ಪಾಟ್ನಾ ಬಳಿಕ ಭಾಗಲಪುರ ರೈಲು ನಿಲ್ದಾಣ ಟಿವಿಯಲ್ಲಿ ಅಶ್ಲೀಲ ಸಂದೇಶ, ಹೌಹಾರಿದ ಜನ!
ಪಾಟ್ನಾ ಮುಜುಗರ ಬಳಿಕ ಇದೀಗ ಭಾಗಲಪುರ ರೈಲು ನಿಲ್ದಾಣದ ಟಿವಿಯಲ್ಲಿ ನೀಲಿ ಚಿತ್ರದ ಸಂದೇಶ ಪ್ರಸಾರವಾದ ಘಟನೆ ನಡೆದಿದೆ. ಕೆಲ ಸೆಕೆಂಡ್‌ಗಳ ಕಾಲ ನೀಲಿ ಚಿತ್ರ ಕುರಿತು ಮಸೇಜ್ ಪರದೆಯಲ್ಲಿ ಮೂಡಿದೆ. ಇದರಿಂದ ಪ್ರಯಾಣಿಕರು ಮುಜುಗರಕ್ಕೀಡಾಗಿದ್ದರೆ, ಇತ್ತ ಹಲವರು ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
ಪಾಟ್ನಾ(ಏ.18): ಭಾರತದ ರೈಲು ನಿಲ್ದಾಣಗಳಲ್ಲಿ ಹಾಕಿರುವ ಟಿವಿ ಪರದೆಗಳ ವಿವಾದ ಮತ್ತೆ ತಲೆನೋವಿಗೆ ಕಾರಣವಾಗಿದೆ.ಪಾಟ್ನಾ ರೈಲು ನಿಲ್ದಾಣದ ಟಿವಿಯಲ್ಲಿ ನೀಲಿ ಚಿತ್ರ ಪ್ರಸಾರವಾದ ಬಳಿಕ ಇದೀಗ ಭಾಗಲಪುರ ರೈಲು ನಿಲ್ದಾಣದ ಟಿವಿಯಲ್ಲೂ ಇದೇ ರೀತಿ ಘಟನೆ ನಡೆದಿದೆ. ಭಾಗಲಪುರದಲ್ಲೂ ಕೆಲ ಹೊತ್ತು ಅಶ್ಲೀಲ ಮೆಸೇಜ್ ಒಂದು ಕಾಣಿಸಿಕೊಂಡಿದೆ. ಬಳಿಕ ಕೆಲ ನಗ್ನ ಚಿತ್ರಗಳು ಟಿವಿ ಪರದೆಯಲ್ಲಿ ಕಾಣಿಸಿಕೊಂಡಿದೆ.. ಹಲವು ಪ್ರಯಾಣಿಕರು, ಸಿಬ್ಬಂದಿಗಳು ಮುಜುಗರಕ್ಕೀಡಾಗಿದ್ದಾರೆ. ಇತ್ತ ಕೆಲವರು ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಈ ಕುರಿತು ಪ್ರಕರಣ ಕೈಗೆತ್ತಿಕೊಂಡಿರುವ ಪೊಲೀಸರು, ಟಿವಿ ಪ್ರಸಾರದ ಒಪ್ಪಂದ ಮಾಡಿಕೊಂಡಿರುವ ಎಜೆನ್ಸಿ ವಿರುದ್ಧ ಕ್ರಮಕ್ಕೆ ಮುಂದಾಗಿದೆ.
ಭಾಗಲಪುರ ರೈಲ ನಿಲ್ದಾಣದಲ್ಲಿರುವ ಟಿವಿ ಪರದೆಯನ್ನು ಅಂಬೇಡ್ಕರ್ ಪುತ್ಥಳಿ ಸಮೀಪದಲ್ಲೇ ಹಾಕಲಾಗಿದೆ. ಇದಕ್ಕಿದ್ದಂತೆ ಟಿವಿಯಲ್ಲಿ ಅಸಭ್ಯ ಹಾಗೂ ನೀಲಿ ಚಿತ್ರದ ಮೆಸೇಜ್ ಹಾಗೂ ಚಿತ್ರಗಳು ಕಾಣಿಸಿಕೊಂಡಿದೆ. ಪರದೆಯಲ್ಲಿ ನಗ್ನಚಿತ್ರ ಹಾಗೂ ಸಂದೇಶಗಳು ಕಾಣಿಸಿಕೊಂಡಂತೆ ಪ್ರಯಾಣಿಕರು ಮುಜುಗರಕ್ಕೀಡಾಗಿದ್ದಾರೆ. ಹಲವರು ಈ ವಿಡಿಯೋವನ್ನು ಚಿತ್ರೀಕರಿಸಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ಕೆಲವೇ ಕ್ಷಣಗಳಲ್ಲಿ ಇದು ವೈರಲ್ ಆಗಿದೆ. ತಕ್ಷಣವೇ ಅಲರ್ಟ್ ಆದ ರೈಲು ನಿಲ್ದಾಣದ ಸಿಬ್ಬಂದಿಗಳು ಟಿವಿ ಆಫ್ ಮಾಡಿದ್ದಾರೆ. ಈ ಮೂಲಕ ಮುಜುಗರವನ್ನು ತಪ್ಪಿಸಿದ್ದಾರೆ.
