ಪಕ್ಷ ಮೊದಲು ಆಗಬೇಕು. ವಿರೋಧ ಪಕ್ಷ ನಾಯಕ ಸುವೇಂದು ಅಧಿಕಾರಿ, ಪಶ್ವಿಮ ಬಂಗಾಳ ಬಿಜೆಪಿಯ ಮಾಜಿ ಅಧ್ಯಕ್ಷ ದಿಲೀಪ್ ಘೋಷ್ ಸೇರಿದಂತೆ ಹಲವು ನಾಯಕರು ಸಾಮರಸ್ಯದ ಬಗ್ಗೆ ಸುಳಿವು ನೀಡಬೇಕು. ಯಾವುದೇ ವ್ಯಕ್ತಿಗಿಂತ ಸಂಘಟನೆ ದೊಡ್ಡದಾಗಬೇಕು ಎಂಬ ಸಂದೇಶವನ್ನು ಪಕ್ಷದ ಕಾರ್ಯಕರ್ತರಿಗೆ ಸಮಿಕ್ ಭಟ್ಟಾಚಾರ್ಯ ನೀಡಿದರು.
ಬಂಗಾಳದಲ್ಲಿ ಬಿಜೆಪಿ ರಾಜಕೀಯ ಸ್ಥಿತಿಗತಿ ಏನು?
ಸಮಿಕ್ ಭಟ್ಟಾಚಾರ್ಯ ಇಂಡಿಯಾ ಟುಡೇಗೆ ನೀಡಿರುವ ಸಂದರ್ಶನದಲ್ಲಿ, ಪಶ್ಚಿಮ ಬಂಗಾಳದಲ್ಲಿ ತಮ್ಮ ಪಕ್ಷ ಎದುರಿಸುತ್ತಿರುವ ಸವಾಲುಗಳೇನು ಎಂಬುದರ ಬಗ್ಗೆ ಮಾತನಾಡಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ನಮ್ಮ ಸಮಸ್ಯೆಗಳು ಹಂತ ಹಂತವಾಗಿವೆ. ಇಲ್ಲಿಯ ರಾಜಕೀಯ ವ್ಯಾಕರಣವೂ ತುಂಬಾ ಭಿನ್ನವಾಗಿರೋದನ್ನು ನಾವು ಗಮನಿಸಬಹುದು. ಹಿಂದೂ ಬಂಗಾಳಿಗಳು, ಎಡಪಂಥೀಯರು, ಜಾತಿ ಆಧಾರಿತ ಗುಂಪುಗಳು, ಮುಸ್ಲಿಮರು ಸೇರಿದಂತೆ ಪ್ರತಿಯೊಬ್ಬರು ತಮ್ಮದೇ ರಾಜಕೀಯ ನಿಲುವುಗಳನ್ನು ಹೊಂದಿದ್ದಾರೆ. ಇಲ್ಲಿಯ ರಾಜಕೀಯ ನಿಲುವುಗಳು ಸ್ಥಳದಿಂದ ಸ್ಥಳಕ್ಕೆ ಬೇರೆಯಾಗಿರುತ್ತವೆ ಎಂದು ಹೇಳಿದ್ದಾರೆ.
ಪಶ್ಚಿಮ ಬಂಗಾಳ ವಿದೇಶಿ ಪ್ರಜೆಗಳ ಒಳನುಸುಳಿವಿಕೆ ಸಮಸ್ಯೆಯನ್ನು ಎದುರಿಸುತ್ತಿದ್ದೇವೆ. ರೋಹಿಂಗ್ಯಾಗಳು ಇಲ್ಲಿ ವ್ಯವಸ್ಥಿತವಾಗಿ ನೆಲೆಸಿದ್ದಾರೆ. ಈ ರೋಹಿಂಗ್ಯಾಗಳ ಬೆಂಬಲದಿಂದ ತೃಣಮೂಲ ಕಾಂಗ್ರೆಸ್ ಪದೇ ಪದೇ ಅಧಿಕಾರಕ್ಕೆ ಬರುತ್ತಿದೆ. ಜಮ್ಮು ಕಾಶ್ಮೀರದ ಮುಸ್ಲಿಮರಂತೆ ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಮುಸ್ಲಿಮರ ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಳ್ಳುತ್ತಾರೆ. ಮೂಲ ಪಶ್ಚಿಮ ಬಂಗಾಳ ನಿವಾಸಿಗಳು ಈ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಬಾಂಗ್ಲಾದೇಶದಲ್ಲಿನ ಇತ್ತೀಚಿನ ಘಟನೆಗಳ ನಂತರ . ಸಾಂಪ್ರದಾಯಿಕ ಎಡಪಂಥೀಯರು, ಸ್ವಯಂ ಘೋಷಿತ ಪ್ರಗತಿಪರರು ಹೇಳಿಕೆಗಳು ಅಪಾಯದ ಆತಂಕವನ್ನು ಹೆಚ್ಚಿಸುತ್ತಿವೆ ಎಂದು ಹೇಳುತ್ತಾರೆ.
ಬಿಜೆಪಿ ಎಂದಿಗೂ ಶೇ.100ರಷ್ಟು ಹಿಂದೂಗಳು ನಮ್ಮೊಂದಿಗೆ ಇದ್ದಾರೆ ಎಂದು ಹೇಳಿಕೊಂಡಿಲ್ಲ. ಕೆಲವು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಶೇ.5ರಿಂದ ಶೇ.6ರಷ್ಟು ಮತಗಳು ಸಿಕ್ಕಿವೆ. ಆದರೂ ಬಿಜೆಪಿ ತನ್ನ ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡಿದೆ. ಬಿಜೆಪಿ ಇನ್ನೂ ಕನಿಷ್ಠ 20 ವರ್ಷಗಳ ಕಾಲ ಕೇಂದ್ರದಲ್ಲಿ ಅಧಿಕಾರದಲ್ಲಿ ಉಳಿಯುತ್ತದೆ ಎಂದು ಮುಸ್ಲಿಂ ಮತದಾರರು ಅರ್ಥಮಾಡಿಕೊಂಡಿದ್ದಾರೆ. ಕೇಂದ್ರದಲ್ಲಿರುವ ಸರ್ಕಾರ ತಮ್ಮ ಪರವಾಗಿ ಕೆಲಸ ಮಾಡುತ್ತಿದೆ ಎಂಬ ವಿಷಯ ಮುಸ್ಲಿಮರಿಗೆ ಅರ್ಥವಾಗಿದೆ. ಬೇರೆ ಪಕ್ಷಗಳನ್ನು ತಮ್ಮನ್ನು ಮತದಾರರನ್ನಾಗಿ ಮಾಡಿಕೊಂಡಿವೆ ಎಂಬ ಸತ್ಯ ಬಯಲಾಗಿದೆ ಎಂದು ಹೇಳಿದರು.