ರೈಲು ನಿಲ್ದಾಣದಲ್ಲಿ 3 ನಿಮಿಷ ಪೋರ್ನ್ ಪ್ಲೇ... ಮಕ್ಕಳ ಕರೆದುಕೊಂಡು ಓಡಿದ ಜನ
ಸರಿಸುಮಾರು 10 ನಿಮಿಷಗಳ ಕಾಲ ಅಸಭ್ಯ ಮೆಸೇಜ್ ಟಿವಿ ಪರದೆಯಲ್ಲಿ ಕಾಣಿಸಿಕೊಂಡಿದೆ. ಈ ಕುರಿತು ಮಾಹಿತಿ ಪಡೆದ ರೈಲ್ವೇ ಪೋಲಿಸರು ತಕ್ಷಣವೇ ಸ್ಥಳಕ್ಕೆ ಆಗಮಿಸಿದ್ದಾರೆ. ಟಿವಿ ನಿರ್ವಹಣೆ ಎಜೆನ್ಸಿ ಸಿಬ್ಬಂದಿಗಳನ್ನು ವಿಚಾರಣೆ ನಡೆಸಿದ್ದಾರೆ. ಬಿಹಾರದ ರೈಲು ನಿಲ್ದಾಣದಲ್ಲಿ ನಡೆಯತ್ತಿರುವ ಎರಡನೇ ಘಟನೆ ಇದಾಗಿದೆ.
ಪಾಟ್ನಾ ರೈಲು ನಿಲ್ದಾಣದಲ್ಲಿ ನೀಲಿ ಚಿತ್ರ ಪ್ರಸಾರ: ಭಾಗಲಪುರ ರೈಲು ನಿಲ್ದಾಣಕ್ಕೂ ಮೊದಲು ಪಾಟ್ನಾ ರೈಲ್ವೆ ನಿಲ್ದಾಣದಲ್ಲಿ, ರೈಲುಗಳ ಮಾಹಿತಿ ನೀಡಲು ಅಳವಡಿಸಿರುವ ಟೀವಿಗಳಲ್ಲಿ ಅಶ್ಲೀಲ ವಿಡಿಯೋ ಪ್ರಸಾರವಾಗಿತ್ತು. ಅದರ ಬೆನ್ನಲ್ಲೇ ಘಟನೆ ಕುರಿತು ತನಿಖೆ ಆರಂಭಿಸಲಾಗಿತ್ತು. ಮಾಹಿತಿ ಪ್ರಸಾರದ ಗುತ್ತಿಗೆ ಪಡೆದಿದ್ದ ಕಂಪನಿಯ ಗುತ್ತಿಗೆ ರದ್ದುಮಾಡಿ, ಅದನ್ನು ಕಪ್ಪು ಪಟ್ಟಿಗೆ ಸೇರಿಸಲಾಗಿದೆ. ಜನನಿಬಿಡವಾಗಿದ್ದ ರೈಲು ನಿಲ್ದಾಣದಲ್ಲಿ ಸೋಮವಾರ ಎಲ್ಲಾ 10 ಪ್ಲಾಟ್‌ಫಾರಂಗಳಲ್ಲಿನ ಟೀವಿಗಳಲ್ಲೂ ವಿಡಿಯೋ ಪ್ರಸಾರವಾಗಿ ಜನರ ಮುಜುಗರಕ್ಕೆ ಕಾರಣವಾಯಿತು. ಈ ಘಟನೆಯಿಂದ ಕೆಲ ಪ್ರಯಾಣಿಕರು ದೂರು ದಾಖಲಿಸಿದ ಪರಿಣಾಮ ಪೊಲೀಸರು ಟೀವಿ ಬಂದ್ ಮಾಡಿದರು. ಈ ವೇಳೆಗಾಗಲೇ ಜನರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹಾಗೂ ಮುಖ್ಯಮಂತಿ ನಿತೀಶ ಕುಮಾರ್‌ರನ್ನು ಟ್ಯಾಗ್ ಮಾಡಿದ್ದರು.
Bihar ರೈಲ್ವೆ ಸ್ಟೇಷನ್‌ನಲ್ಲಿ ಅಶ್ಲೀಲ ವಿಡಿಯೋ ಪ್ರಸಾರ: ಅದು ನನ್ನದಿರಬಹುದು ಎಂದ ಪೋರ್ನ್ ಸ್ಟಾರ್